Weekly Horoscope: ವಾರ ಭವಿಷ್ಯ: ನ.19 ರಿಂದ 25 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ನವೆಂಬರ್ 19 ರಿಂದ​ 25 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

Weekly Horoscope: ವಾರ ಭವಿಷ್ಯ: ನ.19 ರಿಂದ 25 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 19, 2023 | 12:01 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ನವೆಂಬರ್ 19 ರಿಂದ​ 25 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ ರಾಶಿ : ಇದು ನವೆಂಬರ್ ತಿಂಗಳ ನಾಲ್ಕನೇ ವಾರವಾಗಿದ್ದು ಗ್ರಹಗತಿಗಳು ಪರಿವರ್ತನೆಯಾಗಿ ನಿಮ್ಮಲ್ಲಿ ಕೆಲವು ಬದಲಾವಣೆ ಆಗಲಿದೆ. ಅಷ್ಟಮದಲ್ಲಿ ಕ್ಷೇತ್ರಾಧಿಪತಿಯು ಇದ್ದು ಮಾನಸಿಕವಾಗಿ ಕಿರಿಕಿರಿ ಅಧಿಕವಾಗಿ ಇರುವುದು. ಗುರುವು ನಿಮ್ಮ ಮನೆಯಲ್ಲಿ ಇರುವ ಕಾರಣ ಪ್ರಮಾಣವು ಕಡಿಮೆ ಇರುವುದು. ದ್ವಾದಶದಲ್ಲಿ ರಾಹುವು ನಿಮ್ಮ ಅನಗತ್ಯವಾಗಿ ಹಣವನ್ನು ಖಾಲಿ ಮಾಡಿಸುವನು. ಶುಕ್ರನು ನೀಚಸ್ಥಾನದಲ್ಲಿ ಇರುವ ಕಾರಣ ಸ್ತ್ರೀಯರಿಂದ ಅಥವಾ ಪತ್ನಿಯಿಂದ ಕಿರುಕುಳ ಆಗಬಹುದು. ತಂದೆಯ ಜೊತೆ ಸಂಬಂಧ ಹದಗೆಡುವ ಸಾಧ್ಯತೆ ಇದೆ. ಆರ್ಥಿಕತೆಯು ಸಾಮಾನ್ಯವಾಗಿರಲಿದೆ. ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಾರ್ತಿಕೇಯನ ಸ್ಮರಣೆಯನ್ನು ಅಗತ್ಯವಾಗಿ ಮಾಡಿ.

ವೃಷಭ ರಾಶಿ : ತಿಂಗಳ ನಾಲ್ಕನೇ ವಾರ ನಿಮಗೆ ಅಶುಭವು ಅಧಿಕ ಎನ್ನಬಹುದು. ಪಂಚಮದಲ್ಲಿ ಇರುವ ಕ್ಷೇತ್ರಾಧಿಪತಿಯಾದ ಶುಕ್ರನು ನೀಚನಾಗಿ ಇರುವನು. ಸುಖವನ್ನು ಮರೀಚಿಕೆಯಂತೆ ಕಾಯುತ್ತಾ ಇರಬೇಕಾದೀತು. ಸಪ್ತಮದಲ್ಲಿ ಕುಜನು ಸ್ವಕ್ಷೇತ್ರದಲ್ಲಿ ಇದ್ದು ಮನಸ್ಸನ್ನು ವಿಕಾರಗೊಳಿಸಬಹುದು. ತಂದೆಯ‌ ಕಡೆಯಿಂದ ಏನಾದರೂ ಬೆಂಬಲ ಸಿಗಬಹುದು. ಸಂಗಾತಿಯ ಜೊತೆ ಉತ್ತಮ ಸಮಯವಿರುವುದು. ನಿಮಗೆ ಸರ್ಕಾರಿ ಕೆಲಸದಿಂದ ಜವಾಬ್ದಾರಿಗಳ ಹೊರೆ ಇರುವುದು. ವ್ಯಾಪಾರಿಗಳು ಹೂಡಿಕೆಗಳನ್ನು ತಪ್ಪಿಸುವುದು ಉತ್ತಮವಲ್ಲ. ಮಾರುಕಟ್ಟೆಯಲ್ಲಿ ಕೆಲಸ ಮಾಡುವವರು ತಮ್ಮ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಬೇಕು.

ಮಿಥುನ ರಾಶಿ : ನವೆಂಬರ್ ತಿಂಗಳ ನಾಲ್ಕನೇ ವಾರವಾಗಿದ್ದು ನಿಮಗೆ ಶುಕ್ರನ ಚತುರ್ಥದಲ್ಲಿ ನೀಚನಾಗಿ ಕೇತುವಿನ ಜೊತೆ ಇರುವನು. ಕುಟುಂಬದಲ್ಲಿ ಅದರಲ್ಲಿಯೂ ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣಿಸುವುದು. ಯಾರಾದರೂ ಒಬ್ಬರು ಮೌನವಾಗಿ ಇದ್ದು ಸಮಸ್ಯೆಯ ಸುಳಿಯನ್ನು ದಾಟಬೇಕಾಗುವುದು. ಷಷ್ಠದಲ್ಲಿ ಮೂರು ಗ್ರಹರಿದ್ದರೂ ಆರೋಗ್ಯದಲ್ಲಿ ಸಾಮಾನ್ಯ ಮಟ್ಟವೇ ಇರುವುದು. ದಶಮದಲ್ಲಿ ರಾಹುವು ಕಾರ್ಯದಲ್ಲಿ ಶ್ರದ್ಧೆಯನ್ನು ಕಡಿಮೆ ಮಾಡಿಸುವನು. ನಿಮ್ಮ ನಡವಳಿಕೆಯ ಬಗ್ಗೆ ಹೆಚ್ಚು ಕಾಳಜಿ ಇರುವುದು. ವ್ಯಾಪಾರಿಗಳು ಆರ್ಥಿಕ ವಿಷಯಗಳಲ್ಲಿ ಮುನ್ನೆಚ್ಚರಿಕೆ ಬೇಕು. ಸಂಗಾತಿಯ ಜೊತೆ ನೀವು ಪ್ರಮುಖ ವಿಚಾರಗಳನ್ನು ಚರ್ಚಿಸಬಹುದು. ನಾಗದೇವರ ಆರಾಧನೆಯನ್ನು ಮಾಡುವುದು ಒಳ್ಳೆಯದು.

ಕರ್ಕ ರಾಶಿ : ಈ ವಾರದಲ್ಲಿ ಗ್ರಹಗತಿಗಳ ಬದಲಾವಣೆಯಾಗಲಿದ್ದು ಮಿಶ್ರ ಫಲಗಳನ್ನು ಪಡೆಯುವಿರಿ. ನವಮದಲ್ಲಿ ರಾಹುವಿದ್ದು ದುಷ್ಕರ್ಮಕ್ಕೆ ನಿಮ್ಮನ್ನು ಪ್ರೇರಿಸಬಹುದು. ತೃತೀಯದಲ್ಲಿ ಶುಕ್ರನು ನೀಚನಾಗಿದ್ದ ಸುಖವನ್ನು ಪಡೆಯುವುದು ಕಷ್ಟವಾಗುವುದು. ಪಂಚಮದಲ್ಲಿ ಕುಜನು ಇದ್ದು ವಿದ್ಯಾಭ್ಯಾಸಕ್ಕೆ ಮನಸ್ಸು ಚಂಚಲವಾಗಿ ಇರುವುದು. ಮಕ್ಕಳಿಂದ ಧನಲಾಭವು ಆಗುವುದು. ಅಷ್ಟಮದಲ್ಲಿ ಶನಿಯು ನಿಮ್ಮ ಆರೋಗ್ಯವನ್ನು ಕೆಡಿಸುವನು. ಆಲಸ್ಯ ಸ್ವಭಾವವನ್ನು ಹೆಚ್ಚಿಸುವನು. ಈ ವಾರ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣವನ್ನು ಮಾಡುವಿರಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗುತ್ತವೆ. ನೀವು ಮದುವೆಯಾಗಿದ್ದರೆ ವೈವಾಹಿಕ ಜೀವನದಲ್ಲಿ ತಿರುವು ಸಿಗಬಹುದು. ನಿಮ್ಮ ಪ್ರೀತಿ ಹೆಚ್ಚಾಗುತ್ತದೆ ಮತ್ತು ಪರಸ್ಪರರ ಮೇಲಿನ ನಂಬಿಕೆಯೂ ಬಲಗೊಳ್ಳುತ್ತದೆ. ಹಣವು ಉತ್ತಮ ಸ್ಥಿತಿಯಲ್ಲಿರುತ್ತದೆ.

ಸಿಂಹ ರಾಶಿ : ಇದು ನಾಲ್ಕನೇ ವಾರವು ನಿಮ್ಮ ಹಲವು ಸಮಸ್ಯೆಗಳು ದೂರಾಗಬಹುದು. ಗುರುವು ಉತ್ತಮ ಬಲದಿಂದ ಇರುವ ಕಾರಣ ನಿಮ್ಮ ಬರುವ ತಂದರೆಗಳು ಬಂಡೆಯ ಮೇಲೆ ಬಿದ್ದ ನೀರಿನಂತೆ ತಾನಾಗಿಯೇ ಹರಿದುಹೋಗುವುದು. ಚತುರ್ಥದಲ್ಲಿ ಇರುವ ಕುಜನು ಕುಟುಂಬದ ಜೊತೆ ಸಮಾರಸ್ಯವನ್ನು ಉಂಟುಮಾಡಲು ಕಷ್ಟಪಡುವನು. ಅದರೂ ಸೂರ್ಯನಿರುವ ಕಾರಣ ಅಂತಹ ತೊಂದರೆಯು ಬಾರದು. ಕಚೇರಿಯಲ್ಲಿ ಅಧಿಕಾರಿಗಳ ಜೊತೆ ನಿಮ್ಮ ನಡತೆಯು ಸರಿಯಾಗಿ ಇರಲಿ. ಸಣ್ಣ ಅಜಾಗರೂಕತೆಯೂ ನಿಮಗೆ ಸಮಸ್ಯೆಯಾದೀತು. ಕೋಪ ಮತ್ತು ಅಹಂಕಾರವು ನಿಮ್ಮ‌ ಉದ್ಯಮವನ್ನು ಕೆಡಿಸೀತು. ರಾಹುವು ಅಷ್ಟಮದಲ್ಲಿ ಇರುವ ಕಾರಣ ಆರೋಗ್ಯ ಚೆನ್ನಾಗಿ ಇರುವುದು. ಅಧಿಕ ದ್ರವ ಪದಾರ್ಥಗಳನ್ನು ಸೇವಿಸುವಿರಿ.

ಕನ್ಯಾ ರಾಶಿ : ಇದು ತಿಂಗಳ ನಾಲ್ಕನೇ ವಾರವಾಗಿದೆ. ಗ್ರಹಗತಿಗಳಲ್ಲಿ ಬದಲಾವಣೆಯು ಹೆಚ್ಚು ಕಾಣಿಸುವುದು. ಶುಕ್ರ ಹಾಗೂ ಕೇತುಗಳು ನಿಮ್ಮ ಮನೆಯಲ್ಲಿ ಇದ್ದು ದೈಹಿಕವಾದ ತೊಂದರೆಯು ಕಾಣಿಸಿಕೊಳ್ಳಬಹುದು. ಚರ್ಮಕ್ಕೆ ಸಂಬಂಧಿಸಿದಂತೆ ಹುಣ್ಣು ಕಾಣಿಸಿಕೊಳ್ಳಬಹುದು. ಸಪ್ತಮದಲ್ಲಿ ರಾಹುವಿದ್ದು ಪತ್ನಿಯ ವಿಚಾರದಲ್ಲಿ ಸಮಾಧಾನ ಇರದು. ತೃತೀಯದಲ್ಲಿ ಕುಜ, ಬುಧ, ಸೂರ್ಯರು ನಿಮ್ಮ‌ ಸಾಮರ್ಥ್ಯವನ್ನು ಹೆಚ್ಚಿಸುವರು. ನಿಮ್ಮ ಬಗ್ಗೆ ಇತರರಿಗೂ ಗೊತ್ತಾಗುವುದು. ಕಲಾವಿದರಿಗೆ ಹಿನ್ನಡೆ. ಕೈಗೆ ಬಂದಿದ್ದು ಬಾಯಿಗೆ ಬರದಂತಾಗಿದೆ. ಸಂಗಾತಿಯ ಜೊತೆ ಯಾವುದೇ ಚರ್ಚೆಗಳಿಗೆ ಹೋಗುವುದು ಬೇಡ. ಹಣದ ಪರಿಸ್ಥಿತಿಯನ್ನು ಸುಧಾರಿಸಲು ಕಷ್ಟವಾದೀತು. ಹಿಂದೆ ತೆಗೆದುಕೊಂಡ ಯಾವುದೇ ಪ್ರಮುಖ ಹಣಕಾಸಿನ ನಿರ್ಧಾರದಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಉದ್ಯೋಗಿಗಳ ಆದಾಯ ಹೆಚ್ಚಾಗಬಹುದು. ಸಿಕ್ಕ ಪ್ರಶಂಸೆಯಿಂದ ನಿಮ್ಮ ಆತ್ಮವಿಶ್ವಾಸವು ಹೆಚ್ಚಾಗುವುದು.

ತುಲಾ ರಾಶಿ : ಈ ವಾರವು ನಿಮಗೆ ಶುಭಾಶುಭ ಮಿಶ್ರಣದ ವಾರವಾಗಿದೆ. ದ್ವಾದಶದಲ್ಲಿ ಶುಕ್ರ ಹಾಗು ಕೇತುವಿರುವ ಕಾರಣ ಧನವ್ಯಯಕ್ಕೆ ಅಧರ್ಮದ ಮಾರ್ಗವನ್ನು ನೀವು ಆಯ್ಕೆ ಮಾಡಿಕೊಳ್ಳುವಿರಿ. ಸುಖದಿಂದ ವಂಚಿತರಾಗುವಿರಿ. ನೀವು ಸಹೋದರ ಹಾಗೂ ತಂದೆಯ ಮಾತನ್ನು ಹೆಚ್ಚು ಪುರಸ್ಕರಿಸುವಿರಿ. ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗುವ ಅವಕಾಶಗಳು ಸಿಗಬಹುದು. ನಿಮ್ಮ ಅಧ್ಯಯನದ ಮೇಲೆ ಗಮನವು ಕಡಿಮೆ‌ ಇರುವುದು. ಈ ವಾರ ನಿಮ್ಮ ಕಾರ್ಯಕ್ಷಮತೆಯನ್ನು ಉತ್ತಮವಾಗಿರುವುದು. ಉದ್ಯಮದಲ್ಲಿ ಹಲವು ಏರಿಳಿತಗಳು ಬರಬಹುದು. ನಿಮ್ಮ ಕಠಿಣ ಪರಿಶ್ರಮವು ಅದೆಲ್ಲವನ್ನೂ ನಿಶ್ಶೇಷ ಮಾಡುವುದು. ಕುಟುಂಬ ಜೀವನದಲ್ಲಿ ಸಂತೋಷ, ನೆಮ್ಮದಿಯು ನಿಮ್ಮದಾಗುವುದು. ಶತ್ರುಗಳ ಬಾಧೆಯನ್ನು ನೀವು ನಿವಾರಿಸಿಕೊಳ್ಳಬಲ್ಲಿರಿ.

ವೃಶ್ಚಿಕ ರಾಶಿ : ಈ ತಿಂಗಳ ನಾಲ್ಕನೇ ವಾರ ಅಶುಭಫಲಗಳು ಅಧಿಕವಾಗಿ ಕಾಣಸಿಗುವುದು.‌ ನಿಮ್ಮ ರಾಶಿಗೇ ಮೂರು ಗ್ರಹಗಳು ಬರಲಿದ್ದು ಆರೋಗ್ಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆಗಳು ಆಗಬಹುದು. ಏಕಾದಶದಲ್ಲಿ ಕೇತುವಿನ ಜೊತೆ ಶುಕ್ರನು ಇರಲಿದ್ದು ಆದಾಯದಲ್ಲಿ ಹಿನ್ನಡೆಯಾಗುವುದು. ನಿರೀಕ್ಷಿತ ಲಾಭವು ಸಿಗದೇಹೋಗಬಹುದು. ಬರುವ ಹಣವೂ ಬಾರದೇ ಕೈ ತಪ್ಪಿಹೋಗುವ ಸಾಧ್ಯತೆ ಇದೆ. ನಿಮ್ಮ ಅನಾರೋಗ್ಯವು ಹಲವು ದಿನಗಳಿಂದ ಕೆಟ್ಟಿದ್ದು ಈ ವಾರವು ಚಿಕಿತ್ಸೆಯ ಕಾರಣದಿಂದ ಸರಿಯಾಗಬಹುದು. ನೀವು ವಿಶ್ರಾಂತಿಗೂ ಸಮಯವಿಲ್ಲದ ರೀತಿಯಲ್ಲಿ ಕಾರ್ಯತತ್ಪರರಾಗುವಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಿ. ಗುರು ಬಲವು ಕಡಿಮೆ‌ ಇರುವ ಕಾರಣ ಗುರುಚರಿತ್ರೆಯ ಪಠಣವನ್ನೂ ಗುರುದರ್ಶನವನ್ನೂ ಮಾಡಿ.

ಧನು ರಾಶಿ : ನವೆಂಬರ್ ತಿಂಗಳ ನಾಲ್ಕನೇ ವಾರದಲ್ಲಿ ಗ್ರಹಗತಿಗಳ ಬದಲಾವಣೆ ಆಗಲಿದ್ದು ಮಧ್ಯಫಲವು ಸಿಗಲಿದೆ. ಚತುರ್ಥದಲ್ಲಿ ರಾಹುವು ಇರಲಿದ್ದು ತಾಯಿಯ ಆರೋಗ್ಯವು ವ್ಯತ್ಯಾಸವಾಗಲಿದೆ. ಪಂಚಮದಲ್ಲಿ ಗುರುವು ನಿಮಗೆ ಉನ್ನತ ಅಭ್ಯಾಸಕ್ಕೆ ಅನುಕೂಲವನ್ನು ಮಾಡಿಕೊಡುವನು. ಗುರು-ಹಿರಿಯರ ಬಗ್ಗೆ ಗೌರವವು ಇರಲಿದೆ. ಶತ್ರುಗಳ ಬಗ್ಗೆ ಅನಾದರ ಬೇಡ. ಈ ವಾರ ನೀವು ಕೆಲವು ಪ್ರಮುಖ ವಿಷಯಗಳನ್ನು ಚರ್ಚಿಸಿ ಕಾರ್ಯರೂಪಕ್ಕೆ ತರಲಿದ್ದೀರಿ. ನಿಮ್ಮ ಉದ್ಯೋಗದಲ್ಲಿ ನೀವು ಸಂಪೂರ್ಣ ಗಮನ ಹರಿಸುವುದು ಉತ್ತಮ. ವ್ಯವಹಾರಕ್ಕೆ ಸಂಬಂಧಿಸಿದವರಿಗೆ ಅದೃಷ್ಟವು ಹೆಚ್ಚಿರುವುದು.‌ ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕೊಡುವುದು. ದ್ವಾದಶಸ್ಥಾನಕ್ಕೆ ಸೂರ್ಯ, ಬುಧ, ಕುಜರ ಆಗಮನವಾಗಲಿದ್ದು ಅನವಶ್ಯಕ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ, ವಾಹನಗಳಿಂದ ತೊಂದರೆಯನ್ನು ಅನುಭವಿಸುವಿರಿ. ಸುಬ್ರಹ್ಮಣ್ಯನ ಆರಾಧನೆಯಿಂದ ಸಂಕಷ್ಟವನ್ನು ದೂರಮಾಡಿಕೊಳ್ಳಬಹುದು.

ಮಕರ ರಾಶಿ : ಈ ತಿಂಗಳ ನಾಲ್ಕನೇ ವಾರ ನಿಮಗೆ ಮಿಶ್ರಫಲವು ಇರಲಿದೆ. ತೃತೀಯದಲ್ಲಿ ರಾಹುವಿದ್ದು ಸಹೋದರರ ನಡುವೆ ಬಾಂಧವ್ಯವು ಸರಿಯಾಗಿ ಇರದು. ತಾಯಿಯ ಆರೋಗ್ಯವು ಸುಧಾರಿಸುವುದು. ನವಮದಲ್ಲಿ ಶುಭಗ್ರಹವಾದ ಶುಕ್ರನಿದ್ದರೂ ನೀಚಸ್ಥಾನದಲ್ಲಿ ಇರುವ ಕಾರಣ ಧಾರ್ಮಿಕ ಆಚರಣೆಯಲ್ಲಿ ಆಸಕ್ತಿ ಇರದು. ದಾಂಪತ್ಯದಲ್ಲಿ ಅನ್ಯೋನ್ಯತೆಯ ಕೊರತೆ ಕಾಣಿಸುವುದು. ಈ ವಾರ ಬಹಳ ಎಲ್ಲ ವಿಚಾರದಲ್ಲಿಯೂ ಜಾಗರೂಕರಾಗಿರಬೇಕಾಗುವುದು. ಕೆಲಸದಲ್ಲಿ ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ತಾಳ್ಮೆಯಿಂದ ಕೆಲಸ ಮಾಡಬೇಕಾಗುವುದು. ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮದ ಉತ್ತಮ ಫಲಿತಾಂಶಗಳನ್ನು ಸಹ ನೀವು ಪಡೆಯುತ್ತೀರಿ. ಈ ವಾರ ಹಣದ ಸ್ಥಿತಿಯು ತೃಪ್ತಿಕರವೆನಿಸುವುದು.

ಕುಂಭ ರಾಶಿ : ಇದು ನಾಲ್ಕನೇ ವಾರವು ಇದಾಗಿದ್ದು ಶುಕ್ರನು ಅಷ್ಟಮದಲ್ಲಿ ಇರುವ ಕಾರಣ ಕೇತುಯುಕ್ತನಾಗಿ ಇರುವನು.‌ ಅಷ್ಟೇ ಅಲ್ಲದೇ ಶುಕ್ರನು ದುರ್ಬಲ ಸ್ಥಾನದಲ್ಲಿ ಇರುವ ಕಾರಣ ಸ್ತ್ರೀಯರಿಂದ ಅಪಮಾನ, ದುಂದುವೆಚ್ಚ, ಹಣ ಹೂಡಿಕೆಯಲ್ಲಿ ಸರಿಯಾದ ನಿರ್ಧಾರಾದಿಗಳನ್ನು ಮಾಡಲಾಗದು. ಕೆಲಸದಲ್ಲಿ ಈ ವಾರ ಉತ್ತಮವಾಗಿರುವುದು. ಕಷ್ಟದ ಕಾರ್ಯಗಳೂ ಸುಲಭವಾಗಲಿದೆ. ನಿಮ್ಮ ಆರ್ಥಿಕ ಸಮಸ್ಯೆಯು ಬಲವಾಗಿ ಚಿಂತೆಗೀಡಾಗುವಿರಿ. ಮನೆಯ ಸದಸ್ಯರ ಜೊತೆ ನಿಮ್ಮ ನಡವಳಿಕೆಯು ಚೆನ್ನಾಗಿರವುದು. ಅನಗತ್ಯ ಚರ್ಚೆಯನ್ನು ಈ ವಾರ ಮಾಡುವುದು ಬೇಡ. ದಶಮದಲ್ಲಿ ಕುಜ ಹಾಗೂ ಬುಧ, ಸೂರ್ಯರು ಇರುವ ಕಾರಣ ವೃತ್ತಿಯಲ್ಲಿ ಹೆಚ್ಚು ಅವಕಾಶವು, ಭಡ್ತಿಯನ್ನು ನೀವು ಪಡೆಯಬಹುದು. ಮಹಾಗೌರಿಯ ಆರಾಧನೆಯಿಂದ ಶುಭವನ್ನು ನೀವು ನಿರೀಕ್ಷಿಸಬಹುದು.

ಮೀನ ರಾಶಿ : ನವೆಂಬರ್ ತಿಂಗಳ ನಾಲ್ಕನೇ ವಾರವು ಇದಾಗಿದ್ದು ಗ್ರಹಗಳ ಪರಿವರ್ತನೆಯು ನಿಮ್ಮ ಮೇಲೆ ಮಿಶ್ರ ಪರಿಣಾಮವನ್ನು ಬೀರುವುದು. ಸಪ್ತಮದಲ್ಲಿ ಕೇತುವಿನ ಜೊತೆ ಇರುವ ಶುಕ್ರನಿಂದ ವಿವಾಹಕ್ಕೆ ವಿಘ್ನಗಳು ಬರುವುದು. ಮನಸ್ಸು ಚಂಚಲವಾಗಿ ಯಾವ ಕೆಲಸವನ್ನೂ ಪೂರ್ಣ ಮಾಡಲು ಆಗದು. ನವಮದಲ್ಲಿ ಸೂರ್ಯ, ಬುಧರು ಇದ್ದು ಕುಜನೂ ಸ್ವಕ್ಷೇತ್ರದಲ್ಲಿ ಇರುವನು. ಧಾರ್ಮಿಕ ಕಾರ್ಯದಲ್ಲಿ ಪೂರ್ಣ ಆಸಕ್ತಿ ಇರದು. ಸ್ವಪ್ರಯತ್ನವು ಹೆಚ್ಚು ಇರಬೇಕು.‌ ಗುರುವು ದ್ವಿತೀಯದಲ್ಲಿ ಇರುವುದರಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳುವಿರಿ. ನಿಮ್ಮ ಪ್ರತಿಭೆಗೆ ಸರಿಯಾದ ಸ್ಥಾನವು ಸಿಗಲಿದೆ. ಅನವಶ್ಯಕ ವಸ್ತುಗಳ ಖರೀದಿಯನ್ನು ಮಾಡುವುದು ನಿಲ್ಲಿಸಿ. ಸ್ವಯಂವರ ಪಾರ್ವತಿಯ ಸ್ತೋತ್ರ ಮಾಡಿ.

-ಲೋಹಿತಶರ್ಮಾ – 8762924271 (what’s app only)

ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಉಡುಪಿ ಹೆಬ್ರಿಯಲ್ಲಿ ಮೇಘ ಸ್ಫೋಟ: ಮನೆ, ಕೃಷಿ ಜಮೀನಿಗೆ ನೀರು ನುಗ್ಗಿ ಅವಾಂತರ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಬಿಗ್ ಬಾಸ್​ನಲ್ಲಿ ಮಸಿ ಬಳಿಯೋ ಟಾಸ್ಕ್; ಮತ್ತದೇ ಕಿರುಚಾಟ, ಕಿತ್ತಾಟ
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ಚೆನ್ನೈ ಏರ್​ ಶೋ, ಉಸಿರುಗಟ್ಟಿ 5 ಮಂದಿ ಸಾವು
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ ಐದನೇ ದಿನ ಸ್ಕಂದ ಮಾತೆಯ ಆರಾಧನೆ ಮಹತ್ವ ತಿಳಿಯಿರಿ
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
ಅಧಿಕಾರಿಗಳ ನಿರ್ಲಕ್ಷ್ಯ; ಈರುಳ್ಳಿ ನೀರುಪಾಲು, ರೈತರು ಕಂಗಾಲು
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
‘ಮಾತಾಡೋದು ಕಲಿಯುತ್ತಿದ್ದೇನೆ’: ಚೈತ್ರಾ ಹೇಳಿದ್ದು ಕೇಳಿ ಕಂಗಾಲಾದ ಸುದೀಪ್​
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ