Horoscope: ಆಪ್ತರೇ ನಿಮ್ಮ ವಿರದ್ಧವಾಗಿ ಮಾತನಾಡಬಹುದು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 18, 2025 | 12:12 AM

18 ಮಾರ್ಚ್​​​ 2025: ಮಂಗಳವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಸಿಟ್ಟಾಗುವ ಸಾಧ್ಯತೆ ಇದೆ. ಯಾರದ್ದಾರೂ ಸೆಳೆತಕ್ಕೆ ಸಿಗುವ ಸಾಧ್ಯತೆ ಇದೆ. ದೂರದಲ್ಲಿ ಇದ್ದ ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ಇರುವುದು. ಹಾಗಾದರೆ ಮಾರ್ಚ್ 18ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಆಪ್ತರೇ ನಿಮ್ಮ ವಿರದ್ಧವಾಗಿ ಮಾತನಾಡಬಹುದು
ಆಪ್ತರೇ ನಿಮ್ಮ ವಿರದ್ಧವಾಗಿ ಮಾತನಾಡಬಹುದು
Follow us on

ಬೆಂಗಳೂರು, ಮಾರ್ಚ್​​ 18, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರಾ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವ್ಯಾಘಾತ, ಕರಣ : ಬವ, ಸೂರ್ಯೋದಯ – 06 – 39 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:41 – 17:12, ಯಮಘಂಡ ಕಾಲ 09:40 – 11:10, ಗುಳಿಕ ಕಾಲ 12:41 – 14:11.

ತುಲಾ ರಾಶಿ: ನಿಮ್ಮ ಸಿಟ್ಟಿನ ಮುಖವನ್ನು ಸಾರ್ವಜನಿಕವಾಗಿ ತೋರಿಸುವುದು ಬೇಡ. ನಿಮ್ಮ ಉದ್ಯಮದ ಹಲವು ಮುಖಗಳು ಇತರಿಗೆ ಪರಿಚಯ ಆಗಬಹುದು. ಒಪ್ಪಿಕೊಂಡ‌ ಕಾರ್ಯಕ್ಕೆ ಹಣದ ಮೂಲವು‌ ಕೊರತೆಯಾಗಬಹುದು. ವಿಶ್ವಸ್ಥರ ಸಲಹೆಯನ್ನು ಪಡೆದುಕೊಳ್ಳಿ. ಕೆಲವು ನಿರಾಶೆಯನ್ನು ಮೆಟ್ಟಿನಿಲ್ಲುವ ಧೈರ್ಯ ತೋರಬೇಕು. ನಿಮ್ಮ‌ ಅಂತಸ್ಸಾಕ್ಷಿಗೆ ಸತ್ಯವನ್ನು ಹೇಳುವ ಧೈರ್ಯ ಬರುವುದು. ವಿದೇಶದಿಂದ ಆಹ್ವಾನವು ಬರಬಹುದು. ಆತುರದ ಪ್ರಯಾಣವನ್ನು ಇಂದು ಮಾಡಬೇಡಿ. ಒತ್ತಾಯದಿಂದ‌ ಸ್ನೇಹಿತರ ಮನೆಗೆ ಹೋಗುವಿರಿ. ಮನೆಯಲ್ಲಿ ತೋರಿಸಿದ ಸಂಗಾತಿಯನ್ನು ಒಪ್ಪಿಕೊಳ್ಳುವಿರಿ. ಬಂಧುಗಳಿಗಾಗಿ ಇಂದಿನ ಸಮಯವನ್ನು ಕೊಡುವಿರಿ. ‌ಅಶುಭ ವಾರ್ತೆಯಿಂದ ಏನನ್ನು ಮಾಡಲೂ ದಿಕ್ಕು ತೋರದು. ಕಳೆದುಕೊಂಡಾಗ ಸಿಗುವ ಖುಷಿ, ಪಡೆದಾಗ ಇರದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ.

ವೃಶ್ಚಿಕ ರಾಶಿ; ಆಪ್ತರೇ ನಿಮ್ಮ ವಿರದ್ಧವಾಗಿ ಮಾತನಾಡಬಹುದು, ಕೃತಿಯನ್ನು ತೋರಿಸಬಹುದು. ಕಿವಿಮಾತಿನಿಂದ ಅದನ್ನು ನಿಲ್ಲಿಸಿ. ಅಪರಿಚಿತರನ್ನು ಕೇವಲ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವಿರಿ. ನಿಮ್ಮ ಔದಾರ್ಯವು ನಿಮ್ಮವರಿಗೆ ಸರಿ ಕಾಣದು. ಇಂದಿನ ಸೋಲಿನಿಂದ ಪಾಠ ಕಲಿಯುವಿರಿ. ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ಇಲ್ಲದ ತಪ್ಪನ್ನು ಒಪ್ಪಿಕೊಳ್ಳುವ ಸಂದರ್ಭ ಬರಬಹುದು. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ನೀವು ಮಾಡುವ ಕಾರ್ಯದಲ್ಲಿ ಧೈರ್ಯವು ಹೆಚ್ಚಿರುವುದು. ದಾಂಪತ್ಯದಲ್ಲಿ ಹೊಂದಾಣಿಕೆ ಅವಶ್ಯಕತೆ ಅಧಿಕವಾಗಿ ಇರಲಿದೆ. ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತನ್ನು ಕಳೆದುಕೊಳ್ಳುವಿರಿ. ಅಧಿಕಾರಿಗಳಿಗೆ ದಾಖಲೆಗಳನ್ನು ಒದಗಿಸಬೇಕಾಗುವುದು. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ‌ ಮೇಲೆ ಬರಲಿದೆ. ಸಿಟ್ಟಿನಿಂದ ಅಂತಃಪ್ರಜ್ಞೆ ದೂರಾಗಬಹುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.

ಧನು ರಾಶಿ; ಫಲವಿರದ ಮರಕ್ಕೆ ಎಷ್ಟೇ ಕಲ್ಲು ಹೊಡೆದರೂ ಏನೂ ಸಿಗದು. ಕಲ್ಲೂ ಶ್ರಮ‌ ಎರಡೂ ವ್ಯರ್ಥ. ಹಳೆಯ ವಸ್ತುಗಳ ದುರಸ್ತಿಯ ಕೆಲಸವನ್ನು ಮಾಡುವಿರಿ. ಅಧಿಕ ಖರ್ಚೂ ಆಗಬಹುದು. ಹಳೆಯ ಸ್ಥಾನ ಮರಳಿಬರುವ ಸೂಚನೆ ಇರಲಿದೆ. ಹೊಸದಾಗಿ ಆರಂಭಿಸಿದ ಉದ್ಯಮದ ಫಲವು ಒಂದೊಂದಾಗಿಯೇ ಸಿಗುವುದು ನಿಮಗೆ ಸಂತೋಷವನ್ನು ಕೊಡುವುದು. ಅತಿಯಾದ ಕೋಪದಿಂದ ಎಲ್ಲ ಕೆಲಸವು ವ್ಯತ್ಯಾಸವಾಗಬಹುದು. ನೀವು ಮಾಡಿಕೊಂಡ ಎಡವಟ್ಟಿನಿಂದ ಅವಕಾಶದಿಂದ ವಂಚಿತರಾಗಬೇಕಾಗುವುದು. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ‌ ಬೇಡ. ಹೊಸ ಉದ್ಯೋಗದಲ್ಲಿ ಆರಂಭದ ಭಯವನ್ನು ಆದಷ್ಟು ಬೇಗ ತೆಗದುಹಾಕಿದರೆ ಒಳ್ಳೆಯದು. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ತಪ್ಪುಗಳನ್ನು ಸರಿಮಾಡಿಕೊಳ್ಳುವ ಮನಃಸ್ಥಿತಿ ಬರುತ್ತದೆ. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮುಕ್ತ‌ ಮನಸ್ಸಿನಿಂದ ಮಾತನಾಡುವಿರಿ.‌

ಮಕರ ರಾಶಿ: ದೈಹಿಕ ಶ್ರಮದಿಂದಾಗಿ ಬೇಗ ವಿಶ್ರಾಂತಿಯನ್ನು ಬಯಸುವಿರಿ. ನೀವು ಸರ್ಕಾರದ‌ ಕಡೆಯಿಂದ ಆಗಬೇಕಾದ ಕಾರ್ಯವನ್ನು ಮಾಡಲು ಓಡಾಟ ಮಾಡುವಿರಿ. ಆತುರದಲ್ಲಿ ವಾಹನ ಚಾಲನೆಯಿಂದ ತೊಂದರೆಯಾದೀತು. ಇಂದು ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ಯಾರದೋ ಅಪರಿಚಿತರ ಸಂಪರ್ಕವನ್ನು ಮಾಡಬೇಕಾದೀತು. ಸ್ನೇಹಿತರಿಂದ ಆರ್ಥಿಕತೆಗೆ ಸಹಾಯವು ಸಿಗುವುದು. ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ನೂತನ ಗೃಹಕ್ಕೆ ಹೋಗುವ ಸಂಕಲ್ಪವನ್ನು ಮಾಡುವಿರಿ. ನಿಮಗಾದ ನೋವಿನಿಂದ ಪಾಠ ಸಿಗಲಿದೆ. ಹಿತಶತ್ರುಗಳಿಂದ ತೊಂದರೆ ಎದುರಾದೀತು. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌. ಹಿರಿಯರಿಂದ ಆದ ದೋಷವನ್ನು ಸರಿ ಮಾಡಿಕೊಳ್ಳುವಿರಿ. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ. ಸಂಬಂಧದಲ್ಲಿ ಒಡಕು ಬರಬಹುದು.‌ ವ್ಯವಹಾರವು ಸರಿಯಾಗಿ ಇರಲಿ. ಇಂದು ಯಾರನ್ನೂ ಸುಲಭವಾಗಿ ನಂಬಲಾರಿರಿ.

ಕುಂಭ ರಾಶಿ; ಇಂದಿನ ನಿಮ್ಮ ಕಾರ್ಯವನ್ನು ಅನ್ಯರು ಪರಿಶೀಲಿಸುವ ಕಾರಣ ತಪ್ಪಾಗದಂತೆ ಎಚ್ಚರ ವಹಿಸಿ ಮಾಡಬೇಕಾಗುವುದು. ಮಂಗಲ ಕಾರ್ಯಕ್ಕೆ ಹೊರಟ ನೀವು ಶುಭ ಕಾಲವನ್ನು ನೋಡಿ ಹೊರಡಿ. ದೀರ್ಘಪ್ರಯಾಣವಾದರೂ ಆಯಾಸವನ್ನು ದೂರಮಾಡೀತು. ಉದ್ಯಮದಲ್ಲಿ ಅಧಿಕ ಚಿಂತೆಯು ಇರಲಿದ್ದು ಪ್ರಯತ್ನವು ಅಧಿಕವಾಗಿ ಇರುವುದು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ. ಮನೆಯಲ್ಲಿ ಹಿಂದಿನ ಘಟನೆಯೇ ಮರುಕಳಿಸಲಿದ್ದು ಸಣ್ಣ ವಾಗ್ವಾದವೂ ನಡೆಯಬಹುದು. ಸಹನಾಮೂರ್ತಿಯಂತೆ ಇದ್ದರೆ ಬೀಳುವ ಪೆಟ್ಟೂ ಮೆತ್ತಗಾಗಬಹುದು. ತಂತ್ರಜ್ಞರು ವಹಿಸಿಕೊಂಡ ಕಾರ್ಯದ ಗಡುವುದು ಸಮೀಪಿಸಿದ್ದು, ತುರ್ತು ಕಾರ್ಯವನ್ನು ಮಾಡಬೇಕಿದೆ. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ಸುತ್ತಲಿನ ವಾತಾವರಣದಿಂದ ಮನಸ್ಸು ಕೆಡುವ ಸಾಧ್ಯತೆ ಹೆಚ್ಚು. ವಾಹನದಿಂದ ಬಿದ್ದು ಪೆಟ್ಟಾಗಬಹುದು. ದುರ್ಬಲರ‌ ಜೊತೆ ಸಂಘರ್ಷ ಬೇಡ.

ಮೀನ ರಾಶಿ; ಇಂದು ಹೊಸ ಉದ್ಯೋಗದ ಅನ್ವೇಷಣೆಯಲ್ಲಿ ಇರುವಿರಿ. ನಿಮ್ಮ ವಿರುದ್ಧವಾಗಿ ಮಾತನಾಡುವುದು ನಿಮಗೆ ಇಷ್ಟವಾಗದು. ಸಿಟ್ಟಾಗುವ ಸಾಧ್ಯತೆ ಇದೆ. ಯಾರದ್ದಾರೂ ಸೆಳೆತಕ್ಕೆ ಸಿಗುವ ಸಾಧ್ಯತೆ ಇದೆ. ದೂರದಲ್ಲಿ ಇದ್ದ ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ಇರುವುದು. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು. ತಮಾಷೆಯಾಗಿ ಶುರುವಾದ ಮಾತು ಕಲಹದಲ್ಲಿಯೋ ದ್ವೇಷದಲ್ಲಿಯೋ ಮುಕ್ತಯವಾಗಲಿದೆ. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಯಾವದೇ ಸಂದರ್ಭದಲ್ಲಿಯೂ ಗಾಬರಿಯಾಗದೇ ಸಮಯಪ್ರಜ್ಞೆಯಿಂದ ಮುನ್ನಡೆಯಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗವುವುದು. ಹಣದ ಹರಿವು ಸಾಧಾರಣವಾಗಿ ಇರಲಿದೆ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಆಗಬಹುದು. ದೇಹದ ಯಾವುದಾದರೂ ಭಾಗದಲ್ಲಿ ಪ್ರಾಣಾಂತಿಕ ನೋವು ಕಾಣಿಸಿಜತು. ಉಗುಳಲಾಗದ, ನುಂಗಲಾಗದ ತುತ್ತನ್ನು ಬಾಯಲ್ಲಿ ಇಟ್ಟುಕೊಳ್ಳಬೇಕಾಗುವುದು.