ವಿವಾಹ ಕಾಲದಲ್ಲಿ ಯಾರು ಏನನ್ನು ನೋಡಬೇಕು?
ಜಾತಕ ನೋಡಿಯೇ ವಿವಾಹವಾದುದೆಲ್ಲ ಎಷ್ಟೇ ವಿಚ್ಛೇದನವಾಗಲಿಲ್ಲವೇ ಎನ್ನಬಹುದು. ಅದಾವುದೂ ವಿಚ್ಛೇದನಕ್ಕೆ ಕಾರಣವಾಗಿರದು. ಕಾರಣಗಳನ್ನು ಹುಡುಕಿ ವಿಚ್ಛೇದನವಾಗುವುದು ಬೇರೆ. ಎರಡು ಬುದ್ಧಿ ಹಾಗೂ ಮನಸ್ಸುಗಳು ಒಂದಾಗುವುದಿಲ್ಲ ಎಂದೂ. ಒಂದುಕಡೆ ಸೇರಬಹುದು. ಇದು ಸಹಜ ಕ್ರಿಯೆ. ಅದಕ್ಕಾಗಿ ಬಂಧನ, ಒಪ್ಪಂದ, ಹೊಂದಾಣಿಕೆ ಇವುಗಳೆಲ್ಲ. ಗುರು ಹಿರಿಯರ ಅನುಭವ ಇವೆಲ್ಲ ಸೇರಿದಾಗ ಒಡೆಯಬಹುದಾದ ಬಂಧವು ಒಂದಾಗುತ್ತದೆ.

ವಿವಾಹವೆನ್ನುವುದು ಜೀವನ ಮುಖ್ಯ ಘಟ್ಟಗಳಲ್ಲಿ ಒಂದು. ಏಕೆಂದರೆ ಎರಡು ಮನಸ್ಸು, ಬುದ್ಧಿ, ಆಲೋಚನೆ, ವಿದ್ಯೆ, ಅಧಿಕಾರ, ವಿರುದ್ಧ ಲಿಂಗಗಳು ಹತ್ತಾರು ವರ್ಷಗಳ ಕಾಲ ಬೇರೆಯಾಗದೇ ಸುಖವಾಗಿ, ನೆಮ್ಮದಿಯಿಂದ ಬದುಕುವುದು ಮುಖ್ಯ. ಸ್ನೇಹಕ್ಕೂ ವಿವಾಹಕ್ಕೂ ಬಹಳ ವ್ಯತ್ಯಾಸವಿದೆ. ಸ್ನೇಹದಲ್ಲಿ ಮೇಲೆ ಹೇಳಿದ ಎಲ್ಲ ಅಂಶಗಳಿದ್ದರೂ ಬಂಧ ಮಾತ್ರ ಇರುವುದಿಲ್ಲ. ಯಾರು ಯಾವಾಗಲೂ ಹೇಗೂ ಬೇರೆಯಾಗಬಹುದು. ವಿವಾಹದಲ್ಲಿ ಹಾಗಾಗಬಾರದು ಎನ್ನುವ ಕಾರಣಕ್ಕೆ, ಮನುಷ್ಯನ ಸ್ವಭಾವವನ್ನು ತಿಳಿಸುವ ಜಾತಕ ಹಾಗೂ ಕಾಲದಿಂದ ಉಂಟಾಗಬಹುದಾದ ತೊಂದರೆಗಳನ್ನು ಪರಿಶೀಲಿಸಿ ವಿವಾಹಕ್ಕೆ ಮುಂದಾಗುವುದು.
ಜಾತಕ ನೋಡಿಯೇ ವಿವಾಹವಾದುದೆಲ್ಲ ಎಷ್ಟೇ ವಿಚ್ಛೇದನವಾಗಲಿಲ್ಲವೇ ಎನ್ನಬಹುದು. ಅದಾವುದೂ ವಿಚ್ಛೇದನಕ್ಕೆ ಕಾರಣವಾಗಿರದು. ಕಾರಣಗಳನ್ನು ಹುಡುಕಿ ವಿಚ್ಛೇದನವಾಗುವುದು ಬೇರೆ. ಎರಡು ಬುದ್ಧಿ ಹಾಗೂ ಮನಸ್ಸುಗಳು ಒಂದಾಗುವುದಿಲ್ಲ ಎಂದೂ. ಒಂದುಕಡೆ ಸೇರಬಹುದು. ಇದು ಸಹಜ ಕ್ರಿಯೆ. ಅದಕ್ಕಾಗಿ ಬಂಧನ, ಒಪ್ಪಂದ, ಹೊಂದಾಣಿಕೆ ಇವುಗಳೆಲ್ಲ. ಗುರು ಹಿರಿಯರ ಅನುಭವ ಇವೆಲ್ಲ ಸೇರಿದಾಗ ಒಡೆಯಬಹುದಾದ ಬಂಧವು ಒಂದಾಗುತ್ತದೆ.
ಬ್ರಾಹ್ಮಣನಾದವನು ಮುಖ್ಯವಾಗಿ ನಾಡಿದೋಷಗಳ ಬಗ್ಗೆ ಗಮನ ಕೊಡಬೇಕು. ಒಂದೇ ನಾಡಿ, ವಿರುದ್ಧ ನಾಡಿಗಳ ಬಗ್ಗೆ ಎಚ್ಚರವಹಿಸಿದರೆ ಜೀವನ ಸುಗಮ. ಆದಿ ಮಧ್ಯ ಅಂತ್ಯ ಎಂಬ ಮೂರು ಣಾಡಿಗಳು. ಇವು ವಿವಾಹದ ಪ್ರಯೋಜನ ಸಿದ್ಧಿಯಾಗುವುದು.
ಕ್ಷತ್ರಿಯನಾದವನು ವರ್ಣಗಳ ಬಗ್ಗೆ ಗಮನ ಬೇಕು. ನಕ್ಷತ್ರಗಳಲ್ಲಿ ಬ್ರಾಹ್ಮಣ ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವಿಭಾಗಗಳಿವೆ. ನಕ್ಷತ್ರಗಳಲ್ಲಿ ಆಯಾ ವರ್ಣದ ನಕ್ಶತ್ರವಾದರೆ ಉತ್ತಮ. ಇಲ್ಲವಾದರೆ ಕಲಹ, ಮನಸ್ತಾಪ, ಬೇಸರ, ದುಃಖಗಳು ಬರುತ್ತವೆ.
ವೈಶ್ಯನಾದವನಿಗೆ ಜಾತಕದಲ್ಲಿ ಗುಣಗಳ ಬಗ್ಗೆ ಗುಣದೋಷಗಳು ಕಾಣಿಸುತ್ತವೆ. ಸತ್ತ್ವ ರಜಸ್ಸು ತಮಸ್ಸು ಎನ್ನುವ ಮೂರು ಗುಣಗಳು. ಇವುಗಳು ಪರಸ್ಪರ ಪೂರಕವಾಗಿದ್ದರೆ ಇವರ ವಿವಾಹ ಶುಭ.
ಇನ್ನು ಶೂದ್ರನಾದವನು ಯೋನಿದೋಷಗಳನ್ನು ನೋಡಿ ವಿವಾಹವಾಗಬೇಕು. ವಿರುದ್ಧಯೋನಿಯ ನಕ್ಷತ್ರಗಳಾದರೆ ಸಂತನದಲ್ಲಿ ತೊಂದರೆ, ರೋಗ, ಜಗಳ ಇವುಗಳು ಕಾಣಿಸುವುವು.
ಇವೆಲ್ಲವೂ ಜನ್ಮಮನಕ್ಷತ್ರಗಳಿಂದ ನೋಡಿ, ದೋಷಗಳು ಇಲ್ಲದ ವ್ಯಕ್ತಿಗಳನ್ನು ಒಂದು ಮಾಡಿ ಸಂಸಾರ ಸಾಗುವಂತೆ ಮಾಡುವುದು ಉದ್ದೇಶ. ಪ್ರೇಮ ವಿವಾಹದಲ್ಲಿ ಕೆಲವು ಬಾರಿ ಇದು ಸಹಜವಾಗಿ ಸಿದ್ಧಿಸಿರುತ್ತದೆ. ಕೆಲವು ಬಾರಿ ಆಗಿರುವುದಿಲ್ಲ. ಮಕ್ಕಳಿಗೆ ಬೇಸರವೆಂದು ಮುಂದುವರೆಯುವವರೂ ಇದ್ದಾರೆ. ಆದರೆ ಅನಂತರ ಕ್ಶಷ್ಟಪಡಬೇಕಾಗುತ್ತದೆ.
ಒಂದು ವಿವಾಹವೆಂದರೆ ಮನುಷ್ಯ ನಿರ್ಮಿತ ಮಾತ್ರವಲ್ಲ ಅದು ದೇವ ನಿರ್ಮಿತವೂ ಆದಾಗ ಕಾಲನಿರ್ಮಿತವೂ ಆದಾಗ ಅಂತಹ ಜೀವನ ಏಳುಬೀಳುಗಳ ಮಧ್ಯದಲ್ಲಿಯೂ ಸುಗಮವಾಗಿ ಗುರಿಸೇರುತ್ತದೆ. ಇದರಲ್ಲಿ ಯಾವುದೊಂದು ಕೂಡಿಬಾರದಿದ್ದರೂ ಆ ಕ್ಷಣದಲ್ಲಿ ಒಡಕು ಆರಂಭವಾಗುತ್ತದೆ.
ನಾಡೀಕೂಟ, ವರ್ಣಕೂಟ, ಗುಣಕೂಟ ಹಾಗೂ ಯೋನಿಕೂಟಗಳನ್ನು ಮುಂದೆ ಪರಿಶೀಲಿಸಿದರೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯ.
-ಲೋಹಿತ ಹೆಬ್ಬಾರ್-8762924271 (what’s app only)