AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಜೀವನದ ಬಗ್ಗೆ ಬೇಸರದ ಭಾವನೆ, ನಿಮ್ಮವರನ್ನು ಕಳೆದುಕೊಳ್ಳುವ ಭಯ

18 ಮಾರ್ಚ್​​​ 2025: ಮಂಗಳವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಸಹೋದರನ ಮಾತು ನಿಮಗೆ ಜೀರ್ಣಮಾಡಿಕೊಳ್ಳುವುದು ಕಷ್ಟವಾಗಿ ಸಿಟ್ಟಾಗುವಿರಿ. ಉದ್ಯಮಕ್ಕೆ ಬೇಕಾದ ಕಾನೂನಿನ ವಿಚಾರವನ್ನು ಚರ್ಚಿಸುವಿರಿ. ಮಾರ್ಚ್​​​ 18ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಜೀವನದ ಬಗ್ಗೆ ಬೇಸರದ ಭಾವನೆ, ನಿಮ್ಮವರನ್ನು ಕಳೆದುಕೊಳ್ಳುವ ಭಯ
ಜೀವನದ ಬಗ್ಗೆ ಬೇಸರದ ಭಾವನೆ, ನಿಮ್ಮವರನ್ನು ಕಳೆದುಕೊಳ್ಳುವ ಭಯ
TV9 Web
| Edited By: |

Updated on: Mar 18, 2025 | 12:10 AM

Share

ಬೆಂಗಳೂರು, ಮಾರ್ಚ್​​ 18, ನಿತ್ಯ ಪಂಚಾಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರಾ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವ್ಯಾಘಾತ, ಕರಣ : ಬವ, ಸೂರ್ಯೋದಯ – 06 – 39 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:41 – 17:12, ಯಮಘಂಡ ಕಾಲ 09:40 – 11:10, ಗುಳಿಕ ಕಾಲ 12:41 – 14:11.

ಮೇಷ ರಾಶಿ: ನಿಮ್ಮವರಿಂದ ಉಂಟಾದ ಬಿಕ್ಕಟ್ಟನ್ನು ಬಗೆಹರಿಸುವ ಉಪಾಯ ತಿಳಿಯದು. ಇನ್ನೊಬ್ಬರ ಕೈಗೊಂಬೆಯಾಗಬೇಕಾದೀತು. ಸೌಂದರ್ಯದ ಬಗ್ಗೆ ಅಧಿಕ‌ ಕಾಳಜಿ ಇರುವುದು.‌ ನಿಮ್ಮ ಕೌಶಲವನ್ನು ಕರಗತ ಮಾಡಿಕೊಳ್ಳುವ ಪ್ರಯತ್ನ ಸಫಲವಾಗುವುದು. ನಿಮ್ಮ ಮಾತುಗಳನ್ನು ನೀವು ಪರೀಕ್ಷಿಸಿಕೊಳ್ಳುವುದು ಉತ್ತಮ. ಸಿಟ್ಟಿನಿಂದ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡು ಸಂಕಟಪಡುವಿರಿ. ಹೊಸ ವಸ್ತ್ರಗಳನ್ನು ಧರಿಸುವಿರಿ. ಸೇವೆ ಮಾಡಲು ನಾಯಕನೇ ಆಗಬೇಕಿಲ್ಲ, ಸೇವಕನಾದರೂ ಸಾಕು. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು. ಹತ್ತಿರದವರನ್ನು ನೋಡಿಕೊಳ್ಳುವ ಜವಾಬ್ದಾರಿ ಬರಬಹುದು. ಇಂದು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ರಹಸ್ಯದಿಂದ ಇಂದಿನ‌ ಕೆಲಸವನ್ನು ಮಾಡುವಿರಿ. ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗಬಹುದು. ನಿಮ್ಮ ಮೌನವು ಹಲವಾರ ಅನುಮಾನಕ್ಕೆ ಕಾರಣವಾಗಬಹುದು.

ವೃಷಭ ರಾಶಿ: ಖಾಸಗಿ ಉದ್ಯಮದಿಂದ ಗೊಂದಲ ಸೃಷ್ಟಿ. ಆತುರ ಪಡದೇ ಸಮಾಧಾನ ಚಿತ್ತದಿಂದ ಕಾರ್ಯವನ್ನು ಮಾಡಲು ಪ್ರಯತ್ನಿಸಿ. ಮಕ್ಕಳಿಗೆ ನೀವು ಕೊಟ್ಟ ಸ್ವಾತಂತ್ರ್ಯ ಅತಿಯಾದೀತು. ನಿಮ್ಮ ವಿದ್ಯೆಯ ಬಗ್ಗೆ ನಿಮಗೇ ಅಸೂಯೆ ಉಂಟಾಗಬಹುದು. ಸಿಗಬೇಕಾದ ಯೋಜನೆ ಕೈ ತಪ್ಪುವುದು. ದಾಯಾದಿಗಳು ನಿಮ್ಮ ಸಂಕಷ್ಟವನ್ನು ಎದುರು ನೋಡುತ್ತ ಇರಬಹುದು. ಸಲ್ಲದ ಮಾತುಗಳನ್ನಾಡಿ ಶತ್ರುಗಳನ್ನು ಪ್ರಬಲವಾಗಿಸುವಿರಿ. ಎಲ್ಲ ವಿಚಾರಗಳನ್ನೂ ನೀವು ನಿರಾಧಾರವಾಗಿ ತಳ್ಳಿಹಾಕುವಿರಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಉದ್ಯಮವನ್ನು ಉನ್ನತ ದರ್ಜೆಗೆ ಏರಿಸುವ ಪ್ರಯತ್ನ ಸಾಗಲಿದೆ. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ಸಣ್ಣ ವಿಚಾರವೂ ಕೂಡ ಮಾತಿನ ಕಾರಣ ದೊಡ್ಡದಾಗಬಹುದು. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಲಾರಿರಿ. ಹೊಸತನ್ನು ನಿಮ್ಮದಾಗಿಸಿಕೊಳ್ಳುವ ಕಡೆ ಗಮನ ಅಧಿಕ. ಕಳೆದುಹೋದ ವ್ಯಕ್ತಿಗಳನ್ನು ಮತ್ತೆ ಪಡೆಯುವ ಪ್ರಯತ್ನ ಬೇಡ.

ಮಿಥುನ ರಾಶಿ: ಅನಿರೀಕ್ಷಿತವಾಗಿ ಬಂದ ಸಂಪತ್ತು ನಿಮ್ಮ ಮನಸ್ಸನ್ನು ಕೆಡಿಸುವುದು. ಇದರಿಂದ ಹಣದ ವ್ಯವಹಾರದಲ್ಲಿ ಒತ್ತಡವು ಅಧಿಕವಾಗಬಹುದು. ಮೇಲಧಿಕಾರಿಗಳ ಗುರಿಯನ್ನು ತಲುಪಲು ಶ್ರಮವು ಹೆಚ್ಚಾಗಬಹುದು. ಆಭರಣದ ಬಗ್ಗೆ ಮೋಹ ಉಂಟಾಗುವುದು. ದಿನನಿತ್ಯದ ಕಾರ್ಯವನ್ನು ಬೇಗ ಮಾಡಬೇಕು ಎಂದರೂ ಆಗದು. ಒಂದಕ್ಕೊಂದು ಸೇರಿಕೊಳ್ಳುವುದು. ಹಿರಿಯರಿಗೆ ಅಗೌರವದ ಮಾತುಗಳನ್ನು ಆಡಬೇಕಾದೀತು. ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ವಿಫಲರಾಗುವಿರಿ. ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎನಿಸುವುದು. ನಿಮ್ಮ‌ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ಅಪಾಯದ ಮುನ್ಸೂಚನೆಯನ್ನು ಅರಿಯುವುದು ಕಷ್ಟ. ಕಲಾವಿದರಿಗೆ ಅನಿರೀಕ್ಷಿತ ಗೌರವವು ಪ್ರಾಪ್ತವಾಗಬಹುದು. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದೇಯಿರುವುದು. ನಿಮ್ಮ ನಿರ್ಧಾರಕ್ಕೆ ಮನೆಯಿಂದ ನಿಮಗೆ ಬೆಂಬಲವಿರುವುದು. ಇಂದು ಹಣವನ್ನು ಹೊಂದಿಸುವುದು ಚಿಂತೆಯಾಗಬಹುದು.

ಕರ್ಕಾಟಕ ರಾಶಿ: ಜೀವನದ ಬಗ್ಗೆ ಬೇಸರದ ಭಾವ ಹಾದು ಹೋಗಬಹುದು‌. ಯಾವುದಾದರೂ ಸಾಮಾಜಿಕ ಸಮೂಹ ಚಟುವಟಿಕೆಗಳಲ್ಲಿ ಭಾಗವಹಿಸಿ. ಇನ್ನೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದು ಸರಿ ಕಾಣದು.‌ ಸಂಗಾತಿಯ ಆಯ್ಕೆಯು ಗೊಂದಲವಾಗಿರುವುದು. ಇಂದು ನಿಮ್ಮ‌ ಬಳಿ ಸಾಮಾಜಿಕ ಕಳಕಳಿಯಿರುವ ಜನರು ಬರುವರು. ಇನ್ನು ಬಾರದು ಎಂದುಕೊಂಡ ಹಣವು ಇಂದು ನಿಮ್ಮ ಕೈ ಸೇರುವುದು. ಸಾಲ ಕೊಟ್ಟವರಿಗೆ ಸಮಾಧಾನವಾಗುವಂತೆ ನಡೆದುಕೊಳ್ಳಿ. ತಂದೆಯ ಕಾರ್ಯಕ್ಕೆ ನಿಮ್ಮ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ಹಳೆಯ ಪ್ರೀತಿಯು ನೆನಪಾಗಿ ಮೌನವಾಗುವಿರಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ನವದಂಪತಿಗಳಿಗೆ ವಿಶೇಷ ಆತಿಥ್ಯ. ಎಲ್ಲರ ದೃಷ್ಟಿಯಲ್ಲಿ ಸ್ವಾರ್ಥಿಯಂತೆ ಕಾಣಿಸುವಿರಿ. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡುವಿರಿ. ಪುಣ್ಯ ಕ್ಷೇತ್ರದ ಭೇಟಿಯಿಂದ ಸಮಾಧಾನ‌. ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ.

ಸಿಂಹ ರಾಶಿ: ಎಂದೋ ಮಾಡಿದ ಸಹಾಯವನ್ನು ಸಹೋದ್ಯೋಗಿಗಳು ಮರಳಿ ಕೊಡಬಹುದು. ಇಂದು ಯಾರಿಗೋ ಸಹಾಯ ಮಾಡಲು ಹೋಗಿ ವಂಚಿತರಾಗುವಿರಿ. ಮೂರ್ಖರಂತೆ ವರ್ತಿಸುವುದು ಬೇಡ. ಸ್ತ್ರೀಯರಿಗೆ ಮೇಲಧಿಕಾರಿಗಳ ಮಾತು ಬೇಸರ ತರಿಸಬಹುದು. ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ದಿನಚರಿಯನ್ನು ಬದಲಿಸಿಕೊಳ್ಳಬೇಕು ಎಂದನಿಸಬಹುದು. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಪುನಃ ಪ್ರಸ್ತಾಪಿಸಬಹುದು. ಬೇರೆಯವರ ಮನೆಯಲ್ಲಿ ಭೋಜನ ಮಾಡುವಿರಿ. ಬೆಳೆಯ ಮಾರಾಟದಲ್ಲಿ ಅಲ್ಪ ಲಾಭ. ನಿಮ್ಮ ನಿರ್ಮಾಣವು ನಿಮಗೆ ಹೆಮ್ಮೆ ಎನಿಸೀತು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ಕೆಲವರ ಮಾತಿಗೆ ಉತ್ತರವನ್ನು ಕೊಡುವುದು ಇಷ್ಟವಾಗದು.

ಕನ್ಯಾ ರಾಶಿ: ಹೊಸ ಗೆಳೆತನ ಉದ್ಯಮಕ್ಕೆ ದಿಕ್ಕಿ ತೋರಿಸುವುದು. ಇಂದು ಯಾವುದೇ ವಿವಾದಿತ ಮಾತುಗಳನ್ನು ಆಡದಂತೆ ಎಚ್ಚರ ವಹಿಸಿ. ಅನಾರೋಗ್ಯಕ್ಕೆ ವೈದ್ಯರ ಭೇಟಿಯಾಗಬೇಕಾದೀತು‌. ಸಹೋದರನ ಮಾತು ನಿಮಗೆ ಜೀರ್ಣಮಾಡಿಕೊಳ್ಳುವುದು ಕಷ್ಟವಾಗಿ ಸಿಟ್ಟಾಗುವಿರಿ. ಉದ್ಯಮಕ್ಕೆ ಬೇಕಾದ ಕಾನೂನಿನ ವಿಚಾರವನ್ನು ಚರ್ಚಿಸುವಿರಿ. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ಹೂಡಿಕೆಯನ್ನು ಬೇರೆಯವರ ಹೆಸರಿನಲ್ಲಿ ಮಾಡುವಿರಿ. ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವಿರು. ಕಳೆದು ಹೋದ ಪ್ರೇಮವನ್ನು ಮತ್ತೆ ಯಾರಾದರೂ ನೆನಪಿಸುವರು. ತಪ್ಪನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರಿಸುವಿರಿ. ಹಣಕಾಸು ಸಂಸ್ಥೆಯ ಪ್ರತಿನಿಧಿಯಾಗಿ ಲಾಭ ಪಡೆಯುವಿರಿ. ಇಂದು ನೀವು ಸಮಯವನ್ನು ಮಾಡಿಕೊಂಡು ಕುಟುಂಬದ ಜೊತೆ ಸೌಹಾರ್ದತೆ ಉಂಟಾಗುವುದು. ಇತರರ ಜೊತೆ ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ.

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ