Horoscope Today 27 November: ಇಂದು ಈ ರಾಶಿಯವರ ಹುಟ್ಟುವ ಸ್ವಭಾವ ಗೊತ್ತಾಗಲಿದೆ

ದಿನ ಭವಿಷ್ಯ, 27, ನವೆಂಬರ್​ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಶುಕ್ಲ ಪಕ್ಷದ ಸಪ್ತಮೀ ತಿಥಿ ಗುರುವಾರ ಉದ್ದೇಶ ಸಾಫಲ್ಯ, ಅನ್ವೇಷಣೆ, ದುಡುಕುವಿಕೆ, ಶತ್ರುಭೀತಿ, ಕೃತಜ್ಞತೆ, ಬಾಂಧವ್ಯದಲ್ಲಿ ಪೂರ್ವಾಗ್ರಹ ಇವೆಲ್ಲ ಇಂದಿನ ವಿಶೇಷ. ಈ ದಿನ ನಿಮಗೆ ಶುಭವಾಗಲಿದೆಯೇ ಅಥವಾ ಸವಾಲುಗಳಿವೆಯೇ ಎಂದು ತಿಳಿದುಕೊಳ್ಳಿ.

Horoscope Today 27 November: ಇಂದು ಈ ರಾಶಿಯವರ ಹುಟ್ಟುವ ಸ್ವಭಾವ ಗೊತ್ತಾಗಲಿದೆ
ದಿನ ಭವಿಷ್ಯ
Updated By: ಅಕ್ಷತಾ ವರ್ಕಾಡಿ

Updated on: Nov 27, 2025 | 12:46 AM

ಮೇಷ ರಾಶಿ:

ಸಣ್ಣ ಭಾವನಾತ್ಮಕ ವಿಚಾರಗಳಲ್ಲಿ ಏರುಪೇರುಗಳು ಇರಬಹುದು. ಕೆಲಸದಲ್ಲಿ ನಿಧಾನವಾಗಿ ಪ್ರಗತಿ. ಹಣಕಾಸಿನಲ್ಲಿ ಜಾಗ್ರತೆ ಅಗತ್ಯ. ಸಂಬಂಧಗಳಲ್ಲಿ ನಂಬಿಕೆಯ ವಾತಾವರಣ ನಿರ್ಮಿಸಲು ಅವಕಾಶ. ಇಂದು ಕೌಂಟುಬಿಕ ವ್ಯವಹಾರದಲ್ಲಿ ಮಹತ್ತ್ವದ ತಿರುವು ಸಿಗುವ ಸಂಭವವಿದೆ. ಕಠಿಣ ಪರಿಶ್ರಮದಿಂದ ನಿಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ತಪ್ಪಿನ ಮೂಲವನ್ನು ಹುಡುಕಿ ಸಮಯವನ್ನು ವ್ಯರ್ಥಮಾಡುವಿರಿ. ಪಾಲುದಾರಿಕೆಯಲ್ಲಿ ಉಂಟಾದ ಗೊಂದಲ್ಲವನ್ನು ಸರಿ ಮಾಡಿಕೊಂಡೂ ಮೈತ್ರಿ ಮಾಡಿಕೊಂಡಲ್ಲಿ ಇಬ್ಬರಿಗೂ ಅನುಕೂಲವಿದೆ. ನಿಮ್ಮ ಸ್ಥಿರಾಸ್ತಿ ಪರಿಶೀಲನೆಯನ್ನು ಇಂದು ಮಾಡಿಕೊಳ್ಳಿ. ನಿಮ್ಮ‌ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾದೀತು. ಅಂತರ್ಮುಖತೆಯಿಂದ ಕುಟುಂಬದಲ್ಲಿ ಆತಂಕ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವಿರಿ. ನಿಮ್ಮ ಯಶಸ್ಸೇ ನಿಮಗೆ ಮುಳುವಾಗಬಹುದು. ಸೌಲಭ್ಯಗಳನ್ನು ಸದುಪಯೋಗವಾಗುವಂತೆ ನೋಡಿಕೊಳ್ಳಿ. ದೇವತಾರಾಧನೆಯಿಂದ ನೆಮ್ಮದಿ ಸಿಕ್ಕಂತಾಗುವುದು.

ವೃಷಭ ರಾಶಿ:

ಸ್ನೇಹಿತರೊಂದಿಗೆ ಚರ್ಚೆಗಳು ಫಲಕಾರಿಯಾಗುವುದು. ಹಣದಲ್ಲಿ ನಿಧಾನವಾದರೂ ಸ್ಥಿರವಾದ ಪ್ರಗತಿ. ಸಂಬಂಧಗಳಲ್ಲಿ ಗಮನಕೊಟ್ಟರೆ ಉತ್ತಮ. ನ್ಯಾಯಸಮ್ಮತವಾದ ದಾರಿಯಲ್ಲಿ ಇದ್ದರೂ ನಿಮಗೆ ನೋವು ತಪ್ಪದು. ಆಶಾವಾದದಲ್ಲಿಯೇ ನಿಮ್ಮ ಇಂದಿನ ದಿನವನ್ನು ಕಳೆಯುವಿರಿ. ಯೋಜಿತ ಉದ್ಯಮದಲ್ಲಿ ಪಾಲುದಾರರನ್ನು ಸೇರಿಸಿಕೊಂಡು ಮುಂದುವರಿಯಿರಿ. ಸಾಮಾಜಿಕ ಕಾರ್ಯಗಳಿಗೆ ಒತ್ತಡಗಳು ಇರಲಿದೆ. ಉಪಕಾರವನ್ನು ಮರೆಯುವುದು ಬೇಡ. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಕಾರ್ಯರೂಪಕ್ಕೆ ತೆಗೆದುಕೊಂಡು ಬನ್ನಿ. ಕಡಿಮೆ ಖರ್ಚಿನಲ್ಲಿ ಇಂದಿನ ಕಾರ್ಯವು ನೋಡಿಕೊಳ್ಳಿ. ಉತ್ಸಾಹವನ್ನು ನಿಮ್ಮವರ ಚುಚ್ಚು ಮಾತು ಕಡಿಮೆ ಮಾಡಬಹುದು. ಹೊಸ ಆಲೋಚನೆಗಳು ಮತ್ತು ತಾಂತ್ರಿಕ ವಿಚಾರಗಳು ಹೆಚ್ಚು ಜಾಗೃತವಾಗುತ್ತವೆ. ಸೃಜನಶೀಲತೆಯ ಫಲ ಕೆಲಸದಲ್ಲಿ ಚೆನ್ನಾಗಿ ಕಾಣುತ್ತದೆ. ಮಾತನಾಡಿ ತಪ್ಪಿನಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಅಪರಿಚಿತ ಸ್ಥಳಗಳಿಗೆ ಹೋಗುವ ಸಂದರ್ಭವು ಬರಬಹುದು. ಯಾರ ಮಾತನ್ನೂ ನಿರ್ಲಕ್ಷ್ಯ ಮಾಡಬೇಡಿ. ಮಾತಿನಿಂದ ಸಿಕ್ಕಿಬೀಳುವ ಸಾಧ್ಯತೆ ಇದೆ.

ಮಿಥುನ ರಾಶಿ:

ಇಂದು ಹಾಕಿದ ಶ್ರಮ ಮುಂದಿನ ದಿನಗಳಲ್ಲಿ ದೊಡ್ಡ ಫಲ ಕೊಡುತ್ತದೆ. ಕುಟುಂಬದಲ್ಲಿ ಉತ್ತರದಾಯಿತ್ವ ಹೆಚ್ಚಾಗಬಹುದು. ಹಣಕಾಸಿನಲ್ಲಿ ಸ್ಥಿರತೆಯೊಂದಿಗೆ ಹೊಸ ಅವಕಾಶಗಳು ಕಾಣಿಸುತ್ತವೆ. ಯಾರನ್ನಾದರೂ ಹಿಡಿದುಕೊಂಡು ನಿಮಗೆ ಆಗಬೇಕಾದ ಕೆಲಸವನ್ನು ಮಾಡುವಿರಿ. ನಿಮಗೆ ಇಂದು ತುರ್ತು ಆರ್ಥಿಕ ಸ್ಥಿತಿಯನ್ನು ಎದರಿಸಲು ಕಷ್ಟವಾಗುವುದು. ಪ್ರತಿಕೂಲವನ್ನು ಎದುರಿಸುವುದು ಕಷ್ಟವಾಗುವುದು. ನಿಮ್ಮ ಆಸಕ್ತಿಯು ಹೊಸ ಕ್ರಮದ ಹಾದಿಯಲ್ಲಿ ತೋರಿಸಬಹುದು, ನಿಮ್ಮ ಆಲೋಚನೆಗಳನ್ನು ಸರಿಯಾದ ಕಡೆ ವ್ಯಕ್ತಪಡಿಸಿ. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ರಾಜಕೀಯ ವ್ಯಕ್ತಿಗಳಿಂದ ಕೆಲಸಮಾಡಿಸಿಕೊಳ್ಳಲಿದ್ದೀರಿ. ಭವಿಷ್ಯದ ಕನಸು ಸಾಕಾರಗೊಳ್ಳುವುದು ಸುಲಭವಲ್ಲ. ಕೆಲಸದ ಮೇಲೆ ಅಧಿಕ ಗಮನ ಹರಿಸುವ ದಿನ. ಗುರಿಗಳನ್ನು ಸಾಧಿಸಲು ಸೂಕ್ತ ಕಾಲ. ಸ್ನೇಹಿತನ ಸಹವಾಸದಿಂದ ದುರಭ್ಯಾಸಕ್ಕೆ ಬೀಳುವಿರಿ. ನಿಮ್ಮ ಮೇಲೆ ಬರುವ ನಕಾರಾತ್ಮಕ ಮಾತುಗಳನ್ನು ಅಲ್ಲಗಳೆಯಲಾರಿರಿ.

ಕರ್ಕಾಟಕ ರಾಶಿ:

ನಿಮ್ಮ ಮಾತಿನಲ್ಲಿ ಸ್ಪೂರ್ತಿ ಮತ್ತು ಪ್ರೇರಣೆ ಹೆಚ್ಚು. ಬೇರೆಯವರಿಂದ ಗೌರವ ಸಿಗುತ್ತದೆ. ಹಣದ ವಿಷಯದಲ್ಲಿ ಸುಧಾರಣೆ. ಸಂಬಂಧಗಳಲ್ಲಿ ಪ್ರಾಮಾಣಿಕ ಹಾಗೂ ಹಗುರ ಮನಸ್ಸು ಅಗತ್ಯ. ನಿಮ್ಮ ಮೇಲೆ ಯಾರಾದರೂ ಅಪವಾದವನ್ನು ಹಾಕಬಹುದು. ಇಂದು ಸಾಲಬಾಧೆಯು ನಿಮಗೆ ಅತಿಯಾದಂತೆ ಭಾಸವಾಗುವುದು. ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಲು ನಿಮಗೆ ಕಷ್ಟವೆನಿಸುವುದು. ಉದ್ವೇಗಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಕೃತಜ್ಞತೆಯಿಂದ ಏನನ್ನಾದರೂ ಕೊಡುವಿರಿ. ನಿಮ್ಮ ನಡವಳಿಕೆಯು ಅಹಂಕಾರವಾಗಿ ಬದಲಾಗಬಹುದು. ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ಧೈರ್ಯ ಮತ್ತು ಸಂಚಾರಕ್ಕೆ ಸಂಬಂಧಿಸಿದ ಶುಭಫಲಗಳನ್ನು ತರುತ್ತದೆ. ಹೊಸ ಯೋಜನೆಗಳು ಆರಂಭವಾಗಬಹುದು. ಉದ್ಯೋಗದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳಬೇಕಾದೀತು. ಮುಖಂಡರಿಗೆ ಮಾತಿನ‌ ಕಾರಣದಿಂದ ಮುಖಭಂಗವಾಗಬಹುದು. ಹಣಕಾಸಿನ‌ ವಿಚಾರದಲ್ಲಿ ಜಾಗರೂಕತೆ ಮುಖ್ಯ.

ಸಿಂಹ ರಾಶಿ:

ಗುಪ್ತವಾಗಿದ್ದ ವಿಷಯಗಳು ಬಹಿರಂಗವಾಗುವ ಸಾಧ್ಯತೆ ಇದೆ. ಸಂಬಂಧಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಮುಖ್ಯ. ಹಣಕಾಸಿನಲ್ಲಿ ನೋಡುವಂತೆ ನಿಧಾನವಾದ ಬೆಳವಣಿಗೆ. ಬೇಗ ಸಾಲವನ್ನು ತೀರಿಸಲು ನಿಮ್ಮ ಯೋಜನೆ ಕಾರ್ಯರೂಪಕ್ಕೆ ಬರುವುದು. ನಿಮ್ಮ ಗುರಿಯನ್ನು ತಲುಪಲು ಸಮಯ ಹಿಡಿಯುವುದು. ಎಂದುಕೊಂಡ ಕಾರ್ಯವು ಮುಗಿದು ಸಂಭ್ರಮದಲ್ಲಿ ಇರುವಿರಿ. ಕ್ರಿಯಾತ್ಮಕ ಚಟುವಟಿಕೆಯಲ್ಲಿ ಸಫಲತೆಯನ್ನು ಕಾಣುವಿರಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಪರೋಕ್ಷವಾಗಿ ನಿಮ್ಮಿಂದ ಶತ್ರುಗಳಿಗೆ ಸಹಾಯವಾಗುವುದು. ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಎಲ್ಲರ ಜೊತೆ ಬೆರೆಯುವುದನ್ನು ಇಷ್ಟಪಡುವಿರಿ. ಮಕ್ಕಳ ಕಲಿಕೆಗೆ ಬೇಕಾದ ಸಹಕಾರವನ್ನು ನೀಡುವಿರಿ. ತಾಯಿಯ ಪ್ರೀತಿಗೆ ಸೋಲುವಿರಿ. ನೂತನ ಗೃಹವನ್ನು ಖರೀದಿ ಮಾಡುವ ಅವಕಾಶವು ಬರಬಹುದು. ದಿನವು ಭಾವನಾತ್ಮಕವಾಗಿ ಸ್ವಲ್ಪ ಉತ್ಕಟವಾಗಿರಬಹುದು. ಆದರೆ ಅದೇ ಭಾವನೆ ನಿಮ್ಮ ಕೆಲಸದಲ್ಲಿ ಹೊಸ ದೃಷ್ಟಿಕೋನ ತರುತ್ತದೆ. ಮಾನಸಿಕ ಒತ್ತಡದಿಂದ ಇಂದಿನ ಕೆಲಸವು ಬೇಗನೆ ಮುಗಿಸುವಿರಿ.

ಕನ್ಯಾ ರಾಶಿ:

ಹತ್ತಿರದ ಸಂಬಂಧಗಳಲ್ಲಿ ಹೃದಯಸ್ಪರ್ಶಿ ಕ್ಷಣಗಳು ಬರಬಹುದು. ಹೊಸ ಒಪ್ಪಂದಗಳು ಅಥವಾ ಹೊಸ ಪರಿಚಯಗಳಿಂದ ಪ್ರಯೋಜನ. ಹಣದ ಹರಿವು ಸಾಮಾನ್ಯ. ಇಂದಿನ ದುಡಿಮೆಯಲ್ಲಿ ಸಿಕ್ಕಷ್ಟು ಅಲ್ಲ, ದಕ್ಕಿದಷ್ಟು ನಿಮ್ಮದೇ. ಸಂಘರ್ಷಗಳಿಗೆ ಸುಖಾಂತ್ಯವನ್ನು ಮಾಡಿದ್ದರೆ ಮತ್ತೇನಾದರೂ ಆದೀತು. ಮಾನಸಿಕ ವಿಶ್ರಾಂತಿ ಇಲ್ಲ ಎಂದು ಅನ್ನಿಸಬಹುದು. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು. ಯಾರ ಬಳಿಯೂ ಅಹಂಕಾರವನ್ನು ತೋರಿಸುವುದು ಬೇಡ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಇಂದು ನೀವು ಮಾಡುವಿರಿ. ತಪ್ಪನ್ನು ಸರಿ ಮಾಡಿಕೊಂಡು ಸಾಗಬೇಕಾದೀತು. ವಾಹನದಲ್ಲಿ ಓಡಾಡುವುದನ್ನು ಕಡಿಮೆ ಮಾಡಬೇಕಾದೀತು. ಶಾಂತಿ ಮತ್ತು ಸಮತೋಲನ ಮುಖ್ಯ ಪಾತ್ರವಹಿಸುವ ದಿನ. ನಿಮ್ಮ ಮಾತು, ವರ್ತನೆ ಮತ್ತು ನಿರ್ಧಾರ ಎಲ್ಲವೂ ಸಮರ್ಪಕವಾಗಿ ನಡೆಯುವುವು.

ತುಲಾ ರಾಶಿ:

ಒತ್ತಡ ಬಂದರೂ ಶಾಂತ ಮನಸ್ಸಿನಿಂದ ನಿರ್ವಹಿಸಿದರೆ ಉತ್ತಮ. ಹಣಕಾಸಿನಲ್ಲಿ ನಿರೀಕ್ಷೆಗಿಂತ ಉತ್ತಮ ಫಲ. ಕುಟುಂಬದಲ್ಲಿ ಸಮಾಧಾನದ ವಾತಾವರಣ. ಇಂದಿನ ಕೆಲವು ಘಟನೆಗಳನ್ನು ಪ್ರತಿಕೂಲವಾಗಿ ತೆಗೆದುಕೊಂಡರೆ ಕಷ್ಟ. ಇಂದು ನಿಮಗೆ ಕಾರ್ಯದಿಂದ ತೃಪ್ತಿ ಸಿಗಲಿದೆ. ಇಂದಿನ ಸಮಯವನ್ನು ವ್ಯರ್ಥ ಮಾಡದೇ ನಿಮ್ಮದೇ ಸಮಯಸಾರಿಣಿಯನ್ನು ರೂಪಿಸಿಕೊಳ್ಳಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ಕಛೇರಿಯ ನಿಯಮಗಳು ನಿಮಗೆ ಹೊಂದಿಕೆಯಾಗದು. ಈಗಲೇ ಅಧ್ಯಯನ ವಿಧಾನವನ್ನು ಬದಲಿಸಿಕೊಳ್ಳಿ. ಭೂಮಿಯ ವ್ಯವಹಾರದಲ್ಲಿ ಲಾಭವಿರದೇ ಕೇವಲ ಓಡಾಟವಾಗುವುದು. ಮಾತನಾಡವೇಕಾದ ಸಂದರ್ಭದಲ್ಲಿ ಮೌನ ವಹಿಸಿ ಎಲ್ಲರ ಕೋಪಕ್ಕೆ ಗುರಿಯಾಗುವಿರಿ. ಯೋಜನೆ ಮತ್ತು ಕಠಿಣ ಪರಿಶ್ರಮಕ್ಕೆ ಸೂಕ್ತ ಸ್ಥಾನ. ನಿಮ್ಮ ಕೆಲಸದಲ್ಲಿ ಸೂಕ್ಷ್ಮತೆ ಮತ್ತು ನಿಖರತೆ ಇಂದು ಹೆಚ್ಚಿನ ಫಲ ನೀಡುತ್ತದೆ. ಹಣದ ಹಿಂದೆ ಎಷ್ಟೇ ಬಿದ್ದರೂ ಸಿಕ್ಕುವಷ್ಟು ಮಾತ್ರ ಸಿಗುವುದು. ನಿರುಪಯುಕ್ತ ವಸ್ತುಗಳನ್ನು ಇಂದು ನೀವು ಬೇರೆಯವರಿಗೆ ಕೊಡುವಿರಿ.

ವೃಶ್ಚಿಕ ರಾಶಿ:

ಸ್ವಾಭಿಮಾನವು ಹೆಚ್ಚಾದರೂ, ಅದು ಸಂಬಂಧಗಳಲ್ಲಿ ಅಂತರ ಉಂಟುಮಾಡಬಹುದು, ಜಾಗ್ರತೆ ಬೇಕು. ಆರೋಗ್ಯ ಮತ್ತು ಹಣಕಾಸು ಎರಡೂ ಸ್ಥಿರವಾಗಿವೆ. ಅಧಿಕ ಸಂಪಾದನೆಯು ನಿಮ್ಮ ಮಾರ್ಗವನ್ನು ತಪ್ಪಿಸುವುದು. ಸಮಯಕ್ಕೆ ಸರಿಯಾಗಿ ನಿಮ್ಮ ಬುದ್ಧಿಯು ಸ್ಫುರಿಸುವುದು. ಇಂದು ನಿಮ್ಮ ಬಲವಂತದ ಪ್ರೇಮ ತಪ್ಪಿಹೋಗುವುದು. ಬಂಧುಗಳ ಎದುರು ಮಾತನ್ನು ಹರಿಬಿಡಬೇಡಿ. ಒಬ್ಬರೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಎಲ್ಲದರ ಬಗ್ಗೆಯೂ ನಿಮ್ಮಲ್ಲಿ ಅನಿಶ್ಚಿತತೆ ಇರುವುದು. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ. ನಿಮಗೆ ಆತ್ಮವಿಶ್ವಾಸ, ನಾಯಕತ್ವ ಮತ್ತು ಸ್ಪಷ್ಟ ನಿರ್ಧಾರಗಳ ದಿನ. ಕೆಲಸದಲ್ಲಿ ನಿಮ್ಮ ಸಲಹೆಯನ್ನು ಎಲ್ಲರೂ ಗೌರವಿಸುವರು. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯ ನಡವಳಿಕೆಯು ಇಷ್ಟವಾಗದು. ಸ್ಪರ್ಧಾಮನೋಭಾವ ನಿಮಗೆ ಸಾಕೆನಿಸಬಹುದು.

ಇದನ್ನೂ ಓದಿ: ನವೆಂಬರ್ ತಿಂಗಳ ಕೊನೆಯ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ಧನು ರಾಶಿ:

ಭಾವನೆಗಳು ಸ್ವಲ್ಪ ಹೆಚ್ಚು ಕೆಲಸ ಮಾಡಬಹುದು, ಆದರೂ ನೀವು ತೆಗೆದುಕೊಳ್ಳುವ ನಿರ್ಧಾರಗಳು ಸವಾಲಿದ್ದಾಗಿರುವುದು. ಕೆಲಸದಲ್ಲಿ ಶ್ರಮ ಬೇಡಬಹುದು. ವಾತಾವರಣದ ಬದಲಾವಣೆಯಿಂದ ಸ್ವಾಸ್ಥ್ಯವು ಹಾಳಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗುವುದಷ್ಟೇ ಅಲ್ಲ, ಆರ್ಥಿಕ ಸಹಾಯವನ್ನೂ ನೀವು ಮಾಡಬೇಕಾಗುವುದು. ಅತಿಯಾದ ಪ್ರಯಾಣದಿಂದ ನೀವು ದುರ್ಬಲರಾಗುವಿರಿ. ಇತ್ತೀಚಿನ ಕೆಲವು ಸ್ಥಿತಿಗಳು ಒತ್ತಡವನ್ನು ತಂದಿರಬಹುದು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಗ್ನಿಗೆ ಏನೇ ಮಾಡಿದರೂ ತನ್ನ ಶಾಖ ನೀಡುವ ಸ್ವಭಾವವನ್ನು ಬಿಡದು. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು. ಗೊಂದಲವನ್ನು ಮಾಡಿಕೊಳ್ಳದೇ ಕೆಲಸವನ್ನು ಸರಳ ಮಾಡಿಕೊಳ್ಳಿ. ಬಿಡುವಿನ ಸಮಯವನ್ನು ಅಧಿಕ ಸಂಪಾದನೆಗಾಗಿ ಬಳಸಿಕೊಳ್ಳುವಿರಿ. ಒಂದಕ್ಕಿಂತ ಹೆಚ್ಚು ಕೆಲಸವನ್ನು ಒಟ್ಟಿಗೇ ಮಾಡಲು ಹೋಗಿ ಅಸ್ತವ್ಯಸ್ತ ಮಾಡಿಕೊಳ್ಳುವಿರಿ.

ಮಕರ ರಾಶಿ:

ಆರ್ಥಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಪ್ರಯಾಣದ ಯೋಗ ಇದೆ. ಹಣದ ವಿಷಯದಲ್ಲಿ ಒಳ್ಳೆಯ ಬೆಳವಣಿಗೆಯ ಸೂಚನೆ. ಸುಮ್ಮನೇ ಮುಖಭಂಗವಾಗುವುದು. ಕುಟುಂಬದಲ್ಲಿ ಸಲ್ಲದ ಮಾತುಗಳು ಬರಬಹುದು. ಅದನ್ನು ತೆಗೆದುಕೊಂಡು ಹೋಗುವುದು ನಿಮ್ಮದೇ ಕಾರ್ಯವಾಗಬಹುದು. ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಇರುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಯಾರಿಗೋ ಸಿಗಬೇಕಾದ ಹಣವು ನಿಮ್ಮ ಕೈ ಸೇರಬಹುದು. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ಬುದ್ಧಿಶಕ್ತಿ ಹೆಚ್ಚಾಗಿ ಕೆಲಸ ಮಾಡುತ್ತದೆ. ಹೊಸ ವಿಚಾರಗಳು, ಹೊಸ ಯೋಜನೆಗಳು ಮತ್ತು ಹೊಸ ಪರಿಚಯಗಳು ನಿಮ್ಮನ್ನು ಮುಂದಕ್ಕೆ ಕರೆದೊಯ್ಯಬಹುದು. ಹಣವನ್ನು ಉಳಿಸಿಕೊಳ್ಳಲು ನಿಮ್ಮ ಪ್ರಯತ್ನವು ಫಲಕೊಡುವುದು. ಇಂದಿನ ನಿಮ್ಮ ವರ್ತನೆಯು ಗಾಂಭೀರ್ಯದಿಂದ ಇರಲಿದೆ. ಇಂದು ನೀವು ಮಾತನ್ನು ಅಧಿಕವಾಗಿ ಆಡುವಿರಿ.

ಕುಂಭ ರಾಶಿ:

ಕೆಲವೊಂದು ಅಸಮಂಜಸ ಪರಿಸ್ಥಿತಿಗಳು ಎದುರಾದರೂ, ನಿಮ್ಮ ಶಾಂತ ಸ್ವಭಾವವು ಅದನ್ನು ಸರಿಮಾಡಲು ಸಹಾಯ ಮಾಡುತ್ತದೆ. ಹಣಕಾಸಿನಲ್ಲಿ ಸ್ಥಿರತೆ ಕಾಣಬಹುದು. ಸಂಬಂಧಗಳಲ್ಲಿ ಪ್ರಾಮಾಣಿಕತೆ ಹೆಚ್ಚುತ್ತದೆ. ಮನ ಬಂದಂತೆ ವರ್ತಿಸಲು ನೀವು ಇಂದು ಸ್ವತಂತ್ರರಲ್ಲ. ನಿಮ್ಮ ಕಾರ್ಯದ ಅನುಭವದ ಮೇಲೆ ಉತ್ತಮ ಸ್ಥಾನವು ಪ್ರಾಪ್ತವಾಗುವುದು. ಮನೆಯಿಂದ ದೂರವಿರುವ ನಿಮಗೆ ಕುಟುಂಬದವರ ನೆನಪಾಗುವುದು. ಉತ್ಸಾಹದಿಂದ ಏನನ್ನಾದರೂ ಮಾಡಲು ಹೋಗುವಿರಿ. ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಒಂದು ಕಾರ್ಯವು ಬಹೂಪಯೋಗಿಯಾಗುವಂತೆ ನೋಡಿ. ಇನ್ನೊಬ್ಬರನ್ನು ನೋಯಿಸುವುದು ನಿಮಗೆ ಇಷ್ಟವಾಗದು. ನೂತನ ವಸ್ತುಗಳನ್ನು ಖರೀದಿಸುವಿರಿ. ಮನೋರಂಜನೆಯಲ್ಲಿ ನಿಮ್ಮ ಹೆಚ್ಚಿನ ಸಮಯವನ್ನು ಕಳೆಯಬೇಕಾದೀತು. ಕೆಲಸಗಳಲ್ಲಿ ಚೈತನ್ಯವೂ ಹೆಚ್ಚಲಿದೆ. ನೀವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ಸ್ಪಷ್ಟತೆ ಮತ್ತು ದೃಢತೆಯಿಂದ ಮುಂದುವರೆಯಬಹುದು. ಸೌಲಭ್ಯ ಹೆಚ್ಚಾದಷ್ಟೂ ಆಲಸ್ಯ ಹೆಚ್ಚಾಗುವುದು. ಮೇಲಧಿಕಾರಿಗಳ ಬೆಂಬಲವು ನಿಮಗೆ ಬಲವನ್ನು ಕೊಡಬಹುದು.

ಮೀನ ರಾಶಿ:

ಕುಟುಂಬದಲ್ಲಿ ಚಿಕ್ಕ ವಿಚಾರಗಳಿಂದ ಸಂತೋಷ ಸಿಗಬಹುದು. ಆರ್ಥಿಕವಾಗಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳದೇ ಇರುವುದೇ ಉತ್ತಮ. ಅತಿಯಾದ ಆತ್ಮವಿಶ್ವಾಸಕ್ಕೆ ಜಾಗ್ರತೆ ಅವಶ್ಯಕ. ಭೂ ಉತ್ಪನ್ನಗಳ ಮಾರಾಟವನ್ನು ಹೆಚ್ಚು ಮಾಡುವಿರಿ ಮತ್ತು ಅಧಿಕ‌ಲಾಭವೂ ಆಗುವುದು. ನಿಮ್ಮ ಉದ್ಯಮಕ್ಕೆ ಮನೆಯಿಂದ ಪ್ರೋತ್ಸಾಹ ಸಹಾಯಗಳು ಸಿಗದಿದ್ದರೂ ಬಂಧುಗಳಿಂದ ಸಿಗುವುದು. ಇಂದು ನೀವು ನಿಮ್ಮ ಉದ್ದೇಶಿಸಿದ್ದಕ್ಕಿಂತ ಅಧಿಕ ಮುನ್ನಡೆ ಸಾಧಿಸುವಿರಿ. ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ಕಳೆದು ಹೋದ ಸಂಗತಿಗಳನ್ನು ಮತ್ತೆ ಮತ್ತೆ ಹೇಳುವುದು ಬೇಡ. ಸ್ನೇಹಿತರಿಂದ ಅಲ್ಪ ಆರ್ಥಿಕ ಲಾಭವು ನಿಮಗೆ ಸಿಗುವುದು. ಆರಾಮ ಮತ್ತು ನಿಧಾನವಾಗಿ ಮುಂದುವರಿಯುವ ಗುಣವನ್ನು ತರುವ ಸಾಧ್ಯತೆ ಇದೆ. ನಿಮ್ಮ ಕೆಲಸಕ್ಕೆ ಬೇಕಾದ ಸಹಕಾರ ಮತ್ತು ಧೈರ್ಯ ದೊರೆಯುತ್ತದೆ. ಸಂಬಂಧಗಳನ್ನು ಬಳಸಿಕೊಂಡು ಇಂದಿನ ಕೆಲಸವನ್ನು ಮಾಡುವಿರಿ. ನಿಮಗೆ ಯಾರ ಜೊತೆಗೂ ಗುರುತಿಸಿಕೊಳ್ಳುಬುದು ಇಷ್ಟವಾಗದು. ಆದಷ್ಟು ಚರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ.

27 ನವೆಂಬರ್​ 2025ರ ಗುರುವಾರದ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಅನೂರಾಧಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ವೃದ್ಧಿ, ಕರಣ : ವಣಿಜ, ಸೂರ್ಯೋದಯ – 06 – 25 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:33 – 14:58, ಯಮಗಂಡ ಕಾಲ 06:25 – 07:51, ಗುಳಿಕ ಕಾಲ 09:16 – 10:42

-ಲೋಹಿತ ಹೆಬ್ಬಾರ್-8762924271 (what’s app only)