ಹಲವು ದಿನಗಳಿಂದ ಮಾಡಿದ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಆಷಾಢ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಶನಿವಾರ ನಿಮ್ಮ ಅಸ್ತಿತ್ವದ ತೋರ್ಪಡಿಕೆ, ಮನಶ್ಚಂಚಲತೆ, ವಾಹನದಿಂದ ಗಾಯ, ಅಧಿಕಾರಿಗಳ ಮೆಚ್ಚುಗೆಗೆ ಪ್ರಯತ್ನ ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲಾಫಲ ಎನ್ನುವುದನ್ನು ತಿಳಿದುಕೊಳ್ಳಿ.

ಹಲವು ದಿನಗಳಿಂದ ಮಾಡಿದ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವಿದೆ
ದಿನ ಭವಿಷ್ಯ
Image Credit source: Pinterest
Edited By:

Updated on: Jul 19, 2025 | 1:43 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ಗ್ರೀಷ್ಮ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಪುನರ್ವಸು, ವಾರ: ಶನಿ, ತಿಥಿ: ನವಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಧೃತಿ ಕರಣ: ತೈತಿಲ, ಸೂರ್ಯೋದಯ – 06 : 13 am, ಸೂರ್ಯಾಸ್ತ – 07 : 03 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 11:02 – 12:39, ಗುಳಿಕ ಕಾಲ 07:49 – 09:26, ಯಮಗಂಡ ಕಾಲ 03:52 – 05:29

ಮೇಷ ರಾಶಿ: ಉತ್ತಮ ಹವ್ಯಾಸದ ಜೊತೆ ಇಂದಿನ ದಿನ ಕಳೆದುಹೋಗುವುದು. ಅನಾರೋಗ್ಯವನ್ನು ನಗಣ್ಯ ಮಾಡುವುದು ಬೇಡ. ಉಚಿತ ಚಿಕಿತ್ಸೆಯಿಂದ ಆರಂಭದಲ್ಲಿಯೇ ಪರಿಹಾರ ಮಾಡಿಲೊಳ್ಳಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ವಿರೋಧಿಗಳು ತಡಯಬಹುದು. ಸ್ತ್ರೀ ನಾಯಕತ್ವಕ್ಕೆ ನಿಮ್ಮ ಆಯ್ಕೆ ಮಾಡುವ ಸಾಧ್ಯತೆ ಇದೆ. ಬಂಧುಗಳ ಸಹಕಾರದಿಂದ ನಿಮ್ಮ‌ಋಣ ಬಾಧೆ ಸದ್ಯ ತೀರುವುದು. ಹದಗೆಟ್ಟ ಆರೋಗ್ಯವು ಸರಿಯಾಗುವುದು. ಧಾರ್ಮಿಕ ನಾಯಕರಿಗೆ ಸುಕಾಲ. ಮಾನಸಿಕವಾಗಿ ನೀವು ಸ್ವಲ್ಪ ಕುಗ್ಗುವಿರಿ. ಆಲಸ್ಯದಿಂದ ಅವಕಾಶವಂಚಿತರಾಗುವ ಸಾಧ್ಯತೆ ಇದೆ. ಗುಂಪಾಗಿ ಮಾಡಿದ ಕೆಲಸದಲ್ಲಿ ನಿಮ್ಮ ಹೆಸರೂ ಸೇರುವುದು. ನಿಕಟವರ್ತಿಗಳ ಮಾತನ್ನು ನಿರ್ಲಕ್ಷ್ಯ ಮಾಡುವಿರಿ. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು.‌ ಅಲಕ್ಷ್ಯ ಮಾಡಿದರೆ ಉತ್ತಮ. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ. ದೂರ ಪ್ರಯಾಣವನ್ನು ಜಾಗರೂಕತೆಯಿಂದ ಮಾಡುವುದು ಅವಶ್ಯಕ. ನಿಮ್ಮ ತೀರ್ಮಾನಕ್ಕೆ ಬದ್ಧರಾಗಿರಿ.

ವೃಷಭ ರಾಶಿ: ನೀವಾಗಿಯೇ ನಿಮ್ಮ ಮೇಲೆ ಹಾಕಿಕೊಳ್ಳುವ ಜವಾಬ್ದಾರಿಯಿಂದ ಒತ್ತಡ ಅಧಿಕವಾಗಲಿದೆ. ಇಂದಿನ ನಿಮ್ಮ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ವಾಹನದ ಉದ್ಯಮವನ್ನು ನಡೆಸುತ್ತಿದ್ದರೆ ನಿಮಗೆ ಲಾಭವಾಗುವ ಸಾಧ್ಯತೆ ಹೆಚ್ಚು. ಆಕಸ್ಮಿಕ ಧನಲಾಭವು ನಿಮ್ಮನ್ನು ಖುಷಿಯಾಗಿಡಲಿದೆ. ಸಾಲವನ್ನು ಪಡೆಯಲು ಸ್ನೇಹಿತನ ಸಹಾಯ ಕೇಳುವಿರಿ. ರಾಜಕೀಯವಾಗಿ ಪ್ರೇರಿತವಾದ ಮಾತುಗಳು ನಿಮ್ಮಿಂದ ಬರಬಹುದು. ನಿಮ್ಮಿಂದಾದ ತಪ್ಪನ್ನು ನೀವೇ ಸರಿಮಾಡಿಕೊಳ್ಳಬೇಕು. ಶ್ರದ್ಧೆ ಇಲ್ಲದೇ ಇದ್ದರೂ ಕಾರ್ಯಗಳನ್ನು ಮಾಡಬೇಕಾದೀತು. ಮನಸ್ಸು ಚಂಚಲವಾದಾಗ ಹಿರಿಯರ ಮಾತುಗಳನ್ನು ಕೇಳಿ. ಅದು ನಿಮಗೆ ಹಿತವೆನಿಸೀತು. ದೂರದ ಬಂಧುಗಳು ಇಂದು ಪರಿಚಿತರಾಗಿ ಹತ್ತಿರವಾಗಬಹುದು. ವಿದ್ಯಾರ್ಥಿಗಳು ಓದಿನತ್ತ ಗಮನಕೊಡುವುದು ಒಳ್ಳೆಯದು. ಎಲ್ಲದರಲ್ಲಿಯೂ ಉತ್ತಮವಾದುದನ್ನೇ ಆರಿಸಿಕೊಳ್ಳುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿ. ಉತ್ತಮ ಕಾರ್ಯಕ್ಕೆ ಯಾರಿಂದಲಾದರೂ ಪ್ರೇರಣೆ ಪಡೆಯಬೇಕಾಗಬಹುದು.

ಮಿಥುನ ರಾಶಿ: ಮಾನಸಿಕವಾಗಿ ಆಕ್ರಮಣ ಶೀಲತೆಯನ್ನು ಬೆಳೆಸಿಕೊಳ್ಳುವಿರಿ. ಎಲ್ಲಿ ಯಾರ ಮೇಲೆ ಎನ್ನುವ ವಿವೇಚನೆ ನಿಮಗೆ ಬಿಟ್ಟಿದ್ದಾಗಿದೆ. ಸಂಗಾತಿಯನ್ನು ನಿಂದಿಸುವುದು ಕಲಹಕ್ಕೆ ಕಾರಣವಾಗುವುದು. ವ್ಯಕ್ತಿತ್ವದಿಂದ ನೀವು ಸಮಾಜದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತೀರಿ. ಆರೋಗ್ಯವು ಸುದೃಢವಾಗಿ ಇರಲಿದೆ. ಸಂಬಂಧಗಳನ್ನು ಕೂಡಿಸಿಕೊಳ್ಳುವ ಪ್ರಯತ್ನ ಮಾಡಿ. ಉತ್ಸಾಹದ ರಹಸ್ಯವನ್ನು ಹೇಳುವುದು ಬೇಡ. ತಾಯಿಗಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು. ಸಮಾರಂಭದಲ್ಲಿ ಪ್ರಭಾವೀ ಜನರ ಭೇಟಿಯಾಗಲಿದೆ. ಬಾಂಧವ್ಯದಲ್ಲಿ ಬಿರುಕು ಬಂದಿದ್ದು ಅದನ್ನು ಸರಿ ಮಾಡಿಕೊಳ್ಳುವಿರಿ. ಗುಂಪಿನಲ್ಲಿ ಕೆಲಸ ಮಾಡುವುದನ್ನು ಇಷ್ಟಪಡುವಿರಿ. ಕೇಳಿದರೆ ಮಾತ್ರ ಉತ್ತರಿಸಿದರೆ ಸಾಕು. ಎಲ್ಲದಕ್ಕೂ ಮೂಗು ತೂರಿಸುವ ಅವಶ್ಯಕತೆ ಇಲ್ಲ. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ನಿಮಗೆ ಪರೀಕ್ಷೆಯ ದಿನವಾಗಿರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು.

ಕರ್ಕಾಟಕ ರಾಶಿ: ನಿಮ್ಮ ಮೂಲ ನೆಲೆಗೆ ಹೋಗಲಿದ್ದು, ಹಳೆಯ ನೆನಪುಗಳು ಮರುಕಳಿಸುವುದು. ಇಂದು ಯಾರ ಜೊತೆಗೂ ವಿವಾದಕ್ಕೆ ಸಿಲುಕುವುದು ಬೇಡ. ಅನ್ಯರ ತಪ್ಪಿದ್ದರೂ ಅದನ್ನು ಸರಿಮಾಡಿಕೊಳ್ಳುವ ಪ್ರಯತ್ನ ಮಾಡಿ. ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಪ್ರಯತ್ನವನ್ನು ಮಾಡಬೇಕಾದೀತು. ಹಣವನ್ನು ಸಂಪಾದಿಸಬೇಕು ಎನ್ನುವ ಅತಿಯಾದ ಆಸೆ ನಿಮ್ಮ ಮನಸ್ಸಿನಲ್ಲಿ ಬೇರೂರುವುದು. ವಿದೇಶದ ಬಂಧುಗಳು ನಿಮಗೆ ಸಹಾಯವನ್ನು ಮಾಡಲಿದ್ದಾರೆ. ನಿಮಗೆ ಬರಬೇಕಾದುದನ್ನು ಹೋರಾಟದಿಂದ ಪಡೆದುಕೊಳ್ಳುವಿರಿ. ದುರಭಿಮಾನದಿಂದ ಸಹಾಯವೂ ಸಿಗದೇಹೋಗಬಹುದು. ನೀವು ಸಂಗಾತಿ ದೌರ್ಬಲ್ಯಗಳನ್ನು ಅಸ್ತ್ರಮಾಡಿಕೊಳ್ಳುವಿರಿ. ಆಪ್ತರ ಬಗ್ಗೆ ನಿಮ್ಮ ಭಾವನೆ ನಕಾರಾತ್ಮಕವಾಗಿ ಇರುವುದು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಬೇಕು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ಇರುವ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ಮುಖ್ಯ.

ಸಿಂಹ ರಾಶಿ: ಬಂಧುಗಳ ಬಗ್ಗೆ ಅಸಮಾಧಾ‌ನ ಕಂಡು ಬರಲಿದ್ದು, ಹೇಗಾದರೂ ಮಾಡಿ ಹೊರ ಹಾಕುವ ಯೋಚನೆ ಬರಲಿದೆ. ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ಹಲವು ದಿನಗಳಿಂದ ಮಾಡಿದ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವಿದೆ. ಮಾನಸಿಕ ಸ್ವಾಸ್ಥ್ಯವನ್ನು ಸರಿ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಕುಟುಂಬದ ವಾರ್ತೆಗಳು ನಿಮಗೆ ಸಂತೋಷವನ್ನು ತರುವುದು. ಪ್ರೇಮವು ಯಾವುದೇ ಗೊಂದಲವನ್ನು ಸೃಷ್ಟಿಸಬಹುದು. ಸಣ್ಣ ಕೆಲಸವಾದರೂ ಇಂದೇ ಮುಗಿಸಿಕೊಳ್ಳಿ. ಅನಂತರವಾದರೆ ಅನ್ಯ ಕಾರ್ಯಗಳ ನಡುವೆ ವ್ಯಸ್ತರಾಗಬೇಕಾದೀತು. ಸಂಗಾತಿಯ ಅನಾರೋಗ್ಯದಿಂದ ನಿಮ್ಮ ಮನಸ್ಸು ಕುಗ್ಗಬಹುದು. ನಿರುದ್ಯೋಗದಿಂದ ಮಾನಸಿಕವಾಗಿ ಕುಗ್ಗುವಿರಿ. ಸಣ್ಣ ವ್ಯಾಪಾರಿಗಳಿಗೆ ಇಂದು ಲಾಭದ ದಿನ. ಇಂದು ವಾಹನದಿಂದ ಬಿದ್ದು ಗಾಯಮಾಡಿಕೊಳ್ಳುವಿರಿ. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಪ್ರಯಾಣದಲ್ಲಿ ಜಾಗರೂಕತೆಯಿಂದ ಇರಿ. ಕಷ್ಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ಸಿಗದೇ ಹೋಗಬಹುದು.

ಕನ್ಯಾ ರಾಶಿ: ವರ್ಚಸ್ಸು ಹೆಚ್ಚಾಗಿರುವುದು ನಿಮಗೆ ಗೊತ್ತಾಗದೇ ಹೋಗಬಹುದು. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುವುದು. ಸಮಯ ಸಿಕ್ಕಾಗ ನೀವು ಸೃಜನಾತ್ಮಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿರಿ. ಇಂದು ಸಮಯವನ್ನು ವ್ಯರ್ಥ ಮಾಡಬೇಡಿ. ಇಂದು ಸಂಬಂಧಗಳಿಗೆ ಬೆಲೆ ಕೊಡದೇ ಹಣದ ಹಿಂದೆ ಹೋಗಿ ಸಂಬಂಧಗಳನ್ನು ಹಾಳುಮಾಡಿಕೊಳ್ಳುವಿರಿ. ಕೆಲವು ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಭೂಮಿಯ ಖರೀದಿಗೆ ಉತ್ತಮ ಕಾಲ. ಬೇರೆಯವರ ಮಾತನ್ನು ನಂಬಿ ಮೋಸಹೋಗುವ ಸಾಧ್ಯತೆ ಇದೆ. ಲೆಕ್ಕಶೋಧಕರು ಇಂದು ಒತ್ತಡದಲ್ಲಿ ಇರುವರು. ಸಕಾಲಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೋಲಬಹುದು. ಅಶಿಸ್ತು ನಿಮಗೆ ಕಿರಿಕಿರಿಯನ್ನು ತರಿಸೀತು. ಸಂಗಾತಿಗೆ ನಿಮ್ಮಿಂದ ಸಂತೋಷ ಸಿಗಲಿದೆ. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಅನಾರೋಗ್ಯವು ನೆಪವಾಗಬಹುದು. ಯಾವ ಕಾರ್ಯಕ್ಕೂ ಸಹಾಯ ಸಿಗದೇ ಕಷ್ಟವಾದೀತು. ಸ್ತ್ರೀಯರಿಗೆ ಸಹಾಯ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು. ಯಾರನ್ನೂ ವಿನಾಕಾರಣ ದೂರ ಮಾಡಿಕೊಳ್ಳುವುದು ಬೇಡ.