Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಶುಕ್ರವಾರದ ದಿನ ಭವಿಷ್ಯ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಮಾರ್ಚ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಅಶ್ವಿನಿ, ಯೋಗ : ವೈಧೃತಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:08 ರಿಂದ ಮಧ್ಯಾಹ್ನ 12:39ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:41 ರಿಂದ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:06 ರಿಂದ 09:37ರ ವರೆಗೆ.
ಸಿಂಹ: ಅನನೂಕುಲ ಸ್ಥಿತಿಯಿಂದ ಹೊರ ಬರುತ್ತೀರಿ. ವಿರೋಧಿಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ. ಸರಿಯಾದ ದಾರಿಯಿಂದ ಮಾತ್ರ ಗೆಲುವು ಸಿಗಲಿದೆ. ಸರ್ಕಾರಿ ಕೆಲಸಗಳು ವಿಳಂಬವಾಗುವುದು. ನೆಚ್ಚಿನ ಕಲಾವಿದರ ಭೇಟಿಯಾಗಲಿದೆ. ಆಪ್ತರಿಂದ ಉಡುಗೊರೆ ಸಿಗಲಿದೆ. ಸ್ವಲ್ಪ ಆಲಸ್ಯವು ನಿಮ್ಮ ಕೆಲಸವನ್ನು ಹಿಂದಿಕ್ಕುವುದು. ಸ್ವತಂತ್ರವಾಗಿ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಉತ್ತಮ. ನಿಮ್ಮವರ ಅಹಸಜ ವರ್ತನೆ ನಿಮಗೆ ಬೇಸರ ತರಿಸೀತು.
ಕನ್ಯಾ: ನೀವಿಂದು ನಿಮ್ಮ ಮೇಲೆ ಪೂರ್ಣಾವಾದ ನಂಬಿಕೆ ಇಡುವ ಮೂಲಕ ಯಶಸ್ಸು ಕಾಣುವಿರಿ. ನಿಮ್ಮಲ್ಲಿರುವ ಗುಣಗಳು ಪ್ರಶಂಸೆಗೆ ಪಾತ್ರವಾಗಲಿದೆ. ಎಂದೊಕ ಮಾಡಿಕೊಂಡ ವಿದೇಶದ ಸಂಪರ್ಕಗಳು ಇಂದು ಪ್ರಯೋಜನವಾಗಲಿದೆ. ಶಿಕ್ಷಣದ ಬಗ್ಗೆ ನಿಮಗಿರುವ ಆಸಕದತಿ ಮತ್ತಷ್ಟು ಅಧಿಕವಾಗಬಹುದು. ಮಕ್ಕಳ ಚಿಂತೆಯಿಂದ ಎಲ್ಲ ಸಂತೋಷಗಳು ಮರೆಯಾಗಲಿವೆ. ಅನವಶ್ಯಕವಾದ ಸಮಸ್ಯೆಗಳು ನಿಮ್ಮನ್ನು ಕಾಡಿಯಾವು. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುವಿರಿ.
ತುಲಾ: ಆರ್ಥಿಕವಾದ ಏರಿಳಿತಗಳು ಹೆಚ್ಚಾಗಿ ಕಾಣಸಿಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ. ಲ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ. ದಾನ ಮಾಡುವ ಮನೋಭಾವವು ಹೆಚ್ಚಾಗುತ್ತದೆ. ನೀವು ಇಂದು ಮಂಗಲಕಾರ್ಯವನ್ನು ಯೋಜಿಸುವಿರಿ. ಕೆಲವು ನಕಾರಾತ್ಮಕ ಸುದ್ದಿಗಳಿಂದಾಗಿ ನಿಮ್ಮ ಮನಸ್ಸು ಚಿಂತಿತವಾಗಬಹುದು. ನೀವು ಸಂತಾನದ ಸಂತೋಷವನ್ನು ಹೊಂದಿರುತ್ತೀರಿ. ವ್ಯಾಪಾರ-ವಹಿವಾಟು ತಕ್ಕಮಟ್ಟಿಗೆ ಇರಲಿದೆ.
ವೃಶ್ಚಿಕ: ನಿಮ್ಮ ಮಾತು ಮತ್ತು ಬುದ್ಧಿವಂತಿಕೆಯಿಂದ ಜನರು ಪ್ರಭಾವಿತರಾಗಲಿದ್ದಾರೆ. ನಿಮಗೆ ಆದಾಯದ ಹೊಸ ಮಾರ್ಗಗಳು ಕಂಡುಬರಬಹುದು. ಈ ಸಮಯದಲ್ಲಿ ದೊಡ್ಡ ಅವಕಾಶದ ಹುಡುಕಾಟವು ಪೂರ್ಣಗೊಳ್ಳುತ್ತದೆ. ಆರಂಭದಲ್ಲಿ, ಕೆಲವು ಕೆಲಸಗಳನ್ನು ಯೋಚಿಸದೆ ಮಾಡಲಾಗುತ್ತದೆ ಮತ್ತು ಕೆಲವು ಪ್ರಜ್ಞಾಪೂರ್ವಕವಾಗಿ ಮುಂದುವರಿಯುತ್ತದೆ, ಇದು ಗುರಿಯ ಸಾಧನೆಗೆ ಅಥವಾ ಅನುಭವದ ಅನನ್ಯ ಕೊಡುಗೆಗೆ ಕಾರಣವಾಗುತ್ತದೆ. ಮಕ್ಕಳು ನಿಮ್ಮ ಜೊತೆ ಕಾಲವನ್ನು ಕಳೆಯಬಯಸುವರು.
-ಲೋಹಿತಶರ್ಮಾ ಇಡುವಾಣಿ