ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಗುರುವಾರ, ಡಿಸೆಂಬರ್ 02, 2021. ಸ್ವಾತಿ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 01.28 ರಿಂದ ಇಂದು ಮಧ್ಯಾಹ್ನ 02.51 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.30. ಸೂರ್ಯಾಸ್ತ: ಸಂಜೆ 5.40
ತಾ.2-12-2021 ರ ಗುರುವಾರದ ರಾಶಿಭವಿಷ್ಯ.
ಮೇಷ: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವದು. ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುವದು. ಮಾಡುವ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು. ಆರ್ಥಿಕ ಸಂಕಷ್ಟ ದೂರಾಗುವದು. ಶುಭಸಂಖ್ಯೆ: 8
ವೃಷಭ: ಆತ್ಮೀಯರೊಂದಿಗೆ ಮನಸ್ತಾಪ ವಾಗುವ ಯೋಗವಿದೆ. ಸ್ವಂತ ಉದ್ಯಮಿಗಳು ಹಾನಿ ತಪ್ಪಿಸುವ ಉಪಾಯ ಮಾಡಿ. ವ್ಯಾಪಾರದ ವಿಷಯದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಸಾಲಗಾರರು ಸಹಕಾರ ತೋರುವರು. ಶುಭಸಂಖ್ಯೆ: 5
ಮಿಥುನ: ದೀರ್ಘಕಾಲದ ಸಮಸ್ಯಗಳಿಗೆ ಪರಿಹಾರ ದೊರೆಯುವದು. ಕೋರ್ಟನಲ್ಲಿ ಇರುವ ನ್ಯಾಯ ಬಗೆಹರಿಯುವದು. ಆರ್ಥಿಕ ಸುಧಾರಣೆ ಕಂಡುಬರುವದು. ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವದು. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಕಂಡುಬರುವದು. ಶುಭಸಂಖ್ಯೆ: 1
ಕರ್ಕ: ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವದು.ಉನ್ನತ ವ್ಯಾಸಂಗದ ಯೋಗವಿದೆ. ವಿದೇಶಗಮನ, ವ್ಯವಹಾರಿಕ ತಿರುಗಾಟದ ಸಾಧ್ಯತೆ ಇದೆ. ಶತ್ರುಬಾಧೆ ಕಂಡುಬರುವದು. ಆರೋಗ್ಯದ ಮೇಲೆ ನಿಗಾ ಇರಲಿ. ಶುಭಸಂಖ್ಯೆ: 9
ಸಿಂಹ: ಮುಲಾಜಿಲ್ಲದ ಧೋರಣೆಯಿಂದ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವದು. ಗಂಭೀರವಾದ ಪ್ರಮಾದವನ್ನು ಸಮರ್ಥಿಸುವದರಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹಿರಿಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 5
ಕನ್ಯಾ: ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ. ಶುಭಸಂಖ್ಯೆ: 3
ತುಲಾ: ಎಲ್ಲವನ್ನು ಹಗುರವಾಗಿ ಕಾಣುವದರಿಂದ ಸಣ್ಣ ವಿಷಯವೂ ದೊಡ್ಡ ಸಮಸ್ಯೆಯಾಗುವದು. ಹಣಕಾಸಿನ ತೊಂದರೆಗಳು ಕಂಡುಬರುವವು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿರಿ. ಶುಭಸಂಖ್ಯೆ: 8
ವೃಶ್ಚಿಕ: ಸಹನೆ ಇಲ್ಲದ ಆತುರದ ನಡೆಯಿಂದ ಹಾನಿ ಸಂಭವ ಎಚ್ಚರಿಕೆ ವಹಿಸಿರಿ. ಅನೀರೀಕ್ಷಿತವಾಗಿ ಬರುವ ವಿಘ್ನಗಳು ತಾವಾಗಿಯೇ ಪರಿಹಾರ ಕಾಣುವವು. ಗಣ್ಯರ ಒಡನಾಟದಿಂದ ಮಹತ್ವದ ಕಾರ್ಯಗಳು ಸಿದ್ಧಿಸುವವು. ಶುಭಸಂಖ್ಯೆ: 6
ಧನು: ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವದು. ವಿದೇಶ ಪ್ರಯಾಣದ ಯೋಗವಿದೆ. ಶುಭಸಂಖ್ಯೆ: 2
ಮಕರ: ಗಣ್ಯರೊಂದಿಗೆ ವ್ಯವಹಾರಿಕ ಬಾಂಧವ್ಯ ವೃದ್ಧಿಯಾಗುವದು. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಶುಭಸಂಖ್ಯೆ: 7
ಕುಂಭ: ನಿರೀಕ್ಷಿತ ಸರ್ವಕಾರ್ಯಗಳು ನೆರವೆರುತ್ತದೆ. ಆರ್ಥಿಕ ಮಟ್ಟವೂ ಏರಿ, ಸ್ಥಿರಪ್ರಾಪ್ತಿ, ಸಂಸಾರಸುಖ ಸಂಬ್ರಮಗಳಿರುತ್ತದೆ. ಶುಭ ಕಾರ್ಯ ಪ್ರಯತ್ನ ಫಲಕೊಡುತ್ತದೆ. ಶುಭಸಂಖ್ಯೆ: 9
ಮೀನ: ಮಹತ್ತರ ಯೋಜನೆಗಳು ಕಾರ್ಯಗತವಾಗಲು ಪ್ರಾಜ್ಞರ ಮಾರ್ಗದರ್ಶನ. ಜೀವನದ ಏಳಿಗೆಗೆ ಚಿಂತನೆ. ಕೆಲಸದ ನಡುವೆ ಮತ್ತೊಂದು ಕಾರ್ಯ ವಹಿಸಿಕೊಳ್ಳಲು ಚೈತನ್ಯ. ಮಹಿಳೆಯರು ಪಶ್ಚಾತಾಪಕ್ಕೆ ಅವಕಾವಿಲ್ಲದಂತೆ ನಡೆದುಕೊಳ್ಳುವುದು ಒಳಿತು. ಶುಭಸಂಖ್ಯೆ: 5