ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಮಾರ್ಗಶಿರ ಮಾಸ, ಹೇಮಂತ ಋತು, ಕೃಷ್ಣಪಕ್ಷ, ಅಷ್ಟಮಿ ತಿಥಿ, ಸೋಮವಾರ, ಡಿಸೆಂಬರ್ 27, 2021. ಹಸ್ತ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 08.07 ರಿಂದ ಇಂದು ಬೆಳಿಗ್ಗೆ 09.30 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.44. ಸೂರ್ಯಾಸ್ತ: ಸಂಜೆ 5.49
ತಾ.27-12-2021 ರ ಸೋಮವಾರದ ರಾಶಿಭವಿಷ್ಯ.
ಮೇಷ: ನಿಮ್ಮ ಜೀವನ ಸಂಗಾತಿಯೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಿ. ಪ್ರೀತಿಯ ಜೀವನಕ್ಕಾಗಿ ಸಮಯ ಸ್ವಲ್ಪ ಪ್ರತಿಕೂಲವಾಗಿದೆ. ಆದ್ದರಿಂದ, ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ನೀವೇ ಸರಿಯಾಗಿ ನಡೆದುಕೊಳ್ಳಿ. ಶುಭ ಸಂಖ್ಯೆ: 4
ವೃಷಭ: ನಿಮ್ಮ ಕಟುಂಬಿಕ ಜೀವನ ಏರಿಳಿತಗಳಿಂದ ತುಂಬಿರುತ್ತದೆ. ಇನ್ನೊಂದು ಕಡೆ ನಿಮ್ಮ ದಾಂಪತ್ಯ ಜೇವನದಲ್ಲಿ ಕೆಲವೊಮ್ಮೆ ದುಃಖ, ಕೆಲವೊಮ್ಮೆ ಸಂತೋಷದ ವಾತಾವರಣವಿರುತ್ತದೆ. ಶುಭ ಸಂಖ್ಯೆ: 8
ಮಿಥುನ: ಇದರಿಂದ ನೀವು ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಿಂದ ತಪ್ಪಿಸಬಹುದು. ನಿರುದ್ಯೋಗಿಗಳು ಒಂದು ಸ್ಥಿರವಾದ ಉದ್ಯೋಗವನ್ನು ಪಡೆಯುವ ಸಾಧ್ಯತೆ ಪ್ರಬಲವಾಗಿದೆ. ಶುಭ ಸಂಖ್ಯೆ: 4
ಕಟಕ: ಶಿಕ್ಷಣದ ಕ್ಷೇತ್ರದಲ್ಲಿ ನೀವು ಹೆಚ್ಚಿನ ಪರಿಶ್ರಮ ಮಾಡಬೇಕಾಗುತ್ತದೆ ಆಗ ಮಾತ್ರ ಉತ್ತ್ತಮ ಫಲಿತಾಂಶಗಳನ್ನು ಪಡೆಯಬಹುದು. ಆರ್ಥಿಕ ದೃಷ್ಟಿಕೋನದಿಂದ ಈ ವರ್ಷ ಸ್ವಲ್ಪ ದುರ್ಬಲವಾಗಿ ಉಳಿಯಬಹುದು. ಆದ್ದರಿಂದ ನಿಮ್ಮ ಹಣದ ಲೆಕ್ಕಾಚಾರ ಸರಿಯಾಗಿ ಇಟ್ಟುಕೊಳ್ಳಿ. ಶುಭ ಸಂಖ್ಯೆ: 7
ಸಿಂಹ: ಕೌಟುಂಬಿಕ ಜೀವನ ಸಾಕಷ್ಟು ಉತ್ತಮವಾಗಿರುತ್ತದೆ ಮತ್ತು ನೀವು ಗೌರವ ಮತ್ತು ಸಮೃದ್ಧಿಯನ್ನು ಪಡೆಯುವಿರಿ.ಸಹೋದರ ಸಹೋದರಿಯರ ಬಗ್ಗೆ ಗಮನ ಹರಿಸುವುದು ಉತ್ತಮ. ಶುಭ ಸಂಖ್ಯೆ: 6
ಕನ್ಯಾ: ನೀವು ನಿಮ್ಮ ಕೆಲಸದ ಹೊರೆತಾಗಿ, ಜೀವನ ಸಂಗಾತಿಗೂ ಸರಿಯಾದ ಸಮಯವನ್ನು ನೀಡುವ ಬಗ್ಗೆಯೂ ಗಮನ ಹರಿಸಬೇಕು. ಉದ್ಯೋಗದಲ್ಲಿ ಶುಭ. ಶುಭ ಸಂಖ್ಯೆ: 1
ತುಲಾ: ನೀವು ಅರೋಗ್ಯ ಸಂಬಂಧಿತ ಮಿಶ್ರಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಹಿಂದಿನ ಕಾಲದಿಂದ ನಡಿಯುತ್ತಿರುವ ಯಾವುದೇ ಕಾಯಿಲೆಯಿಂದ ನೀವು ಚೇತರಿಸಿಕೊಳ್ಳಬಹುದು. ನೀವು ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಸಾಕಷ್ಟು ಶ್ರಮಿಸಬೇಕು. ಶುಭ ಸಂಖ್ಯೆ: 2
ವೃಶ್ಚಿಕ: ನೀವು ಎಷ್ಟು ಕಠಿಣ ಪರಿಶ್ರಮ ಮಾಡುತ್ತೀರಾ, ಅಷ್ಟೇ ಆರ್ಥಿಕ ಲಾಭವಾಗುತ್ತದೆ. ನಿಮ್ಮ ಅಪೇಕ್ಷಿತ ಸ್ಥಳಕ್ಕೆ ನೀವು ವರ್ಗಾವಣೆಯನ್ನು ಪಡೆಯಬಹುದು. ಶುಭ ಸಂಖ್ಯೆ: 9
ಧನು: ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧಗಳಲ್ಲಿ ನೀವು ನಿಕಟತೆಯನ್ನು ಅನುಭವಿಸುವಿರಿ. ನಿಮ್ಮ ಸಗಾಯತಿ ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ನೀವು ಯಾರನ್ನಾದರೂ ಪ್ರಸ್ತಾಪಿಸಲು ಬಯಸಿದರೆ, ನೀವು ಅದರಲ್ಲಿಯೂ ಯಶಸ್ಸನ್ನು ಪಡೆಯಬಹುದು. ಶುಭ ಸಂಖ್ಯೆ: 5
ಮಕರ: ದಾಂಪತ್ಯ ಜೀವನವು ಬಹಳ ಸಿಹಿಯಾಗಿರುತ್ತದೆ ಮತ್ತು ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಉತ್ತಮವಾಗಿರುವುದರಿಂದ ನೀವು ವೈವಾಹಿಕ ಜೀವನವನ್ನು ಆನಂದಿಸುವಿರಿ. ಶುಭ ಸಂಖ್ಯೆ: 2
ಕುಂಭ: ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಮೇಲೆ ನೀವು ವಿಶೇಷ ಕಾಳಜಿ ವಹಿಸಬೇಕು. ಮಕ್ಕಳ ಪ್ರಗತಿ ಸಂತೋಷವನ್ನುಂಟು ಮಾಡುವಿದು. ಉದ್ಯೋಗದಲ್ಲಿ ಶುಭ ಸುದ್ದಿ. ಉತ್ತಮ ಆರೋಗ್ಯ. ಶುಭ ಸಂಖ್ಯೆ: 3
ಮೀನ: ನಿಮ್ಮ ಮಕ್ಕಳು ಸಹ ಪ್ರಗತಿಯನ್ನು ಪಡೆಯುತ್ತಾರೆ. ಈ ವರ್ಷ ನೀವು ಆಸ್ತಿಗೆ ಸಂಬಂಧಿಸಿದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಮತ್ತು ನಿಮ್ಮ ಕೌಟುಂಬಿಕ ಜೀವೀನವೂ ಸಹ ಸಾಕಷ್ಟು ಸಂತೋಷದಿಂದ ತುಂಬಿರುತ್ತದೆ. ಶುಭ ಸಂಖ್ಯೆ: 8
Published On - 6:00 am, Mon, 27 December 21