Horoscope Today – ದಿನ ಭವಿಷ್ಯ; ಶುಭ ಶುಕ್ರವಾರದಂದು ಯಾವ ರಾಶಿಯವರಿಗೆ ಏನು ಫಲ?

| Updated By: Skanda

Updated on: Jun 04, 2021 | 6:45 AM

Horoscope ಜೂನ್ 04, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today - ದಿನ ಭವಿಷ್ಯ; ಶುಭ ಶುಕ್ರವಾರದಂದು ಯಾವ ರಾಶಿಯವರಿಗೆ ಏನು ಫಲ?
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣಪಕ್ಷ, ದಶಮಿ ತಿಥಿ, ಶುಕ್ರವಾರ, ಜೂನ್ 04, 2021. ಉತ್ತರಾಭಾದ್ರೆ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 10.35 ರಿಂದ ಇಂದು ಬೆಳಿಗ್ಗೆ 12.13 ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.40. ಸೂರ್ಯಾಸ್ತ: ಸಂಜೆ 6.47

ತಾ.04-06-2021 ರ ಶುಕ್ರವಾರದ ರಾಶಿಭವಿಷ್ಯ:

ಮೇಷ: ಪ್ರತಿಯೊಂದು ಕೆಲಸದಲ್ಲಿಯೂ ವಿಳಂಬ ಉಂಟಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳು ಹೆಚ್ಚಾಗುವವು. ವೃಥಾ ತಿರುಗಾಟ ಇರುವುದು ಆದರೂ ಕೀರ್ತಿದಾಯಕ ಫಲವಿದೆ. ಶುಭ ಸಂಖ್ಯೆ: 9

ವೃಷಭ: ಪರಿವಾರದಲ್ಲಿ ಹೊಸಕಳೆ ಬರುವುದು. ಕುಟುಂಬದಲ್ಲಿ ಸೌಖ್ಯ ಇರುವುದು. ಮಹತ್ವದ ಕೆಲಸಕ್ಕೆ ವಿಘ್ನ ಬರುವ ಸಾಧ್ಯತೆ ಇದೆ ಎಚ್ಚರಿಕೆ ವಹಿಸಿರಿ. ವ್ಯವಹಾರಗಳು ಲಾಭದಾಯಕವಾಗಿ ಇರುವವು. ಶುಭ ಸಂಖ್ಯೆ: 1

ಮಿಥುನ: ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವುದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ. ದೂರಪ್ರಯಾಣ ಯೋಗವಿದೆ. ಶುಭ ಸಂಖ್ಯೆ: 8

ಕಟಕ: ಕೃಷಿಮೂಲದ ಲಾಭ ದೊರೆಯುವುದು. ಸಹೋದ್ಯೋಗಿಗಳ ಸಹಾಯ ಅಪೃಕ್ಷಿಸದೆ ಸ್ವಂತಬಲದಿಂದ ಕೆಲಸ ನಿರ್ವಹಿಸಿರಿ. ಕೈಗೊಂಡ ಕಾರ್ಯಗಳು ಯಶಸ್ವಿಯಾಗುವವು. ನೌಕರರಿಗೆ ಕಿರಿಕಿರಿಯಾಗುವ ಸಂಭವವಿದೆ. ಶುಭ ಸಂಖ್ಯೆ: 2

ಸಿಂಹ: ಮಾನಸಮ್ಮಾನಗಳು ದೊರೆಯುವವು. ಕಂಕಣಬಲ ಕೂಡಿಬರುವುದು. ಮನೋಭಿಲಾಷೆಗಳು ಈಡೇರುವವು. ಆದರೆ ಉದ್ಯೋಗದಲ್ಲಿ ನಿರಾಸಕ್ತಿ ಇರುವುದು ಮತ್ತು ವ್ಯವಹಾರದಲ್ಲಿ ಅಸಮಾಧಾನ ಕಂಡುಬರುವುದು. ಶುಭ ಸಂಖ್ಯೆ: 6

ಕನ್ಯಾ: ಶತ್ರುಗಳ ಉಪಟಳವು ಆಗಾಗ ಕಂಡುಬಂದರೂ ಧೈರ್ಯದಿಂದ ಕಾರ್ಯ ಸಾಧಿಸುವಿರಿ. ಇಷ್ಟಸಿದ್ಧಿಯ ಕಾಲ ಇರುವುದರಿಂದ ಅನೇಕ ರೀತಿಯ ಭೋಗಭಾಗ್ಯಗಳು ಕೂಡಿಬರಲಿವೆ. ಸಾಂಸಾರಿಕ ಸಮಸ್ಯೆಗಳು ಪರಿಹಾರವಾಗುವವು. ಶುಭ ಸಂಖ್ಯೆ: 3

ತುಲಾ: ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ಧಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವುದು. ವಿದೇಶ ಪ್ರಯಾಣದ ಯೋಗವಿದೆ. ಶುಭ ಸಂಖ್ಯೆ: 5

ವೃಶ್ಚಿಕ: ತಾಪತ್ರಯಗಳೆಲ್ಲ ದೂರವಾಗಿದ್ದು ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ. ವ್ಯಾಪಾರಾದಿ ಉದ್ಯಮಗಳು ಇಷ್ಟದಂತೆ ನಡೆಯುತ್ತದೆ. ಕೆಲವೊಮ್ಮೆ ಸಣ್ಣ ವಿಷಯಗಳಿಗೂ ಭಯ ತೋರಿದರೂ ಹಾನಿಯಿಲ್ಲ. ಶುಭ ಸಂಖ್ಯೆ: 4

ಧನು: ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಸಹನೆಯಿಂದ ವ್ಯವಹರಿಸಿರಿ. ಗುರುಬಲ ವೃದ್ಧಿಸುವುದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವುದು. ಹಿರಿಯರ ಮಾತಿನಂತೆ ನಡೆಯುವುದು ಉತ್ತಮ. ಶುಭ ಸಂಖ್ಯೆ: 8

ಮಕರ: ಮನೆ, ನಿವೇಶನ, ಆಸ್ತಿ ಖರೀದಿ ಯೋಗವಿದೆ. ವ್ಯವಹಾರದಲ್ಲಿ ಜಾಗ್ರತೆ ಇರಲಿ. ವ್ಯಾಪಾರ ಉತ್ತಮವಾಗಿರುವುದು. ಉತ್ಸಾಹ ಮೂಡುವುದು. ದೋಷ ಪರಿಹಾರಕ್ಕೆ ಜಲದಾನ ಮಾಡಿರಿ. ಶುಭ ಸಂಖ್ಯೆ: 2

ಕುಂಭ: ಆದಾಯ ಹೆಚ್ಚುವುದು. ವ್ಯವಹಾರಿಕ ಏಳ್ಗೆ ಇರುವುದು. ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಶಾಂತಚಿತ್ತರಾಗಿ ವ್ಯವಹರಿಸಿರಿ. ಕೆಲಸದಲ್ಲಿ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಶುಭ ಸಂಖ್ಯೆ: 1

ಮೀನ: ಅಪೇಕ್ಷಿಸಿದ ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುವವು ಆಸ್ತಿ ವಿವಾದ ಸೃಜನರ ಅತೃಪ್ತಿ ಮುಂತಾದ ಕಲಹಗಳು ಪರಿಹಾರವಾಗಿ ಸುಖ, ಸಂತೃಪ್ತಿಯ ಯೋಗವಿದೆ. ವಿದ್ಯಾರ್ಥಿಗಳು ಉನ್ನತ ಮಟ್ಟದ ಫಲಿತಾಂಶವನ್ನು ಹೊಂದುವರು. ಸಭಾಸಮಾಜ ಕೀರ್ತಿ ಲಭಿಸುವುದು. ಶುಭ ಸಂಖ್ಯೆ: 5

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Published On - 6:42 am, Fri, 4 June 21