Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಆತ್ಮೀಯರೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ
Horoscope ಸೆಪ್ಟೆಂಬರ್ 23, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.
ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ವರ್ಷ ಋತು, ಕೃಷ್ಣಪಕ್ಷ, ಬಿದಿಗೆ ತಿಥಿ, ಗುರುವಾರ, ಸೆಪ್ಟೆಂಬರ್ 23, 2021. ರೇವತಿ ನಕ್ಷತ್ರ, ರಾಹುಕಾಲ: ಇಂದು ಮಧ್ಯಾಹ್ನ 1.39 ರಿಂದ ಇಂದು ಸಂಜೆ 3.09ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.05. ಸೂರ್ಯಾಸ್ತ: ಸಂಜೆ 6.12
ತಾ.23-09-2021 ರ ಗುರುವಾರದ ರಾಶಿಭವಿಷ್ಯ,
ಮೇಷ: ಕೆಲಸದಲ್ಲಿ ಅಭಿವೃದ್ಧಿ ಇದೆ. ಹಣಕಾಸಿನ ವ್ಯವಹಾರವನ್ನು ತಾಳ್ಮೆಯಿಂದ ನಿಭಾಯಿಸಿ. ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಮಂಗಳ ಕಾರ್ಯ ಜರುಗುವವು. ಶುಭ ಸಂಖ್ಯೆ: 5
ವೃಷಭ: ಯೋಜನೆಗಳಿಗೆ ಪೂರ್ವ ತಯಾರಿ ಮಾಡುವ ಅಗತ್ಯತೆ ಕಂಡುಬರುವುದು. ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವುದು ಒಳಿತು. ಶುಭ ಸಂಖ್ಯೆ: 1
ಮಿಥುನ: ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವುದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ. ದೂರಪ್ರಯಾಣ ಯೋಗವಿದೆ. ಶುಭ ಸಂಖ್ಯೆ: 9
ಕಟಕ: ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಸ್ವಂತ ಉದ್ಯಮಿಗಳು ಹಾನಿ ತಪ್ಪಿಸುವ ಉಪಾಯ ಮಾಡಿ. ವ್ಯಾಪಾರದ ವಿಷಯದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಸಾಲಗಾರರು ಸಹಕಾರ ತೋರುವರು. ಶುಭ ಸಂಖ್ಯೆ: 2
ಸಿಂಹ: ನಿಶ್ಚಿತ ಆರ್ಥಿಕ ಸ್ಥಿತಿ ಇರುವುದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ಶುಭ ಸಂಖ್ಯೆ: 3
ಕನ್ಯಾ: ನೆನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆಯುವುದು. ಮಾನಸಿಕ ಉತ್ಸಾಹ ಕಂಡುಬರುವುದು. ಆತ್ಮೀಯರಿಗೆ ಉನ್ನತ ಅಧಿಕಾರ ದೊರೆಯುವುದು. ಕಾರಣಾಂತರ ಅಧಿಕ ಖರ್ಚುಬರಬಹುದು. ಶುಭ ಸಂಖ್ಯೆ: 8
ತುಲಾ: ಭವಿಷ್ಯತ್ತಿನ ಉಪೇಕ್ಷೆ ಮಾಡದೇ ಉಳಿತಾಯಕ್ಕೆ ಗಮನಹರಿಸಿರಿ. ಆಪತ್ತುಗಳ ಪರಿಹಾರಕ್ಕಾಗಿ ವ್ಯಥಾ ತಿರುಗಾಟದ ಸಂಭವವಿದೆ. ಹಿರಿಯರ ಸಲಹೆಗೆ ತಕ್ಕಂತೆ ಮುಂದುವರೆಯಿರಿ. ಶುಭ ಸಂಖ್ಯೆ: 7
ವೃಶ್ಚಿಕ: ಒಂದೇ ಮನಸಿನ ಕ್ರೀಯಾಶೀಲವಾದ ಬದುಕು ಸಾಧನೆಗೆ ಕಾರಣವಾಗುವುದು. ಅಡೆತಡೆಗಳ ನಿವಾರಣೆಯಾಗುವುದು. ನಿಶ್ಚಿತ ಅವಧಿಯ ಪರೀಕ್ಷೆಗಳು ಎದುರಾದರೂ ಬಲಗುಂದುವುದಿಲ್ಲ. ಹಿರಿಯರ ಸಲಹೆ ದೊರೆಯುವುದು. ಶುಭ ಸಂಖ್ಯೆ: 4
ಧನು: ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವುದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು. ಶುಭ ಸಂಖ್ಯೆ: 6
ಮಕರ: ಅನವಶ್ಯಕ ಅಲೆದಾಟದ ಸಾದ್ಯತೆ ಇದೆ. ಕರ್ತವ್ಯಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಲು ಪ್ರಯತ್ನ ಮಾಡುವಿರಿ. ಹಿತಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಆರ್ಥಿಕಬಲ ಕುಗ್ಗುವ ಸಂಭವವಿದೆ. ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಶುಭ ಸಂಖ್ಯೆ: 3
ಕುಂಭ: ಶುಭ ಕರ್ಮ ಸಂಪ್ರಾಪ್ತಿಯಿದ್ದು, ಗುರುವರ್ಗ ಸಂತೋಷ, ಸಂಸಾರ ಸುಖ. ನೂತನ ಮಿತ್ರಭೇಟಿ, ಅರ್ಥಾರ್ಜನೆಯು ಉತ್ತಮವಿದೆ. ಆದರೂ ಗೃಹಕಲಹ, ಬಂಧು ಜನರಲ್ಲಿ ಅಸಮಾಧಾನ ಕಂಡುಬರುವುದು. ಶುಭ ಸಂಖ್ಯೆ: 5
ಮೀನ: ಹಣಕಾಸಿನ ವ್ಯವಹಾರದಲ್ಲಿ ಧ್ಯರ್ಯದಿಂದ ಕಾರ್ಯ ಸಾಧನೆ. ಅಪೇಕ್ಷಸದ ಲಾಭ ಸಂಭವ. ಗಡಿಬಿಡಿಯ ವಾತಾವತರಣ, ಬಿಡುವಿಲ್ಲದ ಕಾರ್ಯ, ಮಿತ್ರರೊಂದಿಗೆ ಜಟಾಪಟಿ ಸಂಭವ, ದೀಪದಾನ ಮಾಡಿರಿ. ಶುಭ ಸಂಖ್ಯೆ: 1