Nitya Bhavishya: ಈ ರಾಶಿಯವರಿಗೆ ವೃತ್ತಿಪರ ಜೀವನದಲ್ಲಿ ಗೌರವ ಹೆಚ್ಚುವುದರೊಂದಿಗೆ ಸಂಪತ್ತು ವೃದ್ಧಿ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 13, 2023 | 6:03 AM

2023 ಫೆಬ್ರವರಿ 13 ಸೋಮ ವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಈ ರಾಶಿಯವರಿಗೆ ವೃತ್ತಿಪರ ಜೀವನದಲ್ಲಿ ಗೌರವ ಹೆಚ್ಚುವುದರೊಂದಿಗೆ ಸಂಪತ್ತು ವೃದ್ಧಿ
ಪ್ರಾತಿನಿಧಿಕ ಚಿತ್ರ herzindagi.com
Image Credit source: herzindagi.com
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 13 ಸೋಮ ವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ :ಸೋಮ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವೃದ್ಧಿ, ಕರಣ : ಬವ, ಸೂರ್ಯೋದಯ ಬೆಳಗ್ಗೆ 07 ಗಂಟೆ, ಸೂರ್ಯಾಸ್ತ ಸಂಜೆ 06 ಗಂಟೆ 35 ನಿಮಿಷಕ್ಕೆ. ರಾಹು ಕಾಲ 08: 26 – 09:53, ಯಮಘಂಡ ಕಾಲ 11:20 ರಿಂದ 12 :47, ಗುಳಿಕ ಕಾಲ 02:14 ರಿಂದ 03:41.

ಮೇಷ: ನಿಮ್ಮ ಕೆಲವು ಪ್ರಮುಖ ಕೆಲಸಗಳನ್ನು ಮಕ್ಕಳೊಂದಿಗೆ ಚರ್ಚಿಸುವಿರಿ. ಕೆಲಸದ ಸ್ಥಳದಲ್ಲಿ ಸಹಕಾರವನ್ನು ತೆಗೆದುಕೊಳ್ಳಬಹುದು. ಇದರಿಂದ ಅತ್ಯಂತ ಮಹತ್ತ್ವದ ಯೋಜನೆಯು ಪ್ರಾರಂಭವಾಗುತ್ತದೆ. ಇಂದು ನೀವು ನಿಮ್ಮ ತಾಯಿಯೊಂದಿಗೆ ಏನಾದರೂ ಜಗಳವಾಡಬಹುದು. ಈ ದಿನ ನಿಮ್ಮ ಆರ್ಥಿಕ ಸ್ಥಿತಿಯನ್ನು ನೋಡಿಕೊಳ್ಳಿ ಮತ್ತು ಯಾರೊಂದಿಗೂ ಹಣದ ವ್ಯವಹಾರ ಮಾಡಬೇಡಿ. ಇಂದು ಸಂಗಾತಿಯೊಂದಿಗಿನ ಸಂಬಂಧದಲ್ಲಿ ಬಲವಿರುತ್ತದೆ. ವ್ಯಾಪಾರದಲ್ಲಿ ಕೆಲಸದ ಹೊರೆ ಹೆಚ್ಚಾಗಬಹುದು.

ವೃಷಭ: ತಂದೆಯ ಸಹಾಯದಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ನೀವು ಉತ್ತಮ ವ್ಯಕ್ತಿಯನ್ನು ಭೇಟಿಯಾಗಲಿದ್ದೀರಿ. ನಿಮ್ಮ ಕಠಿಣ ಪರಿಶ್ರಮ ಇಂದು ನಿಮಗೆ ಯಶಸ್ಸನ್ನು ನೀಡುತ್ತದೆ. ನಿಮ್ಮ ಯಶಸ್ಸನ್ನು ಸಹಿಸಲಾಗದೇ ಕೆಲವರು ನೊಂದುಕೊಳ್ಳಬಹುದು. ದಾಂಪತ್ಯಜೀವನದಲ್ಲಿ ವಿವಾದವಾಗುವ ಸಾಧ್ಯತೆಯಿದೆ. ಆದ್ದರಿಂದ ಅರ್ಥವಿಲ್ಲದ ಚರ್ಚೆಗಳಲ್ಲಿ ಸಮಯ ಮತ್ತು ಹಣ ಎರಡೂ ನಷ್ಟ ಮಾಡಿಕೊಳ್ಳಬೇಡಿ. ನಿಮ್ಮ ಮನಸ್ಸನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ.

ಮಿಥುನ: ದಾಂಪತ್ಯದ ಹೊಸತಿನಲ್ಲಿ ಆನಂದವನ್ನು ಅನುಭವಿಸುವಿರಿ. ಅದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಇಂದು ನೀವು ಸಾಲದಿಂದ ಮುಕ್ತರಾಗುತ್ತೀರಿ ಮತ್ತು ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವುದನ್ನು ನೋಡಿ ನಿಮಗೆ ಸಂತೋಷವಾಗಬಹುದು. ಇಂದು ನೆರೆ ಹೊರೆಯವರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಏಳಬಹುದು. ಹಿರಿಯ ಅಧಿಕಾರಿಗಳ ಸಹಾಯದಿಂದ ನಿಮ್ಮ ಸಂಕೀರ್ಣ ಕಾರ್ಯಗಳೂ ಸಹ ಇಂದು ಪೂರ್ಣಗೊಳ್ಳುವುವು.

ಕರ್ಕ: ಕೆಲಸದ ಸ್ಥಳದಲ್ಲಿ ನಿಮ್ಮ ಬಲವನ್ನು ಪ್ರದರ್ಶಿಸುವಿರಿ. ಒಂದಾದಮೇಲೊಂದರಂತೆ ಕೆಲಸಗಳು ಲೀಲಾಜಾಲವಾಗಿ ಮುಗಿಯುವುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಿಮ್ಮ ಆಸಕ್ತಿಯು ಹೆಚ್ಚಾಗುತ್ತದೆ. ನೀವು ದೊಡ್ಡ ವ್ಯಕ್ತಿಗಳ ಭೇಟಿಯಾಗಲಿದೆ. ಕಣ್ಣಿನ ಸಮಸ್ಯೆಗಳು ಉಂಟಾಗಬಹುದು. ವಿವಾಹಿತರು ಮದುವೆಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಪಡೆಯುವಿರಿ. ಶತ್ರುಗಳ ಮೇಲೆ ವಿಜಯವನ್ನು ಸಾಧಿಸುವಿರಿ. ಈ ದಿನ ವಿದ್ಯಾರ್ಥಿಗಳು ಗೌರವಾನ್ವಿತ ವ್ಯಕ್ತಿಯಿಂದ ಉಡುಗೊರೆಯನ್ನು ಸ್ವೀಕರಿಸಲು ಅನುಕೂಲವಾಗಿದೆ.

ಸಿಂಹ: ಇಂದು ನೀವು ಬೆಳಿಗ್ಗೆ ಶುಭ ಸುದ್ದಿಯನ್ನು ಪಡೆಯುವಿರಿ. ಉತ್ತಮ ಆಹಾರಸೇವನೆಯಿಂದ ಆರೋಗ್ಯವು ಉತ್ತಮವಾಗುವುದು. ನಿಮ್ಮ ಸ್ನೇಹಿತರು ಮತ್ತು ಬಂಧುಗಳ ಕಾರಣದಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು. ಕುಟುಂಬ ಜೀವನದಲ್ಲಿ ಜಾಗರೂಕರಾಗಿರಿ, ಕೋಪವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಸಂಬಂಧವು ಮುರಿದುಹೋಗುವುದು. ಆರ್ಥಿಕವಾಗಿ ಸಬಲರಾಗಲು ಹೆಚ್ವು ಶ್ರಮಿಸಬೇಕಾಗುತ್ತದೆ. ಸಂಜೆ ಶುಭಸಮಾರಂಭಗಳಿಗೆ ಭೇಟಿ ನೀಡುವಿರಿ.

ಕನ್ಯಾ: ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷವನ್ನು ಅನುಭವಿಸಲು ಹೊರಗೆ ಸುತ್ತಾಡಲು ಹೋಗುವಿರಿ. ಇದರಿಂದ ಸಂಬಂಧವು ಗಟ್ಟಿಯಾದರೂ ಖರ್ಚು ಹೆಚ್ಚಾಗಬಹುದು. ನಿಮ್ಮ ಕಾರ್ಯಗಳಿಗೆ ಸಂಗಾತಿಯು ಸಹಕರಿಸಬಹುದು. ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಅದೃಷ್ಟವು ನಿಮಗೆ ಪೂರಕವಾಗಿದೆ. ಲಾಭದಾಯಕವಾಗಲಿದೆ. ಸ್ನೇಹಿತರು ನಿಮ್ಮೊಂದಿಗೆ ಎಂದಿನಂತೆ ಇಲ್ಲವೆಂಬ ಭಾವ ಬರಬಹುದು. ಸಂತೋಷಕ್ಕೆ ಬೇಕಾದ ಎಲ್ಲ ಇದ್ದರೂ ಚಿಂತೆಗೆ ಒಳಗಾಗುವಿರಿ.

ತುಲಾ: ವಿದೇಶಕ್ಕೆ ಸಂಬಂಧಿಸಿದ ಕೆಲಸದಿಂದ ನಿಮಗೆ ಅನೇಕ ಲಾಭಗಳು ಆಗಲಿವೆ. ವೃತ್ತಿಪರ ಜೀವನದಲ್ಲಿ ನಿಮಗೆ ಗೌರವವು ಹೆಚ್ಚಾಗುತ್ತದೆ. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡುವ ಅವಶ್ಯಕತೆ ಇದೆ. ವ್ಯವಹಾರದಲ್ಲಿ ಲಾಭವು ಇರಲಿದೆ. ಹೂಡಿಕೆಯು ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರದ ಪ್ರಯಾಣವನ್ನು ಮಾಡಬೇಕಾಗಬಹುದು. ಇದರಿಂದಾಗಿ ನಿಮ್ಮ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಮತ್ತು ಹಣವನ್ನು ಪಡೆಯಲು ನಿಮಗೆ ಸಾಧ್ಯವಾಗುತ್ತದೆ.

ವೃಶ್ಚಿಕ: ನಿಮ್ಮ ಕೌಟುಂಬಿಕ ಸಮಸ್ಯೆಗಳು ಮತ್ತೊಮ್ಮೆ ಮುನ್ನೆಲೆಗೆ ಬರಬಹುದು. ತಾಳ್ಮೆಯನ್ನು ಕಳೆದುಕೊಳ್ಲದೇ ವರ್ತಿಸಿ. ಕಲಹಾಗ್ನಿಯನ್ನು ಶಾಂತಗೊಳಿಸಿ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಬೇಕು. ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳ ಸಹವಾಸ ಇರಲಿದೆ. ತಂದೆಯ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ಕಛೇರಿಯಲ್ಲಿ ಆಗುವ ಒತ್ತಡವನ್ನು ಮನೆಯಲ್ಲಿ ಬಂದು ಇಳಿಸಿಕೊಳ್ಳುವಿರಿ. ನಿಮ್ಮ ಬುದ್ಧಿಯನ್ನು ತೋರಿಸಬೇಡಿ.

ಧನುಸ್ಸು: ಹೆಚ್ಚು ಉತ್ಸಾಹವನ್ನು ತೋರಿಸಿದರೆ ಕೆಲಸವು ಹಾಳಾಗಬಹುದು. ನಿಮ್ಮ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ಕೆಲಸದ ಶೈಲಿಯಲ್ಲಿ ಬದಲಾವಣೆಯ ಅಗತ್ಯವಿದೆ. ಇಂದು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಅದು ನಿಮ್ಮ ಮನಸ್ಸನ್ನು ಸಂತೋಷಪಡಿಸುತ್ತದೆ. ಒಡಹುಟ್ಟಿದವರ ಸಹಾಯದಿಂದ, ನಿಮ್ಮ ಯಾವುದೇ ಹಳೆಯ ಸಮಸ್ಯೆಗಳು ಕೊನೆಗೊಳ್ಳುವುದು. ಆದರೆ ಅನಗತ್ಯ ವೆಚ್ಚಗಳನ್ನು ತಪ್ಪಿಸಿ. ನೀವು ಯಾವುದೇ ಹೊಸ ಹೂಡಿಕೆ ಮಾಡಲು ಬಯಸಿದರೆ ಈಗ ಸರಿಯಾದ ಸಮಯವಲ್ಲ.

ಮಕರ: ಕುಟುಂಬದ ಕಿರಿಯ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಆದರೆ ನೀವು ಮಕ್ಕಳ ಕಡೆಯಿಂದ ಸಮಸ್ಯೆಗಳನ್ನು ಎದುರಿಸಬಹುದು. ಹೊರಗೆ ತಿನ್ನುವುದು ಮತ್ತು ಕುಡಿಯುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಿಮ್ಮ ಆರೋಗ್ಯವು ಹದಗೆಡಬಹುದು. ಪ್ರೀತಿಯ ಜೀವನವು ಸುಗಮವಾಗಿ ಮುಂದುವರಿಯುತ್ತದೆ ಮತ್ತು ನೀವು ಉಡುಗೊರೆಯನ್ನು ಸಹ ಪಡೆಯಬಹುದು. ಕುಟುಂಬದ ಆಸ್ತಿ ಖರೀದಿಯಲ್ಲಿ ಯಶಸ್ಸು ಸಿಗಲಿದೆ. ರಾಜಕೀಯದಲ್ಲಿ ಕೆಲಸ ಮಾಡುವವರು ಲಾಭದಲ್ಲಿ ಇರುತ್ತಾರೆ. ಅವರು ಉತ್ತಮ ಆರ್ಥಿಕ ಲಾಭವನ್ನು ಪಡೆಯುವರು.

ಕುಂಭ: ದೊಡ್ಡ ಕೆಲಸ ಮತ್ತು ಪ್ರಗತಿಗಾಗಿ ಯೋಜಿಸುತ್ತೀರಿ. ಈ ಕಾರಣದಿಂದಾಗಿ ನೀವು ಸ್ನೇಹಿತರ ಬೆಂಬಲವನ್ನು ಪಡೆಯುತ್ತೀರಿ. ಇಂದು ನೀವು ಕುಟುಂಬದ ಅಗತ್ಯಗಳನ್ನು ಪೂರೈಸಲು ಓಡಾಡುತ್ತಲೇ ಇರಬೇಕಾಗುತ್ತದೆ. ನಿಮ್ಮ ತಾಯಿಯ ಬೆಂಬಲವನ್ನು ಪಡೆಯುತ್ತೀರಿ ಮತ್ತು ವಹಿಸಿಕೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಉದ್ಯಮಿಗಳು ಇಂದು ಉತ್ತಮ ಲಾಭವನ್ನು ಪಡೆಯುತ್ತಾರೆ. ಆತನಿಗೆ ಯಾವುದಾದರೂ ಹಳೆಯ ಆಸೆಯಿದ್ದರೆ ಅದು ಕೂಡ ಇಂದು ನೆರವೇರುತ್ತದೆ. ಇಂದು ಆಸ್ತಿ ಅಥವಾ ಕೌಟುಂಬಿಕ ವಿವಾದ ಬಗೆಹರಿಯಲಿದೆ. ಆರ್ಥಿಕ ಪರಿಸ್ಥಿತಿಯು ಇಂದು ನಿಮ್ಮ ಪರವಾಗಿರುತ್ತದೆ ಮತ್ತು ಇಂದು ಹೂಡಿಕೆ ಮಾಡಲು ಉತ್ತಮ ದಿನವಾಗಿದೆ.

ಮೀನ: ಶುಭಸಂದೇಶದ ಆಗಮನದಿಂದ, ಕುಟುಂಬದಲ್ಲಿ ಉತ್ಸಾಹವು ಹೆಚ್ಚಾಗುತ್ತದೆ. ಸ್ನೇಹಿತರೂ ಸಹ ಇದರಲ್ಲಿ ನಿಮಗೆ ಸಹಕರಿಸುತ್ತಾರೆ. ಇಂದು ನೀವು ಯಾವುದೇ ವಾಹನಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಶುಭಕಾರ್ಯದ ಬಗ್ಗೆ ಮನೆಯಲ್ಲಿ ಚರ್ಚಿಸಬಹುದು ಮತ್ತು ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಹೊಸ ಅಧಿಕಾರಿಗಳನ್ನು ಪಡೆಯುತ್ತಾರೆ. ಇಂದು, ಕಾರ್ಯನಿರತವಾಗಿದ್ದರೂ, ನೀವು ಕುಟುಂಬಕ್ಕಾಗಿ ಸಮಯವನ್ನು ವಿನಿಯೋಗಿಸುತ್ತೀರಿ. ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ.

ಲೋಹಿತಶರ್ಮಾ, ಇಡುವಾಣಿ