Weekly Horoscope:ಫೆಬ್ರವರಿ 12ರಿಂದ ಫೆ.18ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
2023ರ ಫೆಬ್ರವರಿ 11ರಿಂದ ಫೆಬ್ರವರಿ 18ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ(Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಫೆಬ್ರವರಿ 12ರಿಂದ ಫೆಬ್ರವರಿ 18ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ಮೇಷ: ಈ ವಾರ ಮನೆಯಲ್ಲಿ ಮಂಗಲಕಾರ್ಯಗಳು ನಡೆಯುವುದು. ಬಂಧುಗಳು ಆಗಮನವು ನಿಮ್ಮಲ್ಲಿ ಶಕ್ತಿಯನ್ನು ತುಂಬುವುದು. ಸಂತೋಷದಿಂದ ಬಹಳ ಉತ್ಸಾಹದಿಂದ ಕೆಲಸವನ್ನು ಮಾಡುವಿರಿ. ಪ್ರೇಮವು ನಿಮಗೆ ಅತಿಯಾಗದು. ಎಲ್ಲರ ಪ್ರೀತಿಗೆ ಪಾತ್ರರಾಗುವಿರಿ. ಆರ್ಥಿಕಪ್ರಗತಿಯು ಉಂಟಾಗಲಿದೆ. ಆರ್ಥಿಕಸಂಕಷ್ಟು ದೂರವಾಗುವುದು. ಭೂಮಿಯ ವ್ಯವಹಾರವನ್ನು ಮಾಡಲು ಇಚ್ಛಿಸುವಿರಿ. ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಲಿದೆ. ಅಧ್ಯಯನದಲ್ಲಿ ಆಸಕ್ತಿಯು ಕಡಿಮೆ ಆಗಬಹುದು. ಗುರಿಯನ್ನು ತಲುಪಲು ಪ್ರಯತ್ನವನ್ನು ಬಿಡಬೇಡಿ. ಆರೋಗ್ಯವು ಚೆನ್ನಾಗಿರಲಿದೆ.
ವೃಷಭ: ಸಂಗಾತಿಯ ವರ್ತನೆಗಳಿಂದ ನಿಮಗೆ ಹಿಂಸೆಯಾಗಬಹುದು. ಹೀಗಿದ್ದರೂ ಪ್ರೇಮಸಲ್ಲಾಪಗಳು ನಡೆಯಲಿವೆ. ನಿಮ್ಮನ್ನು ಇಷ್ಟಪಡುವವರ ಬೆಂಬಲವೂ ನಿಮಗೆ ಸಿಗಲಿದೆ. ಮಿತ್ರರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಅವರಿಂದ ನಿಮಗೆ ಕೆಲವು ಸಹಾಯಗಳು ಸಿಗಲಿವೆ. ಆರ್ಥಿಕವಾಗಿ ಸಬಲರಾಗುವಿರಿ. ಹೊಸ ಉದ್ಯೋಗಗಳನ್ನು ಅನ್ವೇಷಣೆ ಮಾಡುವಿರಿ. ನಿಮ್ಮ ಅನುಭವದ ಆಧಾರದ ಮೇಲೆ ಉನ್ನತವಾದ ಸ್ಥಾನ ಲಭ್ಯವಾಗಲಿದೆ. ಉದ್ಯೋಗಸ್ಥರು ಇಂದು ಶ್ರಮದ ಮೂಲಕ ಅಧಿಕವಾದ ಲಾಭವನ್ನು ಪಡೆಯುವರು. ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದು ನಿಮ್ಮ ಕೈಯಲ್ಲಿದೆ.
ಮಿಥುನ: ವಿವಾಹಿತರು ತಮ್ಮ ಮನೆಯ ಜೀವನದಲ್ಲಿ ಸಂತೋಷದಿಂದ ಕಾಣುತ್ತಾರೆ. ನಿಮ್ಮ ಜೀವನ ಸಂಗಾತಿಯ ಜೊತೆ ಹೊಂದಾಣಿಕೆಯ ಅವಶ್ಯಕತೆ ಇದೆ. ಮನೆಯಲ್ಲಿ ಸಂತಸದ ವಾತಾವರಣವು ಇರಲಿದೆ. ಉತ್ತಮವಾದ ಆದಾಯದ ಮೂಲವು ಸಿಗಲಿದೆ. ಅದೃಷ್ಟವನ್ನು ನಂಬಿ ಕುಳಿತುಕೊಳ್ಳಬೇಡಿ. ಪ್ರಯತ್ನದಿಂದ ಫಲವನ್ನು ಪಡೆಯುವ ಆಲೋಚನೆಗಳನ್ನು ಮಾಡಿ. ಉದ್ಯೋಗದಲ್ಲಿ ಬದಲಾವಣೆ ಅಥವಾ ವರ್ಹಾವಣೆ ಆಗಬಹುದು. ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಬಹುದು. ಆರೋಗ್ಯದ ಬಗ್ಗೆ ಗಮನವಿರಲಿ.
ಕಟಕ: ವೈವಾಹಿಕ ಜೀವನವನ್ನು ನಡೆಸುವವರಿಗೆ ಉದ್ವೇಗವಿರಲಿದೆ. ಅಷ್ಟಮದಲ್ಲಿರುವ ಶನಿಯು ಕೆಲಸ ಕಾರ್ಯಗಳಿಗೆ ವಿಘ್ನವನ್ನು ಕೊಡುವನು. ಆರ್ಥಿಕವಾಗಿ ಕುಗ್ಗಿಸುವನು. ಆರೋಗ್ಯದ ವಿಚಾರದಲ್ಲಿ ನಿಮ್ಮ ಹಿಂಡಿ ಹಿಪ್ಪೆ ಮಾಡುವನು. ಕುಟುಂಬದಲ್ಲಿ ತಂದೆ ಮಕ್ಕಳ ನಡುವೆ ಕಲಹವನ್ನು ತರಿಸವನು. ಇಷ್ಟೆಲ್ಲ ಸಂಕಟ, ಬೇಸರದ ನಡುವೆಯೂ ಒಂದು ದೃಢ್ತತೆ ಇರಲಿದೆ. ನವಮದಲ್ಲಿರುವ ಬಲಾಧ್ಯನಾದ ಗುರುವು ನಿಮಗೂ ಬಲವನ್ನು ತಂದುಕೊಡುವನು. ಸಪ್ತಮದಲ್ಲಿರುವ ಬುಧನು ವ್ಯವಹಾರಿಕವಾದ ಲಾಭವನ್ನು ಮಾಡುವನು. ಅಷ್ಟಮಸ್ಥಾನದ ಶನಿಯ ಜೊತೆ ಶುಕ್ರನೂ ಇದ್ದಾನೆ ಎನ್ನುವುದನ್ನು ನೆನಪಿಸಿಕೊಳ್ಳಿ. ಸ್ವಲ್ಪ ಮನಸ್ಸಿಗೆ ಹಿತವಾದೀತು.
ಸಿಂಹ: ಸಪ್ತಮದಲ್ಲಿರುವ ಶನಿಯು ನಿಮ್ಮ ವಿವಾಹವನ್ನು ನಿಧಾನವಾಗಸಿಯಾನು. ಕಾರ್ಯಗಳ ವೇಗವನ್ನು ತಗ್ಗಿಸಿಯಾನು. ಅಷ್ಟಮದಲ್ಲಿರವ ಗುರುವು ಹಿರಿಯರಿಗೆ ಸಂಬಂಧಿಸಿದಂತೆ ಖರ್ಚನ್ನು ಮಾಡಿಸಬಹುದು. ಮರಣಕ್ಕೆ ಸಮಾನವಾದ ಅಪಮಾನವನ್ನು ಮಾಡಿಸುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ತೃತೀಯದಲ್ಲಿರುವ ಕೇತುವು ಪ್ರಭಾವವನ್ನು ತೋರಿಸಿಕೊಡುವವವನು. ವೃತ್ತಿಯಲ್ಲಿ ಸುಖವನ್ನೂ ಉತ್ತಮ ಆದಾಯವನ್ನೂ ನೀಡುವವನು ಕುಜನಿದ್ದಾನೆ. ವಿವಾಹಿತರ ಜೀವನವು ಸುಧಾರಿಸುತ್ತದೆ. ದಾಂಪತ್ಯದಲ್ಲಿ ಅನುರಾಗ, ಪರಸ್ಪರ ಒಲವು ಹೆಚ್ಚಾಗುವುದು. ಅಪರೂಪದ ಸಮಯವನ್ನು ಕಳೆಯುತ್ತಾರೆ.
ಕನ್ಯಾ: ಸಂಗಾತಿಯ ಜೊತೆ ಪ್ರವಾಸವನ್ನು ಯೋಜಿಸಲಿರುವಿರಿ. ನವಮದಲ್ಲಿರುವ ಕುಜನಿಂದ ಪಿತ್ರಾರ್ಜಿತ ಆಸ್ತಿಯು ದೊರೆಯಬಹುದು. ಷಷ್ಠದಲ್ಲಿರುವ ಶನಿ ಹಾಗೂ ಸೂರ್ಯರು ಶುಭಫಲಗಳನ್ನು ಕೊಡುತ್ತಾರೆ. ಶುಕ್ರನಿಂದ ವೃತ್ತಿಯಲ್ಲಿ ಒತ್ತಡವಿದೆ. ಕೆಲಸಗಳು ಶೀಘ್ರವಾಗಿ ಮುಗಿಯುವುದು. ವಿದೇಶಪ್ರವಾಸಕ್ಕೆ ಹೋಗಲು ಅವಕಾಶಗಳು ಸಿಗಬಹುದು. ಸ್ವಸಂತೋಷಕ್ಕಾಗಿ ಹಣವನ್ನು ಹೆಚ್ಚು ಖರ್ಚು ಮಾಡುವಿರಿ. ಉದ್ಯಮವನ್ನು ನಡೆಸುವವರಿಗೆ ಶುಭವಿಸೆ. ಒತ್ತಡದಿಂದಾಗಿ ಕೆಲವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದದಿಂದ ಮಾಡುವಿರಿ. ತಿಳಿದು ತಿಳಿದೇ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ.
ತುಲಾ: ಆರೋಗ್ಯದ ದೃಷ್ಟಿಯಿಂದ ನೀವು ಜಾಗರೂಕರಾಗಿರಬೇಕು. ಒತ್ತಡವೂ ಸಮಸ್ಯೆಗಳನ್ನು ಸೃಷ್ಟಿಸಬಹುದು. ವಿರೋಧಿಗಳಿಂದ ದೂರವಿರಿ ಅಥವಾ ಜೊತೆಗಿದ್ದರೂ ಎಚ್ಚರದಿಂದಿರಿ. ಖರ್ಚುಗಳು ಆಧಿಕವಾಗಿ ಆದಾಯದ ಮೂಲವೂ ಸಾಧಾರವಾಗಿರುತ್ತದೆ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಅನುಕೂಲಕರವಾಗಿರುತ್ತದೆ. ನಿಮ್ಮೊಂದಿಗೆ ಕೆಲಸ ಮಾಡುವ ಜನರು ಸಹ ನಿಮ್ಮನ್ನು ಹೊಗಳುವರು. ಪ್ರೇಮಿಗಳಿಗೆ ಅನುಕೂಲಕರವಾದ ವಾತಾವರಣವಿರಲಿದೆ. ಮನೆಯಲ್ಲಿ ಮದುವೆಯ ಮಾತು ಕೂಡ ಆಗಬಹುದು. ವಾರದ ಆರಂಭದಲ್ಲಿ ವಂಚನೆಯಿಂದ ಆರ್ಥಿಕವಾಗಿ ತೊಂದರೆಗೆ ಒಳಗಾಗುತ್ತೀರಿ. ವಿದ್ಯಾರ್ಥಿಗಳು ಪ್ರಯತ್ನಿಸಿದ ಕಾರಣ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು.
ವೃಶ್ಚಿಕ: ಸ್ನೇಹಿತರೊಂದಿಗೆ ಮೋಜು ಮಾಡುವ ಅವಕಾಶ ದೊರೆಯಲಿದೆ. ವ್ಯಾಪಾರವನ್ನು ಮಾಡುವುದಕ್ಕೆ ಈ ಸಮಯವು ಒಳ್ಳೆಯದಾಗಿದೆ. ಜೀವನ ಸಂಗಾತಿಯ ಜೊತೆ ಹೆಚ್ಚು ಮಾತಗಳು ನಡೆಯಲಿವೆ. ದಾಂಪತ್ಯದಲ್ಲಿ ಪರಸ್ಪರ ತಿಳುವಳಿಕೆ, ಮೈತ್ರಿಗಳು ಅಧಿಕವಾಗುವುವು. ಕೆಲವರ ಸಹವಾಸವು ನಿಮ್ಮ ಕೆಲಸವನ್ನು ಹಾಳುಮಾಡಬಹುದು. ಎಚ್ವರಿರುವುದು ಒಳ್ಳೆಯದು. ಉದ್ಯೋಗಿಗಳು ಬಹಳ ಶ್ರಮದಿಂದ ಕೆಲಸವನ್ನು ಪೂರೈಸುವರು. ಕೆಲಸಕ್ಕೆ ನೀವು ಮೆಚ್ಚುಗೆಯೂ ಸಿಗಲಿದೆ. ಕೆಲವು ಪ್ರಸಿದ್ಧ ವ್ಯಕ್ತಿಗಳ ಸಹವಾಸವನ್ನು ನೀವು ಪಡೆಯುತ್ತೀರಿ. ವಿದ್ಯಾರ್ಥಿಗಳು ಅನಾರೋಗ್ಯದಿಂದ ಪೀಡಿತರಾಗಿ ಅಧ್ಯಯನದಲ್ಲಿ ನಿರಾಸಕ್ತಿಯನ್ನು ತೋರಿಸುವರು. ಆರೋಗ್ಯ ಸಂಬಂಧಿಯಾದ ಖಾಯಿಲೆಯನ್ನು ಅನುಭವಿಸಬೇಕಾಗಬಹುದು.
ಧನಸ್ಸು: ತೃತೀಯದಲ್ಲಿ ಇರುವ ಶನಿಯು ಕಾಮಪ್ರದನಾಗಿದ್ದಾನೆ. ನಿಮ್ಮನ್ನು ಉದ್ಯೋಗ, ಅಧಿಕಾರ, ಆರ್ಥಿಕಸ್ಥಿತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುವುದು. ಒಳ್ಳೆಯ ಉದ್ಯೋಗ ಅಂತಸ್ತು ಅಧಿಕಾರ ಎಲ್ಲವೂ ಸಿಗಲಿದೆ. ನಿಮ್ಮನ್ನು ಯಾರಾದರೂ ದೂರ ಮಾಡಿದ್ದರೆ ಅವರು ತಾವಾಗಿ ಹತ್ತಿರ ಬಂದು ಗೆಳೆತನವನ್ನು ಬಯಸುತ್ತಾರೆ. ಷಷ್ಠದಲ್ಲಿರುವ ಕುಜನು ಶಕ್ತಿಯನ್ನು ಹೆಚ್ಚು ಮಾಡುತ್ತಾನೆ. ಆಲಸ್ಯವೇ ನಿಮ್ಮ ಮೊದಲ ಶತ್ರುವಾಗಿ ಇರಲಿದೆ. ಬಿಟ್ಟು ಸಮಯ ನಿರ್ವಹಿಸಿ ಮುನ್ನಡೆಯಬೇಕು. ಹಿರಿಯರ ಮಾರ್ಗದರ್ಶನವು ಜೀವನದ ಹೊಸ ಆಯಾಮವನ್ನು ತೋರಿಸಬಹುದು. ಭೂಮಿ, ಕಟ್ಟಡ ಅಥವಾ ಯಾವುದೇ ದುಬಾರಿ ವಸ್ತುಗಳನ್ನು ಖರೀದಿಸುವ ಮೊದಲು ಹಿತೈಷಿಗಳ ಸಲಹೆಯನ್ನು ಪಡೆಯಿರಿ. ಸ್ನೇಹಿತರ ಸಹಾಯದಿಂದ ಅಪೂರ್ಣವಾದ ಕಾರ್ಯಗಳು ಪೂರ್ಣಗೊಳ್ಳುವುವು.
ಮಕರ: ಪ್ರಥಮಸ್ಥಾನದಲ್ಲಿರುವ ಬುಧನು ನಿಮ್ಮ ಧನ-ಮಾನಾದಿಗಳನ್ನು ರಕ್ಷಿಸುವನು. ದ್ವಿತೀಯದಲ್ಲಿರುವ ರವಿ, ಶನಿ, ಶುಕ್ರರು ನಾನಾಪ್ರಕಾರದಲ್ಲಿ ಹಣವನ್ನು ಕೊಡಿಸುವರು. ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿವೆ. ವಾಹನದಿಂದ ಅಧಿಕಲಾಭವನ್ನು ಪಡೆಯುವಿರಿ. ಸರ್ಕಾರಿ ಕೆಲಸಗಳು ಶೀಘ್ರವಾಗಿ ಮುಂದುವರಿಯುವುವು. ಮನಸ್ಸಿನಲ್ಲಿ ಧಾರ್ಮಿಕಕಾರ್ಯಗಳನ್ನು ಮಾಡಲು ಮನಸ್ಸಾಗುತ್ತದೆ. ಮಕ್ಕಳ ಬಗ್ಗೆ ಕಾಳಜಿ ಇರಲು. ವ್ಯವಹಾರಸ್ಥರು ಸರ್ಕಾರದ ವಲಯದಿಂದ ಉತ್ತಮವಾದ ಲಾಭವನ್ನು ಪಡೆಯಬಹುದು.
ಕುಂಭ: ಶನಿಯು ನಿಮ್ಮ ರಾಶಿಯಲ್ಲಿಯೇ ಇರು ಇರುವುದರಿಂದ ನೀವು ಕೊಂಚ ಜಾಗ್ರತೆ ವಹಿಸಬೇಕು. ನಿಮಗೆ ಅಪವಾದಗಳು ಬರಬಹುದು. ವಿರೋಧಿಗಳು ನೀವು ಬೀಳುವುದನ್ನೇ ಕಾಯುತ್ತಿರುತ್ತಾರೆ. ಮಾತನಾಡುವಾಗ ನಾಲಗೆಯ ಮೇಲೆ ಹಿಡಿತವಿರಲಿ. ಪ್ರಥಮಸ್ಥಾನದಲ್ಲಿಯೇ ಶುಕ್ರನೂ ಇದ್ದುದರಿಂದ ನಿಮಗೆ ಅನೇಕ ಶುಭಸುದ್ದಿಗಲಕು, ಅವಕಾಶಗಳು ಸಿಗಲಿವೆ. ಧನಾಗಮನವನ್ನೂ ನಿರೀಕ್ಷಿಸಬಹುದು. ಚತುರ್ಥದಲ್ಲಿರುವ ಕುಜನಿಂದ ನಿವೇಶನದ ಲಾಭವಾಗಬಹುದು. ನಿಮಗಿಂದು ದೂರದ ಪ್ರಯಾಣ ಅನಿವಾರ್ಯವಾಗಲಿದೆ. ವ್ಯಾಪಾರದ ನಿಮಿತ್ತ ದೂರಪ್ರಯಾಣವನ್ನು ಮಾಡುವಿರಿ. ದೀರ್ಘಕಾಲದಿಂದ ಬಳಲುತ್ತಿದ್ದ ಕಾಯಿಲೆಯು ನಿಧಾನವಾಗಿ ಕಡಿಮೆಯಾಗುವುದು.
ಮೀನ: ಆರ್ಥಿಕಸ್ಥಿತಿಯು ಬಹಳ ವ್ಯತ್ಯಾಸವಾಗಲಿದೆ. ಮನಸ್ತಾಪದಿಂದ ಕಾರ್ಯದಲ್ಲಿ ಹಿನ್ನಡೆಯಾಗಲಿದೆ. ನಿಮ್ಮ ಸತ್ಕಾರ್ಯಗಳು ಯಾರಿಗೂ ತಿಳಿಯದಾಗಿದೆ. ನಂಬಿಕೆಗೆ ದ್ರೋಹವಾಗುವ ಕೆಲವು ಘಟನೆಗಳು ನಡೆಯಬಹುದು. ಹಳೆಯದನ್ನು ನೆನಪಿಸಿಕೊಂಡು ದುಃಖಿಸುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದವರು ನಿಮ್ಮನ್ನು ನಾನಾ ರೀತಿಯಿಂದ ಪ್ರಶ್ನಿಸಿಯಾರು. ಯಾವುದೋ ಕ್ಷುಲಕ ಕಾರಣಕ್ಕೆ ನಿಮ್ಮ ಪಿತ್ರಾರ್ಜಿತವಾದ ಸಪತ್ತುಗಳು ವ್ಯಯವಾಗಬಹುದು. ಸ್ವತಂತ್ರವಾಗಿ ಇರಲು ಬಯಸುವ ನೀವು ಪರರ ನೋವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲಾರಿರಿ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ವೈದ್ಯರ ಸಲಹೆ ಪಡೆಯಿರಿ.
ಲೇಖನ:-ಲೋಹಿತಶರ್ಮಾ, ಇಡುವಾಣಿ