ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಫೆಬ್ರವರಿ 20 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರ ಮಾಸ, ಮಹಾನಕ್ಷತ್ರ: ಧನಿಷ್ಠಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಧನಿಷ್ಠ, ಯೋಗ: ಪರಿಘ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ-55 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 37 ನಿಮಿಷಕ್ಕೆ. ರಾಹು ಕಾಲ 08:23 – 09:51ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 11:19 – 12:47 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 – 03:42ರವರೆಗೆ
ಮೇಷ: ಆತ್ಮಾವಭಿಮಾನವು ಅಧಿಕವಾಗಿ ಇರಲಿದೆ. ನಾನು ಹೇಳಿದಂತೇ ಆಗಬೇಕು ಎನ್ನುವ ಮಾನಸಿಕ ಸ್ಥಿತಿ ಇರಲಿದೆ. ಇದು ಮನಸ್ತಾಪಕ್ಕೆ ಕಾರಣವಾಗುವುದು. ಇಂದು ಅಂದುಕೊಂಡ ಕಾರ್ಯಗಳು ಮುಗಿಯುವುದು. ನಿಮಗೆ ಗೊಂದಲಗಳಿದ್ದು, ಅದನ್ನು ಸರಿಯಾಗಿಸಿಕೊಳ್ಳಲು ಕೆಲವು ಸಮಯ ಏಕಾಂತದಲ್ಲಿ ಇರಬೇಕಾದೀತು. ಇಂದು ಮಹತ್ವದ ಕಾರ್ಯಗಳೆಲ್ಲವೂ ಕೈಗೊಳ್ಳಲು ಸಕಾಲವಾಗಿದೆ. ದಾಂಪತ್ಯವು ಎಂದೂ ಇರದ ರೀತಿಯಲ್ಲಿ ರಸವತ್ತಾಗಿರುತ್ತದೆ. ಮುಖವನ್ನು ಗಂಟಿಕ್ಕಿಕೊಳ್ಳದೇ ನಗುಮುಖದಿಂದ ಇರಿ. ದ್ವಾದಶದ ಶುಕ್ರನು ಧನನಷ್ಟ ಮಾಡಿಸಿಯಾನು. ದುರ್ಗೆಯನ್ನು ಅನನ್ಯ ಮನಸ್ಕರಾಗಿ ಆರಾಧಿಸಿ. ಮಾತೆಯು ಮಕ್ಕಳ ಕೈ ಬಿಡಳು.
ವೃಷಭ: ಗುರುವಿನ ಅನುಗ್ರಹು ನಿಮ್ಮ ಮೇಲೆ ಇದೆ. ಪ್ರೇಮ ನಿವೇದನೆ ಮಾಡಬೇಕು ಎಂದು ಅಂದುಕೊಂಡಿದ್ದರೆ ಸ್ವಲ್ಪ ದಿನ ಮುಂದೂಡುವುದು ಉಚಿತ. ಸ್ವಲ್ಪ ಮಟ್ಟಿಗೆ ಮಾನಸಿಕ ವ್ಯತ್ಯಾಸಗಳು ಆಗಬಹುದು. ಶತ್ರುಗಳೆಂದು ತಿಳಿದರೆ ಅವರ ಬಳಿ ಹೋಗಬೇಡಿ. ಆರ್ಥಿಕವಾಗಿ ಸ್ಥಿರತೆ ಇರುತ್ತೆ. ಖರ್ಚನ್ನು ಮಾಡಿಕೊಳ್ಳುವ ಮನಸ್ಸು ಮಾಡಬೇಡಿ. ಸ್ನೇಹಿತರ ಸಹಾಯ ಸಿಗಲಿದೆ.
ಮನಸ್ಸು ಪ್ರವಾಸಕ್ಕೆ ಹಾತೊರೆಯಬಹುದು. ನಿಮ್ಮ ಹವ್ಯಾಸಕ್ಕೆ ನೀರೆರೆಯುವ ಸಮಯವಿದು. ಹೊಸ ಪ್ರೀತಿ ಹುಟ್ಟಬಹುದು. ಅವಕಾಶಗಳು ಹೆಚ್ಚಾಗಬಹುದು. ಹೆಚ್ಚು ಆಶಾವಾದಿಗಳಾಗಿರಿ. ಜೀವನ ಚೆನ್ನಾಗಿ ಇರಲಿದೆ. ದ್ವಾದಶದಲ್ಲಿರುವ ರಾಹುವು ಅನವಶ್ಯಕ ಹಣವನ್ನು ಖರ್ಚುಮಾಡಿಸುವನು. ಔದುಂಬರ ವೃಕ್ಷಕ್ಕೆ ಪ್ರದಕ್ಷಿಣೆ ಬನ್ನಿ.
ಮಿಥುನ: ಮೇಲಧಿಕಾರಿಗಳ ಸಹಾಯಯದಿಂದ ವೃತ್ತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳು ಸಲೀಸಾಗಿ ಆಗುವುದು. ವ್ಯಾಪಾರಿಗಳಿಗೆ ತೃಪ್ತಿಕರವಾದ ವ್ಯಾಪಾರ ಆಗುವ ಸಂದರ್ಭವಿದೆ. ಮರದ ಕೆತ್ತನೆಯ ಕುಶಲ ಕರ್ಮಿಗಳಿಗೆ ಬೇಡಿಕೆ ಹೆಚ್ಚಾಗಿ ಆದಾಯವು ಹೆಚ್ಚುತ್ತದೆ. ಸ್ವಂತ ಉದ್ಯೋಗವನ್ನು ನಡೆಸುತ್ತಿರುವವರು ತಮ್ಮ ಕೆಲವೊಂದು ಜವಾಬ್ದಾರಿಗಳನ್ನು ಹಂಚುವುದು ಬಹಳ ಒಳ್ಳೆಯದು. ರಾಜಕೀಯ ವ್ಯಕ್ತಿಗಳಿಗೆ ಅವರ ವಿರೋಧಿಗಳಿಂದ ತೊಂದರೆ ಬರುವ ಸಾಧ್ಯತೆ ಇದೆ. ನಿಮ್ಮ ಅಧಿಕ ಕೋಪ ಕೆಲವೊಂದು ನಷ್ಟಗಳಿಗೆ ಕಾರಣವಾಗಬಹುದು. ಮಕ್ಕಳ ಏಳಿಗೆಯಲ್ಲಿ ಅಂತಹ ಪ್ರಗತಿ ಇರುವುದಿಲ್ಲ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ವ್ಯವಹಾರಗಳಲ್ಲಿ ದೃಢ ನಿರ್ಧಾರಗಳಿಂದ ಮುಂದುವರೆಯುವುದು ಬಹಳ ಒಳ್ಳೆಯದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ದ್ವಾದಶದ ಕುಜನು ವಾಹನದಿಂದ ಅಪಘಾತವನ್ನು ಉಂಟುಮಾಡುವನು. ಕಾರ್ತಿಕೇಯನ ಸ್ಮರಣೆ ಮಾಡಿ.
ಕರ್ಕ: ಖಾಸಗಿ ಹಣಕಾಸಿನ ಕಂಪೆನಿಗಳಿಗೆ ಹೆಚ್ಚು ಯಶಸ್ಸು ಸಾಧ್ಯತೆ ಇದೆ. ನೀವಿಂದು ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಬಂಗಾರದ ಹೂಡಿಕೆ ಮಾಡಿದ್ದವರಿಗೆ ಹೆಚ್ಚಿನ ಲಾಭ ದೊರೆಯುವುದಿ. ಹೂವಿನ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರ ನಡೆದು ಹೆಚ್ಚು ಲಾಭ ಬರುತ್ತದೆ. ಉದ್ಯಮಿಗಳು ಈಗಿರುವ ವಸ್ತುವಿನ ತಯಾರಿಕೆಯ ಜೊತೆಗೆ ಹೊಸ ರೂಪದ ವಸ್ತುವನ್ನು ತಯಾರಿಸಲು ಆರಂಭಿಸಬಹುದು. ಕೆಲಸಗಾರರೊಡನೆ ಅತಿ ಕೋಪ ನಿಮಗೆ ಒಳ್ಳೆಯದಲ್ಲ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ತಲುಪಬಹುದು. ವಸ್ತ್ರಾಭರಣಗಳನ್ನು ಖರೀದಿ ಮಾಡುವ ಯೋಗವಿದೆ. ವಯಸ್ಕರಿಗೆ ವಿವಾಹ ಸಂಬಂಧ ಒದಗಿ ಬರಬಹುದು. ಪೊಲೀಸ್ ಹುದ್ದೆಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಯ ಕೆಲಸದಲ್ಲಿ ಯಶಸ್ಸು ಒದಗುತ್ತದೆ. ಏಕಾದಶದ ಕುಜನಿಂದ ಎಂಜಿನಿಯರ್ಗಳಿಗೆ ಹೆಚ್ಚಿನ ವಾರ್ಷಿಕವೇತನ ಸಿಗುವ ಕೆಲಸಕ್ಕೆ ಆಯ್ಕೆಯಾಗಲಿದ್ದಾರೆ. ಹನುಮಾನ್ ಚಾಲೀಸ್ ಪಠಿಸಿ. ಅಧರ್ಮಕ್ಕೆ ಹೋಗುವ ಮನಸ್ಸನ್ನು ಅದು ತಡೆಯುತ್ತದೆ.
ಸಿಂಹ: ಹಾಡುಗಾರರಿಗೆ ತಮ್ಮ ಸಾಧನೆಯಿಂದ ಯಶಸ್ಸನ್ನು ಪಡೆಯುವ ಯೋಗವಿದೆ. ಕೆಲವೊಂದು ಗುಂಪು ಚಟುವಟಿಕೆಗಳಿಗೆ ನಿಮಗೆ ಮುಂದಾಳತ್ವ ದೊರೆಯುತ್ತದೆ. ಕಾನೂನು ಪಂಡಿತರಿಗೆ ಹೆಚ್ಚಿನ ಬೇಡಿಕೆ ಇದ್ದು ಆದಾಯವು ಹೆಚ್ಚುತ್ತದೆ. ತಂತ್ರಕ್ಷೇತ್ರದಲ್ಲಿನ ನಿಮ್ಮ ತಿಳಿವಳಿಕೆಯ ಸಲಹೆಗೆ ಹೆಚ್ಚು ಮನ್ನಣೆಯು ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಮಕ್ಕಳ ಏಳಿಗೆ ತೃಪ್ತಿಕರವಾಗಿರುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಆಗಬಹುದು, ಎಚ್ಚರವಹಿಸಿರಿ. ವ್ಯವಹಾರದಲ್ಲಿ ನಿಮ್ಮ ಮಾತಿಗೆ ಹೆಚ್ಚು ಬೆಲೆ ಬರುತ್ತದೆ. ಧನದ ಆದಾಯವು ಸಾಮಾನ್ಯವಾಗಿರುತ್ತದೆ. ಹಿರಿಯರಿಂದ ಆಭರಣಗಳು ಉಡುಗೊರೆಯಾಗಿ ದೊರೆಯುವ ಸಾಧ್ಯತೆಗಳಿವೆ. ವಿದೇಶಿ ಕಂಪನಿಗಳ ಮೇಲೆ ಹೂಡಿದ್ದ ಹಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ಸಪ್ತಮದಲ್ಲಿರುವ ಸೂರ್ಯನು ತಂದೆಯಿಂದ ವಿವಾಹದ ತಯಾರಿಗೆ ಬೇಕಾದ ಕೆಲಸವನ್ನು ಮಾಡಿಸುವನು. ಎಕ್ಕದ ಗಿಡಕ್ಕೆ ನೀರೆರೆದು ಪ್ರದಕ್ಷಿಣೆ ಮಾಡಿ.
ಕನ್ಯಾ: ಭಾವನೆಗಳನ್ನು ಹಂಚಿಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ವ್ಯಕ್ತಿಗಳ ಸ್ನೇಹವು ಆಗಲಿದೆ. ಸಿದ್ಧಪಡಿಸಿದ ಆಹಾರವನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ವ್ಯಾಪಾರವು ಆಗಿ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ಮಾತುಗಳನ್ನು ಹೆಚ್ಚು ಎಚ್ಚರದಿಂದ ಆಡಿ. ಇಲ್ಲದಿದ್ದರೆ ಮುಜುಗರಕ್ಕೆ ಒಳಗಾಗುವ ಸಂದರ್ಭವಿದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ನಿರುದ್ಯೋಗಿಗಳಿಗೆ ಒಂದು ಉದ್ಯೋಗ ದೊರೆಯುವ ಲಕ್ಷಣವಿದೆ. ಧಾರ್ಮಿಕ ಪ್ರಜ್ಞೆ ಹೆಚ್ಚು ಜಾಗರೂಕವಾಗುತ್ತದೆ. ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಸ್ವಲ್ಪಮಟ್ಟಿನ ನಿಧಾನವನ್ನು ಕಾಣಬಹುದು. ವೃತ್ತಿಯಲ್ಲಿ ಹೆಚ್ಚು ತಿರುಗಾಟವಿರುತ್ತದೆ. ಸಂಗಾತಿಯ ಸಿಡುಕಿನ ನುಡಿಗಳು ನಿಮಗೆ ನೋವು ತರುತ್ತದೆ. ಕೃಷಿಯ ಮೇಲೆ ಹೆಚ್ಚು ಆಸಕ್ತಿ ಮೂಡಿ ಅದರ ಬಗ್ಗೆ ಗಮನಹರಿಸುವಿರಿ. ಷಷ್ಠಾಧಿಪತಿಯಾದ ಶನಿಯು ಷಷ್ಠದಲ್ಲಿದ್ದು ಆರೋಗ್ಯವನ್ನು ಕಾಪಾಡುವನು. ರಾಮಂದಿರಕ್ಕೆ ಹೋಗಿ ಪ್ರದಕ್ಷಿಣೆ ಮಾಡಿಬನ್ನಿ.
ತುಲಾ: ಆದಾಯ ಕಡಿಮೆಯಿದ್ದರೂ ನೆಮ್ಮದಿಯಿಂದ ದಿನ ಸಾಗುವುದು. ಹಣಕಾಸಿನ ಸಮಸ್ಯೆಗಳಿಂದ ಹೊರಬರಲು ಸರಿಯಾದ ಅವಕಾಶವಿದೆ. ಅಧಿಕಾರಿಗಳಿಂದ ಬಡ್ತಿ, ಹೆಚ್ಚಳ, ಮೆಚ್ಚುಗೆ ಮತ್ತು ಪ್ರೋತ್ಸಾಹಗಳು ಉದ್ಯೋಗದಲ್ಲಿ ಸಿಗಲಿದೆ. ಇಂದಿನ ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಗುಂಪಿನಲ್ಲಿದ್ದಾಗ ನೀವೇನು ಹೇಳುತ್ತೀರೆಂದು ಎಚ್ಚರ ವಹಿಸಿ-ನಿಮ್ಮ ಹಠಾತ್ ಟೀಕೆಗಳಿಗೆ ನೀವು ತೀವ್ರವಾಗಿ ಟೀಕೆ ಎದುರಿಸಬೇಕಾಗಬಹುದು. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಮರಳಿ ತರುವ ಒಂದು ಆನಂದಮಯ ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ. ದೂರುಗಳನ್ನು ಸ್ವಾಗತಿಸಿ. ಸಮರ್ಥನೆಯನ್ನು ಕೊಟ್ಟು ಅರ್ಥವಿಲ್ಲ. ಪ್ರಥಮಸ್ಥಾನದಲ್ಲಿರುವ ಕೇತುವಿನಂದ ದೇಹಕ್ಕೆ ನಾನ ಪ್ರಕಾರದ ರೋಗಗಳು ಬರಬಹುದು. ಕುಲದೇವತಾರಾಧನೆಯನ್ನು ಮಾಡಿ.
ವೃಶ್ಚಿಕ: ಪೋಷಕರಿಂದ ಮಕ್ಕಳ ಆಸೆಗೆ ಪ್ರೋತ್ಸಾಹ ದೊರೆಯುತ್ತದೆ. ಮನೆ ನಿರ್ಮಾಣ ಮಾಡುತ್ತಿದ್ದವರಿಗೆ ಇದ್ದ ಅಡೆತಡೆಗಳು ಸ್ವಲ್ಪಮಟ್ಟಿಗೆ ದೂರವಾಗುತ್ತವೆ. ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ಬಂಧುಗಳ ಗಲಾಟೆಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ನಿಮಗೆ ದುಬಾರಿಯಾಗಬಹುದು. ಯಂತ್ರೋಪಕರಣಗಳನ್ನು ದುರಸ್ತಿ ಮಾಡುವವರಿಗೆ ಹೆಚ್ಚಿನ ಕೆಲಸ ದೊರತು ಸಂಪಾದನೆಯಾಗುತ್ತದೆ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರ ಆದಾಯ ಹೆಚ್ಚುತ್ತದೆ. ಹೊಸ ಆಭರಣವನ್ನು ಕೊಳ್ಳುವ ಮನಸ್ಸು ಮಾಡುವಿರಿ. ಮೂಳೆ ತೊಂದರೆ ಇರುವವರು ಚಿಕಿತ್ಸೆ ಪಡೆಯುವುದು ಒಳ್ಳೆಯದು. ಕೃಷಿ ಭೂಮಿ ವಿಸ್ತರಣೆಯನ್ನು ಮಾಡುವ ಕಾರ್ಯಕ್ಕೆ ಈಗ ಮುಂದಾಗುವಿರಿ. ವೃತ್ತಿಯಲ್ಲಿ ಸ್ವಲ್ಪ ಪ್ರಗತಿ ಇರುತ್ತದೆ. ಪಂಚಮದಲ್ಲಿ ಇರುವ ಶುಕ್ರ ಹಾಗೂ ಗುರುವು ನಿಮ್ಮ ಬುದ್ಧಿಗೆ ಹೊಳಪು ನೀಡುವರು.
ಧನುಸ್ಸು: ವೃತ್ತಿಯಲ್ಲಿ ಇಂದು ನಾನಾ ಸಮಸ್ಯೆಗಳು ಎದುರಾದರೂ ಅದನ್ನು ಧೈರ್ಯದಿಂದ ಎದುರಿಸಿ ಗೆಲ್ಲುವಿರಿ. ಸಂಶೋಧಕರಿಗೆ ಸಂಶೋಧನೆಯಲ್ಲಿ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆಗಳಿವೆ. ಕಾರ್ಮಿಕರು ಅವರ ಅಧಿಕಾರಿಗಳ ಜೊತೆ ಮುಕ್ತ ಚರ್ಚೆ ಮಾಡಿದಲ್ಲಿ ಅವರ ಸಮಸ್ಯೆಗಳು ಪರಿಹಾರವಾಗುವುದು. ಉದ್ಯೋಗದ ನಿಮಿತ್ತ ದೂರದ ಸ್ಥಳಕ್ಕೆ ಹೋಗಿ ಬರುವ ಸಾಧ್ಯತೆ ಇದೆ. ಲಲಿತ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ನಿಮ್ಮ ಚಾಣಾಕ್ಷದ ನಿರ್ಧಾರಗಳು ನಿಮ್ಮನ್ನು ಗುಂಪಿನಲ್ಲಿ ತೂಕದ ವ್ಯಕ್ತಿಯನ್ನಾಗಿಸುತ್ತದೆ. ಉದ್ಯೋಗದಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಸ್ಥಾನ ದೊರೆತು ಸಂತಸವಾಗುತ್ತದೆ. ಆಟೋ ಮೊಬೈಲ್ ತಂತ್ರಜ್ಞರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಸಂಗಾತಿಯ ಆಸ್ತಿ ಬಳುವಳಿಯಾಗಿ ಬರಬಹುದು. ಚತುರ್ಥದಲ್ಲಿರುವ ಶುಕ್ರನು ದಾಯಾದಿ ಕಲಹವನ್ನು ಕಡಿಮೆ ಮಾಡಿಸಿ, ಒಂದಾಗುವಂತೆ ಮಾಡುವನು. ಫಲಾಶವೃಕ್ಷಕ್ಕೆ ನೀರೆರೆದು ನಮಸ್ಕರಿಸಿ ಬನ್ನಿ.
ಮಕರ: ನಿಮ್ಮ ಉದ್ಯೋಗವನ್ನು ಸುಧಾರಿಸಲು ಮತ್ತು ಸರಿದಾರಿಗೆ ತರಲು ಸಾಕಷ್ಟು ಅವಕಾಶಗಳು ಒದಗುತ್ತವೆ. ತಂತ್ರಜ್ಞರಿಗೆ ಹೊಸ ಹೊಸ ಅವಕಾಶಗಳು ದೊರೆಯುತ್ತವೆ. ಮಾಧ್ಯಮದಲ್ಲಿ ಕೆಲಸ ಮಾಡುವವರು ಹೆಚ್ಚು ಎಚ್ಚರದಿಂದ ಕೆಲಸ ಮಾಡಬೇಕು. ದಂತ ವೈದ್ಯರಿಗೆ ಹೆಚ್ಚು ಅನುಕೂಲವಿರುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ಬಂಧುಗಳ ಸಹಕಾರ ನಿಮಗೆ ಹೆಚ್ಚಾಗಿ ದೊರೆಯುತ್ತದೆ. ಆಸ್ತಿ ವಿಚಾರದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಕ್ರೀಡಾಪಟುಗಳಿಗೆ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಿನ ಸೌಲಭ್ಯ ದೊರೆಯುತ್ತದೆ. ಪ್ರೀತಿ ಪ್ರೇಮದ ಸೆಳೆತಕ್ಕೆ ಸಿಲುಕುವ ಸಾಧ್ಯತೆ ಇದೆ. ಸರ್ಕಾರಿ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಯಾವುದೇ ರೀತಿ ವ್ಯತ್ಯಾಸವಿಲ್ಲ. ಪಂಚಮದಲ್ಲಿ ಇರುವ ಕುಜನು ಪ್ರತಿಭೆಯ ಅನಾವರಣಕ್ಕೆ ತಡೆ ತಂದಾನು. ಸುಬ್ರಹ್ಮಣ್ಯ ಸ್ತೋತ್ರ ಮಾಡಿ.
ಕುಂಭ: ಹಣಕಾಸಿನ ವ್ಯವಹಾರಗಳಲ್ಲಿ ಪಾಲುದಾರಿಕೆ ದೊರೆಯುವ ಸಾಧ್ಯತೆ ಇದೆ. ಯುವಕರು ಪ್ರಯಾಣದ ಸಮಯದಲ್ಲಿ ಆಲಸದಯದಿಂದ ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳಬಹುದು. ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ನೂತನ ಲವಸ್ತ್ರವನ್ನು ಖರೀದಿ ಮಾಡಲಿದ್ದೀರಿ. ಕೌಟುಂಬಿಕವಾದ ಕೆಲವು ಜವಾಬ್ದಾರಿಗಳನ್ನು ಮಕ್ಕಳಿಗೆ ಕೊಡುವಿರಿ. ಸಣ್ಣ ವ್ಯಾಪಾರಿಗಳಿಗೆ ಹೆಚ್ಚು ವ್ಯವಹಾರ ಆಗುವ ಸಾಧ್ಯತೆಗಳಿವೆ. ಧನದ ಆದಾಯವು ನಿರೀಕ್ಷೆಯನ್ನು ಖಂಡಿತ ತಲುಪುತ್ತದೆ. ಕೆಲವರಿಗೆ ಹಣಕಾಸಿನ ವ್ಯವಹಾರಗಳಲ್ಲಿ ವ್ಯತ್ಯಾಸವಾಗಿ ವೃತ್ತಿಯಲ್ಲಿ ಛೀಮಾರಿಯ ಪ್ರಸಂಗ ಬರಬಹುದು. ಸಿದ್ಧ ಉಡುಪು ತಯಾರಕರಿಗೆ ಮಾರುಕಟ್ಟೆ ಸಿಗಲಿದೆ. ನಿಮ್ಮ ಮನೆಯಲ್ಲಿಯೇ ಇರುವ ಶನಿಯು ನಿಮಗೆ ಆಲಸ್ಯವನ್ನು ತರುವನು. ಹನುಮಾನ್ ಚಾಲಿಸ್ ಪಠಣಮಾಡಿ.
ಮೀನ: ಎಂಜಿನಿಯರಿಂಗ್ ಮಾಡುತ್ತಿರುವವರೆಗೆ ಸೂಕ್ತ ಪ್ರೋತ್ಸಾಹ ದೊರೆಯುವುದು. ವೈದ್ಯವೃತ್ತಿಯನ್ನು ನಡೆಸುತ್ತಿರುವವರು ಆರ್ಥಿಕವಾಗಿ ಬಲಗೊಳ್ಳುವರು. ವಿದೇಶದಲ್ಲಿರುವ ಕುಟುಂಬಸ್ಥರು ಆರ್ಥಿಕವಾದ ಸಹಕಾರವನ್ನು ನೀಡುವರು. ಪಾದಗಳಲ್ಲಿ ನೋವು ಕಾಣಿಸಬಹುದು. ಮಕ್ಕಳ ಕಣ್ಣಿನ ಬಗ್ಗೆ ಎಚ್ಚರವಿರಲಿ. ಕಲುಷಿತ ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಾಸದ ಸಾಧ್ಯತೆ ಇದೆ. ಬರಹಗಾರರಿಗೆ ತಮ್ಮ ಬರಹವನ್ನು ವಿರೋಧಿಸುವವರ ಮಧ್ಯದಲ್ಲಿ ವೇದಿಕೆಯನ್ನು ಹಂಚಿಕೊಳ್ಳುವ ಸಂದರ್ಭವಿದೆ. ಕೋರ್ಟ್ ವ್ಯವಹಾರಗಳಲ್ಲಿ ನಿಮಗೆ ಶುಭಸಮಾಚಾರವಿರುತ್ತದೆ. ತಿಂಡಿ ತಿನಿಸುಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ. ದ್ವಾದಶದಲ್ಲಿರುವ ರವಿಯು ತಂದೆಯ ವಿಷಯಕ್ಕೆ ಸಂಬಂಧಿಸಿದಂತೆ ಹಣವನ್ನು ಖರ್ಚು ಮಾಡಿಸುವನು. ಅಶ್ವತ್ಥವೃಕ್ಷದ ಪ್ರದಕ್ಷಿಣೆಯನ್ನು ಮಾಡಿ.
ಲೋಹಿತಶರ್ಮಾ, ಇಡುವಾಣಿ