Nitya Bhavishya: ಈ ರಾಶಿಯವರಿಗಿಂದು ವಾಹನದಿಂದ ತೊಂದರೆ ಇರಲಿದೆ, ಎಚ್ಚರಿಕೆ ವಹಿಸಿ

| Updated By: ಆಯೇಷಾ ಬಾನು

Updated on: Feb 21, 2023 | 6:00 AM

2023 ಫೆಬ್ರವರಿ 21 ಮಂಗಳವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಈ ರಾಶಿಯವರಿಗಿಂದು ವಾಹನದಿಂದ ತೊಂದರೆ ಇರಲಿದೆ, ಎಚ್ಚರಿಕೆ ವಹಿಸಿ
ರಾಶಿಗಳು
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಫೆಬ್ರವರಿ 21ರ ಮಂಗಳವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಶತಭಿಷಾ/ಪೂರ್ವಾಭಾದ್ರ, ಯೋಗ: ಸಿದ್ಧ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ-55 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 37 ನಿಮಿಷಕ್ಕೆ. ರಾಹು ಕಾಲ 15:42– 17:10ರವರೆಗೆ, ಯಮಘಂಡ ಕಾಲ 09:51– 11:19 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:46 – 14:14ರವರೆಗೆ

ಮೇಷ: ಮಾತಿನ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಉಚಿತ. ಇಲ್ಲವಾದರೆ ಅನಾಹುತಗಳು ಆಗಬಹುದು. ಅನಿರೀಕ್ಷಿತವಾಗಿ ಅಧಿಕ ಖರ್ಚುಗಳು ಉಂಟಾಗಬಹುದು. ಕುಟುಂಬದ ಹಿರಿಯರು ನಿಮಗೆ ಉಪದೇಶವನ್ನು ಮಾಡುವರು. ನಿಮ್ಮ ಉದ್ಯಮವು ನಿಮಗೆ ಲಾಭವನ್ನು ತರಲಿದೆ. ಹಲವು ದಿನಗಳಿಂದ ಅನಾರೋಗ್ಯದ ಕಾರಣ ಕಿರಿಕಿರಿಯನ್ನು ಅನುಭವಿಸುತ್ತಿರುವ ನೀವು ಇಂದು ಆರೋಗ್ಯದತ್ತ ಮುಖಮಾಡುವಿರಿ. ನಿಮ್ಮ ಕಾರ್ಯದಕ್ಷತೆಯನ್ನು ಕಂಡು ಉದ್ಯೋಗದಲ್ಲಿ ಉನ್ನತಸ್ಥಾನಕ್ಕೆ ಏರುವ ಸಾಧ್ಯತೆ ಇದೆ‌. ಕುಟುಂಬದಿಂದ ನಿರೀಕ್ಷಿಸುವ ವಸ್ತುವು ನಿಮಗೆ ಸಿಗಲಿದೆ. ನಿಮ್ಮ ಏಳಿಗೆಯನ್ನು ಕಂಡು ಅಸೂಯೆ ಪಡುವರು. ನಿಮ್ಮ ರಾಶಿಯಲ್ಲಿಯೇ ಇರುವ ರಾಹುವು ತಲೆ ಸಂಬಂಧಿಸಿದ ಖಾಯಿಲೆಗಳು ಬರಬಹುದು. ನಾಗದೇವರ ಆರಾಧನೆಯನ್ನು ಮಾಡಿ.

ವೃಷಭ: ಆಲಸ್ಯವನ್ನು ಬಿಟ್ಟು ಹೊರಬರಬೇಕಾದ ಅವಶ್ಯಕತೆಯಿದೆ. ಮಾನಸಿಕವೇದನಯನ್ನು ನೀವು ಅನುಭವಿಸುವಿರಿ‌. ವೃತ್ತಿಯ ಬಗ್ಗೆ ಗೊಂದಲಗಳು ಇರಬಹುದು. ಕೃಷಿಯನ್ನು ಅವಲಂಬಿಸಿ ಬದುಕುವವರಿಗೆ ಅಲ್ಪ ಲಾಭವೂ ಸಿಗಲಿದೆ‌. ವಿದ್ಯಾರ್ಥಿಗಳು ಹತ್ತಾರು ಗೊಂದಲಗಳನ್ನು ಇಟ್ಟುಕೊಳ್ಳಲಿದ್ದಾರೆ. ಎಂದೂ ಇರುವ ಶತ್ರುಗಳು ಇಂದು ನಿಮಗೆ ಏನಾನ್ನಾದರೂ ಮಾಡಬೇಕು ಎನ್ನುವ ಹೊಂಚನ್ನು ಹಾಕಬಹುದು. ಇನ್ನೊಬ್ಬರ ಸಹಾಯವನ್ನು ಪಡೆದು ಅಪಾಯದಿಂದ ಪಾರಾಗುವಿರಿ. ಅವಿಶ್ರಾಂತ ಕೆಲಸವು ನಿಮಗೆ ಆಯಾಸವನ್ನು ನೀಡುವುದು. ಧಾರ್ಮಿಕವಾಗಿ ಹಣವನ್ನು ವ್ಯಯಿಸಲಿದ್ದೀರಿ. ಬಂಧುಗಳು ನಿಮ್ಮನ್ನು ಆಡಿಕೊಳ್ಳಬಹುದು. ಏಕಾದಶದಲ್ಲಿರುವ ಶುಕ್ರನು ನಿಮಗೆ ಶುಭವಾರ್ತೆಯನ್ನು, ವಿವಾಹವನ್ನು ಮಾಡಿಸುವನು. ದಶಮದಲ್ಲಿರುವ ಶನಿಯು ನಿಮ್ಮ ಉದ್ಯೋಗದಲ್ಲಿ ಸಾವಧಾನತೆಯನ್ನು ತರುವನು. ಶನಿಯ ಸ್ತೋತ್ರವನ್ನು ಓದಿ.

ಮಿಥುನ: ವ್ಯಾಪಾರದಲ್ಲಿ ನಂಬಿಕೆಗೆ ದ್ರೋಹವಾಗಲಿದೆ. ವಾಹನವನ್ನು ಖರೀದಿಸುವುದು ಅಗತ್ಯವೆನಿಸವಹುದು. ನಿಮ್ಮ ಆಲೋಚನಗಳಿಗೆ ಅದ್ಭುತವಾದ ಪ್ರತಿಕ್ರಿಯೆ ಸಿಗಲಿದೆ. ಮನದಲ್ಲಿ ಅವ್ಯಕ್ತಭಯವು ಕಾಡಲಿದೆ. ದೇಶಗಳಿಗೆ ವಸ್ತುಗಳನ್ನು ಕಳುಹಿಸುವ ಉದ್ಯೋಗವನ್ನು ಮಾಡುತ್ತಿದ್ದರೆ ಅವರಿಗೆ ಲಾಭವಿದೆ. ಕಾರ್ಯದ ನಿಮಿತ್ತ ಅನ್ಯಸ್ಥಳಕ್ಕೆ ಹೋಗಬೇಕಾಗಿ ಬರಬಹುದು. ಅಲ್ಲಿಯೇ ಇಂದಿನ ನಿಮ್ಮ ವಾಸವಾಗಲಿದೆ. ಊಟ, ನಿದ್ರೆ, ಆರೋಗ್ಯದ ಬಗ್ಗೆ ನಿಮ್ಮ ಹೆಚ್ಚಿನ ಗಮನ ಅಗತ್ಯ. ದಾಂಪತ್ಯದ ಉತ್ತಮ ಹಾಗೂ ಖುಷಿಯ ದಿನವನ್ನು ಅನುಭವಿಸುವಿರಿ. ಅಪರಿತರು ನಿಮಗೆ ಸಹಾಯವನ್ನು ಮಾಡಲಿದ್ದಾರೆ. ಏಕಾಂತದಿಂದ ಹೊರಬರುವಿರಿ. ಅಷ್ಟಮದಲ್ಲಿರುವ ಬುಧನು ಸಂಧಿನೋವನ್ನು ಕೊಟ್ಟಾನು. ಔಷಧೋಪಚಾರದಿಂದ ಸರಿ ಮಾಡಿಕೊಳ್ಳಿ. ನಾರಾಯಾಣನಿಗೆ ಪಾಯಸದ ನೈವೇದ್ಯವನ್ನು ಮಾಡಿ.

ಕರ್ಕ: ಇಂದು ತಾಳ್ಮೆಯ ಪರೀಕ್ಷೆ ಎಂದೇ ಹೇಳಬಹುದು. ಸಹನಶೀಲರಾಗಿರುವುದು ಒಳ್ಳೆಯದು. ಸ್ನೇಹದಲ್ಲಿ ಅನ್ಯೋನ್ಯತೆ ಇರಲಿದೆ. ಉದ್ಯಮದಲ್ಲಿ ಉತ್ತಮ ಲಾಭವಾಗುವ ಸಾಧ್ಯತೆ ಇದೆ. ನೀವು ಹಾಕಿಕೊಂಡ ಯೋಜನೆಗಳಿಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ಭೂಮಿಯ ಕ್ರಯ ಮತ್ತು ವಿಕ್ರಯಗಳ ವಿಷಯದಲ್ಲಿ ಲಾಭವನ್ನು ಕಾಣಬಹುದಾಗಿದೆ. ಸಹೋದರರ ನಡುವೆ ಭಿನ್ನಾಭಿಪ್ರಾಯಗಳು ನಡೆಯಬಹುದು. ಕಣ್ಣಿಗೆ ಸಂಬಂಧಿಸಿದ ರೋಗಗಳು ಬರಬಹುದು. ಹತ್ತಾರು ಆಯ್ಕೆಗಳು ಬಂದಾಗ ಗೊಂದಲಗಳು ಸೃಷ್ಟಿಯಾದಾವು. ಕಾಲು ಕೆರೆದು ಯುದ್ಧಕ್ಕೆ ಹೋಗಬೇಡಿ. ಅಷ್ಟಮದಲ್ಲಿರುವ ಸೂರ್ಯನು ಅಪಘಾತವನ್ನು ಮಾಡಿಸಿಯಾನು. ಮೃತ್ಯುಂಜಯನನ್ನು ಸ್ಮರಿಸಿ.

ಸಿಂಹ: ಮನಸ್ಸಿನ ಶಾಂತಿಗೆ ಬೇಕಾದ ಯೋಗಾದಿಗಳನ್ನು ಮಾಡುವಿರಿ. ಗೃಹನಿರ್ಮಾಣಕ್ಕೆ ಬೇಕಾದ ಉಪಕರಣಗಳು ಲಭ್ಯವಾಗುತ್ತವೆ. ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಬೇಡಿ. ಇಂದು ಮಾಡಬೇಕೆಂದು ಯೋಜಿಸಿಕೊಂಡಿರುವ ಕೆಲಸ ಪಟ್ಟಿಯು ಮುಗಿಯದಂತೆ ಕಾಣದು. ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಕಾರಣಾಂತರಗಳಿಂದ ಖರ್ಚು ಹೆಚ್ಚಾಗಬಹುದು. ಹಿತಶತ್ರುಗಳು ಕತ್ತಿಯನ್ನು ಮಸೆಯುತ್ತಲೇ ಇದ್ದಾರು. ಪತಿ-ಪತ್ನಿಯರ ನಡುವೆ ವಿರಸಭಾವವು ಏಳಬಹುದು. ಮನಸ್ಸು ಹೇಳಿದಂತೆ ಕೇಳದೇ ಸಮಾಧಾನದಿಂದ ಇರಿ. ನಿಮಗೆ ಬೇಕಾದ ಮಾಹಿತಿಯನ್ನು ಸರಿಯಾದ ಕಡೆಯಿಂದ ಪಡೆಯಿರಿ. ಅಷ್ಟಮದ ಶುಕ್ರನು ನಿಮಗೆ ಆರೋಗ್ಯಸಂಬಂಧಿ ವಿಚಾರದಲ್ಲಿ ಖರ್ಚು ಮಾಡಿಸುವನು. ದುರ್ಗೆಯನ್ನು ಸ್ಮರಿಸಿ.

ಕನ್ಯಾ: ನಿಮಗಿಂದು ತಾಯಿಯಿಂದ ಪ್ರಶಂಸೆ ಸಿಗಲಿದೆ. ಬಂದ ಹಣವೆಲ್ಲ ಖಾಲಿಯಾಗಿ ಹೋಗುವುದು. ನಿಮಗೆ ನಿಮ್ಮವರು ಸಹಾಯ ಮಾಡುವವರಿದ್ದಾರೆ. ಕಛೇರಿಯ ಕಾರ್ಯಕ್ಕೆಂದು ದೂರದ ಊರಿಗೆ ಹೋಗುವವರಿದ್ದೀರಿ‌. ವಾಹನದಿಂದ ತೊಂದರೆ ಇರಲಿದೆ. ಸ್ನೇಹಿತರು ಮಾಡಿದ ಕೆಟ್ಟ ಕೆಲಸದಿಂದ ನಿಮಗೆ ಕಂಟಕವು ಬರಬಹುದು. ಲೇವಾದೇವಿಯ ವ್ಯವಹಾರದಲ್ಲಿ ತೊಡಗಿದ್ದರೆ ನಷ್ಟವನ್ನು ಅನುಭವಿಸುವಿರಿ. ವಿದ್ಯಾಭ್ಯಾಸಕ್ಕೆಂದು ಪರ ಊರಿಗೆ ಹೋಗುವವರಿದ್ದೀರಿ. ನಿಮ್ಮ ಆತ್ಮೀಯ ಸ್ವಭಾವವು ನಿಮ್ಮವರಿಗೆ ಇಷ್ಟವಾಗುವುದು. ದೂರದ ಊರಿಗೆ ದಂಪತಿಸಹಿತ ಪ್ರಯಾಣ ಮಾಡುವಿರಿ. ಹೊಸ ವಸ್ತುಗಳನ್ನು ಖರೀದಿಸುವಿರಿ. ಸಪ್ತಮದ ಶುಕ್ರ ಹಾಗೂ ಗುರುವಿನಿಂದ ಅಲ್ಪ ಗೌರವವೂ ಧನನಷ್ಟವೂ ಆಗಲಿದೆ. ನಾಗಾರಾಧನೆಯನ್ನು ಮಾಡಿ.

ತುಲಾ: ಆಸ್ತಿಯ ವಿಚಾರದಲ್ಲಿ ನಿಮಗೆ ಮೋಸವಾಗಬಹುದು. ಶತ್ರುಗಳು ನಿಮ್ಮ ಸೋಲನ್ನು ನೋಡುತ್ತಾ ಕುಳಿತಿದ್ದಾರೆ. ಆಲಸ್ಯದಿಂದ ಇಂದು ನಿಮ್ಮ ದಿನವಿರಲಿದೆ. ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಇನ್ನೊಬ್ಬರ ವ್ಯವಹಾರವನ್ನು ಕೆಡಿಸಲು ಹೋಗಿ ಅಪಮಾನವನ್ನು ಅನುಭವಿಸುವಿರಿ. ಕಲಹವನ್ನು ಮಾಡಿಕೊಳ್ಳಲಿದ್ದೀರಿ. ಚೆನ್ನಾಗಿ ಮಾತನಾಡುತ್ತೇನೆಂದು ಏನನ್ನಾದರೂ ಹೇಳಿ ಬೇರೆಯವರಿಗೆ ನೋವನ್ನು ಕೊಡಬೇಡಿ. ಬಾಯ್ಚಪಲಕ್ಕೆ ಬೇರೆಯವರು ನೋವುಣ್ಣುವರು. ಸದಾ ನಗುಮುಖದಿಂದ ಇರಿ. ವ್ಯಾಪರ ಸುಗಮವಾಗಿ ಸಾಗುವುದು. ನಿಶ್ಚಿಂತೆಯಿಂದ ನಿದ್ರಿಸಬಹುದು. ಮನೆಯಿಂದ ದೂರವಿರುವ ಯೋಚನೆ ಮಾಡುವಿರಿ. ಗೋಪೂಜೆ ಮಾಡಿ ಗೋಗ್ರಾಸವನ್ನು ಕೊಡಿ‌.

ವೃಶ್ಚಿಕ: ಆರ್ಥಿಕತೆ ಇಂದು ಸ್ವಲ್ಪ ಇಳಿಮುಖವಾಗಲಿದೆ. ನಿಮಗಿಂದು ಹೊಸ ಸಮಸ್ಯೆಗಳು ಬರಬಹುದು. ಮಾತುಗಳಿಂದ ಸಾಧಿಸಲಾಗದ್ದನ್ನು ಮೌನದಿಂದ ಸಾಧಿಸುವಿರಿ. ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ಜಾಗರೂಕರಾಗಿ ಇರಿ. ಸಾಲವನ್ನು ಕೊಟ್ಟವರು ಇಂದು ಪೀಡಿಸಲಿದ್ದಾರೆ. ವ್ಯವಸ್ಥಾಪಕರಾಗಿದ್ದರೆ ನಿಮ್ಮ ಕೆಲಸವು ಮೇಲಧಿಕಾರಿಗಳಿಗೆ ಸಂತಸ ನೀಡುವುದು. ಹೊಸವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡಿ. ಸಮಯ ನೋಡಿ ಪ್ರೇಮವಿವಾಹದ ಪ್ರಸ್ತಾಪ ಮಾಡಿ. ಮನೆಯಲ್ಲಿ ಒಪ್ಪುತ್ತಾರೆ. ಆಪ್ತರನ್ನು ಕಳೆದುಕೊಳ್ಳಬೇಕಾಗಬಹುದು. ಯಾವ ಹೊಸ ಕೆಲಸವನ್ನು ಮಾಡುವಾಗಲೂ ನೋಡಿ ಮುಂದಡಿ ಇಡಿ. ಷಷ್ಠದಲ್ಲಿರುವ ರಾಹುವು ದೀರ್ಘಕಾಲದ ರೋಗವನ್ನು ನಾಶಮಾಡುವನು. ಖದಿರವೃಕ್ಷಕ್ಕೆ ಪ್ರದಕ್ಷಿಣೆ ಬನ್ನಿ.

ಧನು: ಇಂದು ಹತ್ತಾರು ಕೆಲಸಗಳಿದ್ದು ಬಹಳ ವಿಳಂಬವಾಗುವುದು. ಮಕ್ಕಳಿಂದ ಪ್ರೀತಿ ದೊರೆಯುವುದು. ನಿಮ್ಮ ಕಾರ್ಯಕ್ಕೆ ಅಪರಿಚಿತರ ಸಹಾಯ ದೊರೆಯುವುದು. ಮನೆಯಲ್ಲಿ ಕಲಹವೇರ್ಪಡಬಹುದು. ಸಮಾಜದಲ್ಲಿ ನಿಮ್ಮನ್ನು ಗುರುತಿಸಿ ಗೌರವವನ್ನು ಕೊಡುವರು. ಆಟ, ಓಟ, ಓದಿನಲ್ಲಿ ಆಸಕ್ತಿ ಇರಲಿದೆ. ಮಕ್ಕಳು ನಿಮ್ಮನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಆತುರದ ನಿರ್ಧಾರಕ್ಕೆ ಹೋಗಬೇಡಿ. ಸಮಯಕ್ಕಾಗಿ ಕಾಯಿರಿ. ಎಲ್ಲವನ್ನೂ ಕಾಲವೇ ತಿಳಿಸುತ್ತದೆ. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಮಾಡುತ್ತಿರುವ ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ಓದಿನೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರಿ. ಜ್ವರಬಾಧೆಯಿಂದ ಬಳಲಲಿದ್ದೀರಿ. ದ್ವಿತೀಯದಲ್ಲಿರುವ ಬುಧನು ಸಹೋದರನಿಂದ ಸಂಪತ್ತನ್ನು ಕೊಡಿಸುವನು. ಶಸ್ತ್ರಚಿಕಿತ್ಸೆಯಾಗುವ ಸಾಧ್ಯತೆ ಇದೆ. ತೊಂದರೆ ಆಗದಂತೆ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.

ಮಕರ: ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇಂದು ನೀವು ದೇವರ ಮೊರೆ ಹೊಗುವಿರಿ. ಹೂಡಿಕೆಗೆ ಸಕಾಲವಲ್ಲ‌. ಭೂಮಿಯ ವ್ಯವಹಾರವನ್ನು ನೋಡಿಕೊಳ್ಳುವವರಿಗೆ ಅಧಿಕ ಲಾಭವಿದೆ. ಪುರಾತನ ದೇವಾಲಯದ ದರ್ಶನವನ್ನು ಮಾಡಲಿದ್ದೀರಿ. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಬಿಡುವತ್ತ ಯೋಜನೆಗಳನ್ನು ರೂಪಿಸಿಕೊಳ್ಳುವಿರಿ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಸಮಾಧಾನದಿಂದ ಅವರಿಗೆ ಉತ್ತರಕೊಟ್ಟು ಕೆಲವು ದಿನಗಳ ಅನಂತರ ಪಾವತಿಸುವೆನು ಎಂದು ಹೇಳಿ. ಆಮೆಯ ಗತಿ ಸಾಗುವ ಬದುಕನ್ನು ಕಂಡು ನಿರಾಶರಾಗುವುದು ಬೇಡ. ತಂದೆ ಹಾಗೂ ಮಕ್ಕಳ ನಡುವೆ ಮನಸ್ತಾಪ ಉಂಟಾಗುವುದು. ರಾಮನ ಧ್ಯಾನ ಮಾಡಿ.

ಕುಂಭ: ಇನ್ನೊಬ್ಬರ ಮಾತಿನ ಭಾವವನ್ನು ಅರಿತು ಉತ್ತರಿಸಿ. ಕಛೇರಿಯಲ್ಲಿ ಅಪಮಾನವಾಗುವ ಸಂದರ್ಭಗಳು ಬರಬಹುದು. ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ದೀರ್ಘಪ್ರಯಾಣವನ್ನು ಇಚ್ಛಿಸುವ ನೀವು ಆರೋಗ್ಯದ ಮೇಲೂ ಗಮನವಿರಿಕೊಳ್ಳಿ. ಯಾರದ್ದೋ ಮಾತನ್ನು ಕೇಳಿ ಕೆಲಸಗಳನ್ನು ಮಾಡಬೇಡಿ. ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಹಿರಿಯರಿಂದ ಸಂಪತ್ತು ಸಿಗಬಹುದು ಅಥವಾ ಉತ್ತಮಮಾರ್ಗದಿಂದ ಬರುವ ಸಂಪತ್ತು ನಿಮ್ಮನ್ನು ಖುಷಿಯಾಗಿಡಲಿದೆ. ಸಾಲಬಾಧೆಯಿಂದ ಮುಕ್ತರಾಗಲು ಯೋಜನೆ ರೂಪಿಸುವಿರಿ. ಸ್ವಾಭಿಮಾನಕ್ಕೆ ಧಕ್ಕೆಯಾಗಬಹುದು. ಮನಶ್ಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳಿ. ಚಂದ್ರನು ನಿಮ್ಮ ಮನಸ್ಸನ್ನು ಆಡಿಸುವನು‌. ಧ್ಯಾನದಿಂದ ಮನಸ್ಸು ನಿಯಂತ್ರಿಸಿ.

ಮೀನ: ಮಲಿನ ಬಟ್ಟೆಗಳನ್ನು ಧರಿಸುವಿರಿ. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಪ್ರಗತಿಯನ್ನು ಕಾಣುವರು. ದೀರ್ಘಕಾಲದ ಬಂಧಗಳು ಮುಕ್ತಾಯವಾಗುವುದು. ಸ್ತ್ರೀಯರಿಗೆ ಶುಭವಾರ್ತೆಯೊಂದು ಬರಲಿದೆ. ಅಂಜಿಕೆಯಿಲ್ಲದೇ ನೀವು ಮಾಡುವ ಕಾರ್ಯದಲ್ಲಿ ಮುನ್ನುಗ್ಗಿ. ಆರೋಗ್ಯವಾಗಿದ್ದರೆ ಎಂತಹ ಕಾರ್ಯವನ್ನೂ ಉತ್ತಮ ಆರೋಗ್ಯವಿದ್ದರೆ ಏನಾದರೂ ಸಾಧಿಸಬಹುದು. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ಶುಭಕಾರ್ಯಗಳಿಗೆ ಆಹ್ವಾನ ಬರಲಿದೆ. ಯಾರಾದರೂ ಹೊಗಳಿದರೆ ಹಿಗ್ಗಬೇಡಿ. ಕೊಡುಕೊಳ್ಳುವ ವ್ಯವಹಾರದಲ್ಲಿ ಬೇಸರವಾಗಬಹುದು. ವಿವಾಹದ ಮಾತುಕತೆ ನಡೆಯಬಹುದು. ಗುರುವಿನ ದರ್ಶನವನ್ನು ಪಡೆದು ಮುಂದುವರಿಯಿರಿ.

-ಲೋಹಿತಶರ್ಮಾ ಇಡುವಾಣಿ