Nitya Bhavishya: ಈ ರಾಶಿಯವರು ಆತುರದ ನಿರ್ಧಾರವನ್ನು ತೆಗದುಕೊಳ್ಳಬೇಡಿ
2023 ಫೆಬ್ರವರಿ 22 ಬುಧವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಫೆಬ್ರವರಿ 22ರ ಬುಧವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಶತಭಿಷಾ/ಪೂರ್ವಾಭಾದ್ರ, ಯೋಗ: ಸಾಧ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ-54 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 37 ನಿಮಿಷಕ್ಕೆ. ರಾಹು ಕಾಲ 12:46-17:10ರವರೆಗೆ, ಯಮಘಂಡ ಕಾಲ 08:51-09:51 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 11:18-12:46ರವರೆಗೆ
ಮೇಷ: ಪೂರ್ವಯೋಜಿತವಾಗಿ ಕಾರ್ಯಗಳನ್ನು ಮಾಡಿಕೊಂಡಿದ್ದರೆ ಅನಾಯಾಸವಾಗಿ ಕೆಲಸಗಳು ಮುಕ್ತಾಯವಾಗುವುವು. ಸ್ವ ಉದ್ಯೋಗವಿದ್ದರೆ ಆದಾಯವೂ ಅಧಿಕವಾಗುವುದು. ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣವು ವ್ಯಯವಾಗುವ ಸಾಧ್ಯತೆ ಇದಡ. ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನೂ ನೆಮ್ಮದಿಯನ್ನೂ ನೀಡುತ್ತದೆ. ಹಾಸ್ಯದಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ವೈದ್ಯರು ಹೇಳಿದಂತೆ ಸಕಾಲಕ್ಕೆ ಬೇಕಾದ ಔಷಧೋಪಚಾರಗಳನ್ನು ಮಾಡಿ. ನೀವು ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನಿಮ್ಮ ಹತ್ತಿರದರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಗುಣಗಳನ್ನು ಗುರುತಿಸುವ ವಿಧಾನ ತಿಳಿದಿದೆ. ಏಕಾದಶದಲ್ಲಿರುವ ರವಿಯು ನಿಮಗೆ ತಂದೆಯ ಕಡೆಯಿಂದ ಲಾಭವನ್ನು ಮಾಡಿಸುವನು. ಸುಬ್ರಹ್ಮಣ್ಯನ ಸ್ಮರಣೆಯನ್ನು ದಿನವೂ ಮಾಡಿ.
ವೃಷಭ: ದೂರದ ಊರಿಗೆ ಪ್ರಯಾಣ ಹೋಗುವ ಸಾಧ್ಯತೆ ಇದೆ. ಆತುರದ ನಿರ್ಧಾರವನ್ನು ತೆಗದುಕೊಳ್ಳಬೇಡಿ. ಪ್ರತ್ಯಕ್ಷವಾಗಿ ಕಂಡಿದ್ದು ಮಾತ್ರ ಸತ್ಯವಲ್ಲವೆಂಬುದನ್ನು ನೀವು ಅರಿತುಕೊಳ್ಳಬೇಕು. ಆರ್ಥಿಕತೆಯು ಸ್ವಲ್ಪ ದುರ್ಬಲಗೊಳ್ಳುವುದು. ಉತ್ತಮ ಆಹಾರವನ್ನು ಸೇವಿಸುವಿರಿ. ಕುಟುಂಬದವರೇ ಆದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವಿರಿ. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುವು. ಆಫೀಸ್ ನಲ್ಲಿ ಒತ್ತಡದ ವಾತಾವರಣವಿರುವುದು. ಸಮಾಧಾನದಿಂದ ನಿಭಾಯಿಸಿ. ಕೆಲಸದ ಒತ್ತಡವಿರಬಹುದು. ಅನಿವಾರ್ಯವಾದ ಕೆಲಸಗಳನ್ನು ಮಾಡಿ ಮುಗಿಸಿ. ನಾಗದೇವರಿಗೆ ಹಾಲಿನ ಅಭಿಷೇಕ ಮಾಡಿ. ನಿಮಗೆದುರಾದ ತೊಂದರೆಗಳು ದೂರವಾಗುವುವು.
ಮಿಥುನ: ನೀವಿಂದು ಆರ್ಥಿಕವಾಗಿ ಸಬಲರು. ಅನಿರೀಕ್ಷಿತ ಧನಲಾಭವಾಗಲಿದೆ. ಅತಿಯಾಗಿ ಯಾವುದಕ್ಕೂ ತಲೆ ಹಾಕಲು ಹೋಗಬೇಡಿ. ನಿಃಸ್ವಾರ್ಥ ಸೇವೆಯಲ್ಲಿ ಸಮಯವನ್ನು ಕಳೆಯಿರಿ. ಅನೇಕ ಶುಭಸೂಚನೆಗಳು ನಿಮ್ಮ ಕಾರ್ಯಕ್ಕೆ ಒಳ್ಳೆಯದನ್ನೇ ಮಾಡಲಿದೆ. ನಿಮ್ಮನ್ನು ಗಮನಿಸುವವರು ಹತ್ತಾರು ಮಂದಿಯಿರುತ್ತಾರೆ. ನಿಮ್ಮ ಕೆಲಸವು ನಿಮಗೆ ತೃಪ್ತಿಯನ್ನು ಕೊಡುವುದು. ನೀವು ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ಹಣದಕ್ಕೆ ಸಂಬಂಧಿಸಿದ ತೊಂದರೆಗೆ ಮನೆಯಿಂದ ಸಹಾಯ ದೊರೆಯಬಹುದು. ನಿಮ್ಮವರನ್ನು ಮಾತನಾಡಿಸಿ, ಅವರೊಂದಿಗೆ ಕೆಲವು ಮಾತನಾಡಿ. ಸಂಬಂಧಗಳು ಸುಂದರವಾಗಿರಲಿ. ಸಂಬಂಧಿಕರ ಜೊತೆ ವ್ಯವಹಾರವನ್ನು ಮಾಡಿದ ಕಾರಣ ಇಂದು ಸಂಬಂಧ ದೂರವಾಗುವುದು. ಗೋಗ್ರಾಸವನ್ನು ಕೊಟ್ಟು ಭೋಜನ ಮಾಡಿ.
ಕಟಕ: ಸ್ತ್ರೀಯರಿಗೆ ಇಂದು ಮನ್ನಣೆ ಸಿಗಲಿದೆ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕುಗ್ಗಿಸಬಹುದು. ನೆರಮನೆಯವರ ಜೊತೆ ವೈಮನಸ್ಯ ಬೆಳೆಯಬಹುದು. ಮನೆಯಲ್ಲಾಗಲಿ ಕಛೇರಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸತ್ತಾರೆ. ಅನಿರೀಕ್ಷಿತ ಸಂಪತ್ತು ವ್ಯಯವಾಗಲಿದೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಕಲಾತ್ಮಕ ಮತ್ತು ಸೃಜನಶೀಲವ್ಯಕ್ತಿತ್ವಕ್ಕೆ ಬಹಳಷ್ಟು ಮೆಚ್ಚುಗೆ ಬರಲಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಫಲವು ಸಿಗಲಿದೆ. ಬಾಲ್ಯದ ನೆನಪುಗಳು ಇಂದು ನಿಮ್ಮನ್ನು ಕಾಡಬಹುದು. ಒಳ್ಳೆಯ ವಿಚಾರಗಳನ್ನು ಕೇಳಲು ಇಚ್ಛಿಸುವಿರಿ. ಸದಾಶಿವನ ಸ್ತೋತ್ರವನ್ನು ಮಾಡಿ. ಅತಿಥಿಗಳಿಗೆ ಭೋಜನವನ್ನು ಮಾಡಿಸಿ.
ಸಿಂಹ: ಹಳೆಯ ಗೆಳೆಯರ ಭೇಟಿಯಾಗಲಿದೆ. ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಲಲಿತಕಲೆಗಳನ್ನು ಅಭ್ಯಾಸಮಾಡುವಲ್ಲಿ ಮನಸ್ಸು ಮಾಡುವಿರಿ. ಕಲ್ಪನೆಯಂತೆ ಏನೂ ನಡೆಯದು ಎನ್ನುವ ಸತ್ಯದರ್ಶನವಾಗಬಹುದು. ಕ್ರೀಡೆಯಲ್ಲಿ ಮನಸ್ಸುಳ್ಳವರಾಗುವಿರಿ. ದೂರಪ್ರಯಾಣ ಸುಖಕರವಾಗಿದೆ. ಸರ್ಕಾರಿ ಕೆಲಸಗಳು ನಿಧಾನಗತಿಯಲ್ಲಿರುವುದು. ಸಿಟ್ಟಿನನ್ನು ಕಡಿಮೆಮಾಡಿಕೊಳ್ಳಿ. ನಿಮ್ಮ ಹಾದಿಯನ್ನು ನೋಡಿಕೊಳ್ಳುವ ಸಮಯವಿದಾಗಿರುತ್ತದೆ. ನಿಮ್ಮ ಆಲೋಚನೆಗಳನ್ನು ಇತರೊಂದಿಗೆ ಹಂಚಿಕೊಂಡರೆ ನಿಮ್ಮ ಸ್ಥಾನಕ್ಕೆ ಚ್ಯುತಿ ಬಂದೀತು. ತಾಂತ್ರಿಕ ಉದ್ಯೋಗದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಗುರುವಿನ ದರ್ಶನ, ಆಶೀರ್ವಾದಿಂದ ನಿಮ್ಮ ಆಪತ್ತುಗಳು ದೂರಾಗಬಹುದು.
ಕನ್ಯಾ: ಹೂಡಿಕೆ ಮಾಡುವ ಮನಸ್ಸು ಮಾಡಲಿದ್ದೀರಿ. ಕೋಪವನ್ನು ಕಡಿಮೆ ಮಾಡಿಕೊಳ್ಳುವುದುದು ಉತ್ತಮ. ಟೀಕೆಗಳಿಗೆ ಕಿವಿಕೊಡುವ ಅವಶ್ಯಕತೆ ಇಲ್ಲ. ನಿಮ್ಮ ನಡೆ ಹಾಗು ನುಡಿಗಳು ವಿರೋಧದಂತೆ ಭಾಸವಾಗಬಹುದು. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಯತ್ನಿಸಿ. ಮನಸ್ಸು ಶಕ್ತಿಯನ್ನು ಉಲ್ಬಣಗೊಳಿಸಿಕೊಳ್ಳುವುದು. ನಕಾರಾತ್ಮಕತೆ ದೂರವಾಗುವುದು. ಹಣದ ಸಮಸ್ಯೆಗಳು ಎದುರಾಗಬಹುದು. ಪರಿಹಾರದ ದಾರಿಗಳು ಆ ಕ್ಷಣದಲ್ಲಿ ಸ್ಫುರಿಸುವುದು. ವಿಶ್ವಸಘಾತಕ ಕಾರ್ಯಗಳಿಗೆ ಮುನ್ನುಗ್ಗದಿರಿ. ಪೆಟ್ಟು ತಿಂದರೆ ಮತ್ತೇಳುವುದು ಕಷ್ಟ. ಕಲಹದಲ್ಲಿ ಮಧ್ಯಸ್ತಿಕೆಯನ್ನು ವಹಿಸುವವುದಕ್ಕೆ ಹೋಗುವುದು ಬೇಡ. ಕೃಷಿಯಿಂದ ಲಾಭವು ಆಗಲಿದೆ. ಸುಬ್ರಹ್ಮಣ್ಯನ ಆರಾಧನೆಯಿಂದ ನಿಮಗೆ ಶ್ರೇಯಸ್ಸು ಆಗಲಿದೆ.
ತುಲಾ: ಮೇಲಧಿಕಾರಿಗಳ ವರ್ತನೆಯಿಂದ ಬೇಸರವುಂಟಾಗುವುದು. ಉದ್ಯಮವನ್ನು ನಡೆಸುತ್ತಿದ್ದರೆ ಹೊಸ ಉತ್ಪನ್ನಗಳನ್ನು ಮಾಡಲು ಯೋಚಿಸುವಿರಿ. ವ್ಯಾಪಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ಅನ್ನಿಸಬಹುದು. ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ನಿಮ್ಮ ಜೀವನವನ್ನು ಲಘುವಾಗಿ ಕಾಣುವುದು ಬೇಡ. ಕಾಲವೇ ಅದಕ್ಕೆ ಉತ್ತರಿಸಬೇಕು. ಅಲ್ಲಿಯ ತನಕ ತಾಳ್ಮೆಯಿಂದ ಇರಬೇಕಾದ ಕರ್ತವ್ಯವಿದೆ. ಒಳ್ಳೆಯವರ ಸಂಗ ಸಿಗಬಹುದು ಅಥವಾ ಒಳ್ಳೆಯ ಪುಸ್ತಕವನ್ನು ತಂದು ಓದಿ. ವಿವಾಹಕ್ಕೆ ಅನುಕೂಲಕರಣ ವಾತಾವರಣ ಇರದು. ತಾಳ್ಮೆಯನ್ನು ಇಟ್ಟುಕೊಳ್ಳಿ. ದುರ್ಗೆಯನ್ನು ಆರಾಧಿಸಿ ಸಂಕಟವನ್ನು ಪರಿಹರಿಸಿಕೊಳ್ಳಿ.
ವೃಶ್ಚಿಕ: ಆಹಾರದ ವ್ಯತ್ಯಾಸದಿಂದ ನಿಮ್ಮ ಆರೋಗ್ಯವು ವ್ಯತ್ಯಾಸವಾಗಬಹುದು. ಸಿಕ್ಕವಸ್ತುವನ್ನು ಸಂತೃಪ್ತಿಯಿಂದ ಅನುಭವಿಸುವ ಜಾಯಮಾನವನ್ನು ರೂಢಿಸಿಕೊಳ್ಳುವಿರಿ. ನೂತನ ಆಭರಣಗಳನ್ನು ಖರೀದಿಸುವಿರಿ. ಇನ್ನೊಬ್ಬರನ್ನು ಗೌರವಿಸುವ ಅಭ್ಯಾಸದಿಂದ ನಿಮಗೆ ಶ್ರೇಷ್ಠವಾದ ಮಾರ್ಗವು ತೆರೆದುಕೊಳ್ಳಬಹುದು. ಸ್ಥಾನವನ್ನೂ, ಬುದ್ಧಿಯನ್ನೂ ಸ್ಥಳವನ್ನೂ ಸಂದರ್ಭವನ್ನೂ ವ್ಯಕ್ತಿಯನ್ನೂ ನಗಣ್ಯಗೊಳಿಸಬೇಡಿ. ನಿಮ್ಮ ಕುಟುಂಬದ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ. ನೀವು ಆರಾಮಾಗಿದ್ದೀರಿ ಎಂದು ತೋರಿಸಲು ಹೋಗಬೇಡಿ. ನಿಮ್ಮ ಮೇಲೆ ಕೆಟ್ಟ ದೃಷ್ಟಗಳು ಬೀಳಬಹುದು. ವಿದೇಶದ ಕಂಪನಿಗಳಿಂದ ಕರೆ ಬರಬಹುದು. ಮಕ್ಕಳ ಪ್ರೀತಿ ಲಭ್ಯ. ಕುಲದೇವರ ಆರಾಧನೆ ಮಾಡಿ.
ಧನು: ಇಷ್ಟು ದಿನ ಇದ್ದ ನಿರುದ್ಯೋಗವು ಹೋಗಲಿದೆ. ಮಾತುಗಳಿಂದ ಕಿರಿ ಕಿರಿಯಾಗಬಹುದು. ದಾಂಪತ್ಯದಲ್ಲಿ ಸಣ್ಣ ಒಡಕು ಮೂಡಬಹುದು. ಯಾರಿಂದ ಸಹಾಯವನ್ನು ಬಯಸದ ನೀವು ಇಂದು ಅನಿವಾರ್ಯವಾಗಿ ಅವರನ್ನೇ ಹೋಗಿ ಕೇಳುವ ಸ್ಥಿತಿ ಎದುರಾದೀತು. ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿ, ನೀರಾಗಿ ಹನಿ ನೀರ ಸುರಿಸುವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ. ಉದ್ಯೋಗದಲ್ಲಿ ಭಡ್ತಿ ಸಿಗಲಿ. ಏಕಾದಶದಲ್ಲಿರುವ ಕೇತುವು ಆಧರ್ಮ ಮಾರ್ಗದಿಂದ ಹಣವು ಸಂಪಾದನೆಯನ್ನು ಮಾಡಿಸುವನು.
ಮಕರ: ಹಣದ ವಿಚಾರದಲ್ಲಿ ಎಚ್ಚರವಹಿಸಿ. ಮೋಸ ಹೋಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸಗಳು ನಿಧಾನವಾಗುವುದು. ವಿದ್ಯಾರ್ಥಿಗಳಿಗೆ ಅಪವಾದ ಬರುವ ಸಾಧ್ಯತೆ ಇದೆ. ಶ್ರದ್ಧೆಯಿಂದ ಅಭ್ಯಾಸದ ಕಡೆ ಗಮನವಿಡಿ. ಅದೇ ಉತ್ತರವಾಗಲಿದೆ. ನಿಮ್ಮ ಎಂದಿನ ನಿಚ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ನಿಮ್ಮ ಕಿವಿ ಮಾತು ಅನೇಕರಿಗೆ ಸ್ಫೂರ್ತಿಯಾಗಬಹುದು. ಒಂದಿಲ್ಲೊಂದು ವಿಷಯಗಳಿಂದ ಸುಖವನ್ನು ಪಡೆಯುವ ನಿಮಗೆ ಮುಂಬರುವ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತೀರಿ. ಶತ್ರುಗಳಿಂದ ಎಚ್ಚರವಾಗಿರಿ. ಕಛೇರಿಯಲ್ಲಿ ಕಾರ್ಯದೊತ್ತಡವಿರಲಿದೆ. ಗೋಗ್ರಾಸವನ್ನು ನೀಡಿ.
ಕುಂಭ: ನಿಮಗನಿಸಿದ್ದನ್ನು ಮಾಡಲು ಹೋಗಿ ಅನಾಹುತಕ್ಕೆ ಸಿಕ್ಕಿಕೊಳ್ಳುವಿರಿ. ಸಮಾರಂಭಗಳಿಗೆ ಹೋಗಲು ಮನಸ್ಸು ಮಾಡುವಿರಿ. ತೀರ್ಥಕ್ಷೇತ್ರಗಳಿಗೆ ಕುಟುಂಬದೊಂದಿಗೆ ಹೋಗುವಿರಿ. ಗೃಹನಿರ್ಮಾಣ ಕೆಲಸವನ್ನು ಆರಂಭಿಸುವಿರಿ. ಇನ್ನು ಕೆಲವರು ಅತಿಯಾದ ಪ್ರಯಾಣದಿಂದ ಆಯಾಸ ಮತ್ತು ಒತ್ತಡಗಳು ನಿರ್ಮಾಣವಾಗುವುವು. ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು. ಹೊಸ ಕೆಲಸವನ್ನು ಆರಂಭಿಸುವ ಹುನ್ನಾರ ನಡೆಸುವಿರಿ. ನಂಬುಗೆಯನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕು. ನಿಮ್ಮನ್ನು ಇಷ್ಟಪಟ್ಟವರೊಡನೆ ಸಮಯವನ್ನು ಕಳೆಯಿರಿ. ನ್ಯಾಯಾಲಯಕ್ಕೆ ಹೋಗುವಬೇಕಾಗಬಹುದು. ಶ್ರೀರಾಮನ ಆರಾಧನೆ ಮಾಡಿ.
ಮೀನ: ಸಾಮಾಜಿಕ ಗೌರವವು ನಿಮಗೆ ಲಭ್ಯವಾಗಲಿದೆ. ಸರ್ಕಾರದ ಉದ್ಯೋಗಕ್ಕೆ ಸೇರಲು ಅವಕಾಶವು ಸಿಗಬಹುದು. ನಿಮಗೆ ಗೊತ್ತಿಲ್ಲದೇ ದೈವವೊಂದು ನಿಮ್ಮನ್ನು ಅನುಕೂಲವಾದ ವಾತಾವರಣಕ್ಕೆ ಕರೆದೊಯ್ಯುತ್ತಿರುತ್ತದೆ. ಅದನ್ನು ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳುವುದು ಉತ್ತಮ. ಕಳೆದುಹೋದ ಬಗ್ಗೆ ನೆನೆನೆನೆದು ಕೊರಗಿ ಕಣ್ಣೀರಾಗುವುದಕ್ಕಿಂತ ಉತ್ತಮ ಆಲೋಚನೆಗಳಿಂದ ಮುಂದಿನದನ್ನು ಚಿಂತಿಸಿ. ದಾರಿ ಸುಗಮ. ಗೌರವ, ಸಮ್ಮಾನಗಳು ನಿಮ್ಮ ಸೇವೆಗೆ, ಕಾರ್ಯಗಳಿಗೆ ಬರಲಿವೆ. ದೂರದ ಪ್ರಯಾಣವನ್ನು ಮಾಡಲು ಹೋಗಬೇಡಿ. ವಾತ ಸಂಬಂಧಿ ರೋಗ ಬರಬಹುದು. ಮಹಾವಿಷ್ಣುವಿನ ಸ್ತೋತ್ರ ಮಾಡಿ.
-ಲೋಹಿತಶರ್ಮಾ, ಇಡುವಾಣಿ