Nitya Bhavishya: ನಿಮ್ಮ ಮಕ್ಕಳ ಯಶಸ್ಸಿನ ಬಗ್ಗೆ ಹೆಮ್ಮೆ ಪಡುತ್ತೀರಿ, ಅವರ ವೃತ್ತಿ ಜೀವನದ ಬಗ್ಗೆ ನಿರ್ಧಾರ ಕೈಗೊಳ್ಳಿ

2023 ಫೆಬ್ರವರಿ 25ರ ಶನಿವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ನಿಮ್ಮ ಮಕ್ಕಳ ಯಶಸ್ಸಿನ ಬಗ್ಗೆ ಹೆಮ್ಮೆ ಪಡುತ್ತೀರಿ, ಅವರ ವೃತ್ತಿ ಜೀವನದ ಬಗ್ಗೆ ನಿರ್ಧಾರ ಕೈಗೊಳ್ಳಿ
ಪ್ರಾತಿನಿಧಿಕ ಚಿತ್ರImage Credit source: horoscope.com
Follow us
ಗಂಗಾಧರ​ ಬ. ಸಾಬೋಜಿ
|

Updated on: Feb 25, 2023 | 6:03 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಫೆಬ್ರವರಿ 25ರ ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಭರಣೀ, ಯೋಗ: ಬ್ರಹ್ಮ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ-53 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 38 ನಿಮಿಷಕ್ಕೆ. ರಾಹು ಕಾಲ 09:50-11:18ರವರೆಗೆ, ಯಮಘಂಡ ಕಾಲ 02:14-03:42 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 06:53-08:21ರವರೆಗೆ

ಮೇಷ: ಕೆಲಸದ ಸ್ಥಳದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ವಾತ್ಸಲ್ಯದ ಬಲವಾಗಿರುತ್ತದೆ. ವ್ಯಾಪಾರಸ್ಥರಿಗೆ ಖ್ಯಾತಿಯು ಸಿಗುವುದು. ನೀವು ಬಹಳ ಸಮಯದ ಅನಂತರ ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು. ನೀವು ಧಾರ್ಮಿಕ ಚಟುವಟಿಕೆಗಳಿಗೆ ಸ್ವಲ್ಪ ಹಣವನ್ನು ದಾನ ಮಾಡಬಹುದು. ಹೊಸ ಯೋಜನೆಯನ್ನು ಪ್ರಾರಂಭಿಸಬಹುದು. ಉನ್ನತ ಶಿಕ್ಷಣದಲ್ಲಿ ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ವೃತ್ತಿಜೀವನದಲ್ಲಿ ಮುಂದುವರಿಯಲು ಸಾಕಷ್ಟು ಹೊಸ ಅವಕಾಶಗಳಿವೆ. ಜೀವನದಲ್ಲಿ ಹೆಚ್ಚಿನ ಏರಿಳಿತಗಳು ಇರುವುದಿಲ್ಲ. ಇಡೀ ದಿನ ಅನುಕೂಲಕರವಾಗಿರುತ್ತದೆ. ನಿಮ್ಮ ಅಡೆತಡೆಯ ಕೆಲಸವನ್ನು ಹಠಾತ್ತನೆ ಪೂರ್ಣಗೊಳಿಸುವುದರಿಂದ ನೀವು ಹರ್ಷಿಸುತ್ತೀರಿ. ದ್ವಿತೀಯದ ಕುಜನು ಅನುಕೂಲಕರವಾಗಿರುವನು.

ವೃಷಭ: ನಿಮ್ಮ ಕೆಲಸದ ದಕ್ಷತೆ ಪ್ರಶಂಸಿಸುತ್ತಾರೆ. ನೀವು ಸಮಾರಂಭದಲ್ಲಿ ಭಾಗವಹಿಸಬಹುದು. ನಿಮ್ಮ ಮಕ್ಕಳ ವೃತ್ತಿಜೀವನದ ಬಗ್ಗೆ ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಆತ್ಮವಿಶ್ವಾಸ ಮತ್ತು ತ್ರಾಣವನ್ನು ಹೆಚ್ಚಿಸಲು ನೀವು ಯೋಗ ಮತ್ತು ವ್ಯಾಯಾಮವನ್ನು ಮಾಡಬೇಕು. ವೈಯಕ್ತಿಕ ಸಂಬಂಧದಲ್ಲಿ ಅನ್ನೋನ್ಯತೆ ಹೆಚ್ಚಾಗುತ್ತದೆ. ವ್ಯಾಪಾರ ಪ್ರವಾಸಗಳು ಫಲದಾಯಕವಾಗುತ್ತವೆ. ಸ್ಥಗಿತಗೊಂಡ ವ್ಯಾಪಾರ ಮತ್ತು ವ್ಯವಹಾರವನ್ನು ಮತ್ತೆ ತೆರೆಯಬಹುದು. ವೃತ್ತಿಯ ದೃಷ್ಟಿಕೋನದಿಂದ ಸಮಯವು ಅನುಕೂಲಕರವಾಗಿದೆ. ಆನ್‌ಲೈನ್ ಮಾರ್ಕೆಟಿಂಗ್ ವೃತ್ತಿಪರರಿಗೆ ಈ ದಿನ ಅನುಕೂಲಕರವಾಗಿರುತ್ತದೆ. ನಿಮ್ಮ ವಿದೇಶದ ಪಾಲುದಾರರೊಂದಿಗೆ ನೀವು ಬಲವಾದ ಮೈತ್ರಿಯನ್ನು ಹೊಂದುವಿರಿ. ಗುರು ಹಾಗು ಶುಕ್ರರು ನಿಮಗೆ ಶುಭದಾಯಕರು.

ಮಿಥುನ: ದಿನದ ಆರಂಭದಲ್ಲಿ ನೀವು ಕೆಲವು ಹೊಸ ಉತ್ಸಾಹದಿಂದ ವ್ಯವಹಾರಗಳನ್ನು ನಡೆಸುವಿರಿ. ನಿಮ್ಮ ಶತ್ರುಗಳನ್ನು ನೀವು ಸಂಪೂರ್ಣವಾಗಿ ಸೋಲಿಸುವಿರಿ. ನಿರ್ಧಾರಗಳು ಸರಿ ಎಂದು ಸಾಬೀತುಪಡಿಸುತ್ತವೆ. ಹೊಸ ಆದಾಯ ಮೂಲಗಳು ಸೃಷ್ಟಿಯಾಗಲಿವೆ. ನಿಮ್ಮ ಸೌಮ್ಯಸ್ವಭಾವ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯಕ್ಕಾಗಿ ನೀಮ್ಮನ್ನು ಪ್ರಶಂಸಿಸುವರು. ಸಾಲಗಾರರಿಂದ ನೀವು ಬಾಕಿ ಹಣವನ್ನು ಮರಳಿ ಬರಲಿದೆ. ನಿಮ್ಮ ನಡವಳಿಕೆಯಲ್ಲಿ ನಮ್ರತೆ ಮತ್ತು ಸೌಮ್ಯತೆಯಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಕಾರ್ಯಕ್ಷಮತೆಗಾಗಿ ನೀವು ಬಡ್ತಿ ಮತ್ತು ಸಂಬಳ ಹೆಚ್ಚಳವನ್ನು ಸಹ ಪಡೆಯಬಹುದು. ವಿರುದ್ಧ ಲಿಂಗದ ಜನರು ನಿಮ್ಮಿಂದ ಆಕರ್ಷಿತರಾಗುತ್ತಾರೆ. ದ್ವಾದಶದ ಕುಜ ಹಾಗೂ ಅಷ್ಟಮದ ಇಬ್ಬರೂ ಅನುಕೂಲಕರವಾಗಿಲ್ಲ.

ಕರ್ಕ: ನೀವು ವೃತ್ತಿಜೀವನವನ್ನು ನಡೆಸಲು ಬಯಸಿದರೆ ಹೆಚ್ಚು ಅನುಕೂಲಕರವಾಗಿರುತ್ತದೆ. ನಿಮ್ಮ ಗುರಿಗಳ ಮೇಲೆ ನೀವು ಗಮನಹರಿಸುತ್ತೀರಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬಹುದು. ಮಹಿಳೆಯರು ಖರೀದಿಯ ಬಗ್ಗೆ ಉತ್ಸುಕರಾಗುತ್ತಾರೆ. ರಕ್ತದೊತ್ತಡವಿರುವ ರೋಗಿಗಳ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಸಮಯವನ್ನು ನೀವು ಸದುಪಯೋಗಪಡಿಸಿಕೊಳ್ಳಬೇಕು. ನಿಮ್ಮ ಕೆಲಸದಲ್ಲಿ ನೀವು ಕಡಿಮೆ ಪ್ರಯತ್ನದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವೈವಾಹಿಕ ಜೀವನವು ತುಂಬಾ ಶೃಂಗಾರಮಯವಾಗಿ ಇರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರೊಂದಿಗೆ ನೀವು ಉತ್ತಮ ಹೊಂದಾಣಿಕೆಯನ್ನು ಹೊಂದಿರುತ್ತೀರಿ. ಬಾಲ್ಯ ಸ್ನೇಹಿತರು ಸಿಗಬಹದು. ಮನೆಯಲ್ಲಿ ತಂದೆ ಹಾಗೂ ಮಕ್ಕಳ ನಡುವೆ ಕಲಹವಿರುತ್ತದೆ. ಹನುಮಾನ್ ಚಾಲೀಸ್ ಓದಿರಿ.

ಸಿಂಹ: ಇಂದಿನ ಸಮಯವು ಹೆಚ್ಚು ಅನುಕೂಲವಾಗಿರಲಿದೆ. ದೂರದ ಸ್ಥಳಗಳಿಂದ ನೀವು ಕೆಲವು ಸಂತೋಷಕರ ಸುದ್ದಿಗಳನ್ನು ಪಡೆಯುತ್ತೀರಿ. ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ನಿಮ್ಮ ಕೆಲಸದ ವಿಧಾನವನ್ನು ನೀವು ಬದಲಾಯಿಸಬಹುದು. ಉತ್ಪಾದನೆಗೆ ಸಂಬಂಧಿಸಿದ ಕೆಲಸಗಳು ಉತ್ತಮ ವೇಗವನ್ನು ಪಡೆಯುತ್ತವೆ. ವಿದೇಶ ಪ್ರವಾಸದ ಸಾಧ್ಯತೆ ಇದೆ. ವ್ಯವಹಾರದಲ್ಲಿ ನಿಮ್ಮ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಮೃದ್ಧಿ ಇರುತ್ತದೆ. ಮಕ್ಕಳ ಯಶಸ್ಸಿನಿಂದ ನೀವು ಉತ್ಸುಕರಾಗುತ್ತೀರಿ. ನೀವು ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಬಹುದು. ನೀವು ಹೊಸ ಆಸ್ತಿ ಮತ್ತು ವಾಹನವನ್ನು ಖರೀದಿಸುವ ಪ್ರಯತ್ನದಲ್ಲಿ ಇರುವಿರಿ‌. ತೃತೀಯದ ಕೇತುವು ಸಹೋದರರ ನಡುವೆ ಕಲಹವನ್ನು ತರಬಹುದು. ಸ್ವಬುದ್ಧಿಯಿಂದ ಅದನ್ನು ನಿಯಂತ್ರಿಸಿ.

ಕನ್ಯಾ: ಬೆಳಗು ಸಕಾರಾತ್ಮಕ ರೀತಿಯಲ್ಲಿ ಪ್ರಾರಂಭವಾಗುತ್ತದೆ. ಉದ್ಯೋಗದಲ್ಲಿ ಅನುಕೂಲಕರವಾದ ವಾತಾವರಣ ಇರುತ್ತದೆ. ನಿಮ್ಮ ಸಮಯದ ಸದುಪಯೋಗವನ್ನು ಮಾಡಿಕೊಳ್ಳಿ. ನಿಮ್ಮ ಪ್ರೀತಿಪಾತ್ರರ ಸಲಹೆಯನ್ನು ನೀವು ಎಚ್ಚರಿಕೆಯಿಂದ ಆಲಿಸಬೇಕು. ನಿಮ್ಮ ಮಕ್ಕಳ ವಿವಾಹದಲ್ಲಿ ಬರುತ್ತಿದ್ದ ಅಡೆತಡೆಗಳು ದೂರವಾಗುತ್ತವೆ. ನಿಮ್ಮ ಪ್ರೀತಿಯ ಸಂಗಾತಿಯೊಂದಿಗೆ ನೀವು ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ. ಷೇರುಮಾರುಕಟ್ಟೆಯ ವಹಿವಾಟಿಗೆ ಸಮಯ ಅನುಕೂಲಕರವಾಗಿದೆ. ನೀವು ಸಂತೋಷದಿಂದ ಮತ್ತು ತೃಪ್ತಿಯಿಂದ ಇರುವಿರಿ. ನಿಮ್ಮ ಆರೋಗ್ಯವು ಉತ್ತಮವಾಗಿ ಉಳಿಯುತ್ತದೆ. ನಿಮ್ಮ ಖ್ಯಾತಿ ಮತ್ತು ಅಧಿಕಾರ ಹೆಚ್ಚಾಗುತ್ತದೆ. ಸಮಾಜದ ಪ್ರತಿಷ್ಠಿತ ವ್ಯಕ್ತಿಗಳೊಂದಿಗೆ ನೀವು ಬಲವಾದ ಪರಿಚಯವನ್ನು ಮಾಡಿಕೊಳ್ಳುತ್ತೀರಿ. ಪ್ರಾಣಿಗಳಿಂದ ತೊಂದರೆಯಾಗಬಹುದು. ಜಾಗರೂಕರಾಗಿರಿ.

ತುಲಾ: ಕುಟುಂಬದ ವಾತಾವರಣವು ಆನಂದದಾಯಕವಾಗಿರುತ್ತದೆ. ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ವಿದೇಶದಿಂದ ಉದ್ಯೋಗಾವಕಾಶಗಳು ಬರಬಹುದು. ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು. ನೀವು ನಿಮ್ಮ ಸ್ನೇಹಿತರ ಮೇಲೆ ಹೆಚ್ಚು ಅವಲಂಬಿತರಾಗುತ್ತೀರಿ. ಸಂದರ್ಶನಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಇರಲಿದೆ. ಅನುಭವಿಗಳ ಜೊತೆ ಸಮಾಲೋಚಿಸುವುದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ನೀವು ಪ್ರಯತ್ನಗಳನ್ನು ಮಾಡುತ್ತೀರಿ. ನಿಮ್ಮ ನಾಯಕನ ಜೊತೆಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದಿರುತ್ತೀರಿ. ಮಹಿಳಾ ಸ್ನೇಹಿತರು ನಿಮಗೆ ಪ್ರಯೋಜನವನ್ನು ನೀಡುತ್ತಾರೆ. ನೀವು ಕೆಲವು ಆಸ್ತಿಯನ್ನು ಖರೀದಿಸಲು ಪ್ರಯತ್ನಿಸುತ್ತೀರಿ. ಸರ್ಕಾರಿ ನೌಕರರು ಕೆಲಸ-ಸಂಬಂಧಿತ ಒತ್ತಡದಿಂದ ಮುಕ್ತರಾಗುವರು. ಚತುರ್ಥದ ಬುಧನು ಬಂಧುಗಳಿಂದ ಅನುಕೂಲವನ್ನು ಮಾಡಿಸುವನು.

ವೃಶ್ಚಿಕ: ನಿಮ್ಮ ಮಕ್ಕಳ ಯಶಸ್ಸಿನ ಬಗ್ಗೆ ನೀವು ಹೆಮ್ಮೆ ಪಡುತ್ತೀರಿ. ಸ್ಥಿರಾಸ್ತಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಕೆಲವು ಪ್ರಮುಖ ವ್ಯವಹಾರ ಕಾರ್ಯಗಳು ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ನೀವಿಂದು ಸ್ಫೂರ್ತಿದಾಯಕ ಮತ್ತು ಆದರ್ಶವ್ಯಕ್ತಿಯಾಗಿ ಕಾಣುವಿರಿ. ಇಂದು ಹಿರಿಯರಿಂದ ಪ್ರೇರಣೆ ಮತ್ತು ಆಶೀರ್ವಾದವನ್ನು ಪಡೆಯುವಿರಿ. ಕುಟುಂಬದ ಮದುವೆಗೆ ಸಿದ್ಧತೆಗಳನ್ನು ಪ್ರಾರಂಭಿಸುವಿರಿ. ನಿಮ್ಮ ಜೀವನಸಂಗಾತಿಗಾಗಿ ನೀವು ಸೌಮ್ಯಸ್ವಭಾವದವರು ಆಗಿರುತ್ತೀರಿ‌. ಆಲಂಕಾರಿಕ ಉದ್ಯಮಕ್ಕೆ ಸಂಬಂಧಿಸಿದ ಜನರು ಹೊಸ ಯೋಜನೆಗಳಿಂದ ದೊಡ್ಡ ಹಣವನ್ನು ಗಳಿಸಬಹುದು. ಪಂಚಮದಲ್ಲಿರುವ ಗುರುವು ಪುತ್ರನಿಂದ ಖುಷಿಯನ್ನು ಕೊಡಿಸುವನು.

ಧನುಸ್ಸು: ಈ ಮೊದಲೇ ಇದ್ದ ಸ್ವಲ್ಪಮಟ್ಟಿನ ಹಣಕಾಸಿನ ತೊಂದರೆಗಳು ಪರಿಹಾರವಾಗುತ್ತವೆ. ನಿರೀಕ್ಷಿತ ಮೂಲಗಳಿಂದ ಹಣದ ಒಳಹರಿವು ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯು ಆಗಬಹುದು. ಕೆಲಸಕಾರ್ಯಗಳಲ್ಲಿ ಪ್ರಗತಿಯನ್ನು ಕಾಣಬಹುದು. ವ್ಯವಹಾರಗಳಲ್ಲಿ ನಿಮ್ಮ ಶ್ರಮವು ಫಲ ನೀಡಲಿದೆ. ತೈಲದ ವ್ಯಾಪಾರದಲ್ಲಿ ಅಭಿವೃದ್ಧಿ ಇರುತ್ತದೆ. ಸುಗಂಧದ್ರವ್ಯಗಳನ್ನು ಮಾರಾಟ ಮಾಡುವವರ ವ್ಯಾಪಾರದಲ್ಲಿ ವಿಸ್ತರಣೆಯಾಗುತ್ತದೆ. ಸ್ಥಿರಾಸ್ತಿಯನ್ನು ಖರೀದಿ ಮಾಡುವ ಮನಸ್ಸಿರುತ್ತದೆ. ವಿದ್ಯುತ್ತಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ಸರ್ಕಾರಿ ಅಧಿಕಾರಿಗಳಿಂದ ಕಾನೂನು ರೀತಿಯ ತೊಡಕುಗಳು ಎದುರಾಗಬಹುದು. ಕೃಷಿಕರ ಬೆಳೆಗಳಿಗೆ ಉತ್ತಮ ಬೆಲೆ ದೊರೆತು ಸಂತೋಷವಾಗುತ್ತದೆ. ಪಂಚಮದ ರಾಹುವು ನಿಮ್ಮ ಪ್ರತಿಭೆಯನ್ನು ಕಟ್ಟಿ ಹಾಕುವನು. ನಾಗಾರಾಧನೆಯನ್ನು ಮಾಡಿ.

ಮಕರ: ಇಂದು ಆಗುವ ಕೆಲವು ಘಟನೆಗಳಿಂದ ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪಮಟ್ಟಿನ ಏರುಪೇರುಗಳು ಕಂಡುಬರಬಹುದು. ನಿಶ್ಚಿತ ಆದಾಯವು ಇರಲಿದೆ. ಮಹಿಳೆಯರ ಮನೋಭಿಲಾಷೆಗಳು ಈಡೇರುವ ಸಂದರ್ಭವಿದೆ. ಬೇರೆಯವರ ವಾದ-ವಿವಾದಗಳಲ್ಲಿ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭವಿದೆ, ಎಚ್ಚರವಹಿಸಿ ಮಾತನಾಡಿರಿ. ಜಮೀನು ಮತ್ತು ಆಸ್ತಿಗೆ ಸಂಬಂಧಪಟ್ಟ ನೊಂದಣಿ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತವೆ. ನಿಮಗೆ ಬಂಧುಗಳಿಂದ‌ ಹೆಚ್ಚಿನ ಗೌರವ ದೊರೆಯುತ್ತದೆ. ರಾಜಕೀಯ ಪ್ರೇರಿತ ಕೆಲಸಗಳಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಸಂಸಾರದಲ್ಲಿ ಮುಸುಕಿನ ಗುದ್ದಾಟ ಇರುತ್ತದೆ, ತಾಳ್ಮೆಯಿಂದ ಪರಿಹರಿಸಿಕೊಳ್ಳಿ. ದ್ವಿತೀಯದ ಶನಿಯು ನಿಮಗೆ ಸಂಪತ್ತನ್ನು ನಿಧಾನವಾಗಿ ಕೊಡಿಸುವನು. ಶಮೀವೃಕ್ಷಕ್ಕೆ ಪ್ರದಕ್ಷಿಣೆ ಬನ್ನಿ.

ಕುಂಭ: ಪೂರ್ವನಿಯೋಜಿತ ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಅನಿಶ್ಚಿತತೆಯಿಂದ ವ್ಯವಹಾರಗಳಲ್ಲಿ ಲಾಭ ಕಡಿಮೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಮುನ್ನಡೆ ಇರುತ್ತದೆ. ದೈಹಿಕ ಕೆಲಸಗಳನ್ನು ಮಾಡುವ ಕೆಲವರಿಗೆ ಕೆಲಸದೊತ್ತಡ ಕಡಿಮೆಯಾಗುವುದು. ರಾಜಕೀಯ ವ್ಯಕ್ತಿಗಳಿಗೆ ಸ್ವಲ್ಪ ಮಟ್ಟಿನ ಕಿರಿಕಿರಿಯು ಉಂಟಾಗಬಹುದು. ಕೆಲವರಿಗೆ ಉದರಸಂಬಂಧಿ ಕಾಯಿಲೆಗಳು ಬರಬಹುದು. ಹಣದ ಹರಿವು ನಿಮ್ಮ ಅಪೇಕ್ಷೆಯಂತೆ ಇರುತ್ತದೆ. ಪಿತ್ರಾರ್ಜಿತ ಸ್ವತ್ತುಗಳು ಸಿಗುವ ಸಾಧ್ಯತೆಯಿದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮುನ್ನಡೆ ಇರುತ್ತದೆ. ದಿನಸಿ, ಎಣ್ಣೆಕಾಳುಗಳನ್ನು ಮಾರಾಟ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ತಂದೆಯೊಂದಿಗೆ ಸಂಬಂಧ ಹೆಚ್ಚುತ್ತದೆ. ನವಮದ ಕೇತುವು ಅಧರ್ಮಕ್ಕೆ ಒತ್ತನ್ನು ಹೆಚ್ಚು ಕೊಡಿಸುವನು.

ಮೀನ: ನೀವು ಆಯ್ಕೆ ಮಾಡಿಕೊಂಡ ವೃತ್ತಿಯ ಬಗ್ಗೆ ಸಂತೋಷವಿರುತ್ತದೆ. ಗುತ್ತಿಗೆ ವ್ಯವಹಾರಸ್ತರಿಗೆ ಹಣದ ಹರಿವು ಚೆನ್ನಾಗಿರುತ್ತದೆ. ನೆರೆಹೊರೆಯವರೊಡನೆ ನಿಷ್ಠುರವಾಗಿ ಅವರಿಂದ ದೂರವಾಗುವ ಸಾಧ್ಯತೆಗಳಿವೆ. ನಿಮ್ಮ ಸ್ವಂತ ವಿವೇಚನೆಯಿಂದ ಕೆಲವೊಂದು ಅಂತ ಕಲಹಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಲಲಿತಕಲೆ ಪರಿಣಿತರಿಗೆ ಪ್ರದರ್ಶನ ಮಾಡುವ ಅವಕಾಶಗಳು ದೊರೆಯಲು ಆರಂಭಿಸುತ್ತವೆ. ನಿಮ್ಮ ವಿಶ್ವಾಸಿಗಳಿಗೆ ಅನಿವಾರ್ಯವಾಗಿ ಧನಸಹಾಯ ಮಾಡಬೇಕಾಗುತ್ತದೆ. ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರ ವಾತಾವರಣ ದೊರೆಯುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಶನಿಯ ಪ್ರಭಾವವು ನಿಮ್ಮ ಮೇಲೆ ಇರುವುದರಿಂದ ಶಿವನ ಧ್ಯಾನ, ಸ್ತೋತ್ರವನ್ನು ಮಾಡುವುದು ಯೋಗ್ಯ.

ಲೋಹಿತಶರ್ಮಾ, ಇಡುವಾಣಿ

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ