AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರಿಗೆ ಸಂಗಾತಿಯಿಂದ ದೂರ ಉಳಿಯಬೇಕಾದ ಸ್ಥತಿ ಬರಬಹುದು

2023 ಮಾರ್ಚ್ 1ರ ಬುಧವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Daily Horoscope: ಈ ರಾಶಿಯವರಿಗೆ ಸಂಗಾತಿಯಿಂದ ದೂರ ಉಳಿಯಬೇಕಾದ ಸ್ಥತಿ ಬರಬಹುದು
ರಾಶಿಭವಿಷ್ಯImage Credit source: Thestatesman.Com
TV9 Web
| Updated By: Rakesh Nayak Manchi|

Updated on: Mar 01, 2023 | 5:03 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 1ರ ಬುಧವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದಶಮಿ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಪ್ರೀತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 50 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 39 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:45 ರಿಂದ 02:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:19 ರಿಂದ 09:48ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:17 ರಿಂದ ಮಧ್ಯಾಹ್ನ 12:45ರ ವರೆಗೆ.

ಮೇಷ: ವ್ಯಾಪಾರದಲ್ಲಿ ಅಧಿಕಲಾಭವಿದ್ದು, ಸಂತೋಷದ ಸ್ಥಿತಿ ಇರಲಿದೆ. ನೀವು ಭೂಮಿಯ ವ್ಯವಹಾರವನ್ನು ಮಾಡುತ್ತಿದ್ದರೆ ಇಂದು ಲಾಭವನ್ನು ಪಡೆಯುವಿರಿ. ನೀವು ಪ್ರಯತ್ನಿಸಿದ ಕಾರ್ಯಗಳು ಫಲವನ್ನು ಕೊಡಲಿವೆ. ಆಪ್ತರು ನಿಮ್ಮ ಜೊತೆಯಲ್ಲಿ ಮಾತನಾಡುವ ರೀತಿ ಬದಲಾಗಬಹುದು. ವಾಹನವನ್ನು ಓಡಿಸುವ ಎಚ್ಚರಿಕೆಯಿಂದ ಇರಿ. ಯಾರದೋ ಸಿಟ್ಟನ್ನು ಯಾರ ಮೇಲೋ ತೀರಿಸಿಕೊಳ್ಳುವ ನಿಮ್ಮ ಸ್ವಭಾವವು ಒಳ್ಳೆಯದಲ್ಲ. ತಿದ್ದಿಕೊಳ್ಳಲು ಪ್ರಯತ್ನಿಸಿ. ಆಸ್ತಿಗೆ ಸಂಬಂಧಿಸಿದಂತೆ ಅಷ್ಟಾಗಿ ಪ್ರಗತಿ ಇರದು. ಸಪ್ತಮದಲ್ಲಿರುವ ಕೇತುವು ಹೆಂಡತಿಯ ಜೊತೆ ಕಲಶವನ್ನು ಮಾಡಿಸುವನು. ಖದಿರ ವೃಕ್ಷಕ್ಕೆ ನೀರೆರೆದು ನಮಸ್ಕರಿಸಿ.

ವೃಷಭ: ವಿದ್ಯಾರ್ಥಿವೃತ್ತಿಯಲ್ಲಿರುವವರಿಗೆ ಇಂದು ಅನಾರೋಗ್ಯ ಕಾಡಲಿದೆ. ಪರೀಕ್ಷೆಯ ಕಾಲದಲ್ಲಿ ನಿಮಗೂ ಪರೀಕ್ಷೆ ನಡೆಯಲಿದೆ. ಮನೆಯ ಚಿಂತೆಯು ನಿಮ್ಮನ್ನು ಬಹಳ ಕಾಡಬಹುದು. ಸಹೋದರರ ಜೊತೆ ಕಲಹವು ಏರ್ಪಟ್ಟು ಕೆಲವು ಕಾಲ ಮೌನವಹಿಸುವಿರಿ. ಹೊಸ ಸ್ಥಳವನ್ನು ಖರೀದಿಸುವ ಯೋಚನೆ ಮಾಡಲಿದ್ದೀರಿ. ಉದ್ವೇಗದಲ್ಲಿ ಅಚಾತುರ್ಯ ನಡೆಯಬಹುದು. ಅಮೂಲ್ಯವಾದ ವಸ್ತುವೊಂದನ್ನು ಕಳೆದುಕೊಂಡು ಪಶ್ಚಾತ್ತಪಪಡುವಿರಿ. ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆಸಿಗದೆ ಕೃಷಿಕರು ಬೇಸರಗೊಳ್ಳುವರು. ಅನಿರೀಕ್ಷಿತ ಅಶುಭವಾರ್ತೆ ಸಿಗಲಿದೆ. ಏಕಾದಶದ ಶುಕ್ರನು ಶುಭವನ್ನು ಮಾಡುವನು.

ಮಿಥುನ: ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮಗೆ ಅವಕಾಶಗಳು ಸಿಗಲಿವೆ. ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಿ. ಮನೆಯಲ್ಲಿ ಸುಂದರ ವಾತಾವರಣವಿರುತ್ತದೆ. ಸಂಗಾತಿಯಿಂದ ದೂರ ಉಳಿಯಬೇಕಾದ ಸ್ಥತಿ ಬರಬಹುದು. ಉದ್ಯೋಗದಲ್ಲಿ ನಿಮ್ಮ ಕೆಲಸಗಳಿಗೆ ಪ್ರಶಂಸೆ ಸಿಗಲಿದೆ. ಮಾತಿನಿಂದ ಯಾರನ್ನೂ ಟೀಕಿಸಲು ಹೋಗಬೇಡಿ. ನಿಮ್ಮನ್ನು ಟೀಕಿಸಲು ಜನರು ಕಾದುಕುಳಿತಿರುತ್ತಾರೆ. ಅರ್ಥವಾಗದ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲವಿರಲಿದೆ. ಷಷ್ಠದ ಕುಜನು ದ್ವಾದಶದಲ್ಲಿದ್ದು ಅನಾರೋಗ್ಯವನ್ನೂ ಆರ್ಥಿಕ ನಷ್ಟವನ್ನೂ ಮಾಡುವನು. ತಾರಕಾಸುರಸಂಹಾರಕನನ್ನು ಸ್ತೋತ್ರ ಮಾಡಿ.

ಕಟಕ: ಭವಿಷ್ಯಕ್ಕೆ ಬೇಕಾದ ಸಂಪತ್ತನ್ನು ಕೂಡಿಡುವ ಮನಸ್ಸು ಮಾಡುವಿರಿ. ಸಾಮಾಜಿಕವಾಗಿ ನಿಮ್ಮನ್ನು ಗುರುತಿಸಿ ಸಮ್ಮಾನಿಸಬಹುದು. ಕಲಾವಿದರಾದ ನೀವು ಇಂದು ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ವಿನಾಕಾರಣ ಸಮಸ್ಯೆಗೆ ಸಿಲುಕಿಕೊಳ್ಳಬಹುದು. ಆಕಸ್ಮಿಕ ಧನಲಾಭವು ನಿಮ್ಮ ಬದುಕನ್ನು ಖುಷಿಯಾಗಿ ಇಡಲಿದೆ. ಮತ್ತೊಬ್ಬರಿಗೆ ಸಹಾಯ ಮಾಡುವ ಅವಕಾಶ ಬಂದಾಗ ಅದನ್ನು ಅಲ್ಲಗಳೆಯಬೇಡಿ. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗಲಿದ್ದೀರಿ. ದ್ವಾದಶದಲ್ಲಿರುವ ಚಂದ್ರನಿಂದ ತಾಯಿಗೆ ಅನಾರೋಗ್ಯ ಕಾಡಬಹುದು. ಕುಲದೇವರನ್ನು ಪ್ರಾರ್ಥಿಸಿ.

ಸಿಂಹ: ಉದ್ಯೋಗವನ್ನು ಬದಲಿಸುವ ಯೋಚನೆ ಇರಲಿದ. ಉತ್ತಮ‌ವಾದ ನಡೆಯೇ ನಿಮ್ಮ ಬಲವೆಂದು ಅರಿವಾಗುವ ದಿನ. ಹೊರಗಿನ ಆಹಾರವನ್ನು ತಿಂದು ಅಸ್ವಸ್ಥರಾಗಬೇಡಿ. ವಾಹನಕ್ಕೋಸ್ಕರ ಸಾಲಮಾಡುವ ಸ್ಥಿತಿಯು ಬರಬಹುದು. ಸಂಗಾತಿಯ ಜೊತೆ ಸಣ್ಣ ಮನಸ್ತಾಪ ಏಳಬಹುದು. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರೆ ಸಂತೋಷಕರವಾದ ಸುದ್ದಿಯೊಂದು ನಿಮ್ಮ ಪಾಲಿಗೆ ಇರುತ್ತದೆ. ನಿರುತ್ಸಾಹಿಗಳಾಗಿ ಕುಳಿತುಕೊಳ್ಳದೇ ಏನನ್ನಾದರೂ ಸಾಧಿಸಬೇಕು ಎಂಬ ಮನಸ್ಸು ನಿಮಗೆ ಬರುತ್ತದೆ. ಸಾಲಕೊಟ್ಟ ಹಣವು ಬರಲಿದೆ. ಜ್ವರವು ಬರಬಹುದು. ಔಷಧೋಪಚಾರವನ್ನು ಚೆನ್ನಾಗಿ ಮಾಡಿ.

ಕನ್ಯಾ: ಇಂದಿನ ನಿಮ್ಮ ಕಾರ್ಯಗಳು ಆತಂಕವಿಲ್ಲದೇ ಮುಕ್ತಾಯಗೊಳ್ಳುವುದು. ಎಲ್ಲ ನಿರರ್ಥಕ ಎನ್ನುವ ಭಾವನೆಯು ನಿಮ್ಮಲ್ಲಿ ಬರಬಹುದು. ಯಾವ ಸಸಿಯೂ ನೆಟ್ಟ ಮರುಕ್ಷಣವೇ ಫಲವನ್ನು ಕೊಡುವುದಿಲ್ಲ ಎಂಬ ವಿಚಾರವು ನಿಮ್ಮೊಳಗೆ ಸರಿಯಾಗಿ ಬೇರೂರಿರಲಿ. ನಿಮ್ಮಿಂದ ಕೆಲಸವಾಗಲು ಹೊಗಳಿಕೆಗಳು ಬರಬಹುದು. ಅದನ್ನು ಯೋಗ್ಯತೆ ತಕ್ಕಂತೆ ಸ್ವೀಕರಿಸಿ. ವೈದ್ಯರ ಅಥವಾ ಮನೆಮದ್ದನ್ನು ಮಾಡಿಕೊಳ್ಳಿ‌. ಆಲಸ್ಯದಿಂದ ನಿಮ್ಮ ಕಾರ್ಯಗಳು ನಿಧಾನವಾಗಲಿದೆ. ವಿವಾಹಕ್ಕೆ ಸಂಬಂಧವನ್ನು ಕುದುರಿಸಲು ಹೋಗುವಿರಿ. ಪ್ರಸಿದ್ಧವ್ಯಕ್ತಿಗಳ ಭೇಟಿಯಾಗಲಿದೆ. ದೊಡ್ಡ ಶತ್ರುಗಳನ್ನು ಎದುರುಹಾಕಿಕೊಳ್ಳಲಿದ್ದೀರಿ. ಆದಿತ್ಯಹೃದಯವನ್ನು ಪಠಣಮಾಡಿ.

ತುಲಾ: ಮಕ್ಕಳು ನಿಮಗೆ ಶುಭಕರವಾದ ಸುದ್ದಿಯನ್ನು ಹೇಳಲಿದ್ದಾರೆ. ವಿದೇಶಕ್ಕೆ ಹೋಗಲು ನಿಮಗೆ ಕಛೇರಿಯಲ್ಲಿ ಅನುಮೋದನೆ ಸಿಗಬಹುದು. ಹೊರದೇಶದಲ್ಲಿ ಹೊಸದಾಗಿ ಕೆಲಸವನ್ನು ಹುಡುಕುತ್ತಿದ್ದರೆ ಅದನ್ನು ನಿಲ್ಲಿಸಿ.‌ ಸರ್ಕಾರದ ಸಿಗಬೇಕಾದ ಹಣವು ಸಿಗಲಿದೆ. ಸದ್ಯ ವಿದೇಶದ ಕಡೆಗೆ ಗಮನವನ್ನು ಕೊಡಬೇಡಿ. ಇರುವ ಸ್ಥಳದಲ್ಲಿಯೇ ಸಿಕ್ಕ ಉತ್ತಮ‌ ಕೆಲಸವನ್ನು ಮಾಡಿ. ನಿಮ್ಮನ್ನು ಆಡಿಕೊಳ್ಳುವ ಜನರು ನಿಮ್ಮ ಪಕ್ಕದಲ್ಲಿಯೇ ಇರುತ್ತಾರೆ. ಅವರಿಗೆ ಕಾಣಿಸುವಂತೆ ಏನನ್ನೂ ಮಾಡಬೇಡಿ. ವಿದ್ಯಾಭ್ಯಾಸದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹದು. ಸರಸ್ವತಿಯ ಮಂತ್ರವನ್ನು ಜಪಿಸಿ.

ವೃಶ್ಚಿಕ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಿ ನಿಮಗೆ ಬೇಸರವಾಗಲಿದೆ. ಪೂರ್ಣವಿಶ್ರಾಂತಿಗೆ ನೀವು ಒಳಪಡಬೇಕಾದೀತು. ನಿಮ್ಮ ಮೇಲೆ ಆರೋಪಗಳು ಬರಲಿವೆ. ಅರ್ಥಿಕತೆಯು ಏರಿಕೆಯಾಗಲಿದೆ. ಸ್ನೇಹಿತರ ಜೊತೆ ಮೋಜಿನಲ್ಲಿ ಇರುವ ಮನಸ್ಸು ಮಾಡುವಿರಿ. ಅನಾಹುತಕ್ಕೆ ಎಡೆಮಾಡಿಕೊಡಬೇಡಿ. ವಿದ್ಯಾರ್ಥಿಗಳು ಶ್ರಮವಹಿಸಿ ಓದಲಿದ್ದಾರೆ. ಮಕ್ಕಳಿಂದ ನಿಮ್ಮ ಕೀರ್ತಿಯು ಹಾಳಾಗಬಹುದು‌‌. ನಿಮ್ಮ ಮಾತಿಗೆ ಬೆಲೆಯು ಬರುವಂತೆ ಮಾತನಾಡಿ. ನಿಮ್ಮ ಪರೀಕ್ಷೆಯ ಕಾಲವಾಗಿರಬಹುದು. ಪುತ್ರೋತ್ಸವದ ವಾರ್ತೆ‌ಯನ್ನು ಕೇಳಲಿದ್ದೀರಿ.

ಧನು: ಸಂಬಂಧಿಕರು ನಿಮಗೆ ಸಹಾಯವನ್ನು ಮಾಡಲಿದ್ದಾರೆ. ಸಭೆ ಅಥವಾ ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಇಂದಿನ ಭೋಜನವು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಲಿದೆ. ತಂತ್ರಜ್ಞರು ಉನ್ನತ ಸ್ಥಾನದ ಬಯಕೆಯಿಂದ ಕಛೇರಿಯನ್ನು ಬಿಡಬಹುದು. ಅನಿರೀಕ್ಷಿತ ವಾರ್ತೆಯು ನಿಮ್ಮನ್ನು ಚಿಂತೆಗೆ ದೂಡಲಿದೆ. ಪ್ರಶಾಂತವಾದ ವಾತಾವರಣದಲ್ಲಿ ಕೆಲವು ಸಮಯವನ್ನು ಕಳೆದು ಬನ್ನಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೀವಿಂದು ಮನೆಯನ್ನು ಬಿಡಲಿದ್ದೀರಿ. ಉನ್ನತ ಹುದ್ದೆಗಾಗಿ ಬರೆಯುವ ಪರೀಕ್ಷೆಯಲ್ಲಿ ನಿಮಗೆ ಜಯ ಸಿಗಲಿದೆ. ಸುಬ್ರಹ್ಮಣ್ಯನನ್ನು ಧ್ಯಾನಿಸಿ, ನಿಮ್ಮ ಶತ್ರುಗಳು ಪರಾಭಾವಗೊಳ್ಳುವರು.

ಮಕರ: ಅಪರಿಚಿರನ್ನು ನಂಬಿ ಮೋಸ ಹೋಗಬಹುದು. ನೀವಿಡುವ ಹೆಜ್ಜೆಗಳು ಸರಿಯಾಗಿರಿಲಿ. ಉನ್ನತ ಚಿಂತನೆಗಳು ನಿಮ್ಮನ್ನು ಉತ್ತಮ ಸ್ತರಕ್ಕೆ ಕೊಂಡೊಯ್ಯುವುದು. ಎಲ್ಲರ ಜೊತೆಗೆ ಸ್ನೇಹದಿಂದ ಮಾತನಾಡುವಿರಿ. ಕಲಾವಿದರು ಉತ್ತಮ ಅವಕಾಶವನ್ನು ಪಡೆದುಕೊಳ್ಳುವರು. ಆಪ್ತಬಂಧುಗಳ ಅಗಲಿಕೆಯಿಂದ ನೋವಾಗಬಹುದು. ಒತ್ತಡದಿಂದ ನೀವು ಉದ್ವೇಗಕ್ಕೆ ಒಳಗಾಗಬಹುದು. ನಂಬಿಕೆಯನ್ನು ಗಳಿಸಲು ಸತತ ಪ್ರಯತ್ನವನ್ನು ಮಾಡುವಿರಿ. ಶಿವನ ಸ್ತೋತ್ರವನ್ನು ಮಾಡಿ. ದ್ವಿತೀಯದ ಶನಿಯಿಂದ ಸಂಪತ್ತು ಸಿಗಲಿದೆ.

ಕುಂಭ: ಆಲಸ್ಯದಿಂದ ನಿಮಗೆ ಕೆಲಸದಲ್ಲಿ ಅನಾಸಕ್ತಿ ಉಂಟಾಗಬಹುದು. ಅನೇಕ ಅವಕಾಶಗಳಿಂದ ವಂಚಿತರಾಗಲಿದ್ದೀರಿ. ಹಣದವು ಖರ್ಚಾಗುವ ಸಾಧ್ಯತೆ ಇದೆ. ಶತ್ರುಗಳು ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುತ್ತಾರೆ. ಒಂದನ್ನು ಪಡೆಯಲು ಹೋಗಿ ಎರಡನ್ನು ಕಳೆದುಕೊಳ್ಳಬೇಕಾಗಿಬರಬಹುದು. ಜಾರಿ ಬಿದ್ದು ನೋವನ್ನು ಅನುಭವಿಸುವಿರಿ. ಜಾಗರೂಕರಾಗಿ ಹೆಜ್ಜೆಯನ್ನು ಹಾಕಿ. ಹಿರಿಯರಿಂದ ನಿಮಗೆ ಆಶೀರ್ವಾದ ಸಿಗಲಿದೆ. ನಿಂತಲ್ಲಿಯೇ ನಿಂತು ಕಾಲಹರಣ ಮಾಡಬೇಡಿ. ಉನ್ನತವಾದುದನ್ನು ಚಿಂತಿಸಿ. ಯಶಸ್ಸು ಸಿಗಲಿದೆ‌

ಮೀನ: ಆಪರೂಪದ ಸ್ನೇಹಿತರಿಂದ ನಿಮ್ಮ ಕಾಲಹರಣವಾಗಲಿದೆ‌. ಶ್ರಮಪಟ್ಟು ಮಾಡಿದ ಕೆಲಸವು ಕ್ಷಣದಲ್ಲಿ ನಾಶವಾಗಿ ಬೇಸರವುಂಟಾಗಬಹುದು. ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿ. ಹಿರಿಯರ ದಿನವನ್ನು ಶ್ರದ್ಧೆಯಿಂದ ಮಾಡಿ.‌ ಅನೇಕ ಲಾಭಗಳು ನಿಮಗಾಗಲಿವೆ. ನಿಮ್ಮ ಕಾರ್ಯಗಳಿಗೆ ಅಪರಿಚಿತರೂ ಸಹಾಯ ಮಾಡಲಿದ್ದಾರೆ. ಕೃತಜ್ಞತೆಯನ್ನು ಅರ್ಪಿಸಲು ಮರೆಯಬೇಡಿ. ನಿಮ್ಮ ಒಳ್ಳೆತನ ನಿಮಗೆ ವರವಾಗಿಯೇ ಇರಲಿದೆ. ಕಛೇರಿಯ ಕಾರ್ಯಗಳು ತೊಂದರೆಯಿಲ್ಲದೇ ಪುರ್ಣವಾಗುವುದು. ವಿಳಂಬವಾದರೂ ನಿಮಗೆ ಒಳ್ಳೆಯದೇ ಆಗಲಿದೆ.

-ಲೋಹಿತಶರ್ಮಾ, ಇಡುವಾಣಿ

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ