ನಿತ್ಯ ಪಂಚಾಗ: ಶಾಲಿವಾಹನ ಶಕೆ 1947ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಅನುರಾಧಾ, ಯೋಗ : ಹರ್ಷಣ, ಕರಣ : ಕೌಲವ, ಸೂರ್ಯೋದಯ – 06 – 39 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭಕಾಲ : ರಾಹು ಕಾಲ 12:40 – 14:11, ಯಮಘಂಡ ಕಾಲ 08:09 – 09:40, ಗುಳಿಕ ಕಾಲ 11:10 – 12:40
ಮೇಷ ರಾಶಿ: :ನಿಮಗಿರುವ ಕುತೂಹಲವನ್ನು ಯಾರಾದರೂ ತಣಿಸಿಯಾರು. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಣ್ಣ ಅಡಚಣೆಯಾದೀತು. ನಿಮ್ಮ ದೀರ್ಘ ಕಾಲದ ಆರ್ಥಿಕತೆಯ ಕೊರಗು ಕ್ಷೀಣಿಸಬಹುದು. ವಿದ್ಯಾರ್ಥಿಗಳು ಪರೀಕ್ಷೆಯ ಭಯವನ್ನು ಕಳೆದುಕೊಳ್ಳುವುದು ಉತ್ತಮ. ಬಂಧುಗಳ ಆರೋಗ್ಯದ ಆರೈಕೆಯನ್ನು ನೀವು ಮಾಡಬೇಕಾದೀತು. ನಿಕಟವರ್ತಿಗಳ ಮಾತನ್ನು ನಗಣ್ಯ ಮಾಡುವಿರಿ. ಅದೃಷ್ಟ ಇದ್ದರೂ ನಿಮ್ಮನ್ನು ನಂಬಿಯೇ ಕೆಲಸ ಮಾಡಿ. ಅವಾಚ್ಯ ಮಾತುಗಳಿಂದ ನಿಮ್ಮನ್ನು ಯಾರಾದರೂ ನಿಂದಿಸಬಹುದು. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯಲ್ಲಿ ಮಗ್ನರಾಗುವುದು ಬೇಡ. ಮರೆವು ನಿಮಗೆ ವರದಂತೆ ಕಾಣಿಸೀತು. ಒಡೆದ ಬಾಂಧವ್ಯವನ್ನು ಸೇರಿಸುವ ಪ್ರಯತ್ನ ಅಪೂರ್ಣವಾಗಲಿದೆ. ಯಾವುದೇ ಜವಾಬ್ದಾರಿಯನ್ನು ದೂರದಿಂದಲೇ ತಳ್ಳಿಹಾಕುವಿರಿ. ಸುಬ್ರಹ್ಮಣ್ಯನ ಉಪಾಸನೆಯು ಸಂತಸಪ್ರದವಾಗಲಿದೆ.
ವೃಷಭ ರಾಶಿ: ಇಂದಿನ ಕಾರ್ಯದ ಹೊರೆಯನ್ನು ಹೊತ್ತು ಹೆಚ್ಚು ಓಡಾಟ ಮಾಡುವಿರಿ. ಇತರರನ್ನು ಹೋಲಿಸಿಕೊಂಡು ನಿಮ್ಮನ್ನು ನೀವು ಸಮಾಧಾನ ಮಾಡಿಕೊಳ್ಳುವಿರಿ. ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು ಸ್ಥಿರಾಸ್ತಿಯನ್ನು ಮಾರಾಟ ಮಾಡಲೂ ನಿಮಗೆ ಕಷ್ಟವಾದೀತು. ಮನೆಯಲ್ಲಿ ಧಾರ್ಮಿಕ ಕಾರ್ಯವನ್ನು ನಡೆಸಬಹುದು. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಸಮಯ ಹಾಗೂ ಸ್ಥಳಗಳೂ ಮುಖ್ಯ. ನಿಮ್ಮ ಕಠಿಣ ಪರಿಶ್ರಮದ ಪೂರ್ಣ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಗುರಿಯ ಬಗ್ಗೆ ಇರುವ ದೃಢತೆಯು ಸಡಿಲವಾದೀತು. ಇಂದು ಏನಾದರೂ ಆಗುತ್ತದೆ ಎಂಬ ಅಪಾಯವು ಇರಲಿದೆ. ವೃತ್ತಿಯ ಏಕತಾನತೆಯಿಂದ ಹೊರಬರಲು ಬಯಸುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿಕೊಳ್ಳುವಿರಿ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಶ್ಲಾಘ್ಯವೇ. ಬಂಧುಗಳ ಮನೆಯಲ್ಲಿ ನೀವು ಇಂದು ಅನಿರೀಕ್ಷಿತವಾಗಿ ಭೋಜನ ಮಾಡುವಿರಿ. ನಿಂದಕರ ಬಗ್ಗೆ ನಿಮ್ಮ ಮಾತುಗಳು ಇರದು.
ಮಿಥುನ ರಾಶಿ: ಇಂದು ಬಂಧುಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾದೀತು. ನೈತಿಕ ಹೊಣೆಗಾರಿಕೆ ನಿಮ್ಮ ಮೇಲೆ ಬರಬಹುದು. ನಿಮ್ಮ ದಾಂಪತ್ಯದಲ್ಲಿ ಪರಸ್ಪರ ನೆರವಾಗುವಿಕೆ ಇರಲಿದ್ದು, ಸಂತೋಷವಾಗಲಿದೆ. ನಿಮ್ಮನ್ನು ಸಂತೋಷಪಡಿಸಿದವರಿಗೆ ಕೃತಜ್ಞತೆಯನ್ನು ತಿಳಿಸಿ. ಮಕ್ಕಳ ಕುರಿತು ನಿಮಗೆ ಅಭಿಮಾನ ಹೆಚ್ಚಾಗುವುದು. ಪ್ರಯಾಣವು ಹಿತವಾಗದೇ ಇರುವುದು. ನಿಮಗೆ ಬೇಕಾದುದನ್ನು ಕೇಳಿ ಪಡೆಯುವಿರಿ. ವೃತ್ತಿಯ ಸ್ಥಳದಲ್ಲಿ ನಿಮ್ಮನ್ನು ಗುರುತಿಸುವರು. ದ್ವೇಷಕ್ಕೆ ಸರಿಯಾದ ಕಾರಣವಿರಲಿ. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮುಗಿಸುವಿರಿ. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು. ನಿಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವನ್ನು ಅಪೇಕ್ಷಿಸುವಿರಿ. ಮಕ್ಕಳ ಕಾಳಜಿಯು ಅತಿಯಾಗುವುದು. ನಿಮ್ಮ ಬಳಿ ಇರುವುದನ್ನು ಜೋಪಾನಮಾಡಿಕೊಳ್ಳುವುದು ಸೂಕ್ತ. ಮಹಾವಿಷ್ಣುವಿನ ಉಪಾಸನೆಯು ನಿಮ್ಮ ಈ ದಿನವನ್ನು ಸಾರ್ಥಕ ಮಾಡಿಸೀತು.
ಕರ್ಕಾಟಕ ರಾಶಿ: ಇಂದು ನೀವು ಯಾರಿಂದಲಾದರೂ ಸಹಾಯವನ್ನು ಪಡೆಯುವಿರಿ. ಕಾರ್ಯಸ್ಥಳದ ಬದಲಾವಣೆ ಇರಲಿದೆ. ಅಧಿಕಾರವು ಸುಮಶಯ್ಯೆಯಾಗಿರದು. ಕೆಲವು ವಿಚಾರಕ್ಕೆ ಬುದ್ಧಿಯು ಸೂಚಿಸದೇ ಇರಬಹುದು. ಶೈಕ್ಷಣಿಕ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಅಲ್ಪವಾದರೂ ಸಂತೋಷದಿಂದ ಪರರಿಗೆ ಕೊಡಿ. ಸಾಮಾಜಿಕ ಕಾರ್ಯಗಳಲ್ಲಿ ನಿಮಗೆ ಗೌರವ ಹೆಚ್ಚಾಗುವುದು. ಸ್ನೇಹಿತರ ಸಹಾಯದಿಂದ ವ್ಯವಹಾರ ಬೆಳೆಯುತ್ತದೆ. ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದು ಬೇಡ. ನಿಮ್ಮ ಶ್ರಮಕ್ಕೆ ಯೋಗ್ಯ ವರಮಾನ ಇಲ್ಲ ಎನಿಸಬಹುದು. ಸಾಲ ಕೊಟ್ಟವರಿಂದ ನಿಮಗೆ ಕಿರಿಕಿರಿ ಎನಿಸಬಹುದು. ಸಾಧ್ಯವಾದಷ್ಟು ಸಾಲವನ್ನು ಹಿಂದಿರುಗಿಸಿ. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಸ್ವಾರ್ಥವಿದ್ದಷ್ಟು ದುಃಖ ಅಧಿಕವಾಗಲಿದೆ. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ನಿಮಗೆ ಇಂದು ವಾದದಲ್ಲಿ ಸೋಲಾಗಬಹುದು, ಮುಗ್ಗರಿಸಿ ಬೀಳುವುದು ಬೇಡ.
ಸಿಂಹ ರಾಶಿ: ನಿಮ್ಮ ಸಹಾಯವು ಇಂದು ಯಾವುದಾದರೊಂದು ರೀತಿಯಲ್ಲಿ ಹಿಂದಿರುಗಬಹುದು. ಯಂತ್ರಗಳ ವ್ಯಾಪಾರದಲ್ಲಿ ಅಧಿಕ ಲಾಭವನ್ನು ಕಾಣುವಿರಿ. ಪುಣ್ಯ ಸ್ಥಳಗಳ ದರ್ಶನವನ್ನು ಮಾಡುವಿರಿ. ರಾಜಕೀಯ ಪ್ರೇರಿತದಿಂದ ನಿಮ್ಮ ಬಗ್ಗೆ ಸುಳ್ಳು ಸುದ್ದಿಗಳು ಬರಬಹುದು. ನೀವು ಯಾವುದೇ ಸಮಸ್ಯೆಯಲ್ಲಿ ಮುಳುಗಿದ್ದರೆ, ಇಂದು ಅದಕ್ಕೆ ಪರಿಹಾರ ಸಿಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಪ್ರಗತಿಯಿಂದ ಲಾಭ ಸಿಗುವುದು. ಕುಟುಂಬ ಜೀವನವನ್ನು ಬಹಳ ಆನಂದಿಸುವಿರಿ. ಪ್ರಭಾವೀ ಜನರು ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಪ್ರೇಮಿಗಳು ವಿವಾಹಕ್ಕೆ ಮುಂದಡಿ ಇಡಬಹುದು. ಏಕಾಂಗಿ ಎಂಬ ಭಾವವು ನಿಮ್ಮನ್ನು ಅತಿಯಾಗಿ ಕಾಡಬಹುದು. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಲು ನಿಮಗೆ ಆಗದೇ ಹೋಗುವುದು.
ಕನ್ಯಾ ರಾಶಿ: ಅಪೂರ್ಣವಾದ ಕೆಲಸಗಳಿಂದ ಚಿಂತೆ ಹೆಚ್ಚಾದೀತು. ಉನ್ನತವಾದ ಆಲೋಚನೆಗಳು ನಿಮ್ಮನ್ನು ದಡ ಸೇರಿಸುವುದು. ಹಳೆಯ ವಸ್ತುಗಳನ್ನು ಮಾರಾಟ ಮಾಡಬೇಕಾದೀತು. ಸ್ತ್ರೀಯರು ಸಂಗಾತಿಯ ಜೊತೆ ಮನಸ್ತಾಪವನ್ನು ಮಾಡಿಕೊಳ್ಳುವರು. ನಿಮ್ಮ ಕೋಪವನ್ನು ಒಂದಿಷ್ಟು ಸಮಯದಲ್ಲಾದರೂ ನಿಯಂತ್ರಣದಲ್ಲಿಡಿ. ಕೆಲಸದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ಅನಗತ್ಯವಾಗಿ ಓಡಾಡುವುದರಿಂದ ಮನಸ್ಸು ತೊಂದರೆಗೊಳಗಾಗಬಹುದು. ಪ್ರಯಾಣವು ಅವಸರವಸರವಾಗಿ ಇರುವುದು. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ತೊಂದರೆ ಕೊಡುವವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಎಲ್ಲದಕ್ಕೂ ಅನಾರೋಗ್ಯವು ನೆಪವಾಗಬಹುದು. ಸ್ತ್ರೀಯರಿಗೆ ಸಹಾಯ ಮಾಡಲು ಹೋಗಿ ಹಾಸ್ಯಕ್ಕೆ ಒಳಗಾಗುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು. ನೌಕರರಿಗೆ ಕೆಲಸವನ್ನು ಹೇಳುವ ರೀತಿಯಲ್ಲಿ ಹೇಳಿ, ಮಾಡಿಸಿಕೊಳ್ಳಿ. ನಿಮ್ಮ ದಿವಸದ ವ್ಯವಸ್ಥೆಯನ್ನು ಕ್ರಮಬದ್ಧ ಮಾಡಿಕೊಳ್ಳಿ. ಮಾತಿನಿಂದ ಅಳೆದ ನಿಮ್ಮ ಮಾಪನವು ಸರಿಯಾಗದೇ ಇರುವುದು.
ತುಲಾ ರಾಶಿ: ಇಂದಿನ ತಪ್ಪು ಗ್ರಹಿಕೆಯಿಂದ ನಿಮ್ಮ ಕೆಲಸಗಳು ಅಸ್ತವ್ಯಸ್ತವಾಗಬಹುದು. ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡಬೇಕಾದೀತು. ಸಾಮಾಜಿಕ ಕಾರ್ಯಗಳಿಂದ ಹೊಸ ದಿಕ್ಕು ತೆರೆದುಕೊಳ್ಳಬಹುದು. ಅಂದುಕೊಂಡಿದ್ದನ್ನು ಸಾಧಿಸಲು ಸರಿಯಾದ ಮಾರ್ಗವು ಕಂಡುಕೊಳ್ಳುವ ಅನಿವಾರ್ಯತೆ ಸೃಷ್ಟಿ. ದೇವರ ಮೇಲೆ ನಂಬಿಕೆ ಇಟ್ಟ ಕಾರಣ ನಿಮ್ಮ ಮನೋರಥವು ಪೂರ್ತಿಯಾಗಿದ್ದು ನಿಮಗೆ ಅತಿಶಯ ಸಂತೋಷವಾಗಲಿದೆ. ಆತ್ಮೀಯರಿಂದ ಯಾವುದನ್ನೂ ಪಡೆಯುವುದು ಬೇಡ. ಇನ್ನೊಬ್ಬರ ಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲಾರಿರಿ. ಭೂಮಿಯನ್ನು ಖರೀದಿಸುವ ಸಂದರ್ಭ ಬಂದರೂ ಪೂರ್ತಿ ಹಣವನ್ನು ಸೇರಿಸಲು ಆಗದು. ಯಾರ ಬಳಿಯೂ ಕೆಲಸವಿಲ್ಲ ಎಂದು ಹೇಳಬೇಡಿ. ನಿಮ್ಮ ಘನತೆಗೆ ಯಾರಿಂದಲಾದರೂ ಧಕ್ಕೆ ಬರುವುದು. ಸಮಯಪಾಲನೆಗೆ ಎಲ್ಲರೂ ಪ್ರಶಂಸಿಸುವರು. ನೀವು ಕಾರ್ಯಕ್ಕೆ ಸಂಬಂಧಪಟ್ಟಂತೆ ನಿಮ್ಮದೇ ಆದ ಚೌಕಟ್ಟನ್ನು ರಚಿಸಿಕೊಳ್ಳುವುದು ಕ್ಷೇಮ. ಇಲ್ಲವಾದರೆ ಎಲ್ಲವೂ ನಿಮ್ಮ ಬುಡಕ್ಕೇ ಬರುವುದು. ವಿಷಮಸ್ಥಿತಿಯನ್ನು ಎದುರಿಸಲಾರಿರಿ.
ವೃಶ್ಚಿಕ ರಾಶಿ: ನಿಮ್ಮ ನಿರ್ಧಾರಗಳನ್ನು ಬೇರೆ ಯಾರಾದರೂ ಬದಲಿಸಬಹುದು. ಇದು ನಿಮ್ಮ ಅಪಕ್ವತೆಯನ್ನು ತಿಳಿಸಿಬಹುದು. ಉದ್ಯಮದಲ್ಲಿ ಚಿಂತಿತ ಲಾಭ ಕಾಣದೇ ಮನಸ್ಸು ಕುಗ್ಗಬಹುದು. ಉತ್ಸಾಹದಿಂದ ಇರಲು ನಿಮಗೆ ದಾರಿ ಕಡಿಮೆ ಇರಬಹುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಿಸುವಿರಿ. ನಿಮ್ಮ ವೃತ್ತಿಜೀವನದಲ್ಲಿ ಹೊಸತನ್ನು ಸಾಧಿಸಲು ಅವಕಾಶ ಸಿಗುತ್ತದೆ. ನೀವು ಹೊಸ ಉದ್ಯೋಗದಲ್ಲಿ ಕಾಯುತ್ತಿದ್ದರೆ ಈ ಸಮಯ ನಿಮಗೆ ಶುಭವಾಗಿದೆ. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಮೇಲಧಿಕಾರಿಗಳ ಮಾತು ಕಿರಿಕಿರಿ ಎನಿಸಬಹುದು. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ಯಾವುದೋ ಗುಂಗಿನಲ್ಲಿ ಇಂದಿನ ಕೆಲಸವನ್ನೆಲ್ಲ ಹಾಳುಮಾಡಿಕೊಳ್ಳುವಿರಿ. ಪರೀಕ್ಷೆಗೆ ಬೇಕಾದ ಸಿದ್ಧತೆಯನ್ನು ನಡೆಸಿ. ಸ್ವಾರ್ಥದಿಂದ ನಿಮಗೇ ತೊಂದರೆಯಾಗುವುದು ಎಂದು ಮನವರಿಕೆ ಆಗುವುದು. ದೂರದಲ್ಲಿ ಇರುವ ನಿಮಗೆ ಕುಟುಂಬದ ವಾರ್ತೆಯು ಖಷಿಯನ್ನು ಕೊಡುವುದು. ಅಪರೂಪದ ಪ್ರೀತಿಗೆ ಶರಣಾಗುವಿರಿ.
ಧನು ರಾಶಿ: ನಿಮ್ಮ ಕುಶಲ ಕರ್ಮಕ್ಕೆ ಪ್ರಶಂಸೆ ಸಿಗಲಿದೆ. ಹಣ ವ್ಯಯವನ್ನು ಅಧಿಕ ಮಾಡುವುದು ಬೇಡ. ದೇವರ ಕಾರ್ಯದಲ್ಲಿ ಮಗ್ನರಾಗುವಿರಿ. ವ್ಯಾಪಾರದಲ್ಲಿ ಲಾಭವನ್ನು ಕಂಡು ಏನಾದರೂ ಯೋಜನೆಯನ್ನು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಅಪರಿಚಿತರ ಬಗ್ಗೆ ಭಯವಿರುವುದು. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಮಾತಿನ ಪ್ರಭಾವದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಆಒ್ತರು ಬಟ್ಟೆ ಇತ್ಯಾದಿಗಳನ್ನು ಉಡುಗೊರೆಯಾಗಿ ಪಡೆಯುವಿರಿ. ಆಮದು ವ್ಯವಹಾರವನ್ನು ಇಂದು ಕಡಿಮೆ ಮಾಡಿಕೊಳ್ಳುವಿರಿ. ಉದ್ಯಮದಲ್ಲಿ ಕೆಲವು ಮಾರ್ಪಾಡಿನ ಅವಶ್ಯಕತೆ ಇರಲಿದೆ. ಪ್ರಶಂಸೆಯಿಂದ ಅಹಂಕಾರವು ಬರುವುದು. ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ. ಯಂತ್ರಗಳನ್ನು ಬಳಸಿಕೊಂಡು ಸಣ್ಣ ಉದ್ಯೋಗವನ್ನು ಆರಂಭಿಸುವಿರಿ. ವಿದೇಶದಲ್ಲಿ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಪ್ರವಚನಕಾರರಿಗೆ ಉತ್ತಮ ಅವಕಾಶಗಳು ಲಭ್ಯವಿರಲಿದೆ. ನಿಮ್ಮ ದೌರ್ಬಲ್ಯಗಳನ್ನು ಎಲ್ಲರೆದುರು ಪ್ರಕಟಪಡಿಸುವುದು ಬೇಡ.
ಮಕರ ರಾಶಿ: ನಿಮ್ಮ ಮಾತಿಗೆ ಆಕರ್ಷಿತರಾಗಬಹುದು. ತಂತ್ರದಿಂದ ಶತ್ರುವನ್ನು ಗೆಲ್ಲುವಿರಿ. ವ್ಯವಹಾರವನ್ನು ಮಾಡಲು ಓಡಾಟ ಹೆಚ್ಚಾಗಬಹುದು. ಅನಿರೀಕ್ಷಿತ ಧನವ್ಯಯದಿಂದ ಆತಂಕವು ಆಗಲಿದೆ. ರಾಜಕೀಯದಿಂದ ನಿಮಗೆ ಪ್ರೇರಣೆ ಸಿಗುವುದು. ನೀವು ಮಾತಿನಿಂದ ಮಂತ್ರ ಮುಗ್ಧರನ್ನಾಗಿ ಮಾಡುವಿರಿ. ಆರ್ಥಿಕ ಲಾಭದಿಂದ ನೀವು ಸಂತೋಷ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ನಿಮ್ಮನ್ನು ಬಲವಾದ ಕಾರಣದಿಂದ ಒಪ್ಪಿಕೊಳ್ಳಬಹುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ವಿದ್ಯಾರ್ಥಿಗಳು ಓದಿನ ಸಮಯವನ್ನು ಬದಲಿಸಿಕೊಳ್ಳುವುದು ಸೂಕ್ತ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ತಾಯಿಯ ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ಚಿಂತೆಗೆ ಒಳಗಾಗುವಿರಿ. ಉದ್ಯಮಕ್ಕೆ ಪ್ರಭಾವಿಗಳ ಕೃಪಾಕಟಾಕ್ಷ ಬೇಕು. ಅಪರಿಚಿತ ಜನರ ಭೇಟಿಯಿಂದ ಭವಿಷ್ಯಕ್ಕೆ ಅನೇಕ ಲಾಭವು ಆಗಲಿದೆ. ಅನಪೇಕ್ಷಿತ ಮಾತುಗಳನ್ನು ಹೆಚ್ಚಾಗ ಆಡುವಿರಿ.
ಕುಂಭ ರಾಶಿ: ಇಂದು ನೀವು ವಿವಾದಗಳಿಗೆ ಸಮಯವನ್ನು ಹೆಚ್ಚು ಕೊಡುವಿರಿ. ಸಲ್ಲದ ಆಸೆಗಳನ್ನು ಬೆಳಿಸಿಕೊಳ್ಳುವಿರಿ. ನಿಮ್ಮ ಭೂಮಿಯನ್ನು ಪಡೆದುಕೊಳ್ಳಲು ಸಾಹಸ ಮಾಡಬೇಕಾಗುವುದು. ಅಧ್ಯಾತ್ಮದಲ್ಲಿ ಉಂಟಾದ ಪ್ರಗತಿಯಿಂದ ನಿಮ್ಮಲ್ಲಿ ಹಲವು ಪರಿವರ್ತನೆ ತರಲಿದೆ. ನಿಮ್ಮ ನೆಮ್ಮದಿಗೆ ಸಂಗಾತಿಯು ಭಂಗವನ್ನು ಉಂಟುಮಾಡಬಹುದು. ನಿಮಗೆ ಗೊತ್ತೇ ಅಗದಂತೆ ವಂಚನೆಯಲ್ಲಿ ಸಿಕ್ಕಿಬೀಳುವಿರಿ. ಅರೋಗ್ಯದ ಸುಧಾರಣೆಗೆ ವೈದ್ಯರ ಸಲಹೆ ಅವಶ್ಯಕ. ಎಲ್ಲರ ಮೇಲೂ ವಿನಾ ಕಾರಣ ಕೋಪ ಮಾಡಿಕೊಳ್ಳುವಿರಿ. ಪರರ ವಸ್ತುವನ್ನು ಬಳಸಿ, ಸರಿಯಾಗಿ ಹಿಂದಿರುಗಿಸಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ. ಆಸಕ್ತಿ ಇಲ್ಲದೇ ಇದ್ದರೂ ಕರ್ತವ್ಯದಲ್ಲಿ ಲೋಪವಿರಬಾರದು. ಮನಸ್ಸು ಚಂಚಲದಿಂದ ಯಾರ ಮಾತನ್ನೂ ಕೇಳುವ ಮನಃಸ್ಥಿತಿಯಲ್ಲಿ ಇರಲಾರಿರಿ. ನೆಚ್ಚಿನ ವ್ಯಕ್ತಿಗಳ ಬಗ್ಗೆ ಪ್ರೀತಿ ಅಧಿಕವಾಗಬಹುದು.
ಮೀನ ರಾಶಿ: ಇಂದು ಮಾಡುವ ಕಾರ್ಯದಲ್ಲಿ ಪ್ರಾಮಾಣಿಕತೆ ಇರಲಿ. ಇಷ್ಟ ಬಂದ ಕಡೆ ನೀವು ಸುತ್ತಾಡುವಿರಿ. ಹೊಸ ಅನ್ವೇಷಣೆಯನ್ನು ನೀವು ಇಷ್ಟಪಡುವಿರಿ. ಆರ್ಥಿಕ ಸಂಕಟವನ್ನು ಸ್ನೇಹಿತರ ಸಹಾಯವನ್ನು ಪಡೆದು ಸರಿಮಾಡಿಕೊಳ್ಳುವಿರಿ. ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಇಂದು ಕಾಣುವಿರಿ. ಕೆಲವು ಪ್ರಮುಖ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿದ್ದವರಿಗೆ ಯಶಸ್ಸು ಸಿಗುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯದ ಸ್ಥಿತಿಯನ್ನು ಬಹಳ ಗಂಭೀರವಾಗಿ ನೋಡಿಕೊಳ್ಳಬೇಕು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ. ನಿಮ್ಮ ವೃತ್ತಿಯು ನಿಮಗೆ ಗೌರವವನ್ನು ಕೊಡಿಸುವುದು. ಸರಳತೆಯನ್ನು ರೂಢಿಸಿಕೊಳ್ಳುವುದು ಉತ್ತಮ ಸ್ವಭಾವವೆನಿಸಬಹುದು. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತಗತದೆವೆಂಬ ಭಯವು ಇರುವುದು. ಇನ್ನೊಬ್ಬರ ಬಳಿ ಇರುವ ನಿಮ್ಮ ವಸ್ತುವನ್ನು ಬಹಳ ಪ್ರಯತ್ನದಿಂದ ಪಡೆಯುವಿರಿ. ಬಂಧುಗಳಿಗಾಗಿ ಸಾಲ ಮಾಡುವ ಹಾಗೆ ಅಸದ ಆಗಬಹುದು. ಕೃಷಿಯಲ್ಲಿ ಆದ ಪ್ರಗತಿಯಿಂದ ಸಂತೋಷವಾಗುವುದು. ಉತ್ಸಾಹವು ಹೆಚ್ಚಾಗುದು.
-ಲೋಹಿತ ಹೆಬ್ಬಾರ್-8762924271 (what’s app only)