
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಕಾರ್ತಿಕ, ಸೌರ ಮಾಸ : ತುಲಾ, ಮಹಾನಕ್ಷತ್ರ : ವಿಶಾಖಾ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಶಿವ, ಕರಣ : ಗರಜ, ಸೂರ್ಯೋದಯ – 06 – 16 am, ಸೂರ್ಯಾಸ್ತ – 05 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:23 – 17:50, ಗುಳಿಕ ಕಾಲ 14:57 – 16:23, ಯಮಗಂಡ ಕಾಲ 12:03 – 13:30.
ಮೇಷ ರಾಶಿ: ನಿಮ್ಮ ಹೂಡಿಕೆಗೆ ಸರಿಯಾದ ಆದಾಯ ಸಿಗದೇ ಅನ್ಯ ಮಾರ್ಗವನ್ನು ಅವಲಂಬಿಸುವಿರಿ. ಆರ್ಥಿಕ ವ್ಯವಹಾರವನ್ನು ಮಾಡುವವರಿಗೆ ಅವಕಾಶ, ಆದಾಯವೂ ಹೆಚ್ಚಾಗುವುದು. ಇಂದು ನಿಮಗೆ ಮಾತಿನಿಂದಾಗಿ ತೊಂದರೆಗಳು ಬರಬಹುದು. ಕುಟುಂಬದ ಸಮಸ್ಯೆಗೆ ಧಾರ್ಮಿಕ ಕಾರ್ಯವನ್ನು ಮಾಡಿ ಪರಿಹಾರವನ್ನು ಮಾಡಿಕೊಳ್ಳಲು ಇಚ್ಛಿಸುವಿರಿ. ಇಂದು ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ. ಪ್ರಮುಖ ಜವಾಬ್ದಾರಿಯು ನಿಮ್ಮ ದೈನಂದಿನ ಯೋಜನೆಗಳಿಗೆ ಅಡ್ಡಿಯಾಗಬಹುದು. ಭಾಗ್ಯದ ಬಾಗಿಲು ತೆರೆದಿದೆ ಬರಬೇಕಾದ ಹಣವನ್ನು ನೀವೇ ಖುದ್ದಾಗಿ ಹೋಗಿ ಪಡೆಯಬೇಕಾಗಬಹುದು. ಖರ್ಚಿಗೆ ಬರುವ ಎಲ್ಲ ಮಾರ್ಗವನ್ನೂ ನಿಲ್ಲಿಸುವಿರಿ. ದೈವವೇ ಮಾಡಿಕೊಡುವ ದಾರಿಯಲ್ಲಿ ನಿರಾತಂಕವಾಗಿ ಹೋಗಬಹುದು. ಇಂದು ನಿಮ್ಮ ಬಂಧುಗಳ ಮನೆಯಲ್ಲಿ ಉಳಿಯುವುದು ಅನಿವಾರ್ಯ. ವಿನಾಕಾರಣ ಪತ್ನಿಯನ್ನು ದ್ವೇಷಿಸುವಿರಿ. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸುವಿರಿ.
ವೃಷಭ ರಾಶಿ: ಕಾರ್ಯಸ್ಥಳದ ಉದ್ದೇಶವನ್ನು ಮನದಲ್ಲಿಟ್ಟು ಸಾಗಿರಿ. ಪರಿಶ್ರಮದ ಗಳಿಕೆಯನ್ನು ಉಳಿಸಿಕೊಳ್ಳುವುದು ಉತ್ತಮ. ಇಂದಿನ ಅನಾರೋಗ್ಯವು ಕುಟುಂಬದವರ ಆರೈಕೆಯಿಂದ ಕಡಿಮೆಯಾಗುವುದು. ಗೌಪ್ಯವಾಗಿ ನಿಮ್ಮ ಅಂತರಂಗವನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸಬಹುದು. ಮಾತಿನ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾದೀತು. ವ್ಯವಹಾರದಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ವ್ಯವಹಾರದಲ್ಲಿ ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುವವರನ್ನು ಭೇಟಿಯಾಗುವಿರಿ. ವಿದೇಶಕ್ಕೆ ನಿಮಗೆ ಜ್ಞಾನ ಪ್ರಸಾರಕ್ಕೆ ಆಹ್ವಾನ ಬರಲಿದೆ. ಮೇಲಧಿಕಾರಿಗಳ ಮಾತುಗಳು ನಿಮ್ಮನ್ನು ಕಾಡಬಹುದು. ಅತಿಯಾದ ಒತ್ತಡದಿಂದ ಮಾಡುವ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಮಾತಿನ ಮೇಲೆ ನಂಬಿಕೆ ಕಡಿಮೆ ಆದೀತು. ನಿಮಗೆ ಕೊಡುವ ತರಬೇತಿಯಿಂದ ನೀವು ಕೆಲಸ ಮಾಡುವ ಸಂಸ್ಥೆಗೆ ಸಹಾಯವಾಗಲಿದೆ. ಇಂದು ಶಿಸ್ತಿಗೆ ಹೆಚ್ಚಿನ ಗಮನವನ್ನು ಕೊಡುವಿರಿ. ವೃತ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಮಿಥುನ ರಾಶಿ: ನೀವಾಡುವ ಅಸತ್ಯದ ಮಾತು ಕೂಡಲೇ ಗೊತ್ತಾಗಲಿದೆ. ಮಕ್ಕಳ ಕ್ಷೇಮದ ಬಗ್ಗೆ ಅತಿಯಾದ ಕಾಳಜಿ ಇರುವುದು. ನ್ಯಾಯಾಲಯದ ವಿಚಾರದಲ್ಲಿ ನಿಮ್ಮ ಊಹೆಯು ಸರಿಯಾಗದು. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ. ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮದ ಅಗತ್ಯವಿದೆ. ಉದ್ಯೋಗಕ್ಕಾಗಿಯೂ ಕಷ್ಟಪಡಬೇಕಾಗಬಹುದು. ಹಣದ ಅನಿರೀಕ್ಷಿತ ಖರ್ಚು ಇರುತ್ತದೆ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು. ಬಂಧುಗಳಿಂದ ವಿವಾಹಕ್ಕೆ ಒತ್ತಡಬರಲಿದೆ. ಸ್ವಂತ ವಾಹನದಿಂದ ನೀವು ಲಾಭವನ್ನು ಗಳಿಸುವಿರಿ. ಇಂದು ನಿಮಗೆ ಜೊತೆಗೆ ಯಾರೂ ಇಲ್ಲ ಎಂಬ ಅನಾಥಪ್ರಜ್ಞೆಯು ಕಾಡುವುದು. ಸಂಗಾತಿಯಿಂದ ಗೌರವವನ್ನು ಅಪೇಕ್ಷಿಸುವಿರಿ. ಇನ್ನೊಬ್ಬರ ಆಡಿದ ಮಾತು ಸತ್ಯವಾಗುವುದು ಎಂಬ ನಂಬಿಕೆ ಬರಬಹುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ.
ಕರ್ಕಾಟಕ ರಾಶಿ: ತಂದೆಯ ಜೊತೆ ಕೆಲಸ ಮಾಡುವಾಗ ಮನಸ್ತಾಪ ಬರಲಿದೆ. ಅತಿಥಿ ಸತ್ಕಾರದಿಂದ ನಿಮಗೆ ಸಂತೋಷ. ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ಆದ ನಷ್ಟಕ್ಕೆ ದುಃಖಿಸುವಿರಿ. ಸ್ಥಿರಾಸ್ತಿಯನ್ನು ವ್ಯವಹಾರ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ವೆಚ್ಚಗಳ ಹೆಚ್ಚಳವು ನಿಮಗೆ ಉಳಿತಾಯವನ್ನು ಮಾಡಲು ಕಷ್ಟಕರವಾಗಿಸುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರು ನಿಮಗೆ ಸಹಾಯ ಮಾಡುತ್ತಾರೆ. ವಯಸ್ಸಿಗೆ ಬಂದ ಮಕ್ಕಳ ವಿವಾಹದ ಚಿಂತೆ ಇರುವುದು. ಪ್ರೀತಿಯಿಂದ ಕೊಟ್ಟ ವಸ್ತುವನ್ನು ಮತ್ತೆ ಕೊಡುವುದು ಬೇಡ. ಇಂದು ನೀವು ಸಂದೇಶವಾಹಕರಾಗಿ ಕೆಲಸ ಮಾಡುವಿರಿ. ಸಂಗಾತಿಯ ಜೊತೆ ಸಣ್ಣ ವಿಚಾರಗಳಿಗೂ ಜಗಳವಾಡುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಆದ ಪ್ರಗತಿಯಿಂದ ನಿಮಗೆ ಸಂತೋಷವಾಗಲಿದೆ. ಶಕ್ತಿಮೀರಿದ ಕಾರ್ಯದಿಂದ ನಿಮಗೆ ದೇಹಪೀಡೆ. ಸಮಯಸ್ಫೂರ್ತಿಯಿಂದ ಇಂದಿನ ಅನಾಹುತವನ್ನು ತಪ್ಪಿಸಿಕೊಳ್ಳಬಹುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿ, ಸುಮ್ಮನಾಗುವಿರಿ.
ಸಿಂಹ ರಾಶಿ: ನೀವೇ ಆಪತ್ತಿನಲ್ಲಿರುವಾಗ ಯಾರ ಸಂಕಷ್ಟವನ್ನು ಪರಿಹರಿಸಲಾಗದು. ಸಾಹಿತ್ಯಾಸಕ್ತಿಯುಳ್ಳವರಿಗೆ ಹೊಸ ದಿಕ್ಕು ತೋಚುವುದು. ಬಂಧುಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವರು. ವ್ಯಾಪಾರವು ಲಾಭಾಂಶವನ್ನು ಹೆಚ್ಚು ಪಡೆಯುವುದು. ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಸಂಗಾತಿಯೊಂದಿಗೆ ಸಮಾಲೋಚಿಸಿ ಕೆಲಸ ಮಾಡಿದರೆ ಲಾಭವನ್ನು ಪಡೆಯುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದಿರಿ. ಆಕಸ್ಮಿಕವಾದ ವಿಷಯದಿಂದ ನಿಮಗೆ ದುಃಖವಾಗುವುದು. ಕೊಡಬಹುದು. ಅಶಿಸ್ತಿನ ಜೀವನವು ನಿಮಗೆ ಸಮಾಧನಾವನ್ನು ಕೊಡದು. ಅನಾರೋಗ್ಯದ ಕಾರಣದಿಂದ ದೇಹದ ಪೂರ್ಣ ತಪಾಸಣೆ ಮಾಡಿಸುವಿರಿ. ನೀವು ಯಾರ ಮಾತನ್ನೂ ಕೇಳುವುದಿಲ್ಲ. ನಿಮ್ಮ ತಪ್ಪನ್ನು ಬೇರೆಯವರು ಎತ್ತಿ ಹೇಳುವುದು ನಿಮಗೆ ಸಿಟ್ಟು ಬರಬಹುದು. ಯಾರನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ.
ಕನ್ಯಾ ರಾಶಿ: ಮನೆಯ ನಿರ್ಧಾರಗಳನ್ನು ಇಂದೇ ಆದಷ್ಟು ಬೇಗ ಪಡೆಯುವಿರಿ. ಇಂದು ನಿಮ್ಮದೇ ಆದ ಒರಟುತನವು ಇತರರಿಗೆ ಕಷ್ಟಕೊಡುವುದು. ವ್ಯವಹಾರದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನ ಲಾಭವು ಸಿಗಬಹುದು. ದುಡುಕಿ ಆಡಿದ ಮಾತಿನಿಂದ ಸತ್ಯವು ಹೊರಬರಬಹುದು. ಆಸ್ತಿಯ ಕಲಹವನ್ನು ನ್ಯಾಯಾಲಯಕ್ಕೆ ತಡಗೆದುಕೊಂಡು ಹೋಗುವಿರಿ. ವಿನಾಕಾರಣ ಯಾರ ಮೇಲಾದರೂ ಅಧಿಕಾರವನ್ನು ಚಲಾಯಿಸುವಿರಿ. ಪೂರ್ವಜರ ಆಸ್ತಿಯಿಂದ ಲಾಭ ಆಗುವುದು. ಅಪರಿಚಿತವಾದ ಕೆಲವು ಸ್ಥಳದಲ್ಲಿ ಜಾಗರೂಕರಾಗಿ ಓಡಾಟಮಾಡಿ. ಯೋಚಿಸದೆ ಯಾವುದೇ ಭರವಸೆಗಳನ್ನು ನೀಡುವುದು ಬೇಡ. ಕೆಲಸದಲ್ಲಿ ಪ್ರಾಮಾಣಿಕತೆ ಕಡಿಮೆ ಆದಂತೆ ತೋರಬಹುದು. ಪಾಲುದಾರಿಕೆಯಿಂದ ಹೊರಬರವುದು ಒಳ್ಳೆಯದು ಎಂದು ಅನ್ನಿಸಬಹುದು. ಸ್ಪರ್ಧಾಮನೋಭಾವವು ನಿಮಗೆ ಇಷ್ಟವಾಗದು. ನಿಮ್ಮ ಕಾರ್ಯಗಳು ಸೂಚನೆಯ ಅನುಸಾರವಾಗಿ ನಡೆಯಲಿ. ಯಾವುದನ್ನಾದರೂ ಆಯ್ಕೆ ಮಾಡುವಾಗ ನಿಮ್ಮನೇ ನೀವು ಕೇಳಿಕೊಳ್ಳುವುದು ಉತ್ತಮ. ಆತ್ಮೀಯವಾಗಿ ಮಾತನಾಡುವವರು ಇಂದು ಸಿಗಬಹುದು.
ತುಲಾ ರಾಶಿ: ನಿಮಗೆ ನೀಡಿದ ಭರವಸೆಗಳನ್ನು ಆಗಾಗ ಸ್ಮರಣೆಗೆ ತರುವಿರಿ. ಇಂದು ನೀವು ವ್ಯವಸ್ಥೆಯನ್ನು ಸರಿ ಮಾಡುವ ಯೋಜನೆ ಹಾಕಿಕೊಳ್ಳುವಿರಿ. ಉದ್ಯೋಗದ ಬದಲಾವಣೆ ಆಗಲಿದ್ದು ಸರಿಯಾದ ಪ್ರತ್ಯುತ್ತರ ಸಿಗದೇ ಬೇಸರವಾಗುವುದು. ಸಮಯವನ್ನು ಆನಂದಿಸಲು ಸಾಧ್ಯವಾಗುತ್ತದೆ. ಮಾತನಾಡುವಾಗ ಮತ್ತು ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆ ಅಗತ್ಯ. ಎಚ್ಚರಿಕೆಯಿಂದ ನಿಮ್ಮ ಹೆಜ್ಜೆಯನ್ನು ಇಡಿ. ಅಳುಕಿನಿಂದ ಇರುವಿರಿ. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ತೃಪ್ತಿ ಸಿಗದು. ನಿಮ್ಮ ಬಗ್ಗೆ ಕಪೋಲಕಲ್ಪಿತವೇ ನಿಜ ಸಂಗತಿಗಿಂತ ಅಧಿಕ ಪ್ರಸಾರವಾಗಲಿದೆ. ಯಾರದ್ದೋ ಮೂಲಕ ನೀವು ಶತ್ರುಗಳ ಯೋಜನೆಯನ್ನು ತಿಳಿಯುವಿರಿ. ಸಹನೆಯಿಂದ ಆಗುವ ಲಾಭವು ಅನುಭವಕ್ಕೆ ಬರಬಹುದು. ಮಕ್ಕಳು ನಿಮ್ಮ ಮಾತನ್ನು ಕೇಳದೇ ತಮಗೆ ತೋಚಿದಂತೆ ನಡೆದುಕೊಳ್ಳುವುದು ನಿಮಗೆ ಇಷ್ಟವಾಗದು. ಪದೋನ್ನತಿಯ ವಿಚಾರದಲ್ಲಿ ನಿಮಗೆ ಸ್ಪಷ್ಟ ಮಾಹಿತಿ ಸಿಗದು. ನಿಮ್ಮ ಸಕಾರಾತ್ಮಕ ಭಾವನೆಗಳಿಗೆ ಪೆಟ್ಟುಬೀಳುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ: ನಿಮ್ಮ ಪರವಾಗಿ ನಿಲ್ಲುವವರಿಗೆ ಕೃತಜ್ಞತೆಯನ್ನಾದರೂ ತಿಳಿಸಿ. ವಿಳಂಬವಾದ ಕಾರ್ಯಕ್ಕೆ ದಂಡಕಟ್ಟುವ ಸಂದರ್ಭ ಬರಲಿದೆ. ಸಾಲಗಾರರಿಗೆ ಚಿಂತೆ ಇರಲಿದೆ. ಪಾಲುದಾರಿಕೆಯಲ್ಲಿ ನಿಮಗೆ ಹೊಂದಾಣಿಕೆಯ ಕೊರತೆ ಆಗಬಹುದು. ಅನಿರೀಕ್ಷಿತ ವೆಚ್ಚವನ್ನು ಮಾಡಬೇಕಾಗಬಹುದು. ಕುಟುಂಬದ ನಿರೀಕ್ಷೆಗಳನ್ನು ಪೂರೈಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಉದ್ಯಮಿಗಳು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಮಾನಸಿಕ ಒತ್ತಡಗಳು ನಿಮ್ಮ ಕೆಲಸವನ್ನು ಹಾಳುಮಾಡುವುದು. ಸಂಗಾತಿಯ ಮೌನದಿಂದ ನಿಮಗೆ ಆತಂಕ ಹುಟ್ಟಬಹುದು. ನಿಮ್ಮ ವಿರುದ್ಧದ ರಾಜಕೀಯ ನಡೆ ನಿಮಗೆ ಗೊತ್ತಾಗುವುದು. ಬೇಕಾದಷ್ಟೇ ಮಾತುಗಳನ್ನು ಮಾತ್ರ ಆಡಿರಿ. ಇಷ್ಟಪಟ್ಟ ವಸ್ತುವು ಕಾಣೆಯಾಗುವುದು. ನಿಮಗೆ ನೇರವಾಗಿ ಸಂಬಂಧಪಟ್ಟ ವಿಚಾರಗಳ ಬಗ್ಗೆ ಮಾತ್ರ ಪ್ರವೇಶಿಸಿ. ಸಂಗಾತಿಯ ಮಾತುಗಳಿಂದ ನೀವು ಸಿಟ್ಟಾಗಬಹುದು. ಇಂದು ನಿಮ್ಮನ್ನು ಅಪರಿಚಿತರು ಭೇಟಿ ಮಾಡಬಹುದು. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು.
ಧನು ರಾಶಿ: ಕೊನೆಗೂ ಅಂದುಕೊಂಡ ವೃತ್ತಿಯನ್ನು ಪಡೆಸ ಸಂತಸ ನಿಮಗಿರಲಿದೆ. ವ್ಯಾಪಾರಕ್ಕೆ ಬೇಕಾದ ಹಣಕಾಸಿನ ಸಂಗ್ರಹವನ್ನು ನಾಲ್ಕಾರು ಜನರಿಂದ ಪಡೆಯುವಿರಿ. ಮಕ್ಕಳ ವಿಚಾರದಲ್ಲಿ ಅಧಿಕ ಬದಲಾವಣೆ ಇರಲಿದೆ. ಪ್ರೀತಿಯು ಸುಖಾಂತ್ಯ ಕಾಣಬಹುದು. ವ್ಯಾಪಾರಸ್ಥರು ಶ್ರಮದಾಯಕ ಲಾಭವನ್ನು ಮಾಡಿಕೊಳ್ಳುವರು. ದೇಹದ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳದೇ ಗೌಪ್ಯವಾಗಿ ಇಟ್ಟಕೊಳ್ಳುವಿರಿ. ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಆಗಬಹುದು. ಪ್ರಭಾವಿ ವ್ಯಕ್ತಿಗಳ ಭೇಟಿಯು ಸಂತೋಷವನ್ನು ಕೊಡುವುದು. ಮಕ್ಕಳ ಶಿಕ್ಷಣಕ್ಕೆ ಕೊಟ್ಟ ಹಣ ವ್ಯರ್ಥವೆನಿಸುವುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಿ ನಗೆಪಾಟಲಿಗೆ ಸಿಕ್ಕಿಕೊಳ್ಳುವಿರಿ. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮಗೆ ಉಪಯುಕ್ತ ಸಲಹೆಗಳು ಸಿಗ ಬಹುದು. ನಿಮ್ಮ ಕಾರ್ಯವನ್ನು ಕೊನೆಯಲ್ಲಿ ಬದಲಿಸುವುದು ನಿಮಗೆ ಸಿಟ್ಟು ತಂದೀತು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ನ್ಯಾಯಸಮ್ಮತವಾದ ನಿಮ್ಮ ನಿಲುವು ಅನ್ಯರ ಕಾರಣದಿಂದ ಬದಲಾಗುವುದು.
ಮಕರ ರಾಶಿ: ನಿಮ್ಮ ವಸತಿಯಲ್ಲಿ ಪರಿಚಿತರಿಗೆ ಅವಕಾಶ ಕೊಡುವಿರಿ. ಗುರುತಿಲ್ಲದ ಮಹಿಳೆಯರಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕುವಿರಿ. ವಿದ್ಯಾಭ್ಯಾಸದಲ್ಲಿ ಅತಂತ್ರ ಸ್ಥಿತಿಯು ಬರಬಹುದು. ಅವಶ್ಯಕತೆ ಇರುವಷ್ಟು ಮಾತ್ರ ಮಾತನಾಡಿ. ನಿಮಗೆ ಅತಿಥಿ ಸತ್ಕಾರವು ನಡೆಯಬಹುದು. ಉದ್ಯೋಗಸ್ಥರಿಗೆ ಕೆಲಸದ ಕ್ಷೇತ್ರದಲ್ಲಿ ಉತ್ತಮ ಅವಕಾಶ ಪಡೆಯುವಿರಿ. ನಿಮ್ಮ ಖ್ಯಾತಿ ಹೆಚ್ಚಾಗಬಹುಸು. ಹೆಚ್ಚು ಹಣವನ್ನು ಕೊಂಡೊಯ್ಯುವಾಗ ಜಾಗರೂಕರಾಗಿರಿ. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ಇಂದಿನ ಅಧಿಕ ಸಮಯದಲ್ಲಿ ಮೌನವಾಗಿಯೇ ಇರುವಿರಿ. ಯಾವುದೋ ಹತ್ತಾರು ವಿಚಾರದಲ್ಲಿ ನೀವು ಒತ್ತಡಕ್ಕೆ ಒಳಗಾಗುವಿರಿ. ನೇರ ಮಾತಿನಿಂದ ಬೇಸರವನ್ನು ಉಂಟುಮಾಡುವಿರಿ. ನಿಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಡುವುದು ಬೇಡ. ಕಳೆದುಕೊಂಡಿದ್ದರ ಬಗ್ಗೆ ಹೆಚ್ಚು ಆಲೋಚನೆಯು ಇರಲಿದೆ. ನಿಮ್ಮ ಬಗ್ಗೆ ಸಕಾರಾತ್ಮಕ ಮಾತುಗಳು ಕೇಳಿಬರಬಹುದು. ನಿಮಗೆ ಅನುಕೂಲವಾಗುವ ಕಡೆ ಒಲವು. ನಿಮ್ಮ ಇಂದಿನ ಅಸಹಾಯಕ ಸ್ಥಿತಿಯನ್ನು ಯಾರಲ್ಲಿಯೂ ಹೇಳಿಕೊಳ್ಳುವುದು ಕಷ್ಟ.
ಕುಂಭ ರಾಶಿ: ಪ್ರತಿಫಲವಿಲ್ಲದೇ ನಿಮಗೆ ಅತ್ಯಂತ ಬೇಸರವಾಗಲಿದೆ. ಇಂದು ಕೂಡಿಟ್ಟ ಹಣದಿಂದ ವಾಹನ ಖರೀದಿ ಮಾಡುವ ಯೋಚನೆ ಬರುವುದು. ಆಸ್ತಿ ಸಂಬಂಧಿತ ಕೆಲಸವನ್ನು ಪೂರ್ಣಗೊಳಿಸಲು ಇದು ಸರಿಯಾದ ಸಮಯ. ಸಾಹಸಕ್ಕೆ ಕೈಹಾಕುವುದು ಬೇಡ. ನೆಮ್ಮದಿಯನ್ನು ನೀವು ಹಾಳುಮಾಡಿಕೊಳ್ಳುವಿರಿ. ಸಂಗಾತಿಯಿಂದ ಸಿಗುವ ಸುಖದಿಂದ ನೀವು ವಂಚಿತರಾಗುವಿರಿ. ಯೋಜಿತ ಕಾರ್ಯಗಳೆಲ್ಲ ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಹಣವನ್ನು ಹೂಡಿಕೆ ಮಾಡುವುದು ನಿಮಗೆ ಲಾಭದಾಯಕವಾಗಿರುತ್ತದೆ. ಆಲಸ್ಯವು ಅಧಿಕವಾಗಬಹುದು. ಸಾಧಿಸಲಾಗದ ಕೆಲಸಕ್ಕೆ ಹೆಚ್ಚು ಶ್ರಮವನ್ನು ಹಾಕುವಿರಿ. ಮನೆಯ ವಿಷಯಗಳಿಗೆ ತಕ್ಷಣದ ಗಮನ ಬೇಕು. ಬಿಡುವಿನ ವೇಳೆಯಲ್ಲಿ ಹೆಚ್ಚಿನ ಸಂಪಾದನೆ ಹೋಗುವಿರಿ. ನಿಮ್ಮ ನಿರ್ಲಕ್ಷ್ಯವು ದುಬಾರಿಯಾಗಬಹುದು. ಸ್ನೇಹಸಂಬಂಧಗಳನ್ನು ದೂರ ಮಾಡಿಕೊಳ್ಳುವಿರಿ. ಸ್ತ್ರೀಯರು ವಿಶೇಷವಾಗಿ ಸಮಾಜದ ಪ್ರಮುಖ ಸ್ಥಾನವನ್ನು ಅಲಂಕರಿಸುವರು.
ಮೀನ ರಾಶಿ: ಮೆಚ್ಚುಗೆಯ ಮಾತುಗಳಿಂದ ಎಂತಹವರನ್ನೂ ವಶಪಡಿಸಿಕೊಳ್ಳುವಿರಿ. ಇಂದು ನೀವು ಹೊಸ ಆಲೋಚನೆಗಳಿಂದ ತುಂಬಿರುತ್ತೀರಿ. ಇದೇ ಉತ್ಸಾಹದ ದಿನಗಳಾಗಿರಲಿವೆ. ನಿಮ್ಮ ಕೆಲಸವು ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ನೀಡುತ್ತದೆ. ಕೃಷಿಯಲ್ಲಿ ಇಂದು ನಷ್ಟ. ಮಾನಿಸಕವಾಗಿ ಕುಗ್ಗುವ ಸಾಧ್ಯತೆ ಇದೆ. ದುರಾಸೆ ಪಡದೆ ಬಂದಿದ್ದನ್ನು ಸ್ವೀಕರಿಸಿ ದೊಡ್ಡವರಾಗುವಿರಿ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ಮಾನಸಿಕವಾಗಿ ಕುಗ್ಗಿರುವಿರಿ. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಹಣದಿಂದ ನಿಮಗೆ ಸ್ಥಾನ ಸಿಗುವುದು. ಸಂಗಾತಿ ಮತ್ತು ಮಕ್ಕಳ ಜೊತೆ ಅನವಶ್ಯಕ ವಾದ ವಿವಾದವು ಆಗಬಹುದು. ನಿಮ್ಮ ತಪ್ಪಿಗೆ ಬೇರೆಯವರನ್ನು ಬೆರಳು ಮಾಡುವಿರಿ. ಸಹಾಯವನ್ನು ಯಾವುದೇ ಮುಲಾಜಿಲ್ಲದೇ ಕೇಳುವಿರಿ. ನಿಮ್ಮಿಂದಾಗದ ಕಾರ್ಯವನ್ನು ಅನ್ಯರಿಂದ ಮಾಡಿಸುವಿರಿ. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು.
ಲೋಹಿತ ಹೆಬ್ಬಾರ್ 8762924271 (what’s app only)