ನಿತ್ಯ ಭವಿಷ್ಯ; ಇಂದು ಈ ರಾಶಿಯವರು ಸಂಗಾತಿಯ ಒತ್ತಡದಿಂದ ಧನನಷ್ಟ ಮಾಡಿಕೊಳ್ಳುವರು…
ಅಕ್ಟೋಬರ್ 28, 2026ರ ನಿತ್ಯ ಭವಿಷ್ಯವು ಎಲ್ಲಾ 12 ರಾಶಿಗಳಿಗೆ ದಿನದ ಸಂಪೂರ್ಣ ವಿವರಗಳನ್ನು ನೀಡುತ್ತದೆ. ಹಣಕಾಸು, ಸಂಬಂಧಗಳು, ವೃತ್ತಿ ಮತ್ತು ಆರೋಗ್ಯದ ಕುರಿತು ಪ್ರಮುಖ ಜ್ಯೋತಿಷ್ಯ ಸಲಹೆಗಳು ಇಲ್ಲಿವೆ. ಸಂಗಾತಿಯ ಒತ್ತಡದಿಂದ ಧನನಷ್ಟವಾಗುವ ಸಾಧ್ಯತೆ ಬಗ್ಗೆಯೂ ಎಚ್ಚರಿಕೆ ಇದೆ. ನಿಮ್ಮ ರಾಶಿಫಲ ತಿಳಿದು ಇಂದಿನ ದಿನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಿ.

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿಯ ಬುಧವಾರದಂದು ಅವಿಶ್ರಾಂತಿಯ ಕಾರ್ಯ, ಓಡಾಟ, ವಿದೇಶದಿಂದ ಕರೆ, ಹಣದ ಮೋಹ, ಪರೀಕ್ಷೆಯ ಭೀತಿ, ಪಾಂಡಿತ್ಯ ಪ್ರದರ್ಶನ, ಹೇಳಲಾಗದ ಸಂಕಟ ಇವೆಲ್ಲ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ರೋಹಿಣೀ, ಯೋಗ : ವ್ಯತಿಪಾತ್, ಕರಣ : ವಣಿಜ, ಸೂರ್ಯೋದಯ – 06 – 13 am, ಸೂರ್ಯಾಸ್ತ – 05 – 53 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:03 – 13:31, ಯಮಗಂಡ ಕಾಲ 07:41 – 09:08, ಗುಳಿಕ ಕಾಲ 10:36 – 12:03
ಮೇಷ ರಾಶಿ : ಬಹಳ ಪರಿಶ್ರಮದಿಂದ ಇಂದು ಸ್ಥಳವನ್ನು ತಲುಪುವಿರಿ. ನಿಮಗೆ ದೂರದಲ್ಲಿರುವ ಮಕ್ಕಳನ್ನು ಕಾಣದೇ ಬೇಸರವಾಗಲಿದೆ. ಕಾನೂನಿಗೆ ವಿರುದ್ಧವಾದ ಮಾರ್ಗದಲ್ಲಿ ಹಣಸಂಪಾದನೆಯನ್ನು ಮಾಡುವ ಯೋಚನೆ ಬರುವುದು. ನಿಮ್ಮ ಉದ್ಯಮದಕ್ಕೆ ಸೂಕ್ತವಾದ ವ್ಯಕ್ತಿಗಳನ್ನು ಸೇರಿಸಿಕೊಳ್ಳಿ. ದಾಂಪತ್ಯದಲ್ಲಿ ಹಳೆಯ ಬೇಸರವೆಲ್ಲ ದೂರವಾಗಿ ಸಂತೋಷವು ಇರಲಿದೆ. ಹೊಸಪ್ರದೇಶದಿಂದ ನಿಮಗೆ ಉತ್ಸಾಹ ಬರಲಿದೆ. ಇಂದು ವಿಘಟನೆಗೆ ಆಗಲು ಅವಕಾಶವು ಕೊಡುವುದು ಬೇಡ.
ವೃಷಭ ರಾಶಿ : ನಿಮ್ಮ ಆಸೆಯನ್ನು ಹೇಳಿಕೊಳ್ಳಬೇಕೆಂದರೂ ಆಗದು. ಇಂದು ಎಲ್ಲದಕ್ಕೂ ವಿರೋಧ ಮಾಡುವುದು ನಿಮಗೇ ಇದು ಸರಿ ಕಾಣದು. ಕುಟುಂಬದಲ್ಲಿ ಅನಿರೀಕ್ಷಿತ ತಿರುವು ಬರಲಿದೆ. ಅನಾರೋಗ್ಯದಿಂದ ಕಷ್ಟಪಡುವಿರಿ. ಬೇರೆಯವರಿಗೆ ಕೊಡುವ ಹಣವು ನಿಮ್ಮ ಕೈಸೇರುವುದು. ಕೆಲವರ ಮೇಲೆ ನಿಮಗೆ ಅಸಮಾಧಾನ ಇರಲಿದೆ. ಯಾರಾದರೂ ನಿಮ್ಮ ಗುಟ್ಟನ್ನು ಹೊರಹಾಕಬಹುದು. ನಿಮ್ಮ ರಹಸ್ಯವನ್ನು ಬಿಟ್ಟುಕೊಡಲಾರಿರಿ. ಇಂದು ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು.
ಮಿಥುನ ರಾಶಿ : ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ನೀವು ಕಳೆಯುವಿರಿ. ಖರೀದಿಯನ್ನು ಮಾಡುವಿರಿ. ಸಂತಾನದ ಬಯಕೆಯನ್ನು ಹಂಚಿಕೊಳ್ಳುವಿರಿ. ಮನೆಯಲ್ಲಿ ನಿಮಗೆ ಕಾರ್ಯಬಾಹುಲ್ಯವಿರುವುದು. ಬಳಕೆಯಾದ ವಾಹನವನ್ನು ಖರೀದಿಸುವಿರಿ. ತೆಗೆದುಕೊಂಡ ಹಣವನ್ನು ಪಡೆಯಲು ನಿಮಗೆ ಕಷ್ಟವಾದೀತು. ನಿಮ್ಮವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಹಿರಿಯರ ಎದುರು ವಿನಯದಿಂದ ಮಾತನಾಡಿ.
ಕರ್ಕಾಟಕ ರಾಶಿ : ಅಧ್ಯಾತ್ಮದ ಆಸಕ್ತಿಗೆ ಯೋಗ್ಯವಾದ ಜನ ಹಾಗೂ ವಿಷಯ ಸಿಗಲಿದೆ. ಮಾಹಿತಿಯ ಕೊರತೆಯಿಂದ ತಪ್ಪಾದ ಕೆಲಸಕ್ಕೆ ಪಶ್ಚಾತ್ತಾಪ ಪಡುವಿರಿ. ನಿಮಗೆ ಗೌರವವು ಸಿಗದ ಕಡೆ ನೀವು ಹೋಗಲು ಇಷ್ಟಪಡುವುದಿಲ್ಲ. ನಿಮ್ಮ ಗಟ್ಟಿಯಾದ ಮಾತು ಮಕ್ಕಳಿಗೆ ಅತಿಯಾಗಬಹುದು. ಅತಿಯಾದ ಮಾತು ನಿಮಗೆ ಕಿರಿಕಿರಿ ಅನಿಸೀತು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ಅತಿ ನಿದ್ರೆಯಿಂದ ತಲೆ ಭಾರವೆನಿಸುವುದು.
ಸಿಂಹ ರಾಶಿ : ನಿಮ್ಮ ಸಂಕಟವನ್ನು ಆಪ್ತರ ಜೊತೆ ಹಂಚಿಕೊಂಡು ಸಮಾಧಾನಪಟ್ಟುಕೊಳ್ಳುವಿರಿ. ನಿದ್ರೆಯಲ್ಲಿ ಕಂಡ ಕನಸಿನಿಂದ ಭೀತರಾಗುವಿರಿ. ನಿಮಗೆ ಸಂಪತ್ತು ಯಾರಿಗಾದರೂ ದಾನ ಮಾಡಬೇಕು ಎಂದು ಅನ್ನಿಸುವುದು. ರಾಜಕೀಯವಾದ ಒತ್ತಡವು ನಿಮ್ಮ ಮೇಲೆ ಬರಲಿದೆ. ನಿಮ್ಮ ಮಾತಿಗೆ ಸಮಜಾಯಿಷಿ ಕೊಡಲು ಹೋಗುವ ಅವಶ್ಯಕತೆ ಇಲ್ಲ. ಒಂಟಿತನದ ಆಲೋಚನೆಯು ಪೂರ್ಣವಾಗದು. ಚರಾಸ್ತಿಯನ್ನು ರಕ್ಷಿಸಿಕೊಳ್ಳಲು ಹೋರಾಟ ನಡೆಸಬೇಕು.
ಕನ್ಯಾ ರಾಶಿ : ದಿನದ ಆರಂಭದಲ್ಲಿಯೇ ನಿಮ್ಮಲ್ಲಿ ಉತ್ಸಾಹದ ಕೊರತೆ ಕಾಣಿಸುವುದು. ಯಾರದೋ ವಿಚಾರಕ್ಕೆ ನೀವು ಸಮಯವನ್ನು ಕೊಡಬೇಕಾಗುವುದು. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಸಲ್ಲಿಸಿ. ವಿದೇಶದಲ್ಲಿ ಇರುವವರ ಬಗ್ಗೆ ಚಿಂತೆ ಇರಲಿದೆ. ಉದ್ಯೋಗದ ಕಾರಣಕ್ಕೆ ಮನೆಯಿಂದ ದೂರ ಇರುವಿರಿ. ಸಂತೋಷದ ಸಂದರ್ಭಗಳನ್ನು ನೆನಪಿಸಿಕೊಳ್ಳುವಿರಿ. ಮನಸ್ತಾಪಗಳು ದೂರವಾಗಿ ಕುಟುಂಬದಲ್ಲಿ ಅನ್ಯೋನ್ಯತೆ ಎದ್ದು ತೋರುವುದು.
ತುಲಾ ರಾಶಿ : ತಂದೆಯಿಂದ ಅಪರೂಪದ ಉಡುಗೊರೆ ಸಿಗಲಿದೆ. ವಾಹನ ಸಂಚಾರವು ಕಡಿಮೆ ಇರಲಿ. ನಿಮ್ಮ ನಿರ್ಣಯಕ್ಕೆ ವಿರುದ್ಧವಾಗಿ ಯಾರಾದರೂ ಮಾತನಾಡಬಹುದು. ಸಂಗಾತಿಯ ಜೊತೆ ಅನಗತ್ಯ ವಸ್ತುಗಳ ಖರೀದಿಯ ಕಾರಣದಿಂದ ಕಲಹವಾಗಲಿದೆ. ಪಡೆದುಕೊಳ್ಳುವ ಭೂಮಿಯನ್ನು ಸರಿಯಾಗಿ ಪರೀಕ್ಷಿಸಿ. ತಾಯಿಯ ಸಂಪತ್ತನ್ನು ಹೆಣ್ಣು ಮಕ್ಕಳು ಪಡೆಯಲು ಬಯಸುವರು. ಸ್ನೇಹಿತರ ಬಳಗ ನಿಮ್ಮನ್ನು ಕೆಟ್ಟ ಕೆಲಸಕ್ಕೆ ಪ್ರೇರಿಸಬಹುದು.
ವೃಶ್ಚಿಕ ರಾಶಿ : ದಾಂಪತ್ಯದ ಸಮಸ್ಯೆಯು ನ್ಯಾಯಾಲಯದವರೆಗೂ ಹೋಗಬಹುದು. ಪರಸ್ಪರ ಬಗೆ ಹರಿಸಿಕೊಳ್ಳುವುದು ಕ್ಷೇಮ. ಅಧಿಕಾರಕ್ಕೆ ತಕ್ಕ ಹಿಡಿತವು ನಿಮ್ಮಲ್ಲಿ ಇರದು. ಒಂದೇ ಸಮಯಕ್ಕೆ ಹೆಚ್ಚು ಜವಾಬ್ದಾರಿಯನ್ನು ನಿರ್ವಹಿಸುವುದು ಕಷ್ವಾಗಲಿದೆ. ನೀವು ಏಕಾಂಗಿ ಎಂಬ ಮನೋಭಾವವು ಬರಲಿದೆ. ಅಂತಃಕರಣ ಶುದ್ಧಿಯು ವಿಶ್ವಾಸವನ್ನು ಹೆಚ್ಚಿಸುವುದು. ಉತ್ಸಾಹಕ್ಕೆ ನಿಮ್ಮದೇ ಆದ ಕಾರಣವನ್ನು ಕಂಡುಕೊಳ್ಳಬೇಕು. ಸುಮ್ಮನೇ ಇದ್ದರೆ ಆಗದು. ನಿಮ್ಮ ದಿನಚರಿ ನಿಧಾನವಾಗಿರುತ್ತದೆ.
ಧನು ರಾಶಿ : ಇಂದು ಮುಖ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಾಧ್ಯವಾಗದು. ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ತೊಂದರೆಗಳು ಬರಬಹುದು. ಹಿತಶತ್ರುಗಳ ಬೆಂಬಲವು ಅಬದ್ಧವಾದ ಕೆಲಸಕ್ಕೆ ಸಿಗುವುದು. ವ್ಯಾಪಾರದಲ್ಲಿ ಹಿನ್ನಡೆಯಾಗಲಿದೆ. ಅಪರಿಚಿತರು ಆಪ್ತರೆಂದು ಬರಬಹುದು. ನಿಮ್ಮದೇ ಸತ್ಯವೆಂದು ವಾದಿಸುವುದು ಸರಿಯಾಗದು. ಆರ್ಥಿಕತೆಯನ್ನು ನೀವು ಬೆಳೆಸಿಕೊಳ್ಳಲು ಹೆಚ್ಚು ಶ್ರಮಿಸುವಿರಿ. ವಾಕ್ಸಮರದಿಂದ ನಿಮಗೇ ನಷ್ಟ. ನೇರ ನುಡಿಯಿಂದ ಬೇಸರವು ಉಂಟಾದೀತು. ಸರಳ ಜೀವನವನ್ನು ಜೊತೆಗಾರರಿಂದಲೂ ನೀವು ಇಷ್ಟಪಡುವಿರಿ.
ಮಕರ ರಾಶಿ : ನಿಮ್ಮ ವಿವಾಹದ ಇಚ್ಛೆಯನ್ನು ಮನೆಯಲ್ಲಿ ಹೇಳುವಿರಿ. ದಾಂಪತ್ಯದಲ್ಲಿ ಪ್ರೀತಿಯು ಕಡಿಮೆ ಆಗಬಹುದು. ಹೊಸ ಉದ್ಯೋಗದ ಸ್ಥಳವು ನಿಮಗೆ ಉತ್ಸಾಹವನ್ನು ಕೊಡುವುದು. ಹೊಸ ಸ್ನೇಹ ಬಳಗವನ್ನೂ ಕಟ್ಟಿಕೊಳ್ಳುವಿರಿ. ಸಂಗಾತಿಯಿಂದ ಉಡುಗೊರೆಯು ನಿಮಗೆ ಸಿಗಲಿದೆ. ಪ್ರಯಾಣವನ್ನು ಎಲ್ಲರ ಒತ್ತಾಯದಿಂದ ನಿಲ್ಲಿಸುವಿರಿ. ಮಾತಿನಲ್ಲಿ ಅಧಿಕಾರದ ಗತ್ತು ಕಾಣಿಸುವುದು. ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಮಾಡಲು ಅವಕಾಶ ಬರುವುದು.
ಕುಂಭ ರಾಶಿ : ಮನೆಯ ವಾತಾವರಣವು ಸಂತೋಷವನ್ನು ಕೊಡುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು. ಇಂದು ನಿಮಗಾಗುವ ಕಾರ್ಯವನ್ನು ಬಿಡದೇ ಮಾಡಿಸಿಕೊಳ್ಳುವಿರಿ. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಮನಸ್ಸು ಬಹಳ ಚಂಚಲವಾಗುವುದು. ನಿಮ್ಮ ಸಿದ್ಧಾಂತವನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸುವುದು. ನಿಮ್ಮ ಗುಣವನ್ನು ಅಪಾರ್ಥ ಮಾಡಿಕೊಂಡಾರು.
ಮೀನ ರಾಶಿ : ಅನ್ಯ ಮಾರ್ಗದಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಸರ್ಕಾರದ ಕೆಲಸವನ್ನು ಒತ್ತಡದಿಂದ ಮಾಡಿಸಿಕೊಳ್ಳುವಿರಿ. ಸಾಲವಾಗಿ ಯಾರಿಗೂ ಹಣವನ್ನು ಕೊಡುವುದು ಬೇಡ. ದುರಭ್ಯಾಸವನ್ನು ರೂಢಿಸಿಕೊಳ್ಳಲಿದ್ದೀರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಸ್ನೇಹವು ಸ್ನೇಹವಾಗಿಯೇ ಇರಲಿ, ಯಾವ ನಿರೀಕ್ಷೆಯೂ ಬೇಡ. ಭಾವನಾತ್ಮಕ ವಿಚಾರಗಳಿಗೆ ಕರಗುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡಲಿದ್ದೀರಿ.
– ಲೋಹಿತ್ ಹೆಬ್ಬಾರ್ – 8762924271 (what’s app only)




