ದಿನ ಭವಿಷ್ಯ: ಇಂದು ಈ ರಾಶಿಯವರ ಗೌರವಕ್ಕೆ ಧಕ್ಕೆ ಉಂಟಾಗುವುದು

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಶುಕ್ರವಾರದಂದು ದೇವರ ಮೇಲೆ ಭಕ್ತಿ, ಸಕಾರಾತ್ಮಕ ಚಿಂತನೆ, ಅತಿಮಾನುಷ ವರ್ತನೆ, ಅಹಂಕಾರ, ಬೌದ್ಧಿಕ ಕಸರತ್ತು, ನಾಯಕತ್ವ, ವಾಹನದಲ್ಲಿ ಅತಿಯಾದ ಓಡಾಟ ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರ ಗೌರವಕ್ಕೆ ಧಕ್ಕೆ ಉಂಟಾಗುವುದು
ದಿನ ಭವಿಷ್ಯ
Edited By:

Updated on: Oct 30, 2026 | 1:04 AM

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಪರಿಘ, ಕರಣ : ಕೌಲವ, ಸೂರ್ಯೋದಯ – 06 – 13 am, ಸೂರ್ಯಾಸ್ತ – 05 – 52 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:36 – 12:03 ಯಮಗಂಡ ಕಾಲ 14:58 – 16:25, ಗುಳಿಕ ಕಾಲ 07:41 – 09:08.

ಮೇಷ ರಾಶಿ: ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ತಾಯಿಯ ಕಡೆಯಿಂದ ನಿಮಗೆ ಯಾವ ಸಹಕಾರವೂ ಸಿಗದೇ ಇರುವುದು ಬೇಸರವಾಗಬಹುದು. ನಿರಂತರ ಕೆಲಸದಿಂದ ನಿಮಗೆ ಮುಕ್ತಿಯ ಅವಶ್ಯಕತೆ ಇದೆ. ಸಾಮರಸ್ಯದ ಕೊರತೆಯಿಂದ ದ್ವೇಷವೂ ಹುಟ್ಟಿಕೊಳ್ಳಬಹುದು. ನೀವು ಬಯಸದೇ ಇದ್ದರೂ ಆಪತ್ತಿಗೆ ಸಹಾಯ ದೊರೆಯುವುದು. ನಿಮ್ಮನ್ನು ಕಡೆಗಣಿಸಿದ್ದು ನಿಮಗೆ ಪ್ರೇರಣೆಯಾಗಬಹುದು. ಕೆಲಸಗಳನ್ನು ಮುಂದೂಡುತ್ತ ಇರುವುದು ನಿಮ್ಮ ನಿರಾಸಕ್ತಿಯನ್ನು ತೋರಿಸುವುದು.

ವೃಷಭ ರಾಶಿ: ಹಣವನ್ನು ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಸಾಮಾಜಿಕ ಕಾರ್ಯಗಳಿಗೆ ಹಣವನ್ನು ಕೊಡುವರು. ಹೇಳಬೇಕಾದುದನ್ನು ಹೇಳುವ ಕ್ರಮದಲ್ಲಿ ಹೇಳಿ. ಆಪ್ತರನ್ನು ನೀವು ಕಳೆದುಕೊಳ್ಳುವ ಸಂಭವವಿದೆ. ನಿಮ್ಮ ಪಕ್ಷಾತೀತ ನಿಲುವು ಕೆಲವರಿಗೆ ಇಷ್ಟವಾಗದು. ನೀವು ವಹಿಸಿಕೊಂಡ ನಿರ್ಮಾಣ ಹಂತದ ಕೆಲಸಗಳು ಮಂದಗತಿಯಲ್ಲಿ ಇರಲಿದೆ. ವಿಚಾರ ಮಥನವು ಕಲಹವಾಗಿ ಮಾರ್ಪಡುವುದು. ಮೊದಲೇ ತೀರ್ಮಾನವಾದ ನಿಮ್ಮ ಪ್ರಯಾಣವು ಮುಂದೆ ಹೋಗಬಹುದು.

ಮಿಥುನ ರಾಶಿ: ನಿಮ್ಮ ಮಕ್ಕಳ ವಿಚಾರದಲ್ಲಿ ನಿಮಗೆ ಬೇಸರವಾಗಲಿದೆ. ವ್ಯಾಪಾರದಲ್ಲಿ ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ಅಹಂಕಾರದ ಮಾತುಗಳು ನಿಮಗೆ ಮಾತ್ರ ಖುಷಿ ಕೊಡಬಹುದು. ಸ್ನೇಹಿತರಿಗೆ ಧನಸಹಾಯವನ್ನು ಮಾಡುವುದು ಅನಿವಾರ್ಯವಾದೀತು. ಸಂಗಾತಿಯ ಇಂಗಿತವನ್ನು ತಿಳಿದುಕೊಳ್ಳುವುದು ನಿಮಗೆ ಕಷ್ಟವಾಗುವುದು. ಎಂದು ಆಡಿದ ಮಾತಿಗೆ ಇಂದು ಪಶ್ಚಾತ್ತಾಪಪಡಬೇಕಾದೀತು.‌ ಒಂಟಿಯಾಗಿ ಎಲ್ಲಿಗಾದರೂ ಹೋಗಬೇಕು ಎಂದು ಅನ್ನಿಸುವುದು.

ಕರ್ಕಾಟಕ ರಾಶಿ: ನಿಮಗಾಗದವರು ನಿಮ್ಮ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುವರು. ಇಂದಿನ ಎಲ್ಲ ಪರಿಸ್ಥಿತಿಯೂ ನಿಮ್ಮ ಪರವಾಗಿ ಇರುತ್ತದೆ ಎನ್ನಲಾಗದು. ಬುದ್ಧಿವಂತರೆಂಬಂತೆ ತೋರಿಸಿಕೊಳ್ಳುವಿರಿ. ಅಧಿಕಾರದ ಮಾತುಗಳು ನಿಮ್ಮ ಕೆಲಸಕ್ಕೆ ಬಾರದು. ನಿಮ್ಮ ಸ್ವಭಾವದ ಬದಲಾವಣೆಯು ಎಲ್ಲರಿಗೂ ಅಚ್ಚರಿಯನ್ನು ತಂದೀತು. ನಿಮ್ಮ ಲಾಭಕ್ಕೆ ಯಾರನ್ನಾದರೂ ಬಳಸಿಕೊಳ್ಳುವಿರಿ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಇಂದಿನ ಕಛೇರಿಯ ಕೆಲಸಕ್ಕೆ ಸಮಯ ಮಿತಿ ಇರುವುದು.

ಸಿಂಹ ರಾಶಿ: ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ಪ್ರಾಮಾಣಿಕತೆಗೆ ಬೆಲೆ ಇಲ್ಲದಂತೆ ಆಗುವುದು. ಉದ್ಯಮದ ವಿಸ್ತಾರ ಮಾಡುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸುವಿರಿ. ನೀವು ಪ್ರೀತಿಸುವವರ ಮಾತನ್ನು ತೆಗದುಹಾಕದಿರಿ. ಆರ್ಥಿಕ ನಷ್ಟದ ಆತಂಕವೂ ಇರಲಿದೆ. ದೇವರಲ್ಲಿ ಶ್ರದ್ಧೆ ಇರಲಿದೆ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಆರ್ಥಿಕ ಯೋಜನೆಯನ್ನು ತಯಾರಿಸಿಕೊಳ್ಳುವಿರಿ.

ಕನ್ಯಾ ರಾಶಿ: ಯಾರನ್ನೋ‌ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಟ್ಟು ಪಶ್ಚಾತ್ತಾಪಪಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಏಳ್ಗೆಗೆ ಘಾಸಿ ನೀಡಬಹುದು. ಹೊಗಳಿಕೆಯ ಮೂಲಕ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿವಾಹದ ಬಗ್ಗೆ ಗೊಂದಲ ಇರಲಿದೆ. ನಿಮ್ಮ ಗೌಪ್ಯ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುವರು. ವಿವಾಹದ ಬಗ್ಗೆ ತಂದೆಯವರೇ ನಿಮ್ಮ ಬಳಿ ಮಾತನಾಡಬಹುದು. ಉತ್ತಮ ಭೂಮಿಯ ಲಾಭಕ್ಕಾಗಿ ಓಡಾಟ ಮಾಡುವಿರಿ. ಒತ್ತಡದಿಂದ ನಿಮ್ಮ ಎಲ್ಲ ಚಿಂತೆಗಳೂ ಕಾಣಿಸಿಕೊಳ್ಳದು.

ತುಲಾ ರಾಶಿ: ನೀವು ಸ್ವಂತ ಆಸ್ತಿಯನ್ನು ಮಾರಾಟ ಮಾಡಲು ಯೋಜಿಸುವಿರಿ. ನಿಮ್ಮ ಗೌರವಕ್ಕೆ ತೊಂದರೆಯಾಗಬಹುದು. ತುರ್ತು ಹಣಕಾಸಿನ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ನಿಮ್ಮ ಬಗ್ಗೆ ನಿಂದನೆಯ ಮಾತುಗಳು ಕೇಳಿಬರಬಹುದು. ಸಮಾಜದ‌ ಕೆಲಸಗಳನ್ನು ಸಣ್ಣ ಪ್ರಮಾಣದಲ್ಲಿ ಮಾಡುವಿರಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು, ಗೌರವಕ್ಕೂ ತೊಂದರೆ.

ವೃಶ್ಚಿಕ ರಾಶಿ: ಸ್ನೇಹಿತರಿಗಾಗಿ ನಿಮ್ಮ ಕಡೆಯಿಂದ ಸಾಲವನ್ನು ಕೊಡಿಸಿದ್ದು ಈಗ ನಿಮ್ಮ ತಲೆಗೇ ಅದು ಸುತ್ತಿಕೊಳ್ಳಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನೀವು ಒಳ್ಳೆಯ ಸುದ್ದಿ ಪಡೆಯುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನ ಮಾನಗಳು ಹೆಚ್ಚಾಗಬಹುದು. ಅನಪೇಕ್ಷಿತ ಸ್ಥಳದಲ್ಲಿ ನೀವು ಇರಲು ಇಷ್ಟಪಡುವುದಿಲ್ಲ. ಯೋಜಿತ ಕಾರ್ಯವನ್ನು ಪೂರೈಸಲು ನಡುವೆ ಮಗೆ ತೊಂದರೆಗಳು ಬರಬಹುದು. ಸಂಗಾತಿಯ ನಡುವೆ ನಂಬಿಕೆಯನ್ನು ಪುನಃ ನಿರ್ಮಿಸಲು ಇಂದು ಒಳ್ಳೆಯ ಅವಕಾಶ ಸಿಗಲಿದೆ.

ಧನು ರಾಶಿ: ಎಲ್ಲ ವಿಚಾರದಲ್ಲಿಯೂ ಕಿರಿಕಿರಿ ಆಗಲಿದೆ. ಇಂದು ಸಮಾಧಾನದಿಂದ ಆಲೋಚಿಸುವುದು ನಿಮಗೆ ಬಾರದು.‌ ಬಂಧುಗಳ ಮನೆಗೆ ಹೋಗಲಿದ್ದೀರಿ. ಒಳ್ಳೆಯ ರೀತಿಯಲ್ಲಿ ನಿಮ್ಮನ್ನು ಸತ್ಕರಿಸುವರು. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ಎಷ್ಟೇ ನೀವು ತಿಂದರೂ ಗುಟ್ಟನ್ನು ಬಿಟ್ಟುಕೊಡಲಾರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಬಹುದು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು.

ಮಕರ ರಾಶಿ: ಪ್ರಮುಖ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ ಅಮೂಲ್ಯವಾದ ಸಲಹೆಗಳನ್ನು ಪಡೆಯಬಹುದು‌. ನೀವು ಖರೀದಿಸಿದ ಸ್ಥಿರಾಸ್ತಿ ದಾಖಲೆಗಳನ್ನು ಸರಿಯಾಗಿ ಆಪ್ತರ ಜೊತೆ ಚರ್ಚಿಸಿ. ಇನ್ನೊಬ್ಬರ ಸಂಕಷ್ಟವನ್ನು ಪರಿಹರಿಸಲು ಉತ್ಸಾಹದಿಂದ ಇರುವಿರಿ. ಇಂದು ನೀವು ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಉನ್ನತ ಅಧ್ಯಯನಕ್ಕೆ ನೀವು ಬೇರೆ ಕಡೆಗೆ ಹೋಗುವ ಸ್ಥಿತಿಯು ಬರಬಹುದು.

ಕುಂಭ ರಾಶಿ: ಸ್ವಪ್ರತಿಷ್ಠೆಯನ್ನು ಬಿಟ್ಟು ನೀವು ಸಹಜವಾಗಿ ಇರಬೇಕಾಗುವುದು. ಕಚೇರಿಯಲ್ಲಿ ಕೆಲವು ಪ್ರಮುಖ ಯೋಜನೆಗಳು ನಿಮ್ಮ ಹೆಗಲೇರಬಹುದು. ಹಿರಿಯ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಗುರುತಿಸುವರು. ಮನೆಯ ಸದ್ಯರ ಜೊತೆ ಕಾಲಹರಣ ಮಾಡುವಿರಿ. ದೈವರಾಧನೆಗೆ ಸ್ವಲ್ಪ ಸಮಯವನ್ನು ಕೊಡುವಿರಿ. ಸರಳವಾದುದನ್ನು ಕ್ಲಿಷ್ಟ ಮಾಡಿಕೊಳ್ಳುವಿರಿ. ನಿಮ್ಮ ಸಂಗಾತಿಯ ಜೊತೆ ಜಗಳವಾಡಬೇಕೆಂದು ನಿಮಗೆ ಅನ್ನಿಸುವುದು.

ಮೀನ ರಾಶಿ: ಗೆಲ್ಲಬೇಕು ಎನ್ನುವ ಉತ್ಕಟ ಇಚ್ಛೆ ಇರಲಿದೆ. ಸೋತರೂ ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಸಾಧಿಸುವುದು ಸುಲಭವಾಗುತ್ತದೆ. ಇತ್ತೀಚೆಗೆ ಭೇಟಿಯಾಗದ ಕುಟುಂಬ ಸದಸ್ಯರೊಬ್ಬರು ಸಿಗಬಹುದು. ಆರ್ಥಿಕ ತೊಂದರೆಯಿಂದ ಮನೆಯ ಕಾರ್ಯವು ಅರ್ಧಕ್ಕೇ ನಿಲ್ಲಬೇಕಾಗಬಹುದು. ಹಣಕಾಸಿನ ವಿಷಯದಲ್ಲಿ ನಿಮ್ಮ ಇಚ್ಛೆಯಂತೆ ಕೆಲಸಗಳು ನಡೆಯಬಹುದು.

ಲೋಹಿತ್ ಹೆಬ್ಬಾರ್ – 8762924271 (what’s app only)

Published On - 1:03 am, Fri, 30 October 26

ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Loading...
Unable to load recommendations.
Follow Us