Horoscope: ನಿತ್ಯ ಭವಿಷ್ಯ; ಕಲಾವಿದರು ಹೆಚ್ಚಿನ ಪ್ರಶಂಸೆ ಗಳಿಸುವರು, ವಿದೇಶಿ ಪ್ರಯಾಣ ಸಾಧ್ಯತೆ

|

Updated on: May 05, 2024 | 12:02 AM

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 05 ಮೇ​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯ ಭವಿಷ್ಯ; ಕಲಾವಿದರು ಹೆಚ್ಚಿನ ಪ್ರಶಂಸೆ ಗಳಿಸುವರು, ವಿದೇಶಿ ಪ್ರಯಾಣ ಸಾಧ್ಯತೆ
ನಿತ್ಯ ಭವಿಷ್ಯ; ಕಲಾವಿದರು ಹೆಚ್ಚಿನ ಪ್ರಶಂಸೆ ಗಳಿಸುವರು, ವಿದೇಶಿ ಪ್ರಯಾಣ ಸಾಧ್ಯತೆ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಸಂಜೆ 05:14 ರಿಂದ 6:49ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 02:04 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:14ರ ವರೆಗೆ.

ಮೇಷ ರಾಶಿ: ಇಂದು ವಾಹನದ ಖರೀದಿಗೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುವಿರಿ. ಭೂಮಿಗೆ ಸಂಬಂಧಿಸಿದ ಕಲಹಗಳು ಇಂದಿಗೆ ಮುಕ್ತಾಯಗೊಳ್ಳಬಹುದು. ತಾಯಿಯು ನಿಮಗೆ ಬೇಕಾದ ಸಹಾಯವನ್ನು ಮಾಡುವಳು. ತುರಿ, ನವೆ ಮುಂತಾದ ಚರ್ಮಕ್ಕೆ ಸಂಬಂಧಪಟ್ಟ ಖಾಯಿಲೆಗಳಿಗೆ ಖರ್ಚುಮಾಡಬೇಕಾಗಿ ಬರಬಹುದು. ವಿದ್ಯುತ್ ಉಪಕರಣದ ರಿಪೇರಿಗೆ ಅನಿರೀಕ್ಷಿತ ಹಣವನ್ನು ಖರ್ಚುಮಾಡುವಿರಿ. ಇದು ನಿಮಗೆ ಬೇಸರ ತರಿಸುವ ಕೆಲಸವಾಗಿರುತ್ತದೆ. ಹೊಸ ಯೋಜನೆಗಳು ಸಿಗಲಿದೆ. ಸಂಬಂಧಗಳು ಸುಧಾರಿಸುವ ಹಂತಕ್ಕೆ ಹೋಗಲಿವೆ. ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಿ. ಯಾರಾದರೂ ಶ್ರೇಷ್ಠ ವ್ಯಕ್ತಿಗಳ ಭೇಟಿಯು ಆಗಸ್ಮಿಕವಾಗಿ ಆಗಲಿದೆ. ಅವರ ಒಡನಾಟವನ್ನು ಇಟ್ಟುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ.

ವೃಷಭ ರಾಶಿ: ನಿಮ್ಮ ವಿದೇಶದ ಪ್ರಯಾಣವು ಕೆಲವು ದಾಖಲೆಗಳ ಕೊರತೆ, ಅಸ್ಪಷ್ಟತೆಯ ಕಾರಣದಿಂದ ಮುಂದೂಡಲ್ಪಡಬಹುದು. ಅತಿಯಾದ ದೇಹಾಲಸ್ಯದಿಂದ ಕಾರ್ಯಗಳು ಸಮಯಕ್ಕೆ ಸರಿಯಾಗಿ ಆಗದೇ ವಿಳಂಬವಾಗಲಿದೆ. ನೀವು ನಿರ್ಮಿಸಿಕೊಂಡ ನೂತನ ಗೃಹದಲ್ಲಿ ವಾಸವು ಆರಂಭವಾಗಲಿದೆ. ಹತ್ತಿರ ಬಂಧುಗಳನ್ನು ಕಳೆದುಕೊಳ್ಳಬಹುದು. ಬೇಸರಿಸದೇ ಸಹಜವಾಗಿ ಸ್ವೀಕರಿಸಿ. ಶ್ವಾಸಕೋಶದ ತೊಂದರೆಯು ಕಾಣಸಿಗಬಹುದು. ಅತಿಯಾದ ಆಹಾರವು ಅಜೀರ್ಣವಾಗಿ ತೊಂದರೆ ಕೊಡುವುದು. ಸಂಗಾತಿಯ ಹಳೆಯ ಸ್ನೇಹಿತನ ಭೇಟಿಯಾಗಲಿದೆ. ದಾಂಪತ್ಯದಲ್ಲಿ ಕೆಲವು ಕಹಿ ಮಾತುಗಳು ಬರಬಹುದು. ನಿಮಗೆ ಆಗುವಷ್ಟು ಭಾರವನ್ನು ಒಯ್ಯುವುದು ಉತ್ತಮ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಯಾರದೋ ಸುದ್ದಿಯನ್ನು ಮತ್ಯಾರಿಗೋ ಹೇಳುತ್ತ ಸಮಯವನ್ನು ಕಳೆಯುವಿರಿ. ಮಕ್ಕಳಲ್ಲಿ ಸ್ಪರ್ಧೆಯ ಮನೋಭಾವವನ್ನು ಹೆಚ್ಚುಮಾಡುವಿರಿ.

ಮಿಥುನ ರಾಶಿ: ಇಂದು ಶತ್ರುಗಳ ಬಗ್ಗೆ ಬಹಳ ಕುತೂಹಲವಿರಲಿದೆ. ಜೋಪಾನವಾಗಿ ನಿಮ್ಮ‌ ಯೋಜನೆಯನ್ನು ಸಿದ್ಧಮಾಡಿಕೊಳ್ಳುವುದು ಸೂಕ್ತ. ನೀವು ಸುಳ್ಳನ್ನು ಆಡುವವರು ಎನ್ನುವ ಹಣೆಪಟ್ಟಿ ಬೀಳಲಿದೆ. ನಿಮ್ಮ ಮಾತಿಗೆ ಬಿಡಿಗಾಸಿನಷ್ಟೂ ಬೆಲೆ ಇಲ್ಲದೇ ಕಡಿಮೆಯಾಗಬಹುದು. ನೀರಿಗೆ ಸಂಬಂಧಿಸಿದ ಉದ್ಯೋಗಾವಕಾಶಗಳು ಹೆಚ್ಚು ಸಿಗಬಹುದು. ನಿಮ್ಮ ಹೇಳಿಕೆಗಳು ಬಹಳ ಹರಿತವಾಗಿ ಇರುವುದು. ಕೃಷಿಗೆ ಸಂಬಂಧಿಸಿದ ವಸ್ತುಗಳ ವ್ಯಾಪಾರ ಅಧಿಕವಾಗಲಿದೆ‌. ಊರಿನಿಂದ ಹೊರಹೋಗುವ ಸಾಧ್ಯತೆ ಇದೆ. ಕಲಾವಿದರು ಹೆಚ್ಚಿನ ಪ್ರಶಂಸೆಯನ್ನು ಗಳಿಸುವರು. ಆಪ್ತರು ನೀಡಿದ ವಸ್ತುವನ್ನು ಕಳೆದುಕೊಳ್ಳುವಿರಿ. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಕಾದಷ್ಟು ಮಾತ್ರ ಮಾತುಗಳನ್ನಾಡಿ. ತಲೆಯ ನೋವಿಗೆ ಯೋಗ್ಯ ಚಿಕಿತ್ಸೆಯನ್ನು ಮಾಡಿಕೊಳ್ಳಿ.

ಕಟಕ ರಾಶಿ: ಇಂದು ನಿಮಗೆ ಅಧ್ಯಾತ್ಮದ ಕಡೆ ಓಲೈಕೆ ಹೆಚ್ಚು ಇರಲಿದೆ‌. ಶತ್ರುಗಳು ಮಿತ್ರರಾಗಲು ಬರಬಹುದು. ನಿಮ್ಮ ಪ್ರಭಾವೀ ವ್ಯಕ್ತಿತ್ವವನ್ನು ಜನಕ್ಕೆ ತಿಳಿಸುವಿರಿ. ನೀವಿಡುವ ಹೆಜ್ಜೆಯು ಗುರುತಾಗಲಿದೆ. ಎಂತಹ ಹೆಜ್ಜೆಗಳನ್ನು ಇಡಬೇಕು ಎನ್ನುವುದನ್ನು ತೀರ್ಮಾನಿಸಿಕೊಳ್ಳಿ. ಉದ್ಯೋಗದ ಕಾರಣಕ್ಕೆ ವಿದೇಶಕ್ಕೆ ಹೋಗಬೇಕಾಗಿ ಬರಬಹುದು. ಬಂಧುಗಳ ಭೇಟಿ ಸುಖದಾಯಕವಾದುದಾಗಿರುತ್ತದೆ. ಒಂದಕ್ಕೊಸ್ಕರ ಎರಡನ್ನು ಬಿಡಬೇಕಾದೀತು. ಯಾವುದೋ ಒಪ್ಪಂದಗಳಿಗೆ ಸಹಿ ಹಾಕಿಬಿಡಬೇಡಿ. ಅನುಭವಿಗಳ ಜೊತೆ ಚರ್ಚೆಗಳನ್ನು ಮಾಡಿ. ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುವಿರಿ. ಹಿಂದೊಮ್ಮೆ ಆಲೋಚಿಸಿದ್ದ ಕೆಲಸಗಳನ್ನು ಪುನಃ ಆರಂಭಿಸುವಿರಿ. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ಕತ್ತಲೆಯನ್ನು ಶಪಿಸುವುದಕ್ಕಿಂತ ಬೆಳಕನ್ನು ಹುಡುಕುವುದು ಉತ್ತಮ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ.