ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಜ್ಯೋತಿಷಿ ಗಾಯತ್ರಿ ದೇವಿ ವಾಸುದೇವ್ ಅವರು ತಮ್ಮ ಮಾಡರ್ನ್ ಅಸ್ಟ್ರಾಲಜಿ ಇಂಗ್ಲಿಷ್ ಮಾಸಪತ್ರಿಕೆಯ ಜನವರಿ ಸಂಚಿಕೆಯಲ್ಲಿಯೇ ಮುಂದಿನ ಯುಗಾದಿ, ಅಂದರೆ 2026ನೇ ಇಸವಿಯ ತನಕ ಏನೇನು ಒಳ್ಳೆಯದು ಹಾಗೂ ಕೆಟ್ಟದ್ದು ಸಂಭವಿಸಬಹುದು ಎಂಬ ಬಗ್ಗೆ ಲೇಖನ ಬರೆದಿದ್ದಾರೆ ಹಾಗೂ ಅದು ಪ್ರಕಟವಾಗಿದೆ. ಅದರಲ್ಲಿ ಎಚ್ಚರಿಕೆ ಎನಿಸುವಂಥದ್ದು ಹಾಗೂ ಪ್ರಮುಖ ಎನಿಸುವಂಥದ್ದು ಆಯ್ದು ಇಲ್ಲಿ ಪ್ರಕಟಿಸಲಾಗಿದೆ.
Ad
ಖ್ಯಾತ ಜ್ಯೋತಿಷಿ ಗಾಯತ್ರಿ ದೇವಿ
Follow us on
ಮಾಡರ್ನ್ ಅಸ್ಟ್ರಾಲಜಿ (Modern Astrology) ಎಂಬ ಜ್ಯೋತಿಷ್ಯ ಮಾಸಪತ್ರಿಕೆ ಇಂಗ್ಲಿಷ್ ನಲ್ಲಿ ಹೊರಬರುತ್ತದೆ. ಇದು ಬೆಂಗಳೂರು ಮೂಲದ್ದಾಗಿದ್ದು, ಗಾಯತ್ರಿ ದೇವಿ ವಾಸುದೇವ್ (Gayatri Vasudev) ಅವರು ಇದರ ಸಂಪಾದಕಿ. ಅವರಿಗೆ ಐವತ್ತು ವರ್ಷಕ್ಕೂ ಹೆಚ್ಚು ಅನುಭವ ಜ್ಯೋತಿಷ್ಯಕ್ಕೆ ಸಂಬಂಧಿಸಿದಂತೆಯೇ ಇದೆ. ಹಾಗೂ ಭಾರತೀಯ ಜ್ಯೋತಿಷ್ಯ ಪದ್ಧತಿಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಬಹಳ ದೊಡ್ಡ ಹೆಸರಾದ ಬಿ.ವಿ.ರಾಮನ್ ಅವರ ಮಗಳು ಗಾಯತ್ರಿ ದೇವಿ ಅವರು. ಯುಗಾದಿ ಹಿನ್ನೆಲೆಯಲ್ಲಿ ಅವರನ್ನು ಟಿವಿ9 ಕನ್ನಡ ವೆಬ್ ಸೈಟ್ ಎಕ್ಸ್ ಕ್ಲೂಸಿವ್ ಆದ ಸಂದರ್ಶನ ಮಾಡಿದೆ. ಭಾರತದಲ್ಲಿ ನಡೆಯಬಹುದಾದ ವಿದ್ಯಮಾನಗಳ ಕುರಿತು ವೈದಿಕ ಜ್ಯೋತಿಷ್ಯ ಪದ್ಧತಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಆ ವಿವರಗಳನ್ನು ಇಲ್ಲಿ ನೀಡಲಾಗುತ್ತಿದೆ.
ಭಾರತದಲ್ಲಿ ದೆಹಲಿಯ ಜನಜೀವನವನ್ನು ಸಮಸ್ಯೆಗೆ ಸಿಲುಕಿಸುವ ಮಟ್ಟಿಗೆ ಹಿಂಸಾಚಾರ ಕಾಣಿಸಿಕೊಳ್ಳಬಹುದು. ಅಲ್ಪಸಂಖ್ಯಾತರ ಓಲೈಕೆಗೆ ನಿಲ್ಲುವ ವಿರೋಧ ಪಕ್ಷಗಳು ಸಂಸತ್ ಕಲಾಪದ ವೇಳೆ ಈ ಹಿಂದೆಂದೂ ಕಾಣದಷ್ಟು ಅವಮಾನಕರ ರೀತಿಯಲ್ಲಿ ನಡೆದುಕೊಳ್ಳಲಿವೆ. ಈ ಮಧ್ಯೆ ದೇಶದಲ್ಲಿ ಮಹಿಳೆಯರ ಸಬಲೀಕರಣ ಹಾಗೂ ಅಭಿವೃದ್ಧಿಗಾಗಿ ಪ್ರಮುಖ ಕಾಯ್ದೆಗಳನ್ನು ತರಲಾಗುತ್ತದೆ.
ಭಾರತದ ಪ್ರಧಾನಿ ಮೇಲೂ ಹಿಂಸಾತ್ಮಕ ದಾಳಿ ನಡೆಯಬಹುದಾಗಿದ್ದು, ಅವರ ಭದ್ರತಾ ವ್ಯವಸ್ಥೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವುದು ಕ್ಷೇಮ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಅಥವಾ ಸ್ಥಾನಕ್ಕಾಗಿ ನಡೆಯುವ ತಿಕ್ಕಾಟದಿಂದಾಗಿ ಆತಂಕ ಹಾಗೂ ಒತ್ತಡದ ವಾತಾವರಣ ಇರುತ್ತದೆ.
ವಿಶ್ವಾವಸು ಸಂವತ್ಸರದ ಆರಂಭದ ವೇಳೆ, ಗುರು ಗ್ರಹ ವೃಷಭದಲ್ಲಿ ಇರುವಂಥ ಸ್ಥಿತಿಯ ಆಧಾರದಲ್ಲಿ ಹೇಳುವುದಾದರೆ, ಏಕರೂಪ ನಾಗರಿಕ ಸಂಹಿತೆ ತರಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಕಾಯ್ದೆಯನ್ನು ತರಬಹುದು. ಇದರಿಂದಾಗಿ ವೈಯಕ್ತಿಕ ಕಾನೂನು ಮಂಡಳಿಗಳಿಂದ ಭಾರೀ ಚರ್ಚೆಗಳು ಆಗಲಿವೆ. ಇನ್ನು ವಿರೋಧ ಪಕ್ಷದಲ್ಲಿನ ಪ್ರಮುಖ ನಾಯಕರ ಆರೋಗ್ಯ ಸ್ಥಿತಿಯು ಆತಂಕ ಪಡುವ ಮಟ್ಟಿಗೆ ಗಂಭೀರ ಸ್ಥಿತಿ ತಲುಪಬಹುದು.
ಇದನ್ನೂ ಓದಿ
ವಿಶ್ವಾವಸು ಸಂವತ್ಸರದಲ್ಲಿ ಜಗತ್ತಿನಾದ್ಯಂತ ಅಲ್ಲೋಲ ಕಲ್ಲೋಲ- ಗಾಯತ್ರಿ ದೇವಿ
ಮನೆಯಲ್ಲಿ ಪ್ರತಿದಿನ ಜಗಳವೇ? ವಾಸ್ತು ತಜ್ಞರ ಈ ಸಲಹೆ ಅನುಸರಿಸಿ
ಮನೆಯಲ್ಲಿ ಕಂಡುಬರುವ ಈ ಲಕ್ಷಣಗಳು ಕೆಟ್ಟ ಸಮಯದ ಮುನ್ಸೂಚನೆ!
ಮಾರ್ಚ್ ಕೊನೆಯಲ್ಲಿ ಸೂರ್ಯ ಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತದೆಯೇ?
ಮೇ ಒಂಬತ್ತನೇ ತಾರೀಕು ಗುರು ಗ್ರಹ ಮಿಥುನ ರಾಶಿ ಪ್ರವೇಶಿಸಲಿದೆ. ಈ ವೇಳೆ ಪಾಕಿಸ್ತಾನ ಗಡಿಯಲ್ಲಿ ಭಾರೀ ಶೆಲ್ಲಿಂಗ್ ಆಗಲಿದೆ. ಇನ್ನು ಚೀನಾ ಸಹ ಭಾರತದೊಂದಿಗಿನ ಗಡಿ ಒಪ್ಪಂದಗಳನ್ನು ಮುರಿದು, ಆಕ್ರಮಣಕಾರಿ ಧೋರಣೆಯನ್ನು ತೋರಿಸಲಿದೆ.
ಈ ವರ್ಷದ ಅಕ್ಟೋಬರ್ ಮೂರನೇ ತಾರೀಕು ಗುರು ಗ್ರಹ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ. ಭಾರತದಲ್ಲಿ ಕೇಂದ್ರ ಸರ್ಕಾರದಲ್ಲಿ ಅತ್ಯಂತ ಪ್ರಮುಖ ಬೆಳವಣಿಗೆ ಆಗಲಿದೆ.
ಇದೇ ವೇಳೆ ಗಡಿ ವಿಚಾರವಾಗಿಯೇ ಭಾರತ ಮತ್ತು ಚೀನಾ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಆತಂಕ ಸ್ಥಿತಿ ತಲೆದೋರಬಹುದು.
ಕುಜ ಗ್ರಹ ಕನ್ಯಾ ರಾಶಿ ಪ್ರವೇಶಿಸಿ, ಮೀನದ ಶನಿಯ ಏಳನೇ ಮನೆಯಲ್ಲಿ ಇರುವಾಗ, ಆಗಸ್ಟ್ ತಿಂಗಳಲ್ಲಿ ಏಕ ರೂಪ ನಾಗರಿಕ ಸಂಹಿತೆ ವಿಷಯವಾಗಿ ದೆಹಲಿಯಲ್ಲಿ ಭಾರೀ ಆತಂಕದ ಸನ್ನಿವೇಶ ಕಾಣಿಸಿಕೊಳ್ಳಲಿದೆ.
ಮಾರ್ಚ್ ತಿಂಗಳಲ್ಲಿ ಹದಿನೈದು ದಿನದಲ್ಲಿ ಎರಡು ಗ್ರಹಣ ಆಗಲಿದ್ದು, ಇದರಿಂದ ಭಾರತವೂ ಒಳಗೊಂಡಂತೆ ಇಡೀ ಜಗತ್ತಿಗೆ, ಮನುಷ್ಯ ಸಂಕುಲಕ್ಕೆ ವಿಚಿತ್ರ ಆರೋಗ್ಯ ಬಾಧೆ- ಸಮಸ್ಯೆಗಳನ್ನು ತರಲಿದೆ. ಚಿಂತಕರು ಹಾಗೂ ಮಾಧ್ಯಮದವರ ಮೇಲೆ ಹಿಂಸಾಕೃತ್ಯಗಳು ನಡೆಯಲಿವೆ. ಶುಕ್ರ ಗ್ರಹದ ಕಾರಣದಿಂದ ಮಹಿಳೆಯರು ಕಠಿಣ ಸವಾಲುಗಳನ್ನು ಎದುರಿಸಲಿದ್ದಾರೆ.
ಜಲಕ್ಕೆ ಸಂಬಂಧಿಸಿದ ಅವಘಡಗಳಿಂದ, ನೈಸರ್ಗಿಕ ವಿಕೋಪಗಳಿಂದ ಬಹಳ ದೊಡ್ಡ ಸಂಖ್ಯೆಯಲ್ಲಿ ಜೀವಹಾನಿ ಆಗಲಿದೆ. ಕಳೆದ ವರ್ಷಕ್ಕಿಂತ ಮೇಘ ಸ್ಫೋಟ ಹಾಗೂ ಭೂ ಕುಸಿತದ ಪ್ರಕರಣಗಳು ಬಹಳ ಹೆಚ್ಚಾಗಲಿವೆ.
ಯುಗಾದಿಯಂದು ಇರುವಂಥ ಗ್ರಹಣ ಮುಗಿದ ಮೇಲೆ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಾಣಲಿದೆ. ಷೇರು ಮಾರುಕಟ್ಟೆ ಸುಧಾರಿಸಲಿದೆ.
ಭಾರತದ ಅತ್ಯುನ್ನತ ಸ್ಥಾನದಲ್ಲಿ ಇರುವ ಇಬ್ಬರ ಸಾವು ಆಗುವ ಸಾಧ್ಯತೆಗಳಿವೆ. ಆ ಪೈಕಿ ಒಂದು ಹಿಂಸಾಚಾರದ ಕಾರಣದಿಂದ ಆಗುವ ಸಂಭವವಿದೆ.
ಆರಂಭದಲ್ಲಿ ಚಿನ್ನದ ಸಂಗ್ರಹದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆಗಳಿವೆ.
ಹೆಣ್ಣುಮಕ್ಕಳಲ್ಲಿ ವೈಯಕ್ತಿಕ ದುರಂತಗಳು ಹೆಚ್ಚಾಗಲಿದ್ದು, ಇದರಿಂದ ಯುವಜನರಲ್ಲಿ ಕೆಟ್ಟ ಪರಿಣಾಮ ಆಗಲಿದೆ.
ಶನಿ ಗ್ರಹದ ಸ್ಥಿತಿಯಿಂದ ಕಾರ್ಮಿಕ ಸಮಸ್ಯೆಗಳು ತಲೆದೋರಿ, ಕನಿಷ್ಠ ಎರಡು ದೊಡ್ಡ ಉದ್ಯಮಗಳು ಬಾಗಿಲು ಮುಚ್ಚುವ ಅಪಾಯವಿದೆ.
ಕೆಟ್ಟ ಕಾರಣಗಳಿಂದಾಗಿ ಅಯೋಧ್ಯೆ ಸುದ್ದಿಯಲ್ಲಿರುತ್ತದೆ.
ದೆಹಲಿಯಲ್ಲಿ ವಿನಾಶಕಾರಿ ಮಾರುತ ಹಾಗೂ ಮಳೆ ಕಾಣಿಸಿಕೊಳ್ಳಲಿದೆ.
ಫಾರ್ಮ್ಯಾಸ್ಯುಟಿಕಲ್ ಕಂಪನಿಗಳ ಮೇಲೆ ತೀವ್ರ ಕಣ್ಗಾವಲು ಆಗಲಿದ್ದು, ತಪ್ಪಾದ ಭರವಸೆಗಳು ಹಾಗೂ ಕಲಬೆರಕೆ ಆರೋಪದ ಮೇಲೆ ಪ್ರಮುಖ ಅಲೋಪಥಿಕ್ ಔಷಧ ಉತ್ಪಾದಕ ಸಂಸ್ಥೆ ಬಾಗಿಲು ಮುಚ್ಚುವಂತಾಗುತ್ತದೆ.
ಶ್ವಾಸಕೋಶಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಭಾರತವನ್ನು ಕಾಡಲಿದೆ.
ಭಾರತದಲ್ಲಿ ಮಧ್ಯಮ ವರ್ಗದ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗಲಿದೆ.
ಭಾರತದಲ್ಲಿ ಕನಿಷ್ಠ ಎರಡು ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳ ಹಗರಣ ಹೊರಬರಲಿದೆ. ಇನ್ನು ಒಬ್ಬ ಲೇಖಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಬರಲಿದೆ.
ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಚೀನಾ ಈ ಮೂರರಿಂದಲೂ ಭಾರತ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದು ಕಠಿಣ ಸೇನಾ ಕಾರ್ಯಾಚರಣೆಗಳಿಗೆ ದಾರಿ ಮಾಡಿಕೊಡಲಿದೆ.
ವೈದ್ಯಕೀಯ ಕೋರ್ಸ್ ಗಳ ವೆಚ್ಚ ಕಡಿಮೆ ಆಗುವ ಯೋಗ ಇದೆ. ಪ್ಯಾರಾ ಮೆಡಿಕಲ್ ಕೋರ್ಸ್ ಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ.
ಕಾಶ್ಮೀರ ಹಾಗೂ ಮತ್ತೊಂದು ರಾಜ್ಯದಲ್ಲಿ ಏಮ್ಸ್ ಸೇರಿ ಕನಿಷ್ಠ ಎರಡು ವೈದ್ಯಕೀಯ ಸಂಸ್ಥೆಗಳು ಆರಂಭವಾಗುವ ಸಾಧ್ಯತೆಗಳಿವೆ.
ಮುಂದಿನ ವರ್ಷದ ಮೇ ತಿಂಗಳ ಒಳಗೆ ಜಮ್ಮು- ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ದೊರೆಯುವ ಅವಕಾಶ ಇದೆ.
ಈ ವರ್ಷದ ಜುಲೈ ಇಪ್ಪತ್ಮೂರನೇ ತಾರೀಕು ಕುಂಭದಲ್ಲಿ ಇರುವಂಥ ರಾಹು ಹಾಗೂ ಸಿಂಹದಲ್ಲಿ ಇರುವಂಥ ಕುಜ ಒಂದೇ ಡಿಗ್ರಿಯಲ್ಲಿ ನಿಂತು, ಪರಸ್ಪರ ವೀಕ್ಷಣೆ ಮಾಡಲಿದ್ದಾರೆ. ದೇಶದ ಅತಿ ದೊಡ್ಡ ನಾಯಕರೊಬ್ಬರ ಮೇಲೆ ಹಿಂಸಾ ಕೃತ್ಯ, ದಾಳಿ ನಡೆಯುವ ಸಾಧ್ಯತೆ ಬಹಳ ಹೆಚ್ಚಿದೆ. ಆ ಸಂದರ್ಭದಲ್ಲಿ ಎಲ್ಲ ಪ್ರಮುಖ ರಾಜಕೀಯ ನಾಯಕರಿಗೆ ಭದ್ರತಾ ವ್ಯವಸ್ಥೆ ಹೆಚ್ಚಿಸುವುದು ಕ್ಷೇಮ. ಈ ಅಪಾಯಕಾರಿ ಅವಧಿ ಮುಗಿದರೂ ಕೇಂದ್ರದ ಮೇಲಿನ ದಾಳಿ ಸಾಧ್ಯತೆ ಹಾಗೇ ಮುಂದುವರಿಯಲಿದೆ.
ಈ ವರ್ಷದ ಏಪ್ರಿಲ್- ಮೇ ತಿಂಗಳಿಂದ ಅಕ್ಟೋಬರ್ ತನಕ ಈ ದೇಶದ ಪ್ರಧಾನಿ ಅವರ ಭದ್ರತೆ ಹೆಚ್ಚಿಸಿಕೊಳ್ಳಬೇಕು. ರಾಜಕೀಯವಾಗಿಯೂ ಮುಂಜಾಗ್ರತೆ ತೆಗೆದುಕೊಳ್ಳಬೇಕು.
ಲೇಖಕಿ: ಗಾಯತ್ರಿ ದೇವಿ ವಾಸುದೇವ್ (ಜ್ಯೋತಿಷ್ಯದಲ್ಲಿ ಐವತ್ತು ವರ್ಷಕ್ಕೂ ಹೆಚ್ಚು ಅನುಭವ ಇರುವಂಥ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಜ್ಯೋತಿಷಿ. ಮಾಡರ್ನ್ ಅಸ್ಟ್ರಾಲಜಿ ಮಾಸಪತ್ರಿಕೆಯ ಸಂಪಾದಕಿ ಹಾಗೂ ಖ್ಯಾತ ಜ್ಯೋತಿಷಿ ದಿವಂಗತ ಬಿ.ವಿ. ರಾಮನ್ ಅವರ ಮಗಳು)
ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ