
ಈ ದಿನ ನಿಮ್ಮ ಮಾತು ಮತ್ತು ನಿರ್ಧಾರಗಳು ಉದ್ಯೋಗ ಸ್ಥಳದಲ್ಲಿ ಆಗಬೇಕಾದ ಕೆಲಸದ ಗತಿಯನ್ನೇ ಬದಲಿಸಲಿದೆ. ವ್ಯಾಪಾರ- ವ್ಯವಹಾರ ಅಂತ ಬಂದಲ್ಲಿ ಭವಿಷ್ಯವನ್ನು ಗಮನ ಇಟ್ಟುಕೊಂಡು ಜಾಣ್ಮೆಯಿಂದ ಮಾತನಾಡಿ. ಸಹೋದ್ಯೋಗಿಗಳು ಸಹ ನಿಮ್ಮ ಅಭಿಪ್ರಾಯಕ್ಕೆ ಸಮ್ಮತ ನೀಡುವ ಸಾಧ್ಯತೆಯಿದೆ. ಹಣಕಾಸಿನ ನಿರ್ಧಾರಗಳಲ್ಲಿ ಸಂಯಮದಿಂದ ವರ್ತಿಸಿದರೆ ಲಾಭ ತಂದು ಕೊಡಲಿದೆ. ಕುಟುಂಬ ಸದಸ್ಯರಿಗೆ ನೀವು ನೀಡುವ ಬೆಂಬಲ ಬಹಳ ಮುಖ್ಯವಾಗುತ್ತದೆ. ನಿಮ್ಮ ಸಂಗಾತಿಯ ಬಗ್ಗೆ ಇರುವಂಥ ಕಾಳಜಿಯನ್ನು ವ್ಯಕ್ತಿಪಡಿಸುವಾಗ ಅದು ಪೊಸೆಸಿವ್ ನೆಸ್ ಅನಿಸದಂತೆ ನೋಡಿಕೊಳ್ಳಿ.
ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುವಂಥ ಹಾಗೂ ಒಳಿತು ಆಗುವಂಥ ಹೊಸ ವಿಚಾರಗಳನ್ನು ಹೊಸ ಜನರು ತೆಗೆದುಕೊಂಡು ಬರಲಿದ್ದಾರೆ. ಇಷ್ಟು ಸಮಯ ನಿಮ್ಮ ಮಾತನ್ನು ಯಾರು ಕೇಳಿಸಿಕೊಳ್ಳುತ್ತಾರೆ ಅಂತೇನಾದರೂ ನೀವು ಅಂದುಕೊಳ್ಳುತ್ತಾ ಇದ್ದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ. ಇಂಥ ಸಂದರ್ಭದಲ್ಲಿ ನೀವು ಮಾತನಾಡುವ ವಿಷಯ ಹಾಗೂ ಬಳಸುವ ಪದಗಳ ಕಡೆಗೆ ಗಮನವನ್ನು ನೀಡಿ. ಕೆಲಸಗಳು ನಿಧಾನ ಗತಿಯಲ್ಲಿಯೇ ಸಾಗಿದರೂ ಫಲಗಳು ಉತ್ತಮ ರೀತಿಯಲ್ಲಿ ದೊರೆಯಲಿದೆ.
ಸಣ್ಣ- ಸಣ್ಣ ಸಂಗತಿಗಳಿಗೂ ನೀವು ನೀಡುವ ಪ್ರಾಮುಖ್ಯ, ಕೆಲಸಗಳಲ್ಲಿ ಕಾಣುವ ಅಚ್ಚುಕಟ್ಟುತನಕ್ಕೆ ಮೆಚ್ಚುಗೆ ಬರಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಶಿಸ್ತು ಹಾಗೂ ಯಾವುದೇ ವಿಚಾರದಲ್ಲಿಯೂ ಇರುವ ಸ್ಪಷ್ಟತೆಗೆ ಫಲಿತಾಂಶಗಳು ನಿದರ್ಶನ ಆಗುತ್ತವೆ. ಇತರರಿಗೆ ಚಿಕ್ಕದು ಎನಿಸಿದಂಥ ಹಣಕಾಸಿನ ವಿಚಾರದ ನಿರ್ಧಾರವೊಂದು ದೊಡ್ಡ ಬದಲಾವಣೆಯನ್ನೇ ತರಲಿದೆ. ಭವಿಷ್ಯಕ್ಕೂ ಸಹಾಯಕ ಆಗಲಿದೆ. ನಿಮ್ಮ ಪ್ರೀತಿಪಾತ್ರರ ಜೊತೆಗೆ ನೀವು ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರು ಹೇಳುವುದನ್ನು ಕೇಳಿಸಿಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.