
ಡ್ರೈಫ್ರೂಟ್ಸ್, ಹೆಲ್ತಿ ಫುಡ್ ಇಂಥವುಗಳ ಖರೀದಿ ಮಾಡುವುದಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಕಿವಿಗೆ ಸಂಬಂಧಿಸಿದ ತೊಂದರೆಗಳು ಎದುರಾಗಲಿವೆ. ಅಂಥ ಸಂದರ್ಭ ಕೂಡಲೇ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಉದ್ಯೋಗಕ್ಕೆ ಸಂಬಂಧಿಸಿದ ವಿಚಾರಗಳನ್ನು ಮುಂದೂಡುವುದಕ್ಕೆ ಹೋಗಬೇಡಿ. ಇನ್ನು ಕಾರಣವೇ ಇಲ್ಲದೆ ನಿಮ್ಮ ಮೇಲೆ ಹಗೆ ಸಾಧಿಸುವುದಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ತಮ್ಮ ತಪ್ಪಿನ ಅರಿವಾಗಲಿದೆ. ತಮ್ಮ ತಪ್ಪಿಗೆ ಕ್ಷಮೆ ಕೂಡ ಕೇಳಲಿದ್ದಾರೆ
ಏನು ಆಗುತ್ತಿದೆ ಎಂದು ಗೊತ್ತೇ ಇಲ್ಲದಂತೆ ನಿಮ್ಮ ಪರಿಸ್ಥಿತಿ ಆಗಲಿದೆ. ಯಾವುದೇ ತೀರ್ಮಾನ ಮಾಡಿದರೂ ಅದರಿಂದ ಸಮಾಧಾನ ತರುವಂಥದ್ದೇನೂ ಆಗಬಹುದು ಎಂಬ ವಿಶ್ವಾಸ ನಿಮ್ಮಲ್ಲಿ ಮೂಡುವುದಿಲ್ಲ. ನಿಮ್ಮ ಬಳಿ ಇರುವಂಥ ವಾಹನ ಒಂದನ್ನು ಮಾರಾಟ ಮಾಡುವುದಕ್ಕೆ ಮುಂದಾಗಲಿದ್ದೀರಿ. ಕುಟುಂಬ ಸದಸ್ಯರಿಗೆ ಈ ಬಗ್ಗೆ ಒಮ್ಮತ ಇಲ್ಲದಿದ್ದರೂ ನಿಮ್ಮ ನಿಲುವು ಬದಲಿಸುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಹೋಟೆಲ್ ನಲ್ಲಿ ಕೆಲಸ ಮಾಡುವಂಥವರಿಗೆ ಒತ್ತಡದ ದಿನ ಇದಾಗಿರುತ್ತದೆ.
ಭವಿಷ್ಯದಲ್ಲಿ ಆಗಬಹುದಾದ ಬೆಳವಣಿಗೆಗಳ ಬಗ್ಗೆ ಸ್ಪಷ್ಟತೆ ದೊರೆಯುತ್ತಾ ಸಾಗುತ್ತದೆ. ನಿಮಗೆ ದೊಡ್ಡ ಹುದ್ದೆಯೊಂದರ ಜವಾಬ್ದಾರಿ ನೀಡುವ ಕುರಿತು ಮೇಲಧಿಕಾರಿಗಳು ಸುಳಿವು ಕೊಡಲಿದ್ದಾರೆ. ಈ ಹಿಂದೆ ನಿಮ್ಮಿಂದ ಆದಂಥ ಸಹಾಯವನ್ನು ನೆನಪಿನಲ್ಲಿ ಇಟ್ಟುಕೊಂಡು, ಸ್ನೇಹಿತರು ಈಗ ನಿಮ್ಮ ಅಗತ್ಯಕ್ಕೆ ಸ್ಪಂದಿಸಲಿದ್ದಾರೆ. ಬ್ಯಾಂಕ್ ನಲ್ಲಿ ಲಾಕರ್ ಅನ್ನು ಪಡೆದುಕೊಳ್ಳುವುದಕ್ಕೆ ನಿಮ್ಮಲ್ಲಿ ಕೆಲವರು ಪ್ರಯತ್ನವನ್ನು ಮಾಡಲಿದ್ದೀರಿ. ಅಥವಾ ಮನೆಗೆ ಅಂಥ ಲಾಕರ್ ಅನ್ನು ಖರೀದಿಸಿ ತರುವಂಥ ಸಾಧ್ಯತೆ ಇದೆ.
ಲೇಖನ- ಸ್ವಾತಿ ಎನ್.ಕೆ.