Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 22ರ ದಿನಭವಿಷ್ಯ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 22ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ನಿಮ್ಮ ಜನ್ಮಸಂಖ್ಯೆ ಆಧಾರಿತ ಈ ಭವಿಷ್ಯವು ದಿನದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ನಿಮಗೆ ಸಹಾಯಕವಾಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಯಾಕೆ ಒಪ್ಪಿಕೊಂಡೆ ಎಂದು ಹಲಬುವ ರೀತಿಯಲ್ಲಿ ಒಬ್ಬ ವ್ಯಕ್ತಿಯು ಕೆಲಸವೊಂದರ ಸಲುವಾಗಿ ನಿಮ್ಮ ಬೆನ್ನು ಹತ್ತಿ ಇನ್ನಿಲ್ಲದಂತೆ ಕಾಡಲಿದ್ದಾರೆ. ಕ್ರಿಯೇಟಿವ್ ಉದ್ಯೋಗ- ವೃತ್ತಿಯಲ್ಲಿ ಇರುವವರಿಗೆ ಡೆಡ್ ಲೈನ್ ಒಳಗಾಗಿ ಕೆಲಸ ಮುಗಿಸಲೇಬೇಕು ಎಂದು ಸೂಚನೆ ಬಂದು, ಬಹುತೇಕ ಇಡೀ ದಿನ ಕುಟುಂಬದ ವಿಚಾರಗಳಿಗೆ ಗಮನವೇ ನೀಡಲು ಸಾಧ್ಯವಿಲ್ಲದಂತೆ ಆಗಲಿದೆ. ಈ ಮಧ್ಯೆ ಕೆಲವರು ನಿಮಗೆ ಅಹಂಕಾರ ಎಂದು ಅಪಪ್ರಚಾರ ಮಾಡಿಕೊಂಡು ಬರಲಿದ್ದಾರೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಹಲವು ವಿಚಾರಗಳಲ್ಲಿ ಸಂತುಷ್ಟತೆ ಇರಲಿದೆ. ಈಗಾಗಲೇ ಸೈಟು ಇದೆ ಎಂದಾದಲ್ಲಿ ಅಲ್ಲಿ ಮನೆ ನಿರ್ಮಾಣ ಮಾಡುವುದಕ್ಕಾಗಿ ಸಂಬಂಧ ಪಟ್ಟ ವ್ಯಕ್ತಿಗಳ ಜತೆಗೆ ಮಾತುಕತೆ ನಡೆಸುವಂಥ ಸಾಧ್ಯತೆ ಇದೆ. ನೀವು ವಿವಾಹ ವಯಸ್ಕರಾಗಿದ್ದಲ್ಲಿ ಯಾರ ಬಗ್ಗೆ ನೀವು ಪ್ರೀತಿ ಇರಿಸಿಕೊಂಡಿದ್ದಿರೋ ಅವರೇ ನಿಮ್ಮ ಬಳಿ ಬಂದು ಪ್ರೇಮ ನಿವೇದನೆ ಮಾಡುವಂಥ ಯೋಗ ಇದೆ. ನಿಮಗೆ ಸ್ಪಷ್ಟವಾದ ವಿಷಯಗಳನ್ನು ಹೇಳುವುದಕ್ಕೆ ಹಿಂಜರಿಕೆ ಬೇಡ. ಯಾರು- ಏನೆಂದು ಕೊಳ್ತಾರೋ ಅಂತ ಅವಕಾಶಗಳನ್ನು ಕಳೆದುಕೊಳ್ಳುವಂತಾಗುತ್ತದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಹಣದ ಬಗ್ಗೆ ವಿಪರೀತ ಗಾಂಭೀರ್ಯ ಬರುವಂಥ ದಿನ ಇದಾಗಿರುತ್ತದೆ. ಇಷ್ಟು ಅವಧಿಯಲ್ಲಿ ಇಂಥಿಷ್ಟು ಮೊತ್ತವನ್ನು ಕೂಡಿಡಲೇ ಬೇಕು ಎಂದು ಸಂಕಲ್ಪ ಮಾಡಿಕೊಳ್ಳಲಿದ್ದೀರಿ. ಈಗ ಮಾಡುತ್ತಿರುವ ಉದ್ಯೋಗ, ವೃತ್ತಿ, ವ್ಯವಹಾರ- ವ್ಯಾಪಾರ ಜೊತೆಗೆ ಆದಾಯ ಮೂಲವನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಬೇಕಾದ ಪ್ರಯತ್ನಗಳನ್ನು ಶುರು ಮಾಡಲಿದ್ದೀರಿ. ನಿಮಗೆ ಬಹಳ ಹತ್ತಿರವಾದ ಸ್ನೇಹಿತರು ಪರಿಚಯ ಮಾಡಿಸುವಂಥ ವ್ಯಕ್ತಿಗಳಿಂದ ಹಲವು ರೀತಿಯಲ್ಲಿ ಅನುಕೂಲಗಳು ಒದಗಲಿವೆ.
ಲೇಖನ- ಸ್ವಾತಿ ಎನ್.ಕೆ.
