AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 28ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 28ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 28ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Jan 29, 2026 | 12:45 AM

Share

ಸಂಬಂಧಗಳನ್ನು ನಿರ್ವಹಿಸುವುದು ಇದೆಯಲ್ಲಾ ಅದು ಬಹಳ ತಲೆನೋವು. ತಪ್ಪು ಯಾರ ಕಡೆಯಿಂದಲೇ ಆದರೂ ಕ್ಷಮೆಯನ್ನು ಮಾತ್ರ ನಾವೇ ಕೇಳಬೇಕು. ಸಂಬಂಧ, ಪ್ರೀತಿ- ಪ್ರೇಮ, ದಂಪತಿ ಮಧ್ಯೆ ಕಾಡುವ ಜಗಳ- ಕಲಹಗಳಿಗೆ ಬ್ರೇಕ್ ಹಾಕುವುದಕ್ಕೆ ರೋಸ್ ಕ್ವಾರ್ಟ್ಜ್ ಸ್ಟೋನ್ ಒಂದೊಳ್ಳೆ ಪರಿಹಾರ. ಜನ್ಮಸಂಖ್ಯೆ 7, 8, 9ರ ಜನರಿಗೆ ಈ ಸಲಹೆ ಖಂಡಿತಾ ಸಹಾಯ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಮಗೆ ಸಿಗಬೇಕು ಅಂತಿದ್ದರೆ ಹೇಗಿದ್ದರೂ ಸಿಕ್ಕೇ ಸಿಗುತ್ತದೆ ಎಂಬ ಥಿಯರಿ ಏನೋ ಸರಿ. ಆದರೆ ಆ ಕಾರಣದಿಂದ ನಿಮ್ಮ ಅಭಿಪ್ರಾಯವನ್ನು ಹೇಳುವಂತೆ ಕೇಳಿದರೂ ಬಾಯಿ ಬಿಟ್ಟು ಏನನ್ನೂ ಹೇಳದಿರುವುದು ಎಷ್ಟು ಸರಿ? ಈ ದಿನ ನಿಮಗೆ ಸಿಗುವ ಅವಕಾಶ ಚೆನ್ನಾಗಿ ಬಳಸಿಕೊಳ್ಳಿ. ಬಾಯಿ ಬಿಟ್ಟು ಹೇಳುವುದರೊಂದಿಗೆ ಬೇಕಾದದ್ದನ್ನು ಪಡೆದುಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನೀವು ಬೇರೆ ಮತ್ತು ನಿಮ್ಮ ಆಲೋಚನೆ, ಲೆಕ್ಕಾಚಾರಗಳು ಬೇರೆ. ಉಳಿದವರಿಗಿಂತ ನೀವು ಬೇರೆ ಯಾವುದೋ ಲೆಕ್ಕ ಹಾಕಿಕೊಂಡಿದ್ದೀರಿ ಅಂತಾದಲ್ಲಿ ಸಂಶಯ ಪಡುವುದಕ್ಕೆ ಹೋಗಬೇಡಿ. ಅಂದುಕೊಂಡಿದ್ದು, ಅಂದುಕೊಂಡ ರೀತಿಯಲ್ಲಿಯೇ ಜಾರಿಗೆ ತನ್ನಿ. ನಾಲ್ಕಾರು ಜನಕ್ಕೆ ನಿಮ್ಮಿಂದ ಈ ದಿನ ಸಹಾಯ ಆಗುವ ಯೋಗ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಆರೋಗ್ಯದ ಬಗ್ಗೆ ಇನ್ನೊಂಚೂರು ಗಮನ ಕೊಡಬೇಕಿತ್ತು ಎಂದು ಬಲವಾಗಿ ಅನಿಸಲಿದೆ. ನಿಮ್ಮ ಉಳಿತಾಯದ ಹಣವನ್ನು ತೆಗೆದು ಸ್ವಲ್ಪ ರಿಸ್ಕ್ ಇರುವ ವ್ಯವಹಾರದಲ್ಲಿಯೇ ಹೂಡಿಕೆ ಮಾಡುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಆದರೆ ಈ ದಿನ ಯಾವ ಕಾರಣಕ್ಕೂ ಕುಟುಂಬ ಸದಸ್ಯರ ಮೇಲೆ ನಿಮ್ಮ ಸಿಟ್ಟು ತೋರಿಸಬೇಡಿ.

ಲೇಖನ- ಸ್ವಾತಿ ಎನ್.ಕೆ.