Horoscope: ಸ್ನೇಹಿತರು ಸಾಲ ಕೇಳಬಹುದು, ಮಾನಸಿಕ ಹಿಂಸೆ ಆಗಬಹುದು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 26, 2024 | 12:12 AM

26 ಡಿಸೆಂಬರ್​​ 2024: ಗುರುವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಇಂದು ನಿಮ್ಮ ಮನೆಯಲ್ಲಿ ಮಿತ್ರ, ಬಂಧುಗಳ ಸಮಾಗಮವಾಗಲಿದೆ. ಇಂದು ನಿಮಗೆ ನೌಕರರಿಂದ ತೊಂದರೆ ಬರಬಹುದು. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ಹಾಗಾದರೆ ಡಿಸೆಂಬರ್ 26ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಸ್ನೇಹಿತರು ಸಾಲ ಕೇಳಬಹುದು, ಮಾನಸಿಕ ಹಿಂಸೆ ಆಗಬಹುದು
ಸ್ನೇಹಿತರು ಸಾಲ ಕೇಳಬಹುದು, ಮಾನಸಿಕ ಹಿಂಸೆ ಆಗಬಹುದು
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಸುಕರ್ಮ​, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 56 ನಿಮಿಷಕ್ಕೆ,
ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:58 ರಿಂದ 03:22ರ ವರೆಗೆ,
ಯಮಘಂಡ ಕಾಲ ಬೆಳಗ್ಗೆ 06:57 ರಿಂದ 08:21 ರವರೆಗೆ, ಗುಳಿಕ ಕಾಲ ಬೆಳಿಗ್ಗೆ 09:45 ರಿಂದ 11:09 ರವರೆಗೆ.

ತುಲಾ ರಾಶಿ: ಸ್ನೇಹಿತರಿಂದ‌ ಸಾಲಕ್ಕೆ ಬೇಡಿಕೆ ಬರಬಹುದು. ಇಂದು ಉದ್ವೇಗವು ನಿಮ್ಮ ಕೆಲಸವನ್ನು ಅಸ್ತವ್ಯಸ್ತ ಮಾಡಲಿದೆ. ನಿಮಗೆ ಪ್ರೋತ್ಸಾಹದ ಕೊರತೆ ಅಧಿಕವಾಗಿ ಕಾಣಿಸುವುದು. ಪ್ರೀತಿಯಲ್ಲಿ ನಿಮಗೆ ನೋವಾಗುವ ಸಾಧ್ಯತೆ ಇದೆ. ಏನೂ ಬೇಡ ಎನಿಸಬಹುದು. ಸಣ್ಣ ಸಣ್ಣ ವಿಚಾರಗಳೂ ದೊಡ್ಡದಾಗಿ ಕಾಣಿಸುವುದು. ಅಧಿಕಾರಿಗಳಿಂದ ನಿಮಗೆ ಮಾನಸಿಕ ಹಿಂಸೆ ಆಗಬಹುದು. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ಸಾಮಾಜಿಕ‌ ಕೆಲಸದಿಂದ‌‌ ಸಾಧಿಸುವಿರಿ. ನಕಾರಾತ್ಮಕ ಆಲೋಚನೆಗಳು ಬಾರದಂತೆ ನೋಡಿಕೊಳ್ಳಿ.‌ ಯೋಗ ಧ್ಯಾನದ ಬಗ್ಗೆ ಒಲವು ಹೆಚ್ಚಾಗುವುದು. ಮಕ್ಕಳ‌ ವಿವಾಹ ಚಿಂತೆಯನ್ನು ಬಿಡುವಿರಿ. ಯಾರ ಮಾತನ್ನೋ ಕೇಳಿ ಮಾಡುವ ಕೆಲಸಕ್ಕಿಂತ ನಿಮ್ಮ ಮನಸ್ಸಿಗೆ ಬಂದರೆ ಮಾತ್ರ ಮಾಡಿ. ಉಪಾಯದಿಂದ‌ ಕಾರ್ಯವನ್ನು ಸಾಧಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ: ಮಕ್ಕಳಿಂದ ನಿಮಗೆ ಶುಭ ವಾರ್ತೆ ಇರುವುದು. ಇಂದು ನಿಮ್ಮ ನ್ಯಾಯಾಲಯದ ಕಾರ್ಯಗಳು ಮಂದಗತಿಯಲ್ಲಿ ಸಾಗಲಿವೆ. ಕೃಷಿಯಲ್ಲಿ ನೀವು ಬಹಳ‌ ಆಯ್ಕೆ ಸ್ವಭಾವವುಳ್ಳವರು. ಬಂಧುಗಳ‌ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಯಾವುದೋ ಆಲೋಚನೆಯಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮಾಡಲಾಗದು. ಕುರುಡಾಗಿ ಮುನ್ನುಗ್ಗುವುದು ಬೇಡ. ಮೊದಲೇ ನಿಶ್ಚಯಿಸಿದ ಕಾರ್ಯಗಳನ್ನು ಸರಿಯಾಗಿ ಮುಂದುವರಿಸಿ. ಆರೋಗ್ಯವು ಸುಧಾರಿಸುತ್ತ ಬರಲಿದೆ. ನೀವು ಮಾತನಾಡುವ ವೇಗದಲ್ಲಿ ಏನನ್ನಾದರೂ ಹೇಳುವಿರಿ. ಅಧ್ಯಯನದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರುವುದು. ಆರ್ಥಿಕ ಹಿನ್ನಡೆಯನ್ನು ನೀವು ಲೆಕ್ಕಿಸುವುದಿಲ್ಲ.

ಧನು ರಾಶಿ: ಸ್ವಂತ ಉದ್ಯಮವು ಹೆಚ್ಚು ಸಮಯವನ್ನು ಕೇಳುವುದು. ನೀವು ಇಂದು ಮಾಡಿದ ತಪ್ಪನ್ನು ಮಾಡದೇ ಎಲ್ಲರಿಂದ ಸೈ ಎನಿಸಿಕೊಳ್ಳುವಿರಿ. ಒಂದು ಕೆಲಸವನ್ನು ಮೈ ಮೇಲೆ ಬಿದ್ದು ಮಾಡಿಸಿಕೊಳ್ಳಬೇಕಾಗುವುದು. ಕಲಾವಿದರು ಗೌರವವನ್ನೂ ಯಶಸ್ಸನ್ನೂ ಗಳಿಸುವರು. ನಿಮಗೆ ಆಗುವಷ್ಟೇ ಕೆಲಸವನ್ನು ಮಾಡಿ. ಮತ್ತೆ ಮತ್ತೆ ಬರುವ ಅಪರಿಚಿತ ಕರೆಗಳಿಂದ ಕುಗ್ಗುವಿರಿ. ಹೊಸ ಯೋಜನೆಗಳನ್ನು ಆರಂಭಿಸಲು ಧೈರ್ಯ ಮಾಡುವುದು ಬೇಡ. ಏನಾದರೂ ಒಂದು ಅಸಂಬದ್ಧವನ್ನು ಮಾಡುವ ಹಣೆಪಟ್ಟಿ ಬರಬಹುದು. ವಂಚನೆಯಿಂದ ಆಟವನ್ನು ಗೆಲ್ಲುವಿರಿ. ಶತ್ರುಗಳ ವ್ಯವಹಾರವನ್ನು ಇನ್ನೊಬ್ಬರ ಮೂಲಕ ತಿಳಿದುಕೊಳ್ಳುವಿರಿ. ನಿಮ್ಮ ಮೇಲೆ ಯಾರದ್ದಾದರೂ ದೃಷ್ಟಿಯು ಬೀಳಬಹುದು. ದೃಷ್ಟಿಯನ್ನು ತೆಗೆದುಕೊಳ್ಳಿ. ಯಾರ ಬೆಂಬಲವನ್ನೂ ಅಪೇಕ್ಷಿಸದೇ ಕೆಲಸವನ್ನು ಮಾಡುವಿರಿ. ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು. ನಿರುದ್ಯೋಗವು ನಿಮಗೆ ಚಿಂತೆಯಾಗುವುದು.

ಮಕರ ರಾಶಿ: ನಿಮ್ಮ ಕೆಲಸವನ್ಮು ಸಹೋದ್ಯೋಗಿಗಳು ಆಡಿಕೊಳ್ಳುವರು. ನೀವು ಅಪ್ತರ ಸಲಹೆಗಳನ್ನು ಕೇಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಆಪ್ತರು ನಿಮಗೆ ಧೈರ್ಯವನ್ನು ತುಂಬುವರು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹೆಚ್ಚು ಖರ್ಚನ್ನು ಮಾಡಬೇಕಾಗುದು. ತಂದೆಯ ಆರೋಗ್ಯದ ಬಗ್ಗೆ ಗಮನ ಅಧಿಕವಾಗಿರಲಿ. ವಿದ್ಯಾಭ್ಯಾಸದ ಹಿನ್ನಡೆಗೆ ಕಾರಣವನ್ನು ಕಂಡುಕೊಳ್ಳುವಿರಿ. ಆಭರಣಪ್ರಿಯರಿಗೆ ಖರೀದಿಯ ಉತ್ಸಾಹ ಬರುವರು. ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸುವುದು ಬೇಡ. ನಿಮ್ಮಲ್ಲಿ ಆದ ಬದಲಾವಣೆಯನ್ನು ಸಹೋದ್ಯೋಗಿಗಳು ಗಮನಿಸಬಹುದು. ವಿದ್ಯಾರ್ಥಿಗಳು ಮನೆಯ ಜವಾಬ್ದಾರಿಯನ್ನೂ‌ ನಡೆಸುವ ಸಂದರ್ಭವು ಬರಬಹುದು.‌ ಮೃಷ್ಟಾನ್ನ ಭೋಜನದಿಂದ ಸಂತೃಪ್ತಿ. ಇಂಸು ಕೆಲವರ ಮಾತುಗಳು ಉತ್ಸಾಹವನ್ನು ಕಡಿಮೆ‌ ಮಾಡಬಹುದು. ಸಂಗಾತಿಯ ಜೊತೆ ವಾಗ್ವಾದವನ್ನು ಮಾಡಲಿದ್ದೀರಿ. ಆರ್ಥಿಕಸ್ಥಿತಿಯು ಯಥಾಸ್ಥಿತಿಯಲ್ಲಿ ಇರಲಿದೆ‌. ಪ್ರಾಮಾಣಿಕ ಪ್ರಯತ್ನವು ನಿಮ್ಮ ಸಾಧನೆಯ ಗುಟ್ಟು. ವ್ಯವಹಾರಸ್ಥರು ಅಜಾಗರೂಕರಾಗುವುದು ಬೇಡ. ಮನೆಯ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ. ನಿಮ್ಮ ವಾಹನಕ್ಕಾಗಿ ಖರ್ಚನ್ನು ಮಾಡಬೇಕಾಗುವುದು.

ಕುಂಭ ರಾಶಿ: ಇಂದು ಮಾರಾಟಗಾರರಿಗೆ ಬೇಕಾದ ವಸ್ತುಗಳ ಲಭ್ಯತೆ ಕಷ್ಟವಾಗುವುದು. ಇಂದು ನಿಮ್ಮನ್ನು ಅಪರಿಚಿತರು ವಶ ಮಾಡಿಕೊಳ್ಳಲು ಪ್ರಯತ್ನಿಸುವರು. ಆಸ್ತಿಯ ಮಾರಾಟದ ವಿಚಾರವು ಅಧಿಕವಾಗಿ ಕೇಳಿಬರಬಹುದು. ಉದ್ಯೋಗದ ಅವಕಾಶವನ್ನು ಬಿಟ್ಟುಬಿಡುವಿರಿ. ನಿಮ್ಮ ಊಹೆಯು ಸತ್ಯವಾಗಬಹುದು. ಬಂಧುಗಳು ನಿಮ್ಮ ಬಗ್ಗೆ ಮಾತನಾಡಿಕೊಳ್ಳುವರು. ಹಿರಿಯರ ಜೊತೆ ವಾಗ್ವಾದ ಆಗಬಹುದು. ಆಸ್ತಿ ಹಂಚಿಕೆ ವಿಚಾರಕ್ಕೆ ಸೊಪ್ಪು ಹಾಕದೇ ಇದ್ದರೆ ಅದು ಅಲ್ಲಿಯೇ ಶಾಂತವಾಗುವುದು. ರಾಜಕಾರಣವು ಬೇಸರ ತರಿಸಿ, ನಿಮಗೆ ಇಷ್ಟವಾಗದು. ಅಪರಿಚಿತರು ನಿಮ್ಮನ್ನು ವಶ ಮಾಡಿಕೊಳ್ಳಲು ಉಪಾಯವನ್ನು ಮಾಡಬಹುದು. ನಿಮ್ಮ ಮತ್ತೊಂದು‌ ಮುಖದ ಪರಿಚಯವೂ ಆಪ್ತರಿಗೆ ಆಗಲಿದೆ. ಪ್ರಯಾಣದಿಂದ ಸ್ವಲ್ಪ ಆಯಾಸವಾಗಲಿದ್ದು ವಿಶ್ರಾಂತಿಯಿಂದ ಸರಿಮಡಿಕೊಳ್ಳಿ. ನಿಮ್ಮದಲ್ಲದ ವಸ್ತುಗಳನ್ನು ಇತರರಿಗೆ ಕೊಟ್ಟುಬಿಡುವಿರಿ. ಕೆಲವರ ಮಾತು ನಿಮಗೆ ಕೋಪ ತರಿಸಬಹುದು. ಹೂಡಿಕೆಗೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು.

ಮೀನ ರಾಶಿ: ಇಂದು ನಿಮ್ಮ ಮನೆಯಲ್ಲಿ ಮಿತ್ರ, ಬಂಧುಗಳ ಸಮಾಗಮವಾಗಲಿದೆ. ಇಂದು ನಿಮಗೆ ನೌಕರರಿಂದ ತೊಂದರೆ ಬರಬಹುದು. ಆಪ್ತರನ್ನು ಕಳೆದುಕೊಂಡು ದುಃಖಿಸುವಿರಿ. ಕ್ರೀಡೆಗೆ ಸಂಬಂಧಿಸಿದಂತೆ ಮಾರ್ಗದರ್ಶನದ ಕೊರತೆ ಕಾಣುವುದು. ಸಂಗಾತಿಯ ಮೇಲಿನ‌ ಪ್ರೀತಿ ಕಡಿಮೆ ಆಗಬಹುದು.
ನಿಮಗೆ ಒತ್ತಡವು ಅಧಿಕವಾಗಿ ಇರಲಿದ್ದು, ಯಾವುದೋ ಭಯವು ಕಾಡಬಹುದು. ಅನಿವಾರ್ಯವಾಗಿ ನೀವು ಹಣವನ್ನು ಕೊಡಬೇಕಾಗಬಹುದು. ನಿಮ್ಮ‌ ಸ್ವಾಭಿಮಾನಕ್ಕೆ ತೊಂದರೆಯಾಗುವ ಮಾತುಗಳು ಬರಬಹುದು. ಎಲ್ಲ ಮಾತುಗಳನ್ನೂ ನೀವು ನಕಾರಾತ್ಮಕವಾಗಿಯೇ ತಿಳಿಯುವಿರಿ. ಅತಿಥಿಯನ್ನು ಸಂತೋಷಗೊಳಿಸುವಿರಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವು ಕಾಡುವುದು. ಕಳೆದ ಸುಖದ ಕಾಲವನ್ನು ನೆನಪಿಸಿಕೊಳ್ಳುವಿರಿ. ಅರ್ಥಿಕ ವಿಷಯಕ್ಕೆ ಸಹೋದರರ ನಡುವೆ ಮಾತು ಬರಬಹುದು. ಮೋಸಗೊಳಿಸಲು ಹೋಗಿ ನಗೆಗೀಡಾಗುವಿರಿ. ನಿಮಗೆ ಇಷ್ಟವಾದವರನ್ನು ಬೆಂಬಲಿಸುವಿರಿ. ನಿಮ್ಮ ಗುಟ್ಟನ್ನು ನೀವು ಏನೇ ಮಾಡಿದರೂ ಬಿಡಲಾರಿರಿ.