ಬೆರಳಿನ ಉಗುರಿನ ಬಣ್ಣವನ್ನು ನೋಡುವುದರ ಮೂಲಕ ಆರೋಗ್ಯವನ್ನು ತಿಳಿಯಬಹುದು ಎಂಬ ಬಗ್ಗೆ ಈಗಾಗಲೇ ಒಂದು ಆರ್ಟಿಕಲ್ ಬರೆದಿದ್ದೇವೆ. ಈಗ ಬೆರಳಿನ ಉಗುರುಗಳ ಮೂಲಕ ಮನುಷ್ಯನ ವ್ಯಕ್ತಿತ್ವ ತಿಳಿಯಬಹುದು. ಅದು ಹೇಗೆ? ಎಂಬ ಬಗ್ಗೆ ಈ ಆರ್ಟಿಕಲ್ನಲ್ಲಿ ವಿವರಿಸಲಿದ್ದೇವೆ. ಪ್ರತಿಯೊಬ್ಬ ಮನುಷ್ಯನ ಉಗುರುಗಳ ಬೇರೆ ಬೇರೆ ಆಕಾರದಲ್ಲಿರುತ್ತವೆ. ಆ ಆಕಾರದ ಸಹಾಯದಿಂದಲೇ ಮನುಷ್ಯನ ಗುಣ, ವ್ಯಕ್ತಿತ್ವವನ್ನು ಅಳೆಯಬಹುದು.
ಆಯುರ್ವೇದದ ಪ್ರಕಾರ, ಉಗುರುಗಳು ಮೂಳೆಗಳ ಕೊಳೆ ಎನ್ನಲಾಗುತ್ತೆ. ಆದರೆ ಆಧುನಿಕ ವಿಜ್ಞಾನವು ಅವುಗಳನ್ನು ಕಾರ್ಟಿಲೆಜ್ ತುಂಡುಗಳಾಗಿ ಪರಿಗಣಿಸುತ್ತದೆ. ಹೆಬ್ಬೆರಳಿನ ಪೂರ್ಣ ಉಗುರು ಬೆಳೆಯಲು 140 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಸಣ್ಣ ಬೆರಳಿನ ಉಗುರು ಸಂಪೂರ್ಣವಾಗಿ ಬೆಳೆಯಲು ಕೇವಲ 121 ದಿನಗಳನ್ನು ತೆಗೆದುಕೊಳ್ಳುತ್ತದೆ. ಆಗಾಗ್ಗೆ ಬೆಳೆಯುವ ಉಗುರುಗಳನ್ನು ಸುಂದರವಾಗಿಸಲು ನಾವು ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತೆವೆ. ಕೈಗಳು ಸುಂದರವಾಗಿ ಕಾಣಲೆಂದು ಉಗುರುಗಳಿಗೆ ನೈಲ್ ಪಾಲಿಶ್ ಹಚ್ಚುವುದು ಅದಕ್ಕೆ ಶೇಪ್ ನೀಡುವುದನ್ನು ಮಾಡುತ್ತಿರುತ್ತೇವೆ. ಈಗ ಅದೇ ಉಗುರಿನ ಮೂಲಕ ನಿಮ್ಮ ಭವಿಷ್ಯ, ವ್ಯಕ್ತಿತ್ವ, ದುಷ್ಪರಿಣಾಮಗಳು ಇತ್ಯಾದಿಗಳನ್ನು ತಿಳಿದುಕೊಳ್ಳಬಹುದು.
ಪ್ರತಿಯೊಬ್ಬ ವ್ಯಕ್ತಿಯ ಉಗುರುಗಳು ವಿಭಿನ್ನ ಆಕಾರದಲ್ಲಿರುತ್ತವೆ. ಕೆಲವು ವ್ಯಕ್ತಿಯ ಉಗುರು ಅಗಲ, ಕೆಲವು ತೆಳುವಾದ, ಕೆಲವು ಮೃದುವಾದ, ಕೆಲವು ಗಟ್ಟಿಯಾದ, ಮತ್ತು ಉಗುರುಗಳ ಬಣ್ಣ ಕೂಡ ವಿಭಿನ್ನವಾಗಿರುತ್ತದೆ. ಯಾರ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿರುತ್ತವೋ ಹಾಗೂ ಆಗಾಗ್ಗೆ ಮುರಿಯುತ್ತವೋ, ಅವರಿಗೆ ಲೈಂಗಿಕತೆಯ ಪ್ರಜ್ಞೆ ಇರುವುದಿಲ್ಲ ಎಂದು ನಂಬಲಾಗಿದೆ. ಇಂತಹವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಹೇಳಲಾಗುತ್ತೆ. ಉದ್ದವಾದ ಲಂಬ ಉಗುರುಗಳಿದ್ದರೆ ಅವರು ಕಲಾತ್ಮಕ ಜೀವಿಗಳಾಗಿರುತ್ತಾರೆ. ವೃತ್ತಿ ಅಥವಾ ಲೈಂಗಿಕತೆಯ ಪ್ರತಿಯೊಂದು ಅಂಶದಲ್ಲೂ ಅತ್ಯಂತ ಆಹ್ಲಾದಕರ ವಿಚಾರಗಳನ್ನು ಹೊಂದಿರುತ್ತಾರೆ.
ಅಗಲವಾದ ಉಗುರುಗಳಿದ್ದರೆ ಅಂತವರು ಮಕ್ತ ಮನಸ್ಸಿನವರು. ತಮ್ಮ ಈ ಗುಣವನ್ನು ತೋರಿಸಲು ಅವರು ಯಾವುದೇ ಅವಕಾಶವನ್ನೂ ಬಿಡುವುದಿಲ್ಲ. ಚೌಕಾಕಾರದ ಉರುಗುಗಳನ್ನು ಹೊಂದಿರುವುರು ತುಂಬಾ ಅಪರೂಪ. ಇಂತಹ ಅಪರೂಪದ ಬೆರಳುಗಳನ್ನು ಹೊಂದಿರುವವರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ. ಇನ್ನು ಉಗುರುಗಳು ಆಮೆಯ ಬೆನ್ನಿನಂತೆ ಸ್ವಲ್ಪ ಎತ್ತರ, ಹವಳದಂತೆ ಕೆಂಪು, ನಯವಾದ ಮತ್ತು ಹೊಳೆಯುವವರು ತುಂಬಾ ಅದೃಷ್ಟವಂತರು ಎಂದು ನಂಬಲಾಗಿದೆ. ಅಂತಹ ಜನರು ಹೆಚ್ಚಾಗಿ ಉನ್ನತ ಸ್ಥಾನಗಳಲ್ಲಿ ಕೆಲಸ ಮಾಡುತ್ತಾರೆ. ಉಗುರುಗಳ ಮೇಲೆ ಪಟ್ಟೆಗಳನ್ನು ಹೊಂದಿರುವ ಜನರು ಅಥವಾ ಉಗುರು ಕಚ್ಚುವ ಅಭ್ಯಾಸವನ್ನು ಹೊಂದಿದ್ದರೆ, ಪುರುಷ ಅಥವಾ ಮಹಿಳೆಯ ಸ್ವಭಾವವು ದುಃಖಕರವಾಗಿರುತ್ತದೆ ಎಂದು ಹೇಳಲಾಗುತ್ತೆ. ಅವರಿಗೆ ಆತ್ಮಸಾಕ್ಷಿಯ ಕೊರತೆಯಿದ್ದು ಯಾವಾಗಲೂ ಚಿಕ್ಕ ವಿಷಯದ ಬಗ್ಗೆ ಚಿಂತಿತರಾಗಿರುತ್ತಾರೆ ಮತ್ತು ದುಃಖದಲ್ಲಿ ಮುಳುಗಿರುತ್ತಾರೆ.
ಉಗುರುಗಳು ಬಿಳಿ ಚುಕ್ಕೆಗಳಿಂದ ಗುರುತಿಸಲ್ಪಟ್ಟಿರುವ ಜನರು, ಅವರ ನಡವಳಿಕೆಯು ಒಳ್ಳೆಯದಲ್ಲ ಎಂದು ನಂಬಲಾಗಿದೆ. ಅಂತಹ ಜನರು ತಮ್ಮ ಜೀವನವನ್ನು ಹೆಚ್ಚಾಗಿ ಅಧೀನದಲ್ಲಿ ನಡೆಸುತ್ತಾರೆ. ಹೆಬ್ಬೆರಳಿನ ಉಗುರಿನ ಮೇಲೆ ಕಪ್ಪು ಚುಕ್ಕೆ ಇರುವ ಜನರು ಪ್ರೀತಿಯಲ್ಲಿ ಕುರುಡರು ಮತ್ತು ಪ್ರೇಮದಲ್ಲಿ ವಿಫಲರಾಗುವುದಿಲ್ಲ ಅಥವಾ ಬೇರೆಯವರ ದಾಂಪತ್ಯ ಜೀವನಕ್ಕೆ ಕೆಡಕಾಗುವಂತೆ ಮಾಡುವುದಿಲ್ಲ ಎನ್ನಲಾಗಿದೆ.
(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಸಾಮಾನ್ಯ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಪ್ರಸ್ತುತಪಡಿಸಲಾಗಿದೆ.)
ಇದನ್ನೂ ಓದಿ: ಉಗುರುಗಳ ಮೇಲೆ ಮೂಡುವ ಬಿಳಿಯ ಅರ್ಧ ಚಂದ್ರಾಕೃತಿಯಿಂದ ನಿಮ್ಮ ಆರೋಗ್ಯ ತಿಳಿಯಬಹುದು.. ಹೇಗೆ ಎಂಬುವುದನ್ನು ಇಲ್ಲಿ ತಿಳಿಯಿರಿ