Nithya Bhavishya: ದೂರ ಪ್ರಯಾಣವು ಈ ರಾಶಿಯವರಿಗೆ ಸುಖವಲ್ಲ‌, ಮಹಾಕಾಳಿಯನ್ನು ಸ್ತುತಿಸಿ

|

Updated on: Mar 09, 2023 | 5:30 AM

ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ(2023 ಮಾರ್ಚ್ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nithya Bhavishya: ದೂರ ಪ್ರಯಾಣವು ಈ ರಾಶಿಯವರಿಗೆ ಸುಖವಲ್ಲ‌, ಮಹಾಕಾಳಿಯನ್ನು ಸ್ತುತಿಸಿ
ಪ್ರಾತಿನಿಧಿಕ ಚಿತ್ರ
Image Credit source: kannadanews.today
Follow us on

ಶುಭೋದಯ ಓದುಗರೇ….ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ(2023 ಮಾರ್ಚ್ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ:ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಹಸ್ತಾ, ಯೋಗ: ಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02: 13 ರಿಂದ ಮಧ್ಯಾಹ್ನ 03:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:46 ರಿಂದ ಬೆಳಗ್ಗೆ 08:15ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:45 ರಿಂದ 11:14ರ ವರೆಗೆ.

ಮೇಷ: ನಿಮ್ಮ ಭವಿಷ್ಯವನ್ನು ನಿದ್ರೆಯಲ್ಲಿ ಕಂಡರೆ ಆಗದು. ಬಂದಿರುವುದು ಧೈರ್ಯದಿಂದ ಎದುರಿಸಿ, ಆತಂಕಪಡುವ ಅವಶ್ಯಕತೆಯಿಲ್ಲ. ನಿಮ್ಮನ್ನು ನೋಡಿಕೊಳ್ಳುವರಾರಿಲ್ಲ ಎಂದೆನಿಸಬಹುದು. ಇದ್ದಲ್ಲೇ ಇರುವ ಬದಲು ಏನನ್ನಾದರೂ ಮಾಡು. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಿರಿ. ಯಾವುದೇ ವಿವಾದವನ್ನು ಎಳೆದುಕೊಳ್ಳಬೇಡಿ. ಇಂದು ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಯೋಗ್ಯರೀತಿಯಲ್ಲಿ ಮಾಡಿ ಮುಗಿಸುವಿರಿ. ಹಣವನ್ನು ಉಳಿಸಲು ಪ್ರಯತ್ನಿಸಿದಷ್ಟೂ ಅನಿರೀಕ್ಷಿತವಾದ ದಾರಿಯಲ್ಲಿ ಖರ್ಚಾಗುವುದು. ಕುಲದೇವರ ಆರಾಧನೆಯನ್ನು ಮಾಡಿ.

ವೃಷಭ: ನಿಮ್ಮ ಯೋಜನೆಗೆ ಇಂದು ಎಲ್ಲವೂ ವಿರುದ್ಧವಾಗಬಹುದು. ಯಾರ ಮೇಲೂ ದ್ವೇಷವನ್ನು ಸಾಧಿಸುತ್ತ ಕೂರಬೇಡಿ. ಮನಸ್ಸು ಕೆಡುತ್ತದೆಯಷ್ಟೇ. ಇನ್ನೊಬ್ಬರು ಆಡುವ ಮಾತುಗಳು ಅಸತ್ಯವೆನಿಸುವುದು. ನಿಮ್ಮವರನ್ನು ಪ್ರೀತಿಸಿ. ಆಗದಿದ್ದರೆ ಸುಮ್ಮನಿರಿ. ನಿಮಗೆ ಬರುವ ಹಣವಿಂದು ಬರಬಹುದು. ಸಂಗಾತಿಯೊಂದಿಗೆ ಸಣ್ಣ ವಿಚಾರಕ್ಕೆ ಮನಸ್ತಾಪ ಏಳಬಹುದು. ನಿಮ್ಮ ಮಾತನ್ನು ಕುಟುಂಬವು ತಿರಸ್ಕರಿಸಬಹುದು. ಇಷ್ಟವಾದ ವಸ್ತುಗಳನ್ನು ಖರೀದಿಸುವಿರಿ. ಉದ್ಯೋಗದ ಕಾರಣಕ್ಕೆ ದೂರಪ್ರಯಾಣವನ್ನು ಮಾಡುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಸ್ನೇಹಿತರು ಸಹಕರಿಸುವರು. ನಿಮ್ಮನ್ನು ಸಮರ್ಥಿಕೊಳ್ಳಲು ಹೆಣಗಾಡುವಿರಿ. ಮಹಾಕಾಳಿಯನ್ನು ಸ್ತುತಿಸಿ.

ಮಿಥುನ: ಕಲಾವಿದರಿಗೆ ಸಮ್ಮಾನಗಳು ಸಿಗಲಿವೆ. ದೂರ ಪ್ರಯಾಣವು ನಿಮಗೆ ಸುಖವಲ್ಲ‌. ನಿರಾಶಾಭಾವದಿಂದ ಹೊರಬಂದು ಒಳ್ಳೆಯ ಕಾರ್ಯದವನ್ನು ಮಾಡುವತ್ತ ಗಮನಹರಿಸಿ. ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡಬೇಡಿ. ಎಲ್ಲವನ್ನೂ ಸಮಾಧಾನಚಿತ್ತದಿಂದ ಸ್ವೀಕರಿಸುವುದನ್ನು ಇಂದಿನಿಂದ ಬೆಳೆಸಿಕೊಳ್ಳಿ. ಮಾನಸಿಕ ನೆಮ್ಮದಿಯೂ ಸಿಗುವುದು. ಜೀವನೂ ಸರಳವಾಗುವುದು. ಕುಟುಂಬದವರೊಂದಿಗೆ ನಗುತ್ತಾ ಇರಿ. ಕಾರ್ಯದ ಒತ್ತಡವು ಇಂದು ಅಧಿಕವಾಗಿರಲಿದೆ. ಆರೋಗ್ಯವನ್ನೂ ಗಮನಿಸಿಕೊಳ್ಳಿ. ರಾಯರವೃಂದಾವನಕ್ಕೆ ಹೋಗಿ ಧ್ಯಾನಮಾಡಿ ಬನ್ನಿ.

ಕಟಕ: ನಿಮಗಾದ ವಂಚನೆಯನ್ನು ಸರಿ ಮಾಡಿಕೊಳ್ಳಲು ಕಾನೂನಿಗೆ ವಿರುದ್ಧವಾಗಿ ಹೊಇಗಬೇಡಿ. ಹುಲಿಯ ಸವಾರಿಯಾದೀತು. ವ್ಯಾಪಾರದಲ್ಲಿ ಅಧಿಕಲಾಭವನ್ನು ಗಳಿಸಲಿದ್ದೀರಿ. ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವರು. ತಂದೆ ಹಾಗೂ ತಾಯಿಯರ ಜೊತೆ ಸ್ವಲ್ಪ ಸಮಯವನ್ನು ಕಳೆಯಿರಿ. ಪ್ರೇಮನಿವೇದನೆ ಮಾಡಿದರೆ ನಕಾರಾತ್ಮಕ ಪ್ರತಿಕ್ರಿಯೆಗಳು ಬರಬಹುದು. ಯಾವುದೂ ನಿಮ್ಮ ಆಲೋಚನೆಗೆ ಅನುಸಾರವಾಗಿ ನಡೆಯುತ್ತಿಲ್ಲವೆಂಬ ಬೇಸರವೂ ಆಗಬಹುದು. ತಾಳ್ಮೆಯಿಂದ ಇರಿ. ಔದುಂಬರ ವೃಕ್ಷಕ್ಕೆ ನೀರೆರೆದು ಬನ್ನಿ.

ಸಿಂಹ: ಆರೋಗ್ಯದ ಬಗ್ಗೆ ಗಮನವು ಹೆಚ್ಚಿರಲಿ. ವೈದ್ಯರ ಸಲಹೆಗಳನ್ನು ತಿರಸ್ಕರಿಸಬೇಡಿ. ಇಂದು ನಿಮ್ಮ ಪ್ರತಿಭೆಯ ಪ್ರದರ್ಶನವಾಗಲಿದೆ‌. ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ಕಳೆಯಿರಿ. ಅವರು ನಿಮ್ಮ ನೋವನ್ನು ಹಂಚಿಕೊಳ್ಳುವರು. ಬಹಳ ದಿನಗಳಿಂದ ಹೋಗಬೇಕೆಂದುಕೊಂಡ ಸ್ಥಳಕ್ಕೆ ಹೋಗುವಿರಿ. ನಿಮ್ಮ ಬಗ್ಗೆ ಪೂರ್ವಾಗ್ರಹದಿಂದ‌ ಇಟ್ಟುಕೊಂಡವರಿಗೆ ನಿಮ್ಮ ನಿಜಸ್ಥಿತಿಯನ್ನು ತಿಳಿಸುವಿರಿ. ಆರ್ಥಿಕಸ್ಥಿತಿಯು ಸುಧಾರಿಸುವುದು. ನಿಮ್ಮ ನೆಚ್ಚಿನ ವ್ಯಕ್ತಿಯನ್ನು ಭೇಟಿ ಮಾಡುವಿರಿ. ಶಿವಸ್ತುತಿಯನ್ನು ಮಾಡಿ.

ಕನ್ಯಾ: ಆಲಸ್ಯವು ನಿಮ್ಮ ಕೆಲಸವನ್ನು ಮತ್ತಷ್ಟು ವಿಳಂಬವಾಗಿಸುವುದು. ಸರ್ಕಾರದಿಂದ ಆಗಬೇಕಾಗಿದ್ದ ಕಾರ್ಯಗಳು ನಿಧಾನವಾಗಲಿದೆ. ಮನಸ್ಸು ಅತಿಯಾದ ಗೊಂದಲದಿಂದ ಇರುವುದಿ. ಕಾರ್ಯದ ನಿಮಿತ್ತ ವ್ಯರ್ಥ ಓಡಾಟವನ್ನು ಮಾಡುವಿರಿ. ಕೆಲಸವನ್ನು ಮುಗಿಸುವ ವೇಗದಲ್ಲಿ ಖರ್ಚನ್ನು ಹೆಚ್ಚು ಮಾಡಬೇಕಾಗಿಬರಬಹುದು. ಸಂಗಾತಿಯೊಡನೆ ಸಂತೋಷದಿಂದ ಸಲ್ಲಾಪಮಾಡುತ್ತ ಸಮಯವು ಕಳೆದುಹೋಗುವುದು. ಇಂದು ಭೂಮಿಯನ್ನು ಮಾರುವುದಿದ್ದರೆ ಉತ್ಯಮ ಬೆಲೆಗೆ ಖರೀದಿಯಾಗುವುದು. ಮಕ್ಕಳಿಗೆ ಪ್ರೀತಿ ತೋರಿಸಿ, ಅವರು ನಿಮ್ಮ ಮಾತನ್ನು ಕೇಳುತ್ತಾರೆ. ಜೊತೆಗೆ ಭೀತಿಯೂ ಇರಲಿ. ಅತಿಯಾದ ಸಿಹಿಯನ್ನು ತಿಂದು ದೇಹವನ್ನು ಕೆಡಿಸಿಕೊಳ್ಳಬೇಡಿ. ಹರಿನಾಮಸ್ಮರಣೆಯನ್ನು ಮಾಡಿ ಕೆಲಸ ಕಾರ್ಯಗಳಿಗೆ ತೆರಳಿ.

ತುಲಾ: ತುಂಬಾ ದಿನಗಳಿಂದ ಮನೆಗೆ ಅಗತ್ಯವಿರುವ ಹೊಸ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ.ಇದರಿಂದ ಮನೆಯ ಹಿರಿಯರು ಇಂದ ಬೈ ಮನೆಯಲ್ಲಿ ಕಿರಿಕಿರಿಯ ವಾತಾವರಣವೂ ನಿರ್ಮಾಣವಾಗಬಹುದು. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಔಷಧೀಯ ವಸ್ತುಗಳ ಮಾರಾಟದಿಂದ ಹೆಚ್ಚು ಲಾಭವಾಗಲಿದೆ. ಯಾವ ಮಾತನ್ನೂ ಯೋಚಿಸದೇ ಆಡಬೇಡಿ. ಮುಂದೆ ಇದೇ ತಪ್ಪಾದೀತು. ಸಂಗಾತಿಯ ಸೌಂದರ್ಯಕ್ಕೆ ಮರುಳಾಗಿ ಹೋಗುವಿರಿ. ಕಛೇರಿಯಲ್ಲಿ ಸಂವಹನವನ್ನು ಜಾಗರೂಕತೆಯಿಂದ ನಿಭಾಯಿಸಬೇಕು. ವಕೀಲವೃತ್ತಿಯಲ್ಲಿ ಇರುವವರಿಗೆ ಜಯವು ಸಿಗಲಿದೆ. ದುರ್ಗಾದೇವಿಯ ಆರಾಧನೆಯಿಂದ ಸಕಲವೂ ಸಾಕಾರಗೊಳ್ಳಲಿವೆ.

ವೃಶ್ಚಿಕ: ಹಿತಶತ್ರುಗಳಿಂದ ತೊಂದರೆಯನ್ನು ಅನುಭವಿಸುವಿರಿ. ಹೊಸ ಉದ್ಯೋಗವನ್ನು ಆರಂಭಿಸುವುದಿದ್ದರೆ ಒಳ್ಳೆಯದು. ಹೆಚ್ಚು ಮಾತನಾಡಿ ನಿಮ್ಮನ್ನು ನೀವೇ ಸಣ್ಣವರನ್ನಾಗಿ ಮಾಡಿಕೊಳ್ಳಬೇಡಿ. ವ್ಯಾಪಾರದ ಕಾರಣದಿಂದ ದೂರ ಸಂಚಾರವನ್ನು ಮಾಡಲಿದ್ದೀರಿ. ನೀಮ್ಮ ವಾಹನವನ್ನು ನೀವೇ ಮಾಡುವುದು ಬೇಡ. ಪರರ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಅಸೂಯೆಪಡಲಿದ್ದಾರೆ. ನಿಮ್ಮ ಸೋಲನ್ನು ಪಾಠವಾಗಿ ಸ್ವೀಕರಿಸಿ. ಸಾಧಿಸುವ ಛಲವಿರುವವಗೆ ಯಾವುದು ಸಾಧ್ಯವಿಲ್ಲವಾಗುತ್ತದೆ? ಪುತ್ರೋತ್ಸವವು ಇಂದು ಆಗಲಿದೆ. ನೆರೆ-ಹೊರೆಯವರ ಜೊತೆ ಜಗಳಕ್ಕೆ ಹೋಗಬೇಡಿ. ಏನೆಂದರೂ ಕೆಳಿಸಿಕೊಂಡು ಬನ್ನಿ. ಸುಬ್ರಹ್ಮಣ್ಯನ ಜಪ ಮಾಡಿ.

ಧನು: ಅನವಶ್ಯಕ ವೆಚ್ಚವು ಇಂದಾಗಲಿದೆ. ಗಮನಿಸಿಕೊಂಡು ನಿಯಂತ್ರಿಸಿ. ಹೆಚ್ಚು ಕೋಪವನ್ನು ತೋರಿಸಲಿದ್ದೀರಿ‌. ಯಾರ ಒತ್ತಾಯಕ್ಕೋ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ. ದೀಪದ ಬುಡ ಎಂದಿಗೂ ಕತ್ತಲಾಗಿರುತ್ತದೆ. ಇನ್ನೊಂದು ದೀಪವನ್ನು ಹಚ್ಚಿ. ಕತ್ತಲೆ ದೂರವಾಗುತ್ತದೆ. ಹಿಡಿದ ಕೆಲಸವನ್ನು ಬಿಡದೆ ಮುನ್ನಡೆಸುವ ಜಾಯಮಾನವು ನಿಮ್ಮ ಇಂದಿನ ಯಶಸ್ಸಿನ ಗುಟ್ಟುಗಳಲ್ಲೊಂದು. ಎಂತಹ ಸಂದರ್ಭದಲ್ಲಿಯೂ ಉದ್ವೇಗಕ್ಕೆ ಒಳಗಾಗಬೇಡಿ. ಎದೆ ನೋವು ಕಾಣಿಸಿಕೊಂಡೀತು. ಶಸ್ತ್ರಚಿಕಿತ್ಸೆಯವರೆಗೂ ಹೋಗಬಹುದಿ. ನಾಗನಿಗೆ ಹಾಲೆರೆದು ಪ್ರದಕ್ಷಿಣೆ ಬನ್ನಿ. ಇಂದು ಹುಟ್ಟಿದ ಪ್ರೇಮವು ಕೆಲವೇ ದಿನದಲ್ಲಿ ಸಾಯುತ್ತದೆ.

ಮಕರ: ಅಪರೂಪಕ್ಕೆ ಸಿಕ್ಕ ಸ್ನೇಹಿತರು ನಿಮ್ಮ ಬಳಿ ಹಣವನ್ನು ಖಾಲಿ‌ಮಾಡಿಸುವರು. ದಾಂಪತ್ಯಜೀವನವು ಜೀವನ್ಮರಣದ ಮಧ್ಯದಲ್ಲಿ ಒದ್ದಾಗುತ್ತಿದ್ದು ಬದುಕಿಸಿಕೊಳ್ಳಿ. ಇನ್ನೊಂದು ಜೀವವನ್ನು ಗರ್ಭದಲ್ಲಿ ಹೊತ್ತಿರುವವರು ನಡಿಗೆಯಲ್ಲೂ ಮನಸ್ಸಿನಲ್ಲೂ ಮಾತಿನಲ್ಲೂ ಎಚ್ಚರ, ಸಮಾಧಾನದಿಂದ ಇರಿ. ನಿಮ್ಮ ನ್ಯೂನತೆಗಳನ್ನು ಇನ್ನೊಬ್ಬರಿಗೆ ಹೇಳಬೇಡಿ. ಅವರು ಬಾಯಿಗೆ ಸಿಕ್ಕ ರಸಗವಳದಂತೆ ಚಪ್ಪರಿಸಿ ಸೇವಿಸುತ್ತಿರುತ್ತಾರೆ. ನಿರುದ್ಯೋಗದ ಸಮಸ್ಯೆ ಕಾಡುತ್ತಿದ್ದರೆ ವಿಘ್ನಗಳನ್ನು ಸಂಹರಿಸುವ ಗಣಪತಿಯನ್ನು ಪೂಜಿಸಿ ಉದ್ಯೋಗದ ಹುಡುಕಾಟಕ್ಕೆ ತೆರಳಿ.

ಕುಂಭ: ನಿಮ್ಮ ಗಟ್ಟಿಯಾದ ಸಂಕಲ್ಪವು ಯಶಸ್ಸಿನ ಗುಟ್ಟೂ ಆಗಿರಲಿದೆ. ಹಣವನ್ನು ಗಳಿಸುವ ಆಸೆಯು ತೀರ್ವವಾಗಿದ್ದರೂ ಸಫಲವಾಗುವುದಿಲ್ಲ‌. ಸಾಲದ ವಿಚಾರ ಬಂದರೆ ಮೌನವಹಿಸಿ, ಎದ್ದು ಹೋಗಿ ಅಥವಾ ವಿಷಯಾಂತರಿಸಿ. ಕಲಹಕ್ಕೆ ದಾರಿ ಮಾಡಿ ಕೊಡಬೇಡಿ. ಪಿತ್ರಾರ್ಜಿತ ಸಂಪತ್ತು ನಿಮಗೆ ಇಂದು ಉಪಯೋಗಕ್ಕೆ ಬರಲಿದೆ. ಸಂಗಾತಿಯು ನಿಮ್ಮ ಮೇಲೆ ಬೇಸರಗೊಂಡಾನು. ಇಂದು ನಿಮಗೆ ಸಿಗುವ ಸಂಪತ್ತು ನಿಮ್ಮ ಶ್ರಮಕ್ಕೆ ಅನುಸಾರವಾಗಿ ಸಿಗಲಿದೆ. ಬರೆವಣಿಗೆ ಅಥವಾ ಮಾತಿನಿಂದ‌ ನಿಮಗೆ ಕೀರ್ತಿಯು ಲಭಿಸುವುದು. ಆರೋಗ್ಯವು ಚೆನ್ನಾಗಿರಲಿದೆ. ಶನೈಶ್ಚರನ ಜಪ ಮಾಡಿ.

ಮೀನ: ಬದುಕು ಸುಂದರವಾದ ಮನೆಯ ಕಿಟಕಿ ಇದ್ದಂತೆ. ತೆರೆದರೆ ಬೆಳಕು, ತೆರೆಯದಿದ್ದರೆ ಕತ್ತಲು ಇರುತ್ತದೆ ಎನ್ನುವುದನ್ನು ಅರಿತುಕೊಳ್ಳಿ. ಆಯ್ಕೆಯನ್ನು ನೀವೇ ಮಾಡಿ. ಹಾಗೆಯೇ ಶ್ರಮಪಟ್ಟರೆ ಸುಖ, ಶ್ರಮಪಡದಿದ್ದರೆ ಕಷ್ಟ. ವಿವೇಚನೆಯನ್ನು ಮೀರಿ ಕೆಲಸವನ್ನು ಮಾಡಬೇಡಿ. ಜೀವನದಲ್ಲಿ ಮನುಷ್ಯ ಎಷ್ಟು ನೋವು ಅವಮಾನ ಪಡುತ್ತಾನೋ, ಅಷ್ಟೇ ಚೆನ್ನಾಗಿ ಬದುಕುತ್ತಾನೆ ಎಂಬುದು ಸತ್ಯವಿಚಾರವಾಗಿದೆ. ಛಲವನ್ನು ಇಟ್ಟುಕೊಳ್ಳಿ. ಬದಲಾವಣೆಯೇ ಶಾಶ್ವತ ಎನ್ನುವ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ನೆಮ್ಮದಿ ನಿಮ್ಮೆದುರು ಇರಲಿದೆ. ಸಹಜತೆಗೆ ಹೆಚ್ಚು ಒತ್ತು ಕೊಡುವಿರಿ. ಶಿವಪಂಚಾಕ್ಷರಸ್ತೋತ್ರವನ್ನು ಪಠಿಸಿ.

ಲೋಹಿತಶರ್ಮಾ ಇಡುವಾಣಿ