
2025ರ ಮಾರ್ಚ್ ತಿಂಗಳಲ್ಲಿ ಎರಡು ವರ್ಷಗಳ ಅನಂತರ ಶನಿಯ ಬದಲಾವಣೆ ಆಗಲಿದೆ. ಸಾಡೇಸಾಥ್ ನ್ನು ಅನುಭವಿಸುತ್ತಿರುವ ಮಕರ ರಾಶಿಗೆ ಮುಕ್ತಿ, ಮೇಷರಾಶಿಗೆ ಆರಂಭ. ಕುಂಭ ಹಾಗು ಮೀನಗಳಿಗೆ ಮೊದಲೇ ಶುರುವಾದ ಕಾರಣ ಪರಿಣಾಮ ಅಷ್ಟಾಗಿ ಗೊತ್ತಾಗದು. ಶನಿಯು ಉಚ್ಚಸ್ಥಾನದಲ್ಲಿ ಇದ್ದು, ಶನಿ ದಶೆಯವರಿಗೆ ಇದರ ಪರಿಣಾಮ ಗಂಭೀರವಾಗಿ ಇರದು. ದೇವತಾರಧನೆಯಿಂದ ಬರುವ ಕಷ್ಟಗಳಿಗೆ ಮಾರ್ಗವೂ ಸಿಗಲಿದೆ.
ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ತಿಂಗಳಲ್ಲಿ ಮಿಶ್ರಫಲ. ಈ ತಿಂಗಳಿನಿಂದ ನಿಮಗೆ ಸಾಡೇಸಾಥ್ ಆರಂಭವಾಗಲಿದೆ. ಇನ್ನು ಏಳು ವರ್ಷಗಳ ಕಾಲ ಇರಲಿದ್ದು ಬಹಳ ಎಚ್ಚರಿಕೆ ಬೇಕು. ದೇವತಾರಾಧನೆಯನ್ನು ಹೆಚ್ಚು ಮಾಡಿದಷ್ಟು ಮಾನಸಿಕ ದೃಢತೆ ಹೆಚ್ಚಾಗುವುದು. ದ್ವಾದಶದಲ್ಲಿ ಸೂರ್ಯನ ಆಗಮನದಿಂದ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚು. ಬಂಧುಗಳ ಸಹಕಾರದಿಂದ ಬೇಸರ. ಒಂದು ಮಾಡಲು ಹೋಗಿ ಮತ್ತೊಂದು ಆಗುವುದು. ರಾಶಿಯ ದೇವತೆಯಾದ ಸುಬ್ರಹ್ಮಣ್ಯನು ಬಲಾಢ್ಯನಾಗಿ ಎಲ್ಲವನ್ನೂ ನಾಶ ಮಾಡುವನು.
ಮಾರ್ಚ್ ತಿಂಗಳಲ್ಲಿ ಈ ರಾಶಿಯವರಿಗೆ ಶುಭ. ಏಕಾದಶ ಸ್ಥಾನದಲ್ಲಿ ನಾಲ್ಕು ಗ್ರಹಗಳು ಉಪಸ್ಥಿತರಿರುತ್ತಾರೆ. ಎಂದೋ ಮಾಡಿದ ಸುಕೃತದ ಫಲ ಲಭ್ಯವಾಗುವುದು. ಸರ್ಕಾರದ ಕಾರ್ಯದಲ್ಲಿ ಪ್ರಗತಿ ಇರುವುದು. ಉನ್ನತ ಸ್ಥಾನವನ್ನು ಪಡೆಯವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ ಮಾತು ಹಾಸ್ಯದಿಂದ ಇದ್ದರೂ ಅದು ನೋವಿಗೆ ಕಾರಣವಾಗುತ್ತದೆ. ಸಪ್ತಮಾಧಿಪತಿ ದ್ವಿತೀಯದಲ್ಲಿ ಕೋಪವನ್ನು ಹೆಚ್ಚು ಮಾಡಿಕೊಳ್ಳುವಿರಿ. ಶುಕ್ರದಶೆಯವರಿಗೆ ಈ ತಿಂಗಳು ಅತಿಶುಭ. ಮಹಾಲಕ್ಷ್ಮಿಯ ಅನುಗ್ರಹವನ್ನೂ ಪಡೆಯಿರಿ.
ಬುಧನು ಅಧಿಪತಿಯಾದ ರಾಶಿ ಚಕ್ರದ ಮೂರನೆ ರಾಶಿಯವರಿಗೆ ಅಶುಭ. ಗುರುಬಲವೂ ಹಾಗೂ ರಾಶಿಯ ಅಧಿಪತಿ ಬಲವೂ ಇಲ್ಲದ ಕಾರಣ ಸಾಂಸಾರಿಕ ವಿಚಾರದಲ್ಲಿ ಪೂರ್ಣ ಮನಸ್ಸು ಇರದು. ಬುಧದಶೆಯವರಿಗೆ ಉದ್ಯೋಗವೂ ಬೇಡವೆನಿಸುವುದು. ಸಂಗಾತಿಯಯನ್ನು ನೀವೂ ಇಷ್ಟಪಡಲಾರಿರಿ ಹಾಗೂ ಅವರ ಬಗ್ಗೆ ಪ್ರೇಮವೂ ಕಡಿಮೆಯಾಗುವುದು. ರಾಮನಿಗೆ ಪ್ರಿಯವಾದ ಸೇವೆಸಲ್ಲಿಸಿ.
ರಾಶಿ ಚಕ್ರದ ನಾಲ್ಕನೆಯ ರಾಶಿಯವರಿಗೆ ಈ ತಿಂಗಳು ಶುಭ. ನವಮದಲ್ಲಿ ಸೂರ್ಯ, ಬುಧ, ಶುಕ್ರ ಹಾಗೂ ರಾಹುಗಳ ಸಂಗಮವಾಗಲಿದ್ದು ಶುಕ್ರನಿಂದ ಸಂಪತ್ತು, ಸೂರ್ಯನಿಂದ ಗೌರವ, ರಾಹುವಿನಿಂದ ಅನಿರೀಕ್ಷಿತ ಲಾಭ, ಬುಧನಿಂದ ವಿದ್ಯಾಭ್ಯಾಸಕ್ಕೆ ಉತ್ತಮ ಸ್ಥಾನ ಪ್ರಾಪ್ತಿಯಾಗಲಿದೆ. ಆದರೆ ಉದ್ಯೋಗ ನಿಮಗೆ ತೃಪ್ತಿಕೊಡದು. ಒತ್ತಡದಿಂದ ಹೊರಬರುವ ಯೋಚನೆ ಮಾಡುವಿರಿ. ನಾಗಾರಾಧನೆ ಮಾಡಿ.
ಈ ತಿಂಗಳಲ್ಲಿ ನಿಮಗೆ ಮಧ್ಯಫಲವಿರಲಿದೆ. ರಾಶಿಯ ಅಧಿಪತಿ ಅಷ್ಟಮದಲ್ಲಿ ಇದ್ದು ಆರೋಗ್ಯದಲ್ಲಿ ವ್ಯತ್ಯಾಸ, ಚಿಕಿತ್ಸೆ ಫಲಿಸುವುದು ಕಷ್ಟ ಅಥವಾ ದುಷ್ಪರಿಣಾಮ ಕಾಣಿಸುವುದು. ವಿವಾಹಕ್ಕೆ ವಿಲಂಬ, ಸಂಗಾತಿಯನ್ನು ಪಡೆಯುವ ಆಸೆ ನಿಲ್ಲುವುದು. ಯಂತ್ರಗಳ ಮಾರಾಟದಿಂದ ನಿಮಗೆ ಲಾಭ. ಭೂಮಿಯ ವ್ಯವಹಾರಕ್ಕೆ ಪಾಲುದಾರಿಕೆಯನ್ನು ಬಯಸುವಿರಿ. ಶಿವಾರ್ಚನೆಯಿಂದ ಮನಸ್ಸಿನ ಸಮಾಧಾನ ಗೊತ್ತಾಗುವುದು.
ಇದು ಮಾರ್ಚ್ ತಿಂಗಳಾಗಿದ್ದು ಈ ರಾಶಿಯವರಿಗೆ ಅಧಿಪತಿ ಬುಧನು ನೀಚನಾಗಿದ್ದು ಸಂಗಾತಿಯ ವಿಚಾರದಲ್ಲಿ ತಪ್ಪು ಗ್ರಹಿಕೆ, ವಿದ್ಯಾಭ್ಯಾಸದ ಹೆಚ್ಚುಗಾರಿಕೆಯಿಂದ ಮನಸ್ತಾಪ ಆಗಾಗ ಬರುವುದು. ಉದ್ಯೋಗದಲ್ಲಿ ನಿಮ್ಮನ್ನು ಪಕ್ಕಕ್ಕೆ ಸರಿಸಿ ಇನ್ನಾರೋ ನಿಮಗಿಂತ ಮುಂದೆ ಹೋಗವರು. ವಿವಾಹಕ್ಕೆ ಉತ್ತಮ ಸಮಯ, ಬಂಧುವರ್ಗದ ಸಂಬಂಧದಲ್ಲಿ ವಿವಾಹವಾಗಲಿದೆ. ಲಕ್ಷ್ಮೀನಾರಾಯಣ ಸ್ತೋತ್ರವನ್ನು ಪಠಿಸಿ.
ರಾಶಿ ಚಕ್ರದ ಏಳನೇ ರಾಶಿ ಇದಾಗಿದ್ದು, ನಿಮಗೆ ಈ ತಿಂಗಳು ಅಶುಭ. ಯಾವ ಗ್ರಹರೂ ಅನುಕೂಲವಿಲ್ಲ. ಎಲ್ಲ ಕಡೆಗಳಿಂದ ದುಃಖ, ಸಂಕಟ, ಬೇಸರ, ಖರ್ಚು, ಅಶುಭವಾರ್ತೆ. ನಿಮ್ಮ ಮಾತಿಗೆ ಗೌರವ ಇರದು. ಪ್ರೀತಿಯ ಕೊರತೆ, ಪ್ರೀತಿಸುವವರನ್ನು ಕಳೆದುಕೊಳ್ಳುವ ಭೀತಿ, ಪ್ರೇಮವು ದೂರಾಗಲೂಬಹುದು. ದೈವವೊಂದೇ ನಿಮಗೆ ಮನೋಬಲವನ್ನು ನೀಡುವುದು. ಸಮಯವನ್ನು ಮಾಡಿಕೊಂಡಾದರೂ ದೇವೋಪಾಸನೆಯನ್ನು ಮಾಡಿ.
ಇದು ಈ ವರ್ಷದ ಮೂರನೇ ತಿಂಗಳಾಗಿದ್ದು ರಾಶಿಯ ಅಧಿಪತಿ ಕುಜನು ಅಷ್ಟಮದಲ್ಲಿ ಇದ್ದಾನೆ. ಪಂಚಮದ ಶನಿ ನಿಮಗೆ ಸಂತಾನದಿಂದ ದುಃಖ, ವಿದ್ಯಾಭ್ಯಾಸಕ್ಕೆ ಬೇಕಾದ ಮಾರ್ಗದರ್ಶನ, ಬೌದ್ಧಿಕ ಜಾಡ್ಯ, ಪ್ರತಿಭೆಗೆ ಸಿಗದೇ ಇರುವ ಪ್ರಶಂಸೆಯಿಂದ ಮನಸ್ಸಿಗೆ ಅಸಮಾಧಾನ. ಎಲ್ಲ ಕಾರ್ಯವನ್ನು ಫಲಾಪೇಕ್ಷೆ ಇಲ್ಲದೇ ಕರ್ತವ್ಯವೆನ್ನುವ ದೃಷ್ಟಯಿಂದ ಮಾಡಿಕೊಂಡರೆ ಒಳ್ಳೆಯದು. ಶನಿದಶೆಯವರಿಗೆ ಅತಿಪೀಡೆ. ಯಂತ್ರಗಳ ಬಗ್ಗೆ, ಅಗ್ನಿಯ ಬಗ್ಗೆ ಎಚ್ಚರಿಕೆ ಬೇಕು. ಸುಬ್ರಹ್ಮಣ್ಯನ ಉಪಾಸನೆಯನ್ನು ದಿನವೂ ಮಾಡಿ.
ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ತಿಂಗಳಲ್ಲಿ ಅಶುಭ. ತೃತೀಯದಲ್ಲಿ ಇದ್ದ ಶನಿಯು ಚತುರ್ಥಸ್ಥಾನಕ್ಕೆ ಹೋಗಲಿದ್ದು, ಸಾಂಸಾರಿಕ ಸುಖದಲ್ಲಿ ಆಸಕ್ತಿ ಕಡಿಮೆ. ಹಿರಿಯರಿಂದ ದುಃಖ, ನೋವುಗಳು ಅಧಿಕ. ವಿವಾಹವೂ ಆಗದು. ಒಮ್ಮೆ ಅಂತಹ ಸಂದರ್ಭ ಬಂದರೂ ತಪ್ಪುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಹಿನ್ನಡೆ, ಯಾವುದೇ ಹೊಸ ಕೆಲಸ ಹುಡುಕುವುದು ಅಥವಾ ಹೊಸ ಉತ್ಪನ್ನ ತಯಾರಿಕೆಗೆ ಹೋಗುವುದು ಬೇಡ. ಗುರುದಶೆಯವರಿಗೆ ಸಂಕಷ್ಟದ ಕಾಲ. ಕೊನೆಯ ಹಂತದಲ್ಲಿ ಇದ್ದು ಅನಂತರ ಸುಖ. ಗುರುಚರಿತ್ರೆಯನ್ನು ಪಠಿಸಿ.
ಈ ತಿಂಗಳಲ್ಲಿ ಈ ರಾಶಿಯವರಿಗೆ ಶುಭ. ಇಷ್ಟುದಿನ ಅನುಭವಿಸಿದ್ದ ಸಂಕಟಗಳು ಕಡಿಮೆಯಾಗಲಿದೆ. ಸಾಡೇಸಾಥ್ ಶನಿಯಿಂದ ಮುಕ್ತಾಯ ಸಿಗಲಿದೆ. ನಿಮ್ಮ ಸಾಹಸಕ್ಕೆ ಸರಿಯಾದ ಚೌಕಟ್ಟು ಇರದು. ಗುರುಬಲದಿಂದ ಅಪೂರ್ಣವಾಗಿದ್ದ ಫಲಗಳು ಸಾಕಾರಗೊಳ್ಳುವುವು. ಶುಕ್ರನು ತೃತೀಯದಲ್ಲಿ ಇದ್ದು ಸಂಗಾತಿಯ ಮೇಲಿರುವ ಭಾವವು ಬದಲಾಗಲಿದೆ. ಉದ್ಯಮಕ್ಕೆ ಪಾಲುದಾರರು ಸಿಗಲಿದ್ದು ಉತ್ತಮರೀತಿಯಲ್ಲಿ ಅದು ಮುಂದುವರಿಯುವುದು. ಆಹಾರದಿಂದ ರೋಗಗಳು ಬರಬಹುದು. ಶಿವಪಂಚಾಕ್ಷರವನ್ನು ಪಠಿಸುವಿರಿ.
ಫೆಬ್ರವರಿ ತಿಂಗಳಲ್ಲಿ ರಾಶಿ ಚಕ್ರದ ಹನ್ನೊಂದನೆ ರಾಶಿಯವರಿಗೆ ಮಿಶ್ರಫಲ. ರಾಶಿಯ ಅಧಿಪತಿ ಶನಿಯು ದ್ವಿತೀಯ ಸ್ಥಾನಕ್ಕೆ ಹೋಗಲಿದ್ದು, ಆರ್ಥಿಕವಾಗಿ ಮುಂದಾಲೋಚನೆ ಕಾಣೆಯಾಗುವುದು. ಮಾತಿಗೆ ಬೆಲೆ ಕಡಿಮೆ ಇರುವುದು. ನಂಬಿಕೆಯನ್ನು ಮಾತಿನಿಂದ ಉಳಿಸಿಕೊಳ್ಳಲಾಗದು. ಸಾಡೇಸಾಥ್ ನ ಅಂತಿಮ ಕಾಲ ಆರಂಭವಾಗಲಿದೆ. ವಾಹನಕ್ಕೆ ಖರ್ಚನ್ನು ಮಾಡುವಿರಿ. ದಾಂಪತ್ಯದಲ್ಲಿ ಒಪ್ಪಂದವು ಆಗಬಹುದು. ಬೃಹತ್ಕಾಮಗಾರಿಯವರಿಗೆ ಆದಾಯ. ಶಿವೋಪಾಸನೆ ಮಾಡಲು ಆಸಕ್ತಿ ಹುಟ್ಟುವುದು.
ಮಾರ್ಚ್ ತಿಂಗಳಲ್ಲಿ ಈ ರಾಶಿಯವರಿಗೆ ಮಿಶ್ರ ಫಲ. ರಾಶಿಯಲ್ಲಿ ಸೂರ್ಯ, ಶುಕ್ರ, ಶನಿ, ರಾಹು, ಬುಧ ಈ ಪಂಚಗ್ರಹಗಳ ಯೋಗವಾಗಲಿದೆ. ರಾಶಿಯ ಅಧಿಪತಿ ತೃತೀಯದಲ್ಲಿ ಇರುವ ಕಾರಣ ಗುರುಬಲವಿಲ್ಲ. ಗುರುದಶೆಯವರಿಗೆ ಸಹೋದರರ ನಡುವೆ ದ್ವೇಷ, ಪರಸ್ಪರ ವಾಗ್ವಾದ, ಉದ್ಯೋಗದ ಚಿಂತೆ, ಉದ್ಯಮದಲ್ಲಿ ಹಿನ್ನಡೆ, ಆಹಾರದಲ್ಲಿ ಕಷ್ಟವಾಗಲಿದೆ. ಸಾಡೇಸಾಥ್ ಶನಿಯ ಮಧ್ಯಾವಧಿ ಆರಂಭವಾಗಲಿದ್ದು, ಮನಸ್ಸಿನ ಕಿರಿಕಿರಿ ಅಧಿಕವಾಗುವುದು. ಶನಿಯ ಸ್ತೋತ್ರದಿಂದ ಮನಸ್ಸಿಗೆ ಸಮಾಧಾನ ಸುಗಲಿದೆ. ಗುರುಸೇವೆಯನ್ನು ಮಾಡುವ ಕಡೆ ಯೋಜನೆ ಇರಲಿ.
-ಲೋಹಿತ ಹೆಬ್ಬಾರ್ – 8762924271 (what’s app only)