Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಸಿಂಹ ರಾಶಿ ಮೇಲೆ ಏನು ಪ್ರಭಾವ?
ಈ ಸಂಚಾರದೊಂದಿಗೆ ಸಿಂಹ ರಾಶಿಯವರಿಗೆ ಅಷ್ಟಮ ಸ‌್ಥಾನಕ್ಕೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಬಹಳ ಬಹಳ ಎಚ್ಚರಿಕೆಯಿಂದ ಇರಬೇಕಾದವರು ಸಿಂಹ ರಾಶಿಯವರು. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.

2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ಸಂಚಾರದೊಂದಿಗೆ ಸಿಂಹ ರಾಶಿಯವರಿಗೆ ಅಷ್ಟಮ ಸ‌್ಥಾನಕ್ಕೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಬಹಳ ಬಹಳ ಎಚ್ಚರಿಕೆಯಿಂದ ಇರಬೇಕಾದವರು ಸಿಂಹ ರಾಶಿಯವರು. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.
ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.
ಹನ್ನೆರಡು ರಾಶಿಗಳ ಮೇಲೂ ಈ ಶನಿ ಸಂಚಾರದ ಫಲ ಇರಲಿದ್ದು, ಇದೀಗ ಸಿಂಹ ರಾಶಿಯ ಮೇಲೆ ಏನು ಪ್ರಭಾವ ಆಗಲಿದೆ ಎಂಬ ವಿವರ ಇಲ್ಲಿದೆ.
ನಿಮ್ಮ ರಾಶಿಗೆ ರಿಪು (ರೋಗ) ಸ್ಥಾನ ಹಾಗೂ ಕಳತ್ರ ಸ್ಥಾನಕ್ಕೆ ಅಧಿಪತಿಯಾದ ಶನಿ ಗ್ರಹವು ಎಂಟನೇ ಸ್ಥಾನದಲ್ಲಿ ಸಂಚಾರ ಮಾಡುತ್ತದೆ. ಅಷ್ಟಮ ಶನಿ ಸಂಚಾರವು ನಕಾರಾತ್ಮಕವಾದದ್ದು ಮತ್ತು ಅಪಾಯಕಾರಿಯಾದದ್ದು. ಗ್ರಹ ಸ್ಥಿತಿಗಳ ಆಧಾರದಲ್ಲಿ ಮೊದಲ ಒಂದು ವರ್ಷ ತೀಕ್ಷ್ಣವಾಗಿ ಇದರ ಪ್ರಭಾವ ಅನುಭವಕ್ಕೆ ಬಾರದಿರಬಹುದು. ಆದರೆ ಆರೋಗ್ಯ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹೊಟ್ಟೆ, ಕಾಲಿನ ಮೀನ ಖಂಡ, ಬೆನ್ನು, ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಭಾರೀ ತೊಂದರೆ ಕೊಡುತ್ತವೆ.
ಈ ಅವಧಿಯಲ್ಲಿ ಯಾವ ದಶಾ- ಭುಕ್ತಿ ನಡೆಯುತ್ತಿದೆ ಎಂದು ಜ್ಯೋತಿಷಿಗಳಲ್ಲಿ ಪರಿಶೀಲನೆ ಮಾಡಿಸಿಕೊಳ್ಳುವುದು ಉತ್ತಮ. ಇನ್ನು ಜನ್ಮ ಜಾತಕದಲ್ಲಿ ಶನಿ ಗ್ರಹವು ಯಾವ ಸ್ಥಾನದಲ್ಲಿದೆ ಎಂಬುದನ್ನು ಸಹ ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ದುರ್ಬಲವಾಗಿಯೋ ನೀಚ ಸ್ಥಿತಿಯಲ್ಲಿಯೋ ಇದ್ದಲ್ಲಿ ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಆರು ತಿಂಗಳಿಗೆ ಒಮ್ಮೆಯೋ ಅಥವಾ ವೈದ್ಯರು ಸೂಚಿಸುವ ರೀತಿಯಲ್ಲಿ ಆಯಾ ಕಾಲಕ್ಕೆ ಸೂಕ್ತ ತಪಾಸಣೆಯನ್ನು ಮಾಡಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿ.
ಯಾರು ಚಾಲನೆಯನ್ನೇ ವೃತ್ತಿಯಾಗಿ ಮಾಡುತ್ತಿದ್ದೀರಿ ಅಂಥವರು ನೀವು ಓಡಿಸುವ ವಾಹನದ ಸರ್ವೀಸ್ ಕಾಲ-ಕಾಲಕ್ಕೆ ಮಾಡಿಸಿಕೊಳ್ಳುವುದಕ್ಕೆ ಗಮನವನ್ನು ನೀಡಿ. ಅಷ್ಟಮ ಶನಿ ಸಂಚಾರದಲ್ಲಿ ಸೈಟು ಖರೀದಿಯೋ, ಮನೆ ನಿರ್ಮಾಣಕ್ಕೋ ಅಥವಾ ಕಟ್ಟಿರುವ ಮನೆ ಖರೀದಿಸುವಯದಕ್ಕೋ ಸಾಲ ಮಾಡಬೇಡಿ. ಕಾನೂನು- ದಾಖಲೆ ಪತ್ರಗಳ ವಿಚಾರಗಳಲ್ಲಿ ವಂಚನೆ ಆಗಬಹುದು, ಅಡ್ವಾನ್ಸ್ ಹಣ ನೀಡುವಾಗ ಸಾವಿರ ಸಲ ಆಲೋಚಿಸಿ, ತೀರ್ಮಾನವನ್ನು ಮಾಡಿ. ಅನುಕೂಲ ಹಾಗೂ ನಂಬಿಕೆ ಇದ್ದಲ್ಲಿ ಶನೈಶ್ಚರ ಶಾಂತಿಯನ್ನೋ ಆರಾಧನೆಯನ್ನೋ ಮಾಡಿಕೊಳ್ಳಿ. ಇದರ ಜೊತೆಯಲ್ಲಿ ಸವಾಲುಗಳು- ಸಮಸ್ಯೆಗಳನ್ನು ಎದುರುಗೊಳ್ಳುವಾಗ ಮುಂಜಾಗ್ರತೆ- ವಿವೇಚನೆಯಿಂದ ವರ್ತಿಸಿ.
ಪರಿಹಾರ: ಸಿಂಹ ರಾಶಿಯವರಿಗೆ ಅಷ್ಟಮ ಶನಿ ಪ್ರಭಾವ ಇರುವುದರಿಂದ ಶನಿ ಗ್ರಹದ ಶಾಂತಿ- ಹೋಮ ಮಾಡಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಇದಕ್ಕೆ ಹೆಚ್ಚಿನ ಖರ್ಚಾಗುತ್ತದೆ, ತಮ್ಮಿಂದ ಮಾಡುವುದಕ್ಕೆ ಸಾಧ್ಯವಿಲ್ಲ ಅಂತ ಅನ್ನುವವರು ಶನೈಶ್ಚರ ದೇವಸ್ಥಾನದಲ್ಲಿ ಶನಿ ದರ್ಶನ, ಅಭಿಷೇಕ, ದೀಪ ಹಚ್ಚುವುದನ್ನು ಮಾಡಬಹುದು ಅಥವಾ ನೀಲಿ ಬಟ್ಟೆಯಲ್ಲಿ ಮೂರು-ನಾಲ್ಕು ಹಿಡಿ ಕರಿ ಎಳ್ಳನ್ನು ಕಟ್ಟಿ, ವೀಳ್ಯದೆಲೆ, ಅಡಿಕೆ, ಬಾಳೇಹಣ್ಣು ಹಾಗೂ ದಕ್ಷಿಣೆ ಸಹಿತ ದಾನ ಮಾಡಬಹುದು. ಇನ್ನು ಯಾರಿಗೆ ಸಾಧ್ಯವೋ ಅವರು ದಶರಥ ಕೃತ ಶನಿ ಸ್ತೋತ್ರದ ಶ್ರವಣ (ಕೇಳಿಸಿಕೊಳ್ಳುವುದು) ಅಥವಾ ಪಾರಾಯಣ ಮಾಡಬಹುದು.
-ಸ್ವಾತಿ ಎನ್.ಕೆ.




