
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ರೇವತೀ, ಯೋಗ: ವಿಷ್ಕಂಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:44 ರಿಂದ 09:19ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ 12:29 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:04 ರಿಂದ 03:40ರ ವರೆಗೆ.
ಧನು ರಾಶಿ: ನಿಮ್ಮ ಸಹೋದರರಿಂದ ನಿಮಗೆ ಸಹಾಯ ಸಿಗಬಹುದು. ವೃತ್ತಿಯಲ್ಲಿ ನಿಮ್ಮ ಕೆಲಸವನ್ನು ನೀವು ನಿಯಮಬದ್ಧವಾಗಿ ಮಾಡುವುದು ಉತ್ತಮ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಗೊಳ್ಳುತ್ತದೆ. ವಿದ್ಯಾರ್ಥಿಗಳಲ್ಲಿ ಅಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ಕಾಣಬಹುದು. ಕಲಾವಿದರಿಗೆ ಯಶಸ್ಸು ದೊರೆಯಲಿದೆ. ಹೆಚ್ಚಿನವಾದ ವಾದ ವಿವಾದಗಳನ್ನು ಮಾಡುವುದು ಖಂಡಿತ ಬೇಡ. ದೇವಿ ಸರಸ್ವತಿಯನ್ನು ಸ್ಮರಿಸಿ. ರಾಜಕೀಯವಾಗಿ ನೀವು ಹಿಂದುಳಿದಂತೆ ಅನ್ನಿಸಬಹುದು. ಕಚೇರಿಯಲ್ಲಿ ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನ ಹರಿಸಿ. ಭೂವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ದಿನವು ಸೂಕ್ತವಾಗಿದೆ. ನಿಮ್ಮ ಹಠದ ಸ್ವಭಾವವು ಜೊತೆಗಾರರಿಗೆ ಕಷ್ಟವಾದೀತು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ನೀವು ಯಾವುದನ್ನೂ ಇಂದು ಗಂಭೀರವಾಗಿ ತೆಗೆದುಕೊಳ್ಳಲಾರಿರಿ.
ಮಕರ ರಾಶಿ: ಇಂದು ನೀವು ಬೇರೆಯವರ ಕಷ್ಟಕ್ಕೆ ಯಾವುದಾದರೊಂದು ರೀತಿಯಲ್ಲಿ ನೆರವಾಗುವಿರಿ. ಯಾರೋ ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಪ್ರಯತ್ನಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರೇಯಸ್ಸು ಇರುತ್ತದೆ. ಕೋಪದಿಂದ ಯಾವ ಕಾರ್ಯ ಸಾಧನೆಗಳು ನಿಮ್ಮಿಂದ ಆಗದು. ಎಲೆಕ್ಟ್ರಾನಿಕ್ ಸಂವಹನ ಕ್ಷೇತ್ರದಲ್ಲಿರುವವರಿಗೆ ಬೇಡಿಕೆ ಹೆಚ್ಚುತ್ತದೆ. ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು. ಬೇಕಾದಷ್ಟು ಕೆಲಸಗಳಿದ್ದರೂ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಉದ್ಯಮದ ಮಿತ್ರನನ್ನು ಮನೆಗೆ ಆಹ್ವಾನಿಸುವಿರಿ. ಉದ್ಯಮವು ಬೆಳೆಯುತ್ತಿರುವುದು ಸಂತೋಷ ಕೊಡುವುದು. ಚಾಲಕರಿಗೆ ಕರ್ತವ್ಯಕ್ಕೆ ಪ್ರಶಂಸೆ ಸಿಗುವುದು.
ಕುಂಭ ರಾಶಿ: ಇಂದು ನೀವು ದೇವತಾ ಕಾರ್ಯಗಳಲ್ಲಿ ತೊಡಗುವಿರಿ. ಬಹಳ ದಿನಗಳ ಅನಂತರ ಹಿರಿಯರ ಭೇಟಿಯಿಂದ ಖುಷಿಯಾಗುವುದು. ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಗಬಹುದು. ಕೈಗೊಂಡ ಕಾರ್ಯಗಳಲ್ಲಿ ಸಫಲತೆಯನ್ನು ಅನುಭವಿಸುವಿರಿ. ಹಣದ ಒಳ ಅರಿವು ಮಂದಗತಿಯಲ್ಲಿ ಇರುತ್ತದೆ. ಅಧಿಕ ಓಡಾಟ ಹೆಚ್ಚು ಆಯಾಸವನ್ನು ತರಿಸಬಹುದು. ಸರ್ಕಾರಿ ಕಛೇರಿಯ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಮನೆಯಲ್ಲಿ ನಡೆಯುವ ಶುಭ ಕಾರ್ಯಗಳಿಗೆ ಮಕ್ಕಳ ಸಹಕಾರವಿರುವುದು. ಸರ್ಕಾರದ ಕಡೆಯಿಂದ ಆಗಬೇಕಾದ ನಿಮ್ಮ ಕೆಲಸವು ಬೇಗನೆ ಮುಗಿಯುವುದು. ಯಾರ ಮೆಚ್ಚುಗೆಯೂ ನಿಮಗೆ ಸಮಾಧಾನ ತರದು. ವಿನಾ ಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ಆದಾಯವು ಕಡಿಮೆ ಆದಂತೆ ಅನ್ನಿಸುವುದು.
ಮೀನ ರಾಶಿ: ಇಂದು ನೀವು ಸ್ವಂತ ಕಾರ್ಯದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ವ್ಯವಹಾರಿಕ ನಷ್ಟವು ನಿಮ್ಮ ಗಮನಕ್ಕೆ ಬಾರದೇ ಇರುವುದು. ಆಲೋಚಿಸದೇ ಯಾವುದೇ ಸಾಹಸದ ಕಾರ್ಯದಲ್ಲಿ ತೊಡಗುವುದು ಬೇಡ. ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಗುರಿಯ ಕಡೆ ಮುಖ ಮಾಡಲಿದ್ದೀರಿ. ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ ಇಂದು ನಿಮಗೆ ಆಗಲಿದೆ. ಅನ್ಯರ ಮಾತಿಗೆ ಬಲಿಯಾಗಬೇಡಿ. ಉದ್ಯೋಗಸ್ಥ ಮಹಿಳೆಯರು ವರ್ಗಾವಣೆಗೆ ಪ್ರಯತ್ನಿಸುವಿರಿ. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು. ಭೂಮಿಯ ಮೇಲೆ ಸಾಲವನ್ನು ಮಾಡಬೇಕಾದೀತು. ಸಹೋದ್ಯೋಗಿಗಳು ನಿಮ್ಮನ್ನು ಎಲ್ಲದಕ್ಕೂ ಬೊಟ್ಟು ಮಾಡಿ ತೋರಿಸಿಯಾರು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ. ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)