Akshaya Tritiya: ಅಕ್ಷಯ ತೃತೀಯ 2024 - ರಾಶಿ ಫಲ ಇಲ್ಲಿದೆ

Akshaya Tritiya: ಅಕ್ಷಯ ತೃತೀಯ 2024 – ರಾಶಿ ಫಲ ಇಲ್ಲಿದೆ

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:May 05, 2024 | 7:51 PM

Akshaya Tritiya 2024: ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಅಕ್ಷಯ ತೃತೀಯ 2024ರ ದ್ವಾದಶ ರಾಶಿಗಳ ಫಲಾಪಲ ಕುರಿತು ಮಾಹಿತಿ ನೀಡಿದ್ದಾರೆ.

ಪ್ರತಿಯೊಬ್ಬರು ಕಾಯುತ್ತಿರುವ ಪರ್ವ ಕಾಲ ಅಥವಾ ವಿಶೇಷವಾದ ಕಾಲ ಇದು. ಮೂರುವರೆ ಮುಹೂರ್ತಗಳಲ್ಲಿ ಅತೀ ಶ್ರೇಷ್ಟವಾದ ಕಾಲ ಎಂದು ಅಕ್ಷಯ​ ತೃತೀಯವನ್ನು(Akshaya Tritiya) ಕರೆಯುತ್ತಾರೆ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯವನ್ನು ನಾವು ಅಕ್ಷಯ ತೃತೀಯ ಎಂದು ಕರೆಯುತ್ತೇವೆ. ಇನ್ನು ಈ ಕುರಿತು ಭವಿಷ್ಯ, ಪುರಾಣದಲ್ಲಿಯೇ ಶ್ರೀಕೃಷ್ಣ ಪರಮಾತ್ಮನೇ ಹೇಳಿದ್ದಾನೆ. ವರ್ಷದಲ್ಲಿ ಬರುವ ಮೂರುವರೆ ಮಹೂರ್ತಗಳಾದ ದೀಪಾವಳಿ, ವಿಜಯದಶಮಿ ಹಾಗೂ ಅಕ್ಷಯ ತೃತೀಯ ಆಗಬಹುದು, ಈ ಮೂರು ಮಹೂರ್ತಗಳಿಗೆ ಯಾವುದೇ ರಾಹುಕಾಲ ಇರುವುದಿಲ್ಲ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿಶೇಷವಾದ ಕಾಲವಾಗಿರುತ್ತದೆ. ಇನ್ನು ಈ ಅಕ್ಷಯ ತೃತೀಯ ಮೇ .10 ರಂದು ಬೆಳಿಗ್ಗೆ  4 ಗಂಟೆ 17 ನಿಮಿಷಕ್ಕೆ ಶುರುವಾಗಿ 11 ರಂದು 2 ಗಂಟೆ 50 ನಿಮಿಷಕ್ಕೆ ಮುಗಿಯುತ್ತದೆ. ಈ ವೇಳೆಯಲ್ಲಿ ನಮಗೆ ಪೂಜೆ ಮಾಡುವುದಕ್ಕೆ ಅಥವಾ ನಮ್ಮ ಸಂಕಲ್ಪ ಈಡೇರಿಸಿಕೊಳ್ಳುವುದಕ್ಕೆ ಯಾವುದೇ ಪರ್ವ ಕಾಲ ನೋಡುವುದಾದರೆ. 10 ನೇ ತಾರೀಕಿನಂದು ಬೆಳಿಗ್ಗೆ 5 ಗಂಟೆ 13 ನಿಮಿಷದಿಂದ 11 ಗಂಟೆ 43 ನಿಮಿಷದ ವರೆಗೆ ಇದು ಪರ್ವಕಾಲವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 05, 2024 07:28 PM