ಬುಧನ ಸಂಚಾರದಿಂದ ಯಾರಿಗೆ ಶುಭ ಫಲ?

ಈ ಬಾರಿ ಬುಧನ ಸಂಚಾರದಿಂದ ಯಾರಿಗೆ ಶುಭ ಫಲ? ಇದೆ, ಯಾವೆಲ್ಲ ರಾಶಿಗೆ ಅದೃಷ್ಟವಿದೆ. ಬುಧನು ಮೀನ ರಾಶಿಯಿಂದ ಮೇಷಕ್ಕೆ ಸಂಚರಿಸುತ್ತಿದ್ದಾನೆ. ಮೀನ ರಾಶಿಯು ಗುರುವಿನ ರಾಶಿಯಾಗಿದೆ. ಬುಧನು ಮೀನ ರಾಶಿಯಿಂದ ಮೇಷಕ್ಕೆ ಸಂಚರಿಸುವುದರಿಂದ ಈ ಮೂರು ರಾಶಿಗೆ ಲಾಭ ಇದೆ.

ಬುಧನ ಸಂಚಾರದಿಂದ ಯಾರಿಗೆ ಶುಭ ಫಲ?
Edited By:

Updated on: May 10, 2024 | 12:32 PM

ಬುಧನು ಮೀನ ರಾಶಿಯಿಂದ ಮೇಷಕ್ಕೆ ಸಂಚರಿಸುತ್ತಿದ್ದಾನೆ. ಮೀನ ರಾಶಿಯು ಗುರುವಿನ ರಾಶಿಯಾಗಿದೆ. ಗುರುವು ಬುಧನಿಗೆ ಸಮನು. ಅಂದರೆ ಮಿತ್ರನೂ ಅಲ್ಲ ಶತ್ರುವೂ ಅಲ್ಲ. ಆದರೆ ಗುರುವಿಗೆ ಬುಧನು ಶತ್ರುವಾಗಿದ್ದಾನೆ. ಹಾಗಗಿ ಬುಧನು ಯಾವ ಫಲವನ್ನು ಕೊಡಬೇಕೋ ಆ ಫಲವನ್ನು ಕೊಡದೆ ತಟಸ್ಥನಾಗಿರುವನು. ಆದರೆ ಈ ಬುಧನು ಮೇಷ ರಾಶಿ ಎಂದರೆ ಕುಜನ ಸ್ಥಾನಕ್ಕೆ ಬರುವನು. ಕುಜನಿಗೂ ಬುಧನು ಶತ್ರು. ಆದರೆ ಬುಧನಿಗೆ ಕುಜನು ಶತ್ರು. ಈ ಬುಧನು ಶತ್ರುವಿನ ಮನೆಯನ್ನು ಪ್ರವೇಶ ಮಾಡುವನು. ಇದರಿಂದ ಕೆಲವು ರಾಶಿಯವರಿಗೆ ಪರಿವರ್ತನೆಯ ಪರಿಣಾಮ ಇರಲಿದೆ.

ಅತ್ಯಂತ ಕೆಟ್ಟ ಪರಿಣಾಮವು ಬೀರದಂತೆ ಸೂರ್ಯ ಹಾಗೂ ಶುಕ್ರರು ತಡೆಯುತ್ತಾರೆ.

ಮೇಷ ರಾಶಿ :

ವಿವಾಹದ ಬಗ್ಗೆ ಯೋಚಿಸುತ್ತಿದ್ದರೆ, ಬಂಧುಗಳ ಸಹಾಯದಿಂದ ಅದು ಸಾಧ್ಯವಾಗುವುದು. ಚಾಣಾಕ್ಷತನದಿಂದ ಈ ರಾಶಿಯವರು ಕಾರ್ಯವನ್ನು ಸಾಧಿಸಿಕೊಳ್ಳುವರು.

ಮಿಥುನ ರಾಶಿ :

ಏಕಾದಶ ಸ್ಥಾನಕ್ಕೆ ಬರುವ ಬುಧನು ಶಿಕ್ಷಕ ವೃತ್ತಿಯವರಿಗೆ ಹೆಚ್ಚು ಅನುಕೂಲವಿದೆ. ಉನ್ನತ ಸ್ಥಾನವನ್ನು ಬಯಸಿದರೆ ಮಾರ್ಗವು ತೆರೆದುಕೊಳ್ಳುವುದು.

ಇದನ್ನೂ ಓದಿ: ಶುಕ್ರನ ಅನುಗ್ರಹ ಇರುವ ವ್ಯಕ್ತಿಗೆ ಪ್ರಧಾನಮಂತ್ರಿ ಹುದ್ದೆ; ಇಲ್ಲಿದೆ ಮತಎಣಿಕೆ ದಿನದ ಮುಹೂರ್ತ ವಿಶ್ಲೇಷಣೆ

ತುಲಾ ರಾಶಿ :

ಮಾನಸಿಕವಾಗಿ ಸಬಲರಾಗುವರು. ಅಷ್ಟೇ ಅಲ್ಲದೇ ಬಂಧುಗಳಲ್ಲಿಯೇ ಪ್ರೇಮವಾಗುವುದು. ಅಥವಾ ಆದ ಪ್ರೇಮಕ್ಕರ ಹಿರಿಯರಿಂದ ಒಪ್ಪಿಗೆ ಪಡೆಯುವರು. ಧೈರ್ಯದಿಂದ ಮುನ್ನುಗ್ಗಿ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ತಂದೆಯ ಬಗ್ಗೆ ಪ್ರೀತಿ ಹೆಚ್ಚುವುದು.

ಧನು ರಾಶಿ :

ಇವರು ಮೊದಲೇ ಮಾಡಿದ ಕಾರ್ಯಗಳಿಗೆ ಗೌರವವನ್ನು ಪಡೆಯುವರು‌. ಗುರು – ಹಿರಿಯರ ಮಾರ್ಗದರ್ಶನವು ನಿಮಗೆ ಆಗಲಿದೆ. ಪೂರ್ವಪುಣ್ಯವು ಫಲಿಸುವುದು.

-ಲೋಹಿತ ಹೆಬ್ಬಾರ್ – 8762924271 (what’s app only)

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us