Nava Panchama Raj Yoga 2026: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ

ನವ ಪಂಚಮ ರಾಜ ಯೋಗ 2026: ಪ್ರಮುಖವಾದ ಗ್ರಹಗಳು ಪರಸ್ಪರ ಒಂಬತ್ತು ಹಾಗೂ ಐದನೇ ಮನೆಯಲ್ಲಿ ಇರುವುದು ನವಪಂಚಮ ಯೋಗ. ಈಗ ಮೀನ ರಾಶಿಯಲ್ಲಿ ಶನೈಶ್ಚರ ಇದ್ದಾನೆ. 2026ರಲ್ಲಿ ಜೂನ್ 2ರಿಂದ ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರ ಆಗುತ್ತದೆ. ಮೀನ ರಾಶಿಯಲ್ಲಿರುವ ಶನಿಗೆ ಕರ್ಕಾಟಕ ರಾಶಿಯು ಐದನೇ ಮನೆ (ಪಂಚಮ). ಅಲ್ಲಿ ಗುರು ಗ್ರಹ ಇರುತ್ತದೆ. ಕರ್ಕಾಟಕ ರಾಶಿಯಿಂದ ಮೀನ ರಾಶಿ ಒಂಬತ್ತನೇ ಮನೆ (ನವಮ) ಆಗಿ, ಅಲ್ಲಿ ಶನಿ ಇರುತ್ತದೆ. ಇದನ್ನು ನವಪಂಚಮ ಯೋಗ ಎನ್ನಲಾಗುತ್ತದೆ.

Nava Panchama Raj Yoga 2026: ನವಪಂಚಮ ಯೋಗ: ಯಾರಿಗೆಲ್ಲಾ ಅದೃಷ್ಟ? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Edited By:

Updated on: Jan 09, 2026 | 5:56 PM

ವೈದಿಕ ಜ್ಯೋತಿಷ್ಯದಲ್ಲಿ ಏಳು ಗ್ರಹಗಳ ಉಲ್ಲೇಖ ಇದೆ- ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ ಮತ್ತು ಶನಿಯದು. ಯುರೇನಸ್, ನೆಪ್ಚೂನ್ ಇವುಗಳನ್ನು ಗಣನೆಗೆ ತೆಗೆದುಕೊಂಡು ಫಲ ಹೇಳುವ ಪದ್ಧತಿ ಇಲ್ಲ. ಪ್ರತಿ ರಾಶಿಯಲ್ಲಿ 7 ವರ್ಷ ಇರುವಂಥ ಗ್ರಹ ಇದು. ಈ ವರ್ಷ ಅಂದರೆ 2026ರಲ್ಲಿ ಜೂನ್ ಒಂದನೇ ತಾರೀಕಿನ ನಂತರ ಮುಖ್ಯವಾದ ನವ-ಪಂಚಮ ಯೋಗ (Nava Panchama Raj Yoga )ಸೃಷ್ಟಿ ಆಗುತ್ತದೆ. ಈ ಹಿಂದೆ 2025ರಲ್ಲಿ ಅಕ್ಟೋಬರ್ ಹದಿನೆಂಟರಿಂದ ಡಿಸೆಂಬರ್ ಐದನೇ ತಾರೀಕಿನವರೆಗೆ ಈ ಯೋಗವಿತ್ತು.

ನವಪಂಚಮ ಯೋಗ ಎಂದರೇನು:

ಪ್ರಮುಖವಾದ ಗ್ರಹಗಳು ಪರಸ್ಪರ ಒಂಬತ್ತು ಹಾಗೂ ಐದನೇ ಮನೆಯಲ್ಲಿ ಇರುವುದು ನವಪಂಚಮ ಯೋಗ. ಈಗ ಮೀನ ರಾಶಿಯಲ್ಲಿ ಶನೈಶ್ಚರ ಇದ್ದಾನೆ. 2026ರಲ್ಲಿ ಜೂನ್ 2ರಿಂದ ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರ ಆಗುತ್ತದೆ. ಮೀನ ರಾಶಿಯಲ್ಲಿರುವ ಶನಿಗೆ ಕರ್ಕಾಟಕ ರಾಶಿಯು ಐದನೇ ಮನೆ (ಪಂಚಮ). ಅಲ್ಲಿ ಗುರು ಗ್ರಹ ಇರುತ್ತದೆ. ಕರ್ಕಾಟಕ ರಾಶಿಯಿಂದ ಮೀನ ರಾಶಿ ಒಂಬತ್ತನೇ ಮನೆ (ನವಮ) ಆಗಿ, ಅಲ್ಲಿ ಶನಿ ಇರುತ್ತದೆ. ಇದನ್ನು ನವಪಂಚಮ ಯೋಗ ಎನ್ನಲಾಗುತ್ತದೆ.

ಕರ್ಕಾಟಕ ರಾಶಿಯಲ್ಲಿ ಜೂನ್ ಗೆ ಉಚ್ಚ ಸ್ಥಿತಿಯಲ್ಲಿ ಬರುವಂಥ ಗುರು, ತಾನು ಇರುವ ಸ್ಥಾನದಿಂದ ಒಂಬತ್ತನೇ ಮನೆ- ಅಂದರೆ ತನ್ನದೇ ಸ್ವಕ್ಷೇತ್ರವಾದ ಮೀನ ರಾಶಿಯನ್ನು, ಆ ಮನೆಯಲ್ಲಿ ಇರುವ ಶನಿಯ ವೀಕ್ಷಣೆ ಮಾಡುತ್ತಾನೆ. ಇದು ಬಹಳ ವಿಶೇಷ. ದಶಾ-ಭುಕ್ತಿಯ ಪ್ರಭಾವವೂ ಉತ್ತಮವಾಗಿದ್ದಲ್ಲಿ ವ್ಯಕ್ತಿಗೆ ಈ ಯೋಗದ ಸಂಪೂರ್ಣ ಫಲ ದೊರೆಯಲಿದೆ.

ಇದನ್ನೂ ಓದಿ: ಈ ಮೂರು ಸಂಖ್ಯೆಯಲ್ಲಿ ಹುಟ್ಟಿದವರು ಜನವರಿಯಲ್ಲಿ ಅತ್ಯಂತ ಜಾಗರೂಕರಾಗಿರಿ!

ನವಪಂಚಮ ಯೋಗದ ಪ್ರಭಾವ:

ಮೇಷ ರಾಶಿ: ಈ ಯೋಗವು ಆರ್ಥಿಕ ಲಾಭವನ್ನು ತರುತ್ತದೆ. ದೀರ್ಘಕಾಲದ ಹೂಡಿಕೆಗಳಿಂದ ಉತ್ತಮ ಆದಾಯ ಬರಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆಯಿದೆ.

ಮಿಥುನ ರಾಶಿ: ವ್ಯಾಪಾರ ಮತ್ತು ವ್ಯವಹಾರದಲ್ಲಿರುವವರಿಗೆ ಈ ಸಮಯ ಲಾಭದಾಯಕ. ಹೊಸ ಯೋಜನೆಗಳನ್ನು ಆರಂಭಿಸಲು ಸುಸಮಯ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ: ಗುರುವು ಕರ್ಕಾಟಕ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿ ಬರುವುದರಿಂದ, ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ.

ತುಲಾ ರಾಶಿ: ವೃತ್ತಿಜೀವನದಲ್ಲಿ ಎದುರಿಸುತ್ತಿದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಹೊಸ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಅವಕಾಶಗಳು ಕೈಬರಲಿವೆ. ಆರ್ಥಿಕವಾಗಿ ಸಬಲರಾಗುತ್ತೀರಿ.

ವೃಶ್ಚಿಕ ರಾಶಿ: ಭಾಗ್ಯ ಸ್ಥಾನದಲ್ಲಿ ಗುರುವಿನ ಪ್ರಭಾವದಿಂದಾಗಿ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ ವಿದೇಶ ಪ್ರಯಾಣದ ಯೋಗವೂ ಇದೆ.

ಮೀನ ರಾಶಿ: ಆತ್ಮವಿಶ್ವಾಸ ಹೆಚ್ಚಾಗಲಿದೆ. ಜೀವನದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗುತ್ತೀರಿ. ಶನಿ ಮತ್ತು ಗುರುವಿನ ಅನುಗ್ರಹದಿಂದ ಆರ್ಥಿಕ ಬಿಕ್ಕಟ್ಟುಗಳು ದೂರವಾಗಲಿವೆ.

ನವಪಂಚಮದ ಕೆಲವು ಉದಾಹರಣೆ

ಮೀನದಲ್ಲಿ ಶನಿ- ವೃಶ್ಚಿಕದಲ್ಲಿ ಕುಜ

ಕರ್ಕಾಟಕದಲ್ಲಿ ಗುರು- ವೃಶ್ಚಿಕದಲ್ಲಿ ಕುಜ

ಮೀನದಲ್ಲಿ ಶನಿ- ಕರ್ಕಾಟಕದಲ್ಲಿ ಗುರು

ಮಕರದಲ್ಲಿ ಶನಿ- ವೃಷಭದಲ್ಲಿ ಶುಕ್ರ

ಮೇಷದಲ್ಲಿ ಚಂದ್ರ- ಧನುಸ್ಸು ಗುರು

ಮೀನದಲ್ಲಿ ಗುರು- ಕರ್ಕಾಟಕದಲ್ಲಿ ಚಂದ್ರ

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ