Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ

ನೀವು ಧನು, ಮಕರ, ಕುಂಭ, ಮೀನಾ ರಾಶಿವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
ರಾಶಿಭವಿಷ್ಯImage Credit source: istockphoto
Follow us
Rakesh Nayak Manchi
|

Updated on: Mar 17, 2023 | 6:30 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 17 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ :ಶುಕ್ರ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ವರಿಯಾನ್, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 40 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 11:11 – 12:41ರ ವರೆಗೆ, ಯಮಘಂಡ ಕಾಲ 03:42 – 05:12ರವರೆಗೆ, ಗುಳಿಕ ಕಾಲ ಬೆಳಗ್ಗೆ08:11 – 09:41ರ ವರೆಗೆ.

ಧನುಸ್ಸು: ಕುಟುಂಬ ಸದಸ್ಯರೊಂದಿಗೆ ಜಗಳಗಳವಾಗುವ ಸಾಧ್ಯತೆಯಿದೆ. ನಿಮ್ಮ ಕೋಪವನ್ನು ನಿಯಂತ್ರಿಸಲು ಪ್ರಯತ್ನಿಸುವುದು ಬಹಳ ಮುಖ್ಯ. ಇಂದು ನೀವು ಬಹಳ ಮುಖ್ಯವಾದ ಮತ್ತು ನಿಮಗೆ ಪ್ರಿಯವಾದ ವಸ್ತುವೊಂದನ್ನು ಪಡೆಯಬಹುದು. ಇದು ಉಡುಗೊರೆಯೂ ಆಗಿರಬಹುದು. ಅಮೂಲ್ಯವಾದ ವಸ್ತುವೂ ಆಗಿರಬಹುದು. ಅದನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಪ್ರೇಮ ವ್ಯವಹಾರಗಳು ಕುಟುಂಬ ಜೀವನಕ್ಕೆ ಸ್ವಲ್ಪ ಸವಾಲಾಗುವುದು. ನಿಮ್ಮ ಭಾವನೆಗಳಿಗೆ ಅನುಗುಣವಾಗಿ ವರ್ತಿಸುವ ನಿಮ್ಮ ಸಂಗಾತಿಯ ಬಗ್ಗೆ ಯೋಚಿಸುವುದು ಉತ್ತಮ. ವಿದೇಶಿ ವ್ಯಾಪಾರ ಹೊಂದಿರುವವರಿಗೆ ತೊಂದರೆ ಎದುರಾಗಬಹುದು.

ಮಕರ: ನಿಮ್ಮ ಜೀವನದಲ್ಲಿ ಕೆಲವರ ಬಗದಗೆ ತಪ್ಪು ತಿಳುವಳಿಕೆಗಳು ಉಂಟಾಗಬಹುದು. ನಿಮ್ಮ ಮಾತಿನ ಮೇಲೆ ಗಮನವಿರಲಿ. ನೀವು ಶಾಂತವಾಗಿ ಇದ್ದಷ್ಟೂ ನಿಮ್ಮ ಸಂಬಂಧವನ್ನು ಗಟ್ಟಿಯಾಗುವುದು. ಕಚೇರಿ ಸ್ವಲ್ಪ ಒತ್ತಡವನ್ನು ಅನುಭವಿಸಬೇಕಾದೀತು. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ನೀವು ಪ್ರಯತ್ನಿಸುವಿರಿ. ಅಸಾಧಾರಣ ಆಲೋಚನೆಗಳಿಂದ ತುಂಬಿದ್ದರೂ ಅವುಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದು. ಕೆಲಸದ ವಿಷಯದಲ್ಲಿ ಸ್ವಲ್ಪ ಉದ್ವೇಗ ಉಂಟಾಗಬಹುದು. ನೀವು ಕಾನೂನುಬಾಹಿರ ಕೃತ್ಯವನ್ನು ಮಾಡಿದರೆ ಆದಷ್ಟು ಬೇಗ ಅದನ್ನು ಬಿಟ್ಟುಬಿಡುವುದು ಉತ್ತಮ. ಇಲ್ಲವಾದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು.

ಕುಂಭ: ಮನೆಯಲ್ಲಿ ಉಂಟಾದ ಸೂಕ್ಷ್ಮ ಸಮಸ್ಯೆಗಳನ್ನು ಪರಿಹರಿಸಲು ಬುದ್ಧಿವಂತಿಕೆಯನ್ನು ಬಳಸಬೇಕಾಗುತ್ತದೆ. ಹಾಗಾದಾಗ ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಸಾಧ್ಯವಾಗುವುದು. ನಿಮ್ಮ ಮಹಾಗುರಿಯನ್ನು ಸಾಧಿಸುವ ವಿಶ್ವಾಸವನ್ನು ಬಿಟ್ಟುಕೊಡಬೇಡಿ. ನೀವು ನಿಮ್ಮ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಬಯಸುವಿರಿ. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಿ. ನಿಮ್ಮ ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿದರೆ ನಿರ್ಧಾರಗಳನ್ನು ಸರಿಯಾಗಿರುತ್ತವೆ. ಮನೆಯನ್ನು ಖರೀದಿಸುವ ಯೋಚನೆಯನ್ನು ಮಾಡುವಿರಿ.

ಮೀನ: ಅದೃಷ್ಟ ನಿಮ್ಮ ಕಡೆ ಇದೆ ಎಂಬುದು ಸತ್ಯ. ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುವರು. ಸವಾಲಿನ ಪರಿಸ್ಥಿತಿಗಳು ಬರಬಹುದು. ನೀವು ಅವುಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಿದೆ. ನೀವು ಇಂದು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನಿಮ್ಮ ಕಠಿಣ ಪರಿಶ್ರಮ ಮೆಚ್ಚಗೆಯು ಸಿಗಲಿದೆ. ನಿಮ್ಮ ಕೆಲಸಕ್ಕೆ ಇದು ಉತ್ತೇಜಕವಿದ್ದಂತೆ. ಪ್ರತಿ ಬಾರಿಯೂ ಇನ್ನೊಬ್ಬರ ಮನಃಸ್ಥಿತಿಯನ್ನು ನಿರ್ಣಯಿಸಲು ಸಾಧ್ಯವಾಗದು. ನೀವು ಕೆಲ ಕಾಲ ಹೊಸ ಉದ್ಯಮದಲ್ಲಿ ಪಾಲುದಾರರಾಗುವುದು ಬೇಡ. ಸಂಗಾತಿಯ ಆಸೆಗಳನ್ನು ತಿಳಿದುಕೊಳ್ಳಿ. ಕೆಲವನ್ನು ಪೂರೈಸಿ.

-ಲೋಹಿತಶರ್ಮಾ ಇಡುವಾಣಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ