ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 20 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ : ಸಾಧ್ಯ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:09 ರಿಂದ 09:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:10 ರಿಂದ ಮಧ್ಯಾಹ್ನ 12:40ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:41ರ ವರೆಗೆ.
ಧನುಸ್ಸು: ಕಷ್ಟಕರ ಸಂದರ್ಭದಲ್ಲಿಯೂ ಧೈರ್ಯ, ತಾಳ್ಮೆ, ಆತ್ಮವಿಶ್ವಾಸವನ್ನು ಬಿಡದೇ ಕಾಪಾಡಿಕೊಳ್ಳುವುದು ನಿಮ್ಮ ವಿಶೇಷತೆಯಾಗಿದೆ. ಇಂದು ನೀವು ದೈವಕ್ಕಿಂತ ಪುರುಷಪ್ರಯತ್ನವೇ ಹೆಚ್ಚು ಪ್ರಭಾವೀ ಎಂದು ಅನ್ನಿಸಬಹುದು. ನಿಮ್ಮ ಪ್ರಯತ್ನಕ್ಕೆ ವಿಧಿಯು ಅನುಕೂಲವನ್ನು ಮಾಡಿಸಿ ಬೆಂಬಲವನ್ನು ನೀಡಲಿದೆ. ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆಯುವುದು ಪೋಷಕರು ಮಾಡಬೇಕಿದೆ. ನಿಮ್ಮ ದೈನಂದಿನ ವೈಯಕ್ತಿಕ ಕಾರ್ಯಗಳಿಗೆ ಸಮಯವನ್ನೂ ಗಮನವನ್ನೂ ಕೊಡಿ. ಉದ್ಯೋಗದಲ್ಲಿ ಸಹವರ್ತಿಗಳ ಮತ್ತು ಉದ್ಯೋಗಿಗಳ ಸಹಕಾರ ಸಿಗಲಿದೆ. ವಿವಾಹಕ್ಕೆ ವಿಘ್ನಗಗಳು ಬರುತ್ತಿದ್ದರೆ ಲಕ್ಷ್ಮೀನಾರಾಯಣ ಸ್ತೋತ್ರವನ್ನು ಮಾಡಿ.
ಮಕರ: ಅಸಾಧ್ಯವೆಂದು ಬಿಟ್ಟಿದ್ದ ಕಾರ್ಯಗಳನ್ನು ಪುನಃ ಕೈಗೆತ್ತಿಕೊಳ್ಳುವಿರಿ. ಇದಕ್ಕೆ ಧನ ಸಹಾಯ ಹಾಗೂ ಜನ ಸಹಾಯವೂ ಸಿಗಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸ್ನೇಹಿತರು ನಿಮ್ಮ ಕಾರ್ಯಕ್ಕೆ ವಿರೋಧವನ್ನು ವ್ಯಕ್ತಪಡಿಸಬಹುದು. ಸ್ವಂತ ವಾಹನದಲ್ಲಿ ನೀವೊಬ್ಬರೇ ಪ್ರಯಾಣಿಸುವುದು ಬೇಡ. ಪತ್ರಿಕಾವಲಯದಲ್ಲಿ ಕೆಲಸ ಮಾಡುವವರಿಗೆ ಮೆಚ್ಚುಗೆ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ ಇದ್ದರೂ ಎಲ್ಲರ ನಡುವೆ ಒಂದು ರೀತಿಯ ಆಂತರವಿರಲಿದೆ. ಐಕಮತ್ಯವನ್ನು ಪಠಿಸಿ. ಮನಸ್ಸುಗಳು ಒಂದಾದೀತು.
ಕುಂಭ: ನಿಮ್ಮ ಗುರಿಯನ್ನು ಬಹಳ ಪ್ರಯತ್ನದಿಂದ ಸಾಧಿಸುವಿರಿ. ರಾಜಕೀಯವಾಗಿ ಪ್ರಭಾವವಿರುವ ವ್ಯಕ್ತಿಗಳ ಸಂಪರ್ಕವು ಇಂದು ಆಗಲಿದೆ. ಆರ್ಥಿಕ ಚಟುವಟಿಕೆಯು ಮಂದಗತಿಯಲ್ಲಿ ಸಾಗಲಿದೆ. ಆಲಸ್ಯದಿಂದ ಎಷ್ಟೋ ಉತ್ತಮ ಕಾರ್ಯಗಳು ಕೈತಪ್ಪಿ ಹೋಗುವುದು. ಅಶ್ರದ್ಧೆಯು ಕೆಲಸದಲ್ಲಿ ಹೆಚ್ಚು ಕಾಣಲಿದೆ. ವ್ಯಾಪರವು ಊರ್ಜಿತವಾಗಿ ನೀವು ಆರ್ಥಿಕವಾಗಿ ಸಬಲರಾಗುವಂತೆ ಮಾಡಲಿದೆ. ಪ್ರಯಾಣದಿಂದ ಆಯಾಸವಾಗಬಹುದು. ಅಲ್ಪ ವಿಶ್ರಾಂತಿ ಪಡೆದು ಮುಂದಿನ ಕಾರ್ಯಕ್ಕೆ ತೆರಳಿ. ಹನುಮಾನ್ ಚಾಲೀಸ್ ಪಠಣವು ನಿಮಗೆ ಬಲವನ್ನು ಕೊಡುತ್ತದೆ.
ಮೀನ: ನೂತನ ಯೋಜನೆಗಳನ್ನು ಆರಂಭಿಸಲು ಮನಸ್ಸು ಮಾಡುವಿರಿ. ಬಂಧುಗಳ ಸಹಾಯದಿಂದ ಯೋಜನೆಗಳನ್ನು ಪ್ರಾರಂಭಿಸುವಿರಿ. ವಿವಾಹಕ್ಕೆ ಸಂಬಂಧಿಸದಂತೆ ಖರೀದಿಗಳು ಆಗಲಿವೆ. ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ಹಿರಿಯರ ಸಲಹೆ ಪಡೆಯಿರಿ. ನಿಮ್ಮ ವ್ಯವಹಾರಗಳನ್ನು ಮಿತವಾಗಿದ್ದಷ್ಟು ಒಳ್ಳೆಯದು. ಒತ್ತಡದ ಪರಿಣಾಮದಿಂದ ನಿಮ್ಮ ನಿದ್ರಾಭಂಗವಾದೀತು. ದಾಂಪತ್ಯವು ಸುಂದರವಾಗಲು ಉಡುಗೊರೆ ಆಶ್ಚರ್ಯದ ಉಡುಗೊರೆ ಕೊಡುವಿರಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಚೆನ್ನಾಗಿರಲು ಯೋಗ, ಧ್ಯಾನವನ್ನು ಮಾಡಿ.
-ಲೋಹಿತಶರ್ಮಾ ಇಡುವಾಣಿ