ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 23 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಗುರು, ತಿಥಿ : ದ್ವಿತೀಯ, ನಿತ್ಯನಕ್ಷತ್ರ : ರೇವತೀ, ಯೋಗ : ಐಂದ್ರ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02 :10 ರಿಂದ 03:41ರವರೆಗೆ, ಯಮಘಂಡ ಕಾಲ 06:36 ರಿಂದ 08:07ರ ವರೆಗೆ, ಗುಳಿಕ ಕಾಲ 09:38 ರಿಂದ ಮಧ್ಯಾಹ್ನ 11:09ರ ವರೆಗೆ.
ಧನು: ಇಂದು ನಿಮ್ಮ ಮಾತುಕತೆಗಳಿಂದ ನೀವಿನ್ನೂ ಬಹಳ ತಿಳಿದುಕೊಳ್ಳಬೇಕು ಎಂದನ್ನಿಸುವುದು. ಧಾರ್ಮಿಕ ಕ್ಷೇತ್ರಗಳಿಗೆ ಹೋಗುವಿರಿ. ಪ್ರಕ್ಷುಬ್ದವಾಗಿದ್ದ ಮನಸ್ಸು ಸಮಾಧಾನಕ್ಕೆ ಬರಲಿದೆ. ಸಾಲಬಾಧೆಯಿಂದ ಮುಕ್ತರಾಗಲಿದ್ದೀರಿ. ಎಲ್ಲರೂ ವಿದ್ಯಾವಂತೆ ತೋರಿ ನಿಮಗೇ ನಿಮ್ಮ ಮೇಲೆ ಅಶಿಕ್ಷಿತ ಭಾವನೆ ಬರಲಿದೆ. ಶತ್ರುಗಳೆದುರು ತಲೆ ಎತ್ತಿ ನಿಲ್ಲುವ ಮನಸ್ಸು ಮಾಡುವಿರಿ. ಯಾರದೋ ಸಿಟ್ಟನ್ನು ಮಕ್ಕಳ ಮೇಲೆ ತೀರಿಕೊಂಡು ಪಶ್ಚಾತ್ತಾಪವನ್ನು ಅನುಭವಿಸುವಿರಿ. ಮನೆಯಿಂದ ಹೊರಗೆ ಇರಬೇಕಾದ ಸ್ಥಿತಿ ಬರಲಿದೆ. ನಾಗದೇವರಿಗೆ ಕ್ಷೀರ ಹಾಗೂ ಫಲಸಮರ್ಪಣೆ ಮಾಡಿ.
ಮಕರ: ನಿಮ್ಮವರೇ ನಿಮಗೆ ವಂಚನೆಯ ಸಂಚನ್ನು ಹಾಕುವರು. ನೀವೇ ಮಾಡಿಕೊಂಡ ತಪ್ಪಿನಿಂದ ನಿಮಗೆ ಬೀಳುವ ಸಾಧ್ಯತೆ ಇದೆ. ನಿಮ್ಮ ಮಾತುಗಳು ಅನರ್ಥವನ್ನು ಉಂಟುಮಾಡಿ ಕಲಹಕ್ಕೂ ಕಾರಣವಾಗಲಿದೆ. ಸ್ತ್ರೀಯರಿಂದ ಅಪವಾದ ಬರುವ ಸಾಧ್ಯತೆ ಇದೆ. ಉದ್ಯೋಗದ ನಿಮಿತ್ತ ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಇದ್ದಕ್ಕಿಂದ ನಿಮ್ಮ ವಿರುದ್ಧ ಶತ್ರುಗಳು ನಿರ್ಮಾಣವಾಗಲಿದ್ದಾರೆ. ನೂತನ ಗೃಹನಿರ್ಮಾಣದ ಕನಸನ್ನು ಕಾಣಲಿದ್ದೀರಿ. ಇಂದು ದೂರ ಹೋಗಬಾಏಕಾದ ಅನಿವಾರ್ಯತೆ ಬರಲಿದ್ದು, ವಾಹನಚಾಲನೆಯಿಂದ ಅಪಘಾತವಾಗುವ ಸಾಧ್ಯತೆ ಇದೆ. ಗ್ರಾಮದೇವರಿಗೆ ನಮಸ್ಕರಿಸಿ ನಿಮ್ಮ ಕೆಲಸಕ್ಕೆ ತೆರಳಿ.
ಕುಂಭ: ನಿಮ್ಮ ಮಾತುಗಳು ಪ್ರೀತಿಸಿದವರ ಹೃದಯಕ್ಕೆ ನಾಟಿ ಅವರೂ ದೂರಾಗುವರು. ಅಪಮಾವಾಗುವ ಸಂಗತಿಯನ್ನು ನೀವೇ ತಂದುಕೊಳ್ಳುವಿರಿ. ಬೇಸರವನ್ನು ಹೆಚ್ಚು ಮಾಡಿಕೊಳ್ಳುವ ಸನ್ನಿವೇಶವನ್ನು ಎದುರು ಹಾಕಿಳ್ಳಬೇಡಿ. ನಿಮ್ಮ ಸತ್ಕಾರ್ಯವು ನಿಮ್ಮನ್ನು ಕೈ ಬಿಡದು. ನಿಮಗೆ ಗೊಂದಲುಗಳು ಇಂದು ಬರಬಹುದು. ಅನುಭವಿಗಳ ಅಥವಾ ಹಿರಿಯರ ಮಾತುಗಳು ಉಪಯೋಗಕ್ಕೆ ಬರಬಹುದು. ಒಳ್ಳೆಯವರ ಸಹವಾಸವನ್ನು ಮಾಡಿದ್ದಕ್ಕೆ ಒಳ್ಳೆಯ ಸ್ಥಿತಿಯು ಬರಲಿದೆ. ಶನಿಯು ನಿಮ್ಮ ಗತಿಯನ್ನು ನಿಯಂತ್ರಿಸುವನು. ಶನೈಶ್ಚರನಿಗೆ ಶಮೀಪತ್ರೆಯನ್ನು ನೀಡಿ.
ಮೀನ: ಒತ್ತಡದಲ್ಲಿ ಇಂದಿನ ದಿನ ಆರಂಭವಾದರೂ ಮುಕ್ತಾಯಕ್ಕೆ ಪ್ರಶಾಂತಮನಸ್ಕರಾಗಿ ಇರುವಿರಿ. ಬಂಧುಗಳು ನಿಮ್ಮ ಆಗಬೇಕಾದ ಕೆಲಸವನ್ನು ನಿಲ್ಲಿಸುವರು. ವಾಹನ ಖರೀದಿಯನ್ನು ಮಾಡಲಿದ್ದೀರಿ. ನೀರಿನ ಉತ್ಪನ್ನದ ವ್ಯಾಪರಿಗಳಿಗೆ ಲಾಭವು ಸಿಗಲಿದೆ. ಸಹೋದರರ ಜೊತೆ ಆತ್ಮೀಯವಾದ ಒಡನಾಟವನ್ನು ಹೊಂದುವಿರಿ. ಮನೆಯವರ ಮಾತಿನಿಂದ ನೋವಾದೀತಹಣವನ್ನು ಉಳಿಸಲು ಬೇಕಾದ ಹೂಡಿಕೆ ಮುಂತಾದ ಯೋಜನೆಗಳನ್ನು ಆರಂಭಿಸುವ ಮನಸ್ಸು ಮಾಡುವಿರಿ. ಆಕಸ್ಮಿಕವಾಗಿ ಹಣವನ್ನು ಕಳೆದುಕೊಳ್ಳುವಿರಿ. ಶನೈಶ್ಚರನಿಗೆ ಎಣ್ಣೆ ದೀಪ ಬೆಳಗಿ.
ಲೋಹಿತಶರ್ಮಾ, ಇಡುವಾಣಿ