Horoscope 20 Oct: ದಿನಭವಿಷ್ಯ, ಬಾಡಿಗೆ ಮನೆಯ ಕಿರಿಕಿರಿ ನಿಮಗೆ ತಪ್ಪಿದ್ದಲ್ಲ, ದಾಂಪತ್ಯದಲ್ಲಿ ಹಣದ ವಿಚಾರಕ್ಕೆ ಜಗಳ
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಅಕ್ಟೋಬರ್ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಮೂಲಾ, ಯೋಗ: ಶೋಭನ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 08 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:49 ರಿಂದ 12:17ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:13 ರಿಂದ 04:41ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ ಮಧ್ಯಾಹ್ನ 09:22ರ ವರೆಗೆ.
ನವರಾತ್ರಿಯ ಆರನೇ ದಿನ ಆರಾಧನೆಗೊಳ್ಳುವವಳು ಸ್ಕಂದಮಾತಾ. ಕಾರ್ತಿಕೇಯನನ್ನು ಸಲಹಿದ ಮಾತೆ ಆಕೆ. ಕಾರ್ತಿಕೇಯನನ್ನು ಕಾಪಾಡಿದಂತೆ ಎಲ್ಲರನ್ನೂ ರಕ್ಷಿಸಲಿ.
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ | ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||
ಮೇಷ ರಾಶಿ: ಒಂದೇ ಕೆಲಸವನ್ನು ನಿರಂತರ ಮಾಡಿ ಶಿಸ್ತನ್ನು ರೂಢಿಸಿಕೊಳ್ಳುವಿರಿ. ದೊಡ್ಡ ಕನಸನ್ನು ಇಟ್ಟುಕೊಳ್ಳುವುದು ಸೂಕ್ತವಾಗಬಹುದು. ಅನಂತರದ ಹತಾಶೆಯಿಂದ ಕಷ್ಟವಾದೀತು. ದೂರದ ಬಂಧುವಿನ ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ್ದು ಬೇಸರಕ್ಕೆ ಕಾರಣವಾಗಬಹುದು. ನೀವು ಸ್ವತಂತ್ರವಾಗಿದ್ದರೂ ಬರೆಯಲು ಮನಸ್ಸಾಗದು. ಭೂಮಿಯ ವ್ಯವಹಾರದಿಂದ ಲಾಭವು ಕಡಿಮೆ ಇರಲಿದೆ. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳಲು ಕಷ್ಟವಾದೀತು. ಕಲಾವಿದರಾಗುವ ದೃಢವಾದ ಮನಸ್ಸಿನಲ್ಲಿ ನೆಲೆಸುವುದು.
ವೃಷಭ ರಾಶಿ: ಇನ್ನೊಬ್ಬರ ವಸ್ತುವನ್ನು ನೀವು ಇಟ್ಟುಕೊಳ್ಳಲಿದ್ದೀರಿ. ವಿದೇಶದಲ್ಲಿ ಇರುವವರಿಗೆ ಆರೋಗ್ಯವು ಕೆಡಬಹುದು. ವ್ಯಾಪಾರಸ್ಥರು ಲಾಭವನ್ನು ಗಳಿಸುವತ್ತ ಯೋಜನೆ ರೂಪಿಸಿಕೊಳ್ಳುವುದು. ಬಂಧುಗಳ ಕಿರಿಕಿರಿಯನ್ನು ಸಹಿಸುವುದು ನಿಮಗೆ ಕಷ್ಟವಾದೀತು. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ ಇರುವುದು. ಆಹಾರದಿಂದ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ನಿಮಗೆ ಬೇಕಾದ ವಸ್ತುವೇ ಆದರೂ ಯಾರು ಕೇಳಿದರೂ ಕೊಡುವಿರಿ. ನಿಮ್ಮ ನಂಬಿಕೆಗೆ ಘಾಸಿಯಾಗಬಹುದು. ಖರ್ಚಿನ ಬಗ್ಗೆ ನಿರ್ದಿಷ್ಟತೆ ಇರಲಿ. ಯಾವ ಸಹಾಯವನ್ನು ಕೇಳಿದರೂ ಇಲ್ಲ ಎನ್ನುವ ಮನಸ್ಸು ಬಾರದು. ಯಾರನ್ನೋ ಹೋಲಿಸಿಕೊಂಡು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಹೊಸ ಕಲಿಕೆಯತ್ತ ಗಮನ ಇರಲಿದೆ.
ಮಿಥುನ ರಾಶಿ: ಭವಿಷ್ಯದ ಬಗ್ಗೆ ಏನೇನೋ ಕಲ್ಪನೆಯನ್ನು ಇಟ್ಟುಕೊಂಡು ಹತಾಶರಾಗಬೇಕಾಗುವುದು. ನಿಮ್ಮ ಮನಸ್ಸಿಗೆ ಬಾರದೇ ಇರುವ ಯಾವುದನ್ನೂ ನೀವು ಒಪ್ಪಿಕೊಳ್ಳಲಾರಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದ ವಿಚಾರದಲ್ಲಿ ಏಕಾಗ್ರತೆಯ ಕೊರತೆ ಇರಲಿದ್ದು ಧ್ಯಾನ, ಯೋಗಾಭ್ಯಾಸವನ್ನು ಮಾಡಬೇಕಾಗಬಹುದು. ನಿತ್ಯಕರ್ಮದಲ್ಲಿ ವ್ಯತ್ಯಾಸವಾದ ಕಾರಣ ಎಲ್ಲವೂ ವೇಗವಾಗಿ ಮಾಡಬೇಕಾದೀತು. ಕೆಲವು ವಿಚಾರಗಳನ್ನು ನಿರ್ಲಕ್ಷ್ಯಿಸದಿದ್ದರೆ ದೊಡ್ಡದಾಗಬಹುದು. ಆಪ್ತರ ಸಲಹೆಯನ್ನು ಕೇಳಲು ನಿಮಗೆ ಮುಜುಗರವಾಗಲಿದೆ. ನೀವು ಸಂಬಂಧವಿಲ್ಲದ ವಿಚಾರಕ್ಲೆ ಗಮನವನ್ನು ಕೊಡುವಿರಿ. ಕಛೇರಿಯಲ್ಲಿ ನಿಮ್ಮ ಸ್ಥಾನಕ್ಕೆ ಇನ್ನೊಬ್ಬರು ಬರಲಿದ್ದು, ಪರಸ್ಪರ ವೈರುಧ್ಯ ಏರ್ಪಡಬಹುದು.
ಕರ್ಕ ರಾಶಿ: ಆರ್ಥಿಕ ಸಮಸ್ಯೆಯಿಂದ ಇಂದು ಮೇಲಧಿಕಾರಿಗಳ ಭೇಟಿಯನ್ನು ಮಾಡುವಿರಿ. ರಮಣೀಯ ಸ್ಥಳಕ್ಕೆ ಸಂಗಾತಿಯ ಜೊತೆ ಹೋಗಲಿದ್ದೀರಿ. ಒಂದೇ ರೀತಿ ಜೀವನ ಶೈಲಿಯಿಂದ ಆಚೆ ಬರುವುದು ನಿಮಗೆ ಮುಖ್ಯವಾದೀತು. ಇಂದಿನ ಕನಸು ನಿಮಗೆ ಭೀತಿಯನ್ನು ತಂದೀತು. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗಬಹುದು. ಕೋಪದ ವಿಚಾರದಲ್ಲಿ ನೀವು ಬದಲಾಗಬೇಕಾದ ಅವಶ್ಯಕತೆ ಇರಲಿದೆ. ಕಳೆದುಕೊಂಡ ಸಂಬಂಧವನ್ನು ಮತ್ತೆ ಕೂಡಿಸಿಕೊಳ್ಳಲು ಪ್ರಯತ್ನಶೀಲರಾಗುವಿರಿ. ನಿಮ್ಮ ಯೋಜನೆಯು ಅಂಬೆಗಾಲಿಕ್ಕಿತ್ತ ಸಾಗುವುದು ನಿಮಗೆ ಖುಷಿ ಕೊಡಲಿದೆ. ತಾಯಿಯ ಜೊತೆ ಒರಟಾಗಿ ಮಾತನಾಡುವಿರಿ.
ಸಿಂಹ ರಾಶಿ: ಇಂದು ನೀವು ಹೆಚ್ಚು ಉತ್ಸಾಹ ಹಾಗೂ ನಗುಮುಖದಲ್ಲಿ ಇರುವುದು ಎಲ್ಲರಿಗೂ ಗೊತ್ತಾಗಲಿದೆ. ನಿಮ್ಮ ಹೊಸ ಸುದ್ದಿಯು ಎಲ್ಲರಿಗೂ ಅಚ್ಚರಿ ಮೂಡಿಸುವುದು. ಬೆನ್ನು ನೋವಿನ ಸಮಸ್ಯೆಯು ಕಾಡೀತು. ಸಂಗಾತಿಯನ್ನು ದೂರ ಕಳಿಸಿ ಸಂಕಟಪಡುವಿರಿ. ಕುಟುಂಬದಿಂದ ದೂರವಿದ್ದರೂ ಮಾತುಕತೆಗಳ ಮೂಲಕ ಹತ್ತಿರವಾಗುವಿರಿ. ನಿಮ್ಮ ವೈಯಕ್ತಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ಬಾರದೇ ಹೋಗಬಹುದು. ನಿಮ್ಮ ಹೆಸರನ್ನು ಹೇಳಿ ಯಾರಾದರೂ ವಂಚಿಸಿಯಾರು. ನಿಮ್ಮ ಮನಃಸ್ಥಿತಿಗೆ ಹೋಲುವವರ ಗೆಳೆತನ ಲಭ್ಯವಾದೀತು.
ಕನ್ಯಾ ರಾಶಿ: ಇಂದು ನೀವು ನಂಬಿದ ಅದೃಷ್ಟವು ಕೈ ಕೊಡಬಹುದು. ಸಾಲ ಕೊಟ್ಟವರು ನಿಮ್ಮನ್ನು ನಾನಾ ಪ್ರಕಾರವಾಗಿ ಜರಿಯಬಹುದು. ನಿಮಗೆ ಸಿಗಬೇಕಾದ ಹಣವು ಸಿಗದೇ ಇರುವುದರಿಂದ ಬೇಸರ ಬೇಡ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸಿ ಸುಮ್ಮನಿರುವುದು ಉತ್ತಮ. ಸಂಗಾತಿಯು ಸಾಲವನ್ನು ಮಾಡಲು ಪ್ರಚೋದನೆ ಕೊಡಬಹುದು. ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಕೂಡಿಸಲು ಪ್ರಯತ್ನಿಸುವಿರಿ. ಅದು ಕನ್ನಡಿಯ ಗಾಜಿನಂತೆ. ಎಷ್ಟೇ ಕೂಡಿಸಿದರೂ ಬಿರುಕು ಎದ್ದು ತೋರುವುದು. ವಿದ್ಯಾರ್ಥಿಗಳ ಮನೋಭಾವವು ಕ್ಷಣಕ್ಕೊಮ್ಮೆ ಬದಲಾಗುತ್ತಿದ್ದು ಸ್ಥಿರಮತಿಯನ್ನು ಪಾಲಕರು ಕೊಡುವುದು ಮುಖ್ಯ. ಆರೋಗ್ಯವು ಚೆನ್ನಾಗುವ ಆಹಾರವನ್ನು ನೀವು ವೈದ್ಯರನ್ನು ಕೇಳಿ ಪಡೆಯಿರಿ.
ತುಲಾ ರಾಶಿ: ಕ್ರೀಡೆಯಲ್ಲಿ ಮುನ್ನಡೆಯುವ ಆಸಕ್ತಿಯನ್ನು ತೋರಿಸುವಿರಿ. ಹತ್ತಾರೂ ಆಲೋಚನೆಗಳು ಒಂದಾದಮೇಲೆ ಒಂದರಂತೆ ಬಂದು ನಿಮ್ಮ ದಿನಚರಿಯನ್ನು ಹಾಳು ಮಾಡಬಹುದು. ದ್ವಿಚಕ್ರವಾಹನದಲ್ಲಿ ಸಚರಿಸುವುದು ಬೇಡ. ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡಗಳು ಬರಲಿದ್ದು ಇಂದಿನ ಕಾರ್ಯವನ್ನು ಹಾಳುಮಡುವುದು. ಸ್ತ್ರೀಯರು ಕೆಲವರ ಬಗ್ಗೆ ಇರುವ ಪೂರ್ವಾಗ್ರಹವನ್ನು ಕಳೆದುಕೊಳ್ಳುವರು. ಮೂರನೇ ವ್ಯಕ್ತಿಗಳ ಮೂಲಕ ನಿಮ್ಮ ಗೌಪ್ಯ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಮನಶ್ಚಾಂಚಲ್ಯದಿಂದ ಇಂದು ಅಶಿಸ್ತಿನಿಂದ ಕಾರ್ಯವನ್ನು ಮಾಡುವಿರಿ. ಪ್ರಾಣಿಗಳ ಮೇಲೆ ಪ್ರೀತಿ ಹೆಚ್ಚಾದೀತು.
ವೃಶ್ಚಿಕ ರಾಶಿ: ಕೆಲವು ಸಂದರ್ಭಗಳು ನಿಮ್ಮ ಪರೀಕ್ಷೆಗಾಗಿ ಬರಲಿದ್ದು ಅದನ್ನು ಎದುರಿಸುವುದು ನಿಮ್ಮ ಮೇಲಿದೆ. ಕುಟುಂಬದಿಂದ ವೃತ್ತಿಯ ಬದಲಾವಣೆಗೆ ಒತ್ತಾಯ ಬರಬಹುದು. ಅಧಿಕ ಆದಾಯವನ್ನು ನಿಮ್ಮಿಂದ ನಿರೀಕ್ಷಿಸಬಹುದು. ಮೂರ್ಖರಂತೆ ಬರ್ತಿಸಿ ಎಲ್ಲರ ನಡುವೆ ನಗೆಪಾಟಲಾಗುವಿರಿ. ಸಂಗಾತಿಯ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನ ಕೊಡುವುದು. ಹಳೆಯ ವಸ್ತುಗಳು ನಿಮಗೆ ಭಾರವಾದೀತು. ತಾಳ್ಮೆಯನ್ನು ಕಳೆದುಕೊಂಡು ಎಲ್ಲರೆದುರು ಸಣ್ಣವರಾಗಬೇಕಾದೀತು. ವಿದ್ಯಾರ್ಥಿಗಳು ತಮ್ಮದಾದ ನೂತನ ಪ್ರಯತ್ನಕ್ಕೆ ಸಿದ್ಧರಾಗುವಿರಿ. ಹೊಳೆಯುವುದೆಲ್ಲ ನಕ್ಷತ್ರವಲ್ಲ ಎಂಬುದು ಎಡವಿದ ಮೇಲೆ ಗೊತ್ತಾಗುವುದು.
ಧನು ರಾಶಿ: ನಿಗದಿತ ಸಮಯಕ್ಕಿಂತ ಮೊದಲೇ ಸಾಲವನ್ನು ತೀರಿಸಿದ್ದಕ್ಕೆ ನಿಮ್ಮಲ್ಲಿ ಅಹಂಕಾರವು ಜಾಗೃತವಾಗಬಹುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳುವ ಸ್ಥಿತಿಯು ಹಾಸ್ಯವೆನಿಸುವುದು. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ನಿಮ್ಮ ಬಹಳ ದಿನದ ಕೂಡಿಟ್ಟ ಹಣವು ಕ್ಷಣಾರ್ಧದಲ್ಲಿ ಖಾಲಿಯಾಗಲಿದ್ದು ನಿಮಗೆ ಬೇಸರ ತರಿಸೀತು. ಸಂಬಂಧಗಳನ್ನು ಬೆಳೆಸಿಕೊಳ್ಳುವ ಇಚ್ಛೆ ಇದ್ದರೂ ಮುನ್ನುಗ್ಗಲು ಮನಸ್ಸು ಇರದು. ತಂದೆಯ ಜೊತೆಗಿನ ಮನಸ್ತಾಪವು ನಿಮ್ಮ ನೆಮ್ಮದಿಯನ್ನು ಹಾಳು ಮಾಡೀತು. ನಿಮ್ಮ ಮಾತನ್ನು ದುರುಪಯೋಗ ಮಾಡಬಹುದು. ಸಂಗಾತಿಯು ನಿಮ್ಮ ಯೋಜನೆಯನ್ನು ಪ್ರೋತ್ಸಾಹಿಸಬಹುದು. ಅಪರಿಚಿತ ಕರೆಗಳಿಗೆ ಸ್ಪಂದನೆ ಬೇಡ. ನಿಮ್ಮ ಸಂತೋಷವನ್ನು ಕೆಲವರಿಗೆ ನೋಡುವುದು ಕಷ್ಟವಾದೀತು.
ಮಕರ ರಾಶಿ: ಗೃಹನಿರ್ಮಾಣವು ನಿಮಗೆ ಅನಿವಾರ್ಯವಾದೀತು. ಬಾಡಿಗೆ ಮನೆಯ ಕಿರಿಕಿರಿಯು ನಿಮಗೆ ಸಾಕಾಗಿ ಹೋಗುವುದು. ಅಧಿಕಾರಿಗಳಿಂದ ನಿಮ್ಮ ಆರ್ಥಿಕತೆಯು ಪರಿಶೀಲನೆಗೊಳ್ಳುವುದು. ದಾಂಪತ್ಯದಲ್ಲಿ ಹಣದ ವಿಚಾರಕ್ಕೆ ಕಹಿ ಮಾತುಗಳು ಬರಬಹುದು. ಒಬ್ಬರಾದರೂ ತಾಳ್ಮೆಯಿಂದ ಇರಬೇಕಾದೀತು. ನಿಮ್ಮ ಕನಸನ್ನು ಪೂರ್ಣ ಮಾಡಿಕೊಳ್ಳುತ್ತಿರುವುದು ನಿಮಗೆ ಖುಷಿಯಾಗಲಿದೆ. ಭೋಜನವನ್ನು ಸಮಯ ಮೀರಿ ಮಾಡುವುದು ಬೇಡ. ಕಲಾವಿದೆಯು ನಿಮ್ಮ ಬಾಳ ಸಂಗಾತಿಯಾಗಿ ಬರುವ ಸಾಧ್ಯತೆ ಇದೆ. ಕಛೇರಿಯಲ್ಲಿ ಇಂದು ಯಾವುದೇ ಜವಾಬ್ದಾರಿಯನ್ನು ಮೈಮೇಲೆ ಹಾಕಿಕೊಂಡು ಹೋಗುವ ಮನಸ್ಸು ಇರದು. ಇಂದು ಹೂಡಿಕೆಯ ಪ್ರಯೋಜನದ ಬಗ್ಗೆ ತಿಳಿದುಕೊಳ್ಳುವಿರಿ.
ಕುಂಭ ರಾಶಿ: ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ನಿಮ್ಮಿಂದಲೇ ಪ್ರಸ್ತಾವನೆ ಬರಲಿದೆ. ಆಕಸ್ಮಿಕವಾಗಿ ನೀವು ಅಶುಭ ಸಮಾಚಾರವನ್ನು ಕೇಳಬೇಕಾಗುವುದು. ನಿಮಗೆ ನಂಬಲೂ ಸಾಧ್ಯವಾಗದೇ ಹೋಗಬಹುದು. ಸಣ್ಣ ಅಂತರದಲ್ಲಿ ನಿಮ್ಮ ಅಪಘಾತವು ತಪ್ಪಲಿದ್ದು ನಿಮ್ಮ ಅದೃಷ್ಟವು ಕೈ ಹಿಡಿಯಲಿದೆ. ವೃತ್ತಿ ಜೀವನದಲ್ಲಿ ಗೌರವವನ್ನು ಪಡೆಯಬೇಕು ಎನಿಸುವುದು. ಅನಗತ್ಯ ಖರ್ಚಿಗೆ ಇಂದು ಹಲವು ಹಾದಿಗಳು ನಿಮ್ಮ ಕಣ್ಣಿಗೆ ಬೀಳಬಹುದು. ಆರ್ಥಿಕ ವ್ಯವಸ್ಥೆಯು ಎತ್ತು ಏರಿಗೆ ಕೋಣ ನೀರಿಗೆ ಎನ್ನುವ ಸ್ಥಿತಿಯು ಬರಬಹುದು. ಒಂದು ಕಡೆ ಬಾಗಲು ಮುಚ್ಚಿದರೆ ಇನ್ಮೊಂದು ಕಡೆ ಕಿಟಕಿ ತೆರುವುದು. ಓಡಾವು ನಿಮಗೆ ಅತಿಯಾದ ಆಯಾಸಪ್ರದವಾಗಲಿದೆ. ಚಿಂತೆಯು ಕಾಡಲಿದ್ದು ನಿಮಗೆ ಮನಸ್ಸನ್ನು ಅದರಿಂದ ತಪ್ಪಿಸಲು ಆಗದು.
ಮೀನ ರಾಶಿ: ಬಹಳ ದಿನಗಳಿಂದ ಇದ್ದ ಆಸ್ತಿಯ ಮೇಲಿನ ಮೋಹವು ಕಡಿಮೆ ಆಗುವುದು. ರಾಜಕೀಯದ ಜೊತೆ ಸಂಪರ್ಕವು ಬೆಳೆಯವಹುದು. ಆರ್ಥಿಕ ಸಮಸ್ಯೆಯು ತಾತ್ಕಾಲಿಕವಾಗಿ ನಿವಾರಣೆಯಾಗಿ ಒತ್ತಡದಿಂದ ಹೊರಬರುವಿರಿ. ಇಂದು ನಿಮ್ಮ ಪ್ರಯತ್ನದಲ್ಲಿ ಯಶಸ್ಸು ನಿರೀಕ್ಷಿಸಬಹುದು. ಇಂದಾಗುವ ಖರ್ಚನ್ನು ರೂಪಾಯಿಯಲ್ಲಿ ಲೆಕ್ಕವಿಡಲು ಸಾಧ್ಯವಾಗದು. ಶತ್ರುಗಳಿಗೆ ಏನನ್ನಾದರೂ ಮಾಡಲು ಯಾರಿಂದಲಾದರೂ ಪ್ರೇರಣೆ ಸಿಕ್ಕೀತು. ಗ್ರಾಹಕರಿಂದ ಮೆಚ್ಚುಗೆ ಸಿಗಲಿದೆ. ಅಶಿಸ್ತು ನಿಮ್ಮ ಕಾರ್ಯವನ್ನು ಯೋರಿಸುತ್ತದೆ. ಸ್ವಂತ ಕಾರ್ಯದ ಕಾರಣ ಕಛೇರಿಗೆ ವಿತಾಮ ಹೇಳುವಿರಿ. ಮಾಡಿದ ತಪ್ಪನ್ನು ಪುನಃ ಮಾಡಲು ಹಿಂಜರಿಯುವಿರಿ.
ಲೋಹಿತಶರ್ಮಾ – 8762924271 (what’s app only)