ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಅಶ್ವಿನೀ, ಯೋಗ : ವೈಧೃತಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 11 :08 ರಿಂದ 12:39ರವರೆಗೆ, ಯಮಘಂಡ ಕಾಲ 03:41 ರಿಂದ 05:12ರ ವರೆಗೆ, ಗುಳಿಕ ಕಾಲ 08:06 ರಿಂದ 09: 37 ರ ವರೆಗೆ.
ಮೇಷ: ಇಂದು ನೀವು ಪ್ರಮುಖವ್ಯಕ್ತಿಗಳೊಂದಿಗೆ ಸಂಬಂಧಗಳು ಬಲಗೊಳ್ಳುವುದು. ಅದೇ ಸಮಯದಲ್ಲಿ, ಯೋಗವು ಇದ್ದಕ್ಕಿದ್ದಂತೆ ಸಂಪತ್ತಿನ ಮೂಲವಾಗುತ್ತಿದೆ. ಸೃಜನಶೀಲತೆ ಅರಳಲಿದೆ. ನಿಮ್ಮ ಪ್ರತಿಭೆಯಿಂದ ನೀವು ಅದ್ಭುತಗಳನ್ನು ಮಾಡಲು ಸಾಧ್ಯವಾಗುತ್ತದೆ. ಹಿರಿಯರ ಅನುಭವದಿಂದ ಪ್ರಯೋಜನ ಪಡೆಯುವಿರಿ. ಅನಗತ್ಯ ವಾದಗಳನ್ನು ಮಾಡಿ, ಕುಟುಂಬದ ಸದಸ್ಯರನ್ನು ನೋಯಿಸುವಿರಿ. ಸೋಮಾರಿತನದಿಂದ ಸಮಯವು ವ್ಯರ್ಥವಾಗಲಿದೆ. ಚಂಚಲವಾದ ಮನಸ್ಸನ್ನು ನಿಗ್ರಹಿಸಲು ಪ್ರಯತ್ನಿಸಿ. ಅರ್ಧನಾರೀಶ್ವರಸ್ತೋತ್ರವನ್ನು ಮಾಡಿ.
ವೃಷಭ: ಇಂದು ನೀವು ನಿಮ್ಮ ಆಸೆಗಳನ್ನು ಈಡೇರಿಸಲು ದಾರಿ ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಹೊಸ ಸಾಧ್ಯತೆಗಳು ಕಾಣಿಸಿಕೊಳ್ಳುಲಿದೆ. ಮನೆಯಲ್ಲಿ ಸಂತೋಷದ ವಾತಾವರಣವು ಇರುತ್ತದೆ. ಸಹೋದರನ ನಡವಳಿಕೆಯಿಂದ ಮನಸ್ಸಿಗೆ ಬೇಸರವಾಗಬಹುದು. ಆರ್ಥಿಕ ಯೋಗವಿದೆ. ತರಾತುರಿಯಲ್ಲಿ ಮಾಡಿದ ಕೆಲಸವು ಹಾನಿಯನ್ನುಂಟು ಮಾಡುತ್ತದೆ. ಮಗುವಿನ ನಡವಳಿಕೆಯು ನೋವನ್ನು ಉಂಟುಮಾಡುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಲು ಆಸಕ್ತಿ ಉಂಟಾಗಬಹುದು.
ಮಿಥುನ: ಇಂದು ಅಧಿಕ ಖರ್ಚುಗಳು ಉಂಟಾಗಲಿದೆ. ಆದರೆ ಒಳ್ಳೆಯ ಕಾರ್ಯಕ್ಕೆ ಆಗುತ್ತಿದೆ ಎಂಬ ಸಂತೋಷವಿರಲಿದೆ. ಚಿಂತನಾ ಹೆಚ್ಚಾಗುತ್ತದೆ. ಹೊಸ ಭರವಸೆಗಳು ಸಂತೋಷವನ್ನು ತರುತ್ತವೆ. ಭೂಮಿಯ ವ್ಯವಹಾರವನ್ನು ಮಾಡಲಿದ್ದೀರಿ. ಸೇವೆ ಮತ್ತು ದಾನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೊಸ ಸಂಪರ್ಕಗಳು ಪ್ರಯೋಜನಕಾರಿಯಾಗಲಿವೆ. ಸಂಗಾತಿಯ ಬೆಂಬಲ ಇರುತ್ತದೆ. ಆಲೋಚನೆಗಳು ನಿಧಾನಗತಿಯಲ್ಲಿ ಇರಲಿವೆ. ಉತ್ತಮ ಆರೋಗ್ಯ ಇರುತ್ತದೆ.
ಕಟಕ: ಭೋಗದ ವಸ್ತುಗಳ ಮೂಲಕ ಖುಷಿ ಪಡೆಯುವಿರಿ. ನಿಮ್ಮ ಇಂದಿನ ಲೆಕ್ಕಾಚಾರ ಸರಿಯಾಗಲಿದೆ. ಸಹನೆಯ ನಿಮ್ಮ ಗುಣದಿಂದ ಸಾಕಷ್ಟು ಅನುಕೂಲವನ್ನುಮಾಡಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಹೊಸತನ್ನು ಕಲಿಯಬೇಕು ಎನದನುವ ತುಡಿತ ಇರಲಿದೆ. ಬಹುದಿನಗಳಿಂದ ಯೋಚಿಸುತ್ತಿದ್ದ ಮಹತ್ವದ ಕಾರ್ಯವೊಂದಕ್ಕೆ ಚಾಲನೆ ನೀಡುವಿರಿ. ಹಿರಿಯರ ಸಲಹೆಯಿಂದ ಪ್ರಯೋಜನವಾಗಲಿದೆ. ಅತಿಯಾದ ಭವಿಷ್ಯದ ಚಿಂತನೆಯಿಂದ ಇಂದು ಉಪಯೋಗವಾಗಲಾರದು.
ಸಿಂಹ: ಅನನೂಕುಲ ಸ್ಥಿತಿಯಿಂದ ಹೊರ ಬರುತ್ತೀರಿ. ವಿರೋಧಿಗಳ ಸಂಚಿಗೆ ಬಲಿಯಾಗುವ ಸಾಧ್ಯತೆ ಇದೆ. ಸರಿಯಾದ ದಾರಿಯಿಂದ ಮಾತ್ರ ಗೆಲುವು ಸಿಗಲಿದೆ. ಸರ್ಕಾರಿ ಕೆಲಸಗಳು ವಿಳಂಬವಾಗುವುದು. ನೆಚ್ಚಿನ ಕಲಾವಿದರ ಭೇಟಿಯಾಗಲಿದೆ. ಆಪ್ತರಿಂದ ಉಡುಗೊರೆ ಸಿಗಲಿದೆ. ಸ್ವಲ್ಪ ಆಲಸ್ಯವು ನಿಮ್ಮ ಕೆಲಸವನ್ನು ಹಿಂದಿಕ್ಕುವುದು. ಸ್ವತಂತ್ರವಾಗಿ ಆಲೋಚನೆಗಳನ್ನು ಬೆಳೆಸಿಕೊಳ್ಳುವುದು ಉತ್ತಮ. ನಿಮ್ಮವರ ಅಹಸಜ ವರ್ತನೆ ನಿಮಗೆ ಬೇಸರ ತರಿಸೀತು.
ಕನ್ಯಾ: ನೀವಿಂದು ನಿಮ್ಮ ಮೇಲೆ ಪೂರ್ಣಾವಾದ ನಂಬಿಕೆ ಇಡುವ ಮೂಲಕ ಯಶಸ್ಸು ಕಾಣುವಿರಿ. ನಿಮ್ಮಲ್ಲಿರುವ ಗುಣಗಳು ಪ್ರಶಂಸೆಗೆ ಪಾತ್ರವಾಗಲಿದೆ. ಎಂದೊಕ ಮಾಡಿಕೊಂಡ ವಿದೇಶದ ಸಂಪರ್ಕಗಳು ಇಂದು ಪ್ರಯೋಜನವಾಗಲಿದೆ. ಶಿಕ್ಷಣದ ಬಗ್ಗೆ ನಿಮಗಿರುವ ಆಸಕದತಿ ಮತ್ತಷ್ಟು ಅಧಿಕವಾಗಬಹುದು. ಮಕ್ಕಳ ಚಿಂತೆಯಿಂದ ಎಲ್ಲ ಸಂತೋಷಗಳು ಮರೆಯಾಗಲಿವೆ. ಅನವಶ್ಯಕವಾದ ಸಮಸ್ಯೆಗಳು ನಿಮ್ಮನ್ನು ಕಾಡಿಯಾವು. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುವಿರಿ.
ತುಲಾ: ಆರ್ಥಿಕವಾದ ಏರಿಳಿತಗಳು ಹೆಚ್ಚಾಗಿ ಕಾಣಸಿಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವವು ಹೆಚ್ಚಾಗುತ್ತದೆ. ಲ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗಲಿದೆ. ದಾನ ಮಾಡುವ ಮನೋಭಾವವು ಹೆಚ್ಚಾಗುತ್ತದೆ. ನೀವು ಇಂದು ಮಂಗಲಕಾರ್ಯವನ್ನು ಯೋಜಿಸುವಿರಿ. ಕೆಲವು ನಕಾರಾತ್ಮಕ ಸುದ್ದಿಗಳಿಂದಾಗಿ ನಿಮ್ಮ ಮನಸ್ಸು ಚಿಂತಿತವಾಗಬಹುದು. ನೀವು ಸಂತಾನದ ಸಂತೋಷವನ್ನು ಹೊಂದಿರುತ್ತೀರಿ. ವ್ಯಾಪಾರ-ವಹಿವಾಟು ತಕ್ಕಮಟ್ಟಿಗೆ ಇರಲಿದೆ.
ವೃಶ್ಚಿಕ: ನಿಮ್ಮ ಮಾತು ಮತ್ತು ಬುದ್ಧಿವಂತಿಕೆಯಿಂದ ಜನರು ಪ್ರಭಾವಿತರಾಗಲಿದ್ದಾರೆ. ನಿಮಗೆ ಆದಾಯದ ಹೊಸ ಮಾರ್ಗಗಳು ಕಂಡುಬರಬಹುದು. ಈ ಸಮಯದಲ್ಲಿ ದೊಡ್ಡ ಅವಕಾಶದ ಹುಡುಕಾಟವು ಪೂರ್ಣಗೊಳ್ಳುತ್ತದೆ. ಆರಂಭದಲ್ಲಿ, ಕೆಲವು ಕೆಲಸಗಳನ್ನು ಯೋಚಿಸದೆ ಮಾಡಲಾಗುತ್ತದೆ ಮತ್ತು ಕೆಲವು ಪ್ರಜ್ಞಾಪೂರ್ವಕವಾಗಿ ಮುಂದುವರಿಯುತ್ತದೆ, ಇದು ಗುರಿಯ ಸಾಧನೆಗೆ ಅಥವಾ ಅನುಭವದ ಅನನ್ಯ ಕೊಡುಗೆಗೆ ಕಾರಣವಾಗುತ್ತದೆ. ಮಕ್ಕಳು ನಿಮ್ಮ ಜೊತೆ ಕಾಲವನ್ನು ಕಳೆಯಬಯಸುವರು.
ಧನುಸ್ಸು: ಇಂದು ಹಳೆಯ ಸಂಬಂಧಗಳು ಪುನಃ ಹತ್ತಿರವಾಗಿ ಸಂತೋಷಕ್ಕೆ ಕಾರಣವಾಗಲಿದೆ. ಉನ್ನತ ಮಟ್ಟದ ಸಂಬಂಧಗಳು ದೂರಗಾಮಿ ಪ್ರಯೋಜನಗಳಿಗೆ ದಾರಿ ಮಾಡಿಕೊಡುತ್ತವೆ. ನೀವು ತಕ್ಷಣ ಪ್ರತಿಕ್ರಿಯಿಸದಿರುವುದು ಒಳ್ಳೆಯದು.ಅನಗತ್ಯ ಧೈರ್ಯವನ್ನು ತೋರಿಸುವುದನ್ನು ತಪ್ಪಿಸುವುದು ಸೂಕ್ತ. ನೀವು ಈ ಹಿಂದೆ ಮಾಡಿದ ಹೂಡಿಕೆಗಳು ನಿಮಗೆ ಪ್ರಯೋಜನವನ್ನು ನೀಡಲಿದೆ. ಅನುಭವಿ ಜನರನ್ನು ಸಂಪರ್ಕಿಸಲಾಗುವುದು. ಆರೋಗ್ಯ ದುರ್ಬಲವಾಗಬಹುದು. ಆಸ್ತಿಯ ವಿಚಾರ ಪುನಃ ಬೆಳಕಿಗೆ ಬಂದು ಸಣ್ಣ ಕಲಹದಲ್ಲಿ ಮುಕ್ತಾಯವಾದೀತು.
ಮಕರ: ಬಹು ದಿನಗಳ ಆಸೆಗಳು ಇಂದು ಈಡೇರಲಿದೆ. ಇಂದು ಮಹತ್ವದ ಕಾಮಗಾರಿಗಳು ನಿಮ್ಮ ಪಾಲಿಗೆ ಸಿಗಲಿದೆ. ಆರ್ಥಿಕವಾಗಿ ಅನೇಕ ಲಾಭಗಳು ಆಗಲಿವೆ. ಜನರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರಿ. ಹಿರಿಯರೊಂದಿಗೆ ಆತ್ಮೀಯತೆ ಬೆಳೆಯಲಿದೆ. ವ್ಯಾಪಾರವನ್ನು ಬೆಳಗಿಸಲು ಅನೇಕ ಅವಕಾಶಗಳಿವೆ, ಆದರೆ ನಿಮ್ಮ ನಿರ್ಲಕ್ಷ್ಯವು ಕೆಲಸವನ್ನು ಹಾಳು ಮಾಡಬಹುದು. ಸತ್ಯವನ್ನು ಮಾತನಾಡುವುದು ಬಹಳಷ್ಟು ಮಾಡುತ್ತದೆ. ಮನಸ್ಸಿನ ಚಂಚಲತೆಯನ್ನು ನಿಯಂತ್ರಿಸುವುದು ಅವಶ್ಯಕ.
ಕುಂಭ: ಇಂದು ನೀವು ಸಂಸಾರದ ಸುಖವನ್ನು ಅನುಭವಿಸುವಿರಿ. ನಿಮ್ಮ ಊಹೆಯ ಅಳೆತೆಯು ಸರಿಯಾಗಿ ಇರಲಿದೆ. ಹೆಚ್ಚಿನ ಶ್ರದ್ಧೆ ಮತ್ತು ತಿಳುವಳಿಕೆಯಿಂದ ನೀವು ಪ್ರಯೋಜನ ಪಡೆಯುತ್ತೀರಿ. ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಕಲಿಕೆಯ ವಿಚಾರದಲ್ಲಿ ನೀವು ಎಂದಿಗಿಂತ ಹೆಚ್ಚು ಪ್ರಯತ್ನಶೀಲರು. ವಿವೇಚನೆ ಹೆಚ್ಚಲಿದೆ. ಯಾರೊಬ್ಬರ ಸಲಹೆ ಫಲ ನೀಡಲಿದೆ. ಕಾಲುಗಳು ಮತ್ತು ಸ್ನಾಯುಗಳಲ್ಲಿ ನೋವು ಇರುತ್ತದೆ.
ಮೀನ: ಇಂದು ನಿಮಗೆ ಸೌಂದರ್ಯಪ್ರಜ್ಞೆ ಹೆಚ್ಚಿರಲಿದೆ. ಪ್ರತಿಕೂಲಸ್ಥಿತಿಗಳು ದೂರವಾಗಲಿವೆ. ಶತ್ರಗಳು ಸೋಲು ಕಾಣುವರು. ನಿಮ್ಮ ಸಂಕೀರ್ಣವಾದ ಕಾರ್ಯವು ಮುಕ್ತಾಗೊಳ್ಳುವುದು. ದಿನದ ಆರಂಭದಲ್ಲಿ ಉತ್ಸಾಹದಿಂದ ಮಾಡುವ ಪ್ರಯತ್ನಗಳು ಫಲವನ್ನು ಕೊಡುವುವು. ಸರಿಯಾದ ಮಾರ್ಗ ಮಾತ್ರ ವಿಜಯಕ್ಕೆ ಕಾರಣವಾಗುತ್ತದೆ. ಹೊಸ ಆಲೋಚನೆಗಳನ್ನು ಪ್ರಶಂಸಿಸಲಾಗುತ್ತದೆ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಹೆಚ್ಚಲಿದೆ.
ಲೋಹಿತಶರ್ಮಾ, ಇಡುವಾಣಿ