Horoscope 25 August: ದಿನಭವಿಷ್ಯ, ಉದ್ಯಮದಲ್ಲಿ ನಷ್ಟ ಸಾಧ್ಯತೆ, ಲಾಭಕ್ಕಾಗಿ ಅನ್ಯ ಮಾರ್ಗ ಹಿಡಿಯಬಹುದು ಎಚ್ಚರ!
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ನವಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:08 ರಿಂದ 03:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:21 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:28 ರಿಂದ 11:01ರ ವರೆಗೆ.
ಶ್ರಾವಣ ಮಾಸದ ಶುಕ್ರವಾರಗಳು ಅತ್ಯಂತ ಶ್ರೇಷ್ಠವಾದ ವಾರಗಳಾಗಿವೆ. ಅದರಲ್ಲಿಯೂ ಈ ಬಾರಿ ನವಮೀ ತಿಥಿಯು ಸೇರಿಕೊಂಡಿದ್ದು ಮತ್ತಷ್ಟು ವಿಶೇಷ. ದುರ್ಗೆಯರು ಒಂಭತ್ತು ಮತ್ತು ನವಮಿಯ ಅಧಿದೇವತೆಯು ದುರ್ಗೆಯಾಗಿದ್ದು ಶುಕ್ರವಾರವೂ ಬಂದಿರುವ ಕಾರಣ ಬಹಳ ಶ್ರೇಷ್ಠವಾದ ದಿನವಾಗಿದೆ. ಇಷ್ಟಾರ್ಥಗಳು, ಸಂಪತ್ ಸಮೃದ್ಧಿ, ಎಲ್ಲವೂ ಬರಲಿದೆ.
ಮೇಷ ರಾಶಿ: ಅತಿಥಿಗಳ ಸತ್ಕಾರವನ್ನು ಮನೆಯಲ್ಲಿ ಮಾಡುವಿರಿ. ಸಂಗಾತಿಯ ಜೊತೆ ಸರಸದಿಂದ ಹರಟೆ ಹೊಡೆಯುವಿರಿ. ಮಕ್ಕಳ ಕಾರ್ಯವು ನಿಮಗೆ ಹೆಮ್ಮೆ ಎನಿಸುವುದು. ನಿಮಗೆ ಉತ್ಸಾಹವನ್ನು ತುಂಬುವ ಜನರ ಅವಶ್ಯಕತೆ ಇರಲಿದೆ. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ನಿಮ್ಮ ಶುದ್ಧ ಮನಸ್ಸಿನಿಂದ ಎಲ್ಲರಿಗೂ ಶುಭವನ್ನೇ ಹಾರೈಸಿ. ಕಳೆದ ವ್ಯರ್ಥ ಕಾಲವನ್ನು ಮತ್ತೆ ಸೇರಿಸಲಗಾದು ಎಂದು ವ್ಯಥೆಪಡುವಿರಿ. ಉತ್ತಮ ಅವಕಾಶಗಳನ್ನು ವೈರಾಗ್ಯ ಬುದ್ಧಿಯಿಂದ ಬಿಟ್ಟು ಕೊಡುವಿರಿ. ಕುಟುಂಬದಲ್ಲಿ ಐಕಮತ್ಯದ ಕೊರತೆಯು ಕಾಣಿಸುವುದು. ಹಿರಿಯರ ಜೊತೆ ಚರ್ಚಿಸಿ ಸೂಕ್ತವಾದುದನ್ನು ತೆಗೆದುಕೊಳ್ಳಿ
ವೃಷಭ ರಾಶಿ: ವಿಪರೀತ ಓಡಾಟದಿಂದ ನಿಮಗೆ ದಣಿವಾಗಲಿದೆ. ಹೆಚ್ಚಿನ ಸುಖಸಂಪತ್ತನ್ನು ನಿರೀಕ್ಷಿಸುವಿರಿ. ತಾಯಿಯ ಕಡೆಯಿಂದ ನಿಮಗೆ ಪ್ರೋತ್ಸಾಹವು ಸಿಗಲಿದೆ. ಏಕಮುಖವಾದ ನಿರ್ಧಾರವು ನಿಮಗೆ ಸಫಲತೆಯನ್ನು ತಂದುಕೊಡದು. ಸಣ್ಣ ವಿಚಾರಗಳಿಗೂ ಬೇಸರಗೊಳ್ಳುವಿರಿ. ಅಪರಿಚಿತರ ಸಹವಾಸವನ್ನು ಮಾಡುವಿರಿ. ಓಡಾಡುವಾಗ ಎಚ್ಚರ ಇರಲಿ. ಎಲ್ಲವನ್ನೂ ಒಬ್ಬರೇ ಮಾಡಿ ಮುಗಿಸಬೇಕು ಎನ್ನುವ ಉತ್ಸಾಹವು ಇದ್ದರೂ ಇನ್ನೊಬ್ಬರನ್ನು ನಿಮ್ಮ ಜೊತೆಗೆ ಜೋಡಿಸಿ ಕೊಂಡು ಕಾರ್ಯವನ್ನು ಯಶಸ್ವಿಯಾಗಿಸಿ. ಆಹಾರವು ಅಜೀರ್ಣವಾಗಿ ರೋಗವು ಬರುವುದು. ಇರುವುದನ್ನು ಇದ್ದಂತೆ ಹೇಳುವುದರಿಂದ ನಿಮಗೆ ತೊಂದರೆಯಾದೀತು.
ಮಿಥುನ ರಾಶಿ: ನೀವು ಇಂದು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ನೀವು ಭಾಗಿಯಾಗಲಾರಿರಿ. ಸಂಬಂಧಿಕರನ್ನೇ ಪಾಲುದಾರಿಕೆಯಲ್ಲಿ ಇಟ್ಟಕೊಳ್ಳುವಿರಿ. ಸರ್ಕಾರದ ಕೆಲಸಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಭೂಮಿಯ ವ್ಯವಹಾರವು ಲಾಭದಾಯಕವಲ್ಲದಿದ್ದರೂ ಅದನ್ನೇ ನಡೆಸಲು ಬಯಸುವಿರಿ. ಸುಖವಾದ ಜೀವನವನ್ನು ನಡೆಸಲು ನೀವು ಸರಳ ಸೂತ್ರವನ್ನು ಬಳಸುವಿರಿ. ನ್ಯಾಯಾಲಯದಲ್ಲಿ ನಿಮ್ಮ ದಾಯಾದಿ ಕಲಹಗಳು ತಟಸ್ಥವಾಗಿ ಇರಲಿದ್ದು ನಿಮಗೆ ತುರ್ತು ನಿರ್ಧಾರವಾಗಬೇಕಾದ ಸನ್ನಿವೇಶವು ಇರಲಿದೆ.
ಕರ್ಕ ರಾಶಿ: ವಿವಾಹ ಯೋಗವು ಬಂದಿದ್ದು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ. ನಿಮ್ಮ ಮಾತು ಯಾರನ್ನಾದರೂ ಘಾಸಿ ಮಾಡೀತು. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಉತ್ತಮ. ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಯಾರಿಗಾದರೂ ಹಣವನ್ನು ಕೊಡುವ ಸಂದರ್ಭವು ಬರಬಹುದು. ಚುರುಕಾದ ಕಾರ್ಯಗಳು ನಿಮ್ಮ ಯಶಸ್ಸನ್ನು ಹೆಚ್ಚಿಸುವುದು. ಬಂಧುಗಳ ಪ್ರೀತಿಗೆ ಪಾತ್ರರಾಗುವಿರಿ. ವ್ಯವಹಾರದಲ್ಲಿ ಶುದ್ಧತೆ ಇರಲಿ. ಭವಿಷ್ಯದ ಬಗ್ಗೆ ಬಹಳ ಆಲೋಚನೆಯನ್ನು ಮಾಡುವಿರಿ.
ಸಿಂಹ ರಾಶಿ: ನಿಮ್ಮ ಇಂದಿನ ದೀರ್ಘ ಪ್ರಯಾಣವು ಹಲವು ತೊಡಕುಗಳಿಂದ ಇರಬಹುದು. ವಾಹನ ವಿಚಾರವಾಗಿ ಮನೆಯಲ್ಲಿ ಕಲಹವಾಗಬಹುದು. ಸಂಗಾತಿಯ ಮಾತಿಗೆ ನಿಮ್ಮ ಪ್ರತಿಕ್ರಿಯೆಯು ಇಲ್ಲದಿರುವುದು ಬೇಸರವನ್ನು ತರಿಸಬಹುದು. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಹೆಸರು ಹೆಚ್ಚು ಕೇಳಿಬರಲಿದೆ. ನಿಮ್ಮ ಉತ್ಸಾಹವನ್ನು ಶತ್ರುಗಳು ನಿರುತ್ಸಾಹಗೊಳಿಸಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆಹಾರದಲ್ಲಿ ನಿಯಮಿತಿ ಇರಲಿ. ಪಿತ್ತಸಂಬಂಧಿ ರೋಗವು ಕಾಣಿಸಿಕೊಳ್ಳಬಹುದು. ಇತಿಹಾಸಕ್ಕೆ ವಿಚಾರದಲ್ಲಿ ಶೋಧನೆಯನ್ನು ಮಾಡುವಿರಿ. ನಿಮ್ಮ ಕೆಲಸಗಳನ್ನು ಇನ್ನೊಬ್ಬರಿಗೆ ಕೊಟ್ಟುಬಿಡುವಿರಿ.
ಕನ್ಯಾ ರಾಶಿ: ಕೆಲವು ವಿಚಾರದಲ್ಲಿ ನಿಮಗೆ ಸೂಕ್ಷ್ಮತೆಯ ಕೊರತೆಯು ಕಾಣುವುದು. ನಿಮ್ಮದೇ ಆದ ದಾರಿಯಲ್ಲಿ ನೀವು ಸಾಗುವಿರಿ. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಹೆಚ್ಚುಕೊಡಬೇಕಾದೀತು. ಜನರ ಜೊತೆ ಬೆರೆಯುವುದು ಕಷ್ಟವಾದೀತು. ದೂರ ಊರಿಗೆ ಕುಟುಂಬ ಸಹಿತವಾಗಿ ಪ್ರಯಾಣವನ್ನು ಮಾಡಬಹುದು. ಸ್ಥಿರಾಸ್ತಿಯ ವಿಚಾರವಾಗಿ ನೆರೆಯವರ ಜೊತೆ ಜಗಳವಾಗಬಹುದು. ವಿದೇಶೀ ವ್ಯಾಪಾರದಿಂದ ನಷ್ಟವಾಗಬಹುದು. ಉದ್ಯೋಗದಲ್ಲಿ ನಿಮ್ಮ ಮನಃಸ್ಥಿತಿಯು ಖಿನ್ನವಾಗಲಿದೆ. ನಿಮಗೆ ಹಣವನ್ನು ಉಳಿಸಿಕೊಳ್ಳುವುದು ಸಮಸ್ಯೆಯೇ ಆಗಬಹುದು.
ತುಲಾ ರಾಶಿ: ಉದ್ಯಮದಲ್ಲಿ ಆಗುವ ಒತ್ತಡವನ್ನು ನಿವಾರಿಸಿಕೊಳ್ಳಲು ಅನ್ಯ ಮಾರ್ಗವನ್ನು ಕಂಡುಕೊಳ್ಳಿ. ಇಲ್ಲವಾದರೇ ಇದೇ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡಬಹುದು. ನಿಮಗೆ ಸಿಗಬೇಕಾದ ಗೌರವವು ಕೊನೆಗೂ ನಿಮಗೇ ಸಿಗಲಿದೆ. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ನಿಲ್ಲದು. ಹಿರಿಯರ ಜೊತೆ ಕಳೆದ ಸಮಯವು ನಿಮಗೆ ಉತ್ಸಾಹವನ್ನು ಕೊಡುವುದು. ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ. ಲೆಕ್ಕಪತ್ರದ ವಿಷಯದಲ್ಲಿ ನಿಮಗೆ ಯಾವುದೇ ಅಡ್ಡ ದಾರಿಯನ್ನು ಹಿಡಿಯುವುದು ಬೇಡ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆಯಾಗಬಹುದು.
ವೃಶ್ಚಿಕ ರಾಶಿ: ಗೃಹ ಬಳಕೆಗೆ ಬೇಕಾದ ಸಾಮಾನುಗಳನ್ನು ನೀವು ಖರೀದಿಸುವ ಭರದಲ್ಲಿ ಖರ್ಚಿನ ಬಗ್ಗೆಯೂ ಸೂಕ್ತ ಆಲೋಚನೆಯನ್ನು ಮಾಡಿ. ನಿಮ್ಮ ಇಂದಿನ ಸಂದರ್ಭಗಳು ಬಹಳ ಸೂಕ್ಷ್ಮವಾಗಿದ್ದು ಅದನ್ನು ನಿಭಾಯಿಸುವ ಕ್ರಮವನ್ನೂ ನೀವು ಅರಿಯಬೇಕಾಗಬಹುದು. ಮೇಲಧಿಕಾರಿಗಳ ಜೊತೆ ನಿಮ್ಮ ಒಡನಾಟವು ಚೆನ್ನಾಗಿರುವುದು. ನಿಮ್ಮ ಗುರಿಯ ಬಗ್ಗೆ ಕೆಲವರು ಆಡಿಕೊಂಡಾರು. ಅದನ್ನು ಕೇಳಿಸಿಕೊಳ್ಳದೇ ಮುಂದಡಿ ಇಡಿ. ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ ನೀವೂ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆ. ನಿಮ್ಮದೇ ಕೆಲಸವಾದರೂ ಸಂಪೂರ್ಣ ಯಶಸ್ಸನ್ನು ನೀವು ಪಡೆಯಲಾರಿರಿ. ಸ್ತ್ರೀಗೆ ವಶವಾಗುವ ಸಂಭವವಿದೆ.
ಧನು ರಾಶಿ: ಹಠದ ಸ್ವಭಾವದಿಂದ ಪ್ರೀತಿಯನ್ನು ಕಳೆದುಕೊಳ್ಳುವಿರಿ. ಇಂದು ವ್ಯವಹಾರವನ್ನು ಮಾಡಲು ನಿಮಗೆ ಧೈರ್ಯವು ಸಾಕಾಗದು. ಮಕ್ಕಳ ಜೊತೆ ನಿಮ್ಮ ಪ್ರಯಾಣ ಮಾಡುವಿರಿ. ಅಸಭ್ಯರ ನಡುವೆ ನಿಮಗೆ ಅಪಮಾನವಾಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿ. ನಿಮ್ಮ ಇಷ್ಟವಾದ ವಸ್ತುವನ್ನು ಕಳೆದುಕೊಳ್ಳುವಿರಿ. ಬಂಧುಗಳು ನಿಮ್ಮನ್ನು ಅಳೆಯುವರು. ಉನ್ನತ ಅಭ್ಯಾಸವನ್ನು ಮಾಡುವ ಅಪೇಕ್ಷೆ ಇರಲಿದೆ. ಇದಕ್ಕಾಗಿ ಆರ್ಥಿಕ ಸಹಾಯವನ್ನು ಇನ್ನೊಬ್ಬರಿಂದ ಕೇಳುವಿರಿ. ಆಪ್ತರ ಮಾತಿನಿಂದ ನಿಮಗೆ ಬೇಸರವಾಗಲಿದೆ.
ಮಕರ ರಾಶಿ: ಉದ್ಯೋಗದಲ್ಲಿ ಆಗದ ಸಣ್ಣ ತಪ್ಪಿನಿಂದ ನಷ್ಟವಾಗಲಿದ್ದು ಅದು ನಿಮ್ಮ ಮೇಲೆ ಬರಬಹುದು. ಭೂಮಿಯ ವ್ಯವಹಾರದಲ್ಲಿ ಲಾಭವಾಗದೇ ಕೇವಲ ಓಡಾಟವನ್ನು ಮಾಡಬೇಕಾಗಬಹುದು. ತುರ್ತು ಹಣವು ಬೇಕಾಗಿದ್ದು ಸಾಲವನ್ನು ಮಾಡಲು ನಿಮಗೆ ಹೆದರಿಕೆ ಆಗಬಹುದು. ನಿಮ್ಮ ಸ್ವಂತ ಕೆಲಸಕ್ಕಾಗಿ ವಿರಾಮವನ್ನು ತೆಗೆದುಕೊಳ್ಳುವಿರಿ. ಬಹಳ ದಿನಗಳ ಅನಂತರ ಕುಟುಂಬದ ಕುಟುಂಬದ ಜೊತೆ ಸೇರಿಕೊಳ್ಳಲಿದ್ದು ನಿಮಗೆ ಸಂತಸವಾಗಲಿದೆ. ವಿವಾಹದ ಮಾತುಕತೆಗಳು ನಿಮಗೆ ಸಂತೋಷವನ್ನು ತರುವುದು. ಸರಿಯಾದ ಕಡೆ ಹೂಡಿಕೆ ಮಾಡದೇ ಹಣವನ್ನು ಕಳೆದುಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ನಂಬುವುದು ಕಷ್ಟವಾದೀತು.
ಕುಂಭ ರಾಶಿ: ಬಂಧುಗಳ ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ಯಾರ ಮೇಲಾದರೂ ನಿಮ್ಮ ತಪ್ಪನ್ನು ಹಾಕುವಿರಿ. ಬರುವ ಆದಾಯಕ್ಕೆ ಅಡೆತಡೆಗಳು ಬರಬಹುದು. ಸ್ನೇಹವು ಶಿಥಿಲವಾಗುವುದು. ಪ್ರಭಾವಿ ವ್ಯಕ್ತಿಗಳ ಸಲಹೆಯಿಂದ ನಿಮಗೆ ಶ್ರೇಯಸ್ಸು ಪ್ರಾಪ್ತವಾಗಬಹುದು. ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ. ಹಣದ ಆಮಿಷವನ್ನು ಒಡ್ಡಬಹುದು. ನಿಮ್ಮ ಭೂಮಿಯನ್ನು ವಶಪಡಿಸಿಕೊಳ್ಳಲು ಹೊಂಚುಹಾಕಬಹುದು. ಬಹಳ ದಿನಗಳಿಂದ ನಿಮ್ಮ ಕೆಲಸವು ವೇಗವಾಗಿ ಸಾಗುತ್ತಿದ್ದು ಅನಿರೀಕ್ಷತವಾಗಿ ಮಂದಗತಿಯಲ್ಲಿ ಸಾಗುವುದು. ಸಿಟ್ಟಾಗುವ ಸಂದರ್ಭವು ಬರಬಹುದು. ಎಲ್ಲರ ಜೊತೆ ತಾಳ್ಮೆಯಿಂದ ಮಾತನ್ನಾಡಿ.
ಮೀನ ರಾಶಿ: ಶತ್ರುಗಳ ಬಗ್ಗೆ ನೀವು ಸರಿಯಾದ ಮಾಹಿತಿಯನ್ನು ಪಡೆಯುವಿರಿ. ಹದಗೆಟ್ಟ ತಾಯಿಯ ಆರೋಗ್ಯವು ಸರಿಯಾಗುವುದು. ಅನಿರೀಕ್ಷಿತ ವಾರ್ತೆಗಳು ನಿಮ್ಮ ಮನಸ್ಸನ್ನು ಖಿನ್ನಗೊಳಿಸುವುದು. ಬಂಧುಗಳ ಪ್ರೀತಿಯು ನಿಮಗೆ ಸಿಗಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ಬಿಡುವುದು ಬೇಡ. ನಿಮ್ಮ ಕೊಟ್ಟ ಜವಾಬ್ದಾರಿಯನ್ನು ಸಕಾಲಕ್ಕೆ ಪೂರ್ಣಗೊಳಿಸುವಿರಿ. ತಾಯಿಯ ಕಡೆಯ ಬಂಧುಗಳಿಂದ ನಿಮಗೆ ಸಹಾಯವು ಸಿಗಲಿದೆ. ನೀವು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಿರಿ. ಸುಳ್ಳು ಹೇಳವ ಸಂದರ್ಭವೂ ಬರಬಹುದು. ಉದ್ವೇಗಕ್ಕೆ ಸಿಲುಕಿ ಏನನ್ನಾದರೂ ಮಾಡಲು ಹೋಗುವಿರಿ. ಸಮೂಹದ ಜೊತೆ ನಿಮ್ಮ ಕೆಲಸವು ಆಗುವುದು.
ಲೋಹಿತಶರ್ಮಾ – 8762924271 (what’s app only)