Daily Horoscope 25 June: ಇಂದಿನ ರಾಶಿಭವಿಷ್ಯ, ಬಹಳ ದಿನಗಳ ನಂತರ ಈ ರಾಶಿಯವರ ಕುಟುಂಬದ ಸಂಬಂಧಗಳು ಬಲಗೊಳ್ಳುವುದು

|

Updated on: Jun 25, 2023 | 12:01 AM

ಇಂದಿನ (2023 ಜೂನ್​ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 25 June: ಇಂದಿನ ರಾಶಿಭವಿಷ್ಯ, ಬಹಳ ದಿನಗಳ ನಂತರ ಈ ರಾಶಿಯವರ ಕುಟುಂಬದ ಸಂಬಂಧಗಳು ಬಲಗೊಳ್ಳುವುದು
ಇಂದಿನ ರಾಶಿಭವಿಷ್ಯ
Image Credit source: freepik
Follow us on

ಶುಭೋದಯ ಗೆಳೆಯರೇ.. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಾಧ್ಯಮ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಸಂಜೆ 05:26 ರಿಂದ 07:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:49 ರಿಂದ 05:26ರ ವರೆಗೆ.

ಮೇಷ: ಇಂದು‌ ನೀವು ಶುಭದಿನದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸಾಮರ್ಥ್ಯ ಅನಾವರಣಕ್ಕೆ ಇಂದು ಶುಭದಿನವಾಗಲಿದೆ. ಪ್ರೀತಿಯಲ್ಲಿ ಬಿದ್ದು ನೀವು ಒದ್ದಾಡುವ ಸ್ಥಿತಿ ಎದುರಾಗಬಹುದು. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡಿ. ಅತಿಯಾದ ಪ್ರೀತಿಯನ್ನು ಮಕ್ಕಳ‌ಮೇಲೆ ತೋರಿಸಬೇಡಿ.‌ ಅವಶ್ಯಕತೆ ಇದ್ದಷ್ಟೇ ಇರಲಿ‌. ಇಂದು‌ ಮನೆಯ ಕೆಲಸದಲ್ಲಿ ಮಗ್ನರಾಗುವಿರಿ. ಮಕ್ಕಳು ನಿಮಗೆ ಸಹಾಯ ಮಾಡಿಯಾರು. ಒಳ್ಳೆಯ ಭೋಜನವನ್ನು ಸ್ವೀಕರಿಸುವಿರಿ. ಮಾತನಾಡುವ ಇಚ್ಛೆ ಇಂದು‌ ಕಡಿಮೆ ಇರಲಿದೆ.

ವೃಷಭ: ಇಂದು ನೀವು ಸಣ್ಣ ವಿಷಯಗಳಿಗೂ ಕೋಪ ಮಾಡಿಕೊಳ್ಳುವಿರಿ. ಆನ್ ಲೈನ್ ವ್ಯವಹಾರದಿಂದ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮದೇ ತೀರ್ಮನದಿಂದ‌ ಹೊರಬರಲು ಪ್ರಯತ್ನಿಸಿ. ಒಂದು‌ ವಿಷಯಕ್ಕೆ ಅನೇಕ ಮುಖಗಳು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗಿದೆ. ನಿಮಗೆ ದೈವಬಲವು ಕಡಿಮೆ‌ ಇದ್ದು ಏನಾದರೂ ತೊಂದರೆಯಾದೀತು.‌ ಶ್ರದ್ಧೆಯಿಂದ ಕುಲದೇವರನ್ನು ಆರಾಧಿಸಿ.‌ ಇಂದಿನ‌‌ ನಿಮ್ಮ ಕೆಲಸಗಳು ಆತಂಕವಿಲ್ಲದೇ ನಡೆಯುವುದು. ಗ್ರಾಹಕರನ್ನು ಚನ್ನಾಗಿ ಇಟ್ಟುಕೊಂಡು ವ್ಯಾಪಾರದಲ್ಲಿ ಲಾಭವನ್ನು ಪಡೆಯಿರಿ.

ಮಿಥುನ: ಕಛೇರಿಯಲ್ಲಿ ಕೆಲಸ ಮಾಡುವವರು ಒತ್ತಡದಿಂದ ಬೇಯಲಿದ್ದೀರಿ. ಭೂಮಿಯ ವ್ಯವಹಾರವನ್ನು ತೆಗೆದುಕೊಳ್ಳಲು ಹಿಂಜರಿಯಬಹುದು. ನಿಮ್ಮ ಮಾತನ್ನು ಕೇಳುತ್ತಾರೆಂದು ಏನನ್ನಾದರೂ ಹೇಳಿ ಇನ್ನೊಬ್ಬರ ಕೆಂಗಣ್ಣಿಗೆ ಗುರಿಯಾಗಬೇಡಿ. ನಿಮಗೆ ಇಂದು ಸಹೋದ್ಯೋಗಿಗಳ‌ ಸಹಕಾರ ಸಿಗಬಹುದು. ಆಕಸ್ಮಿಕ ವಾರ್ತೆಯಿಂದ ದುಃಖವು ಉಂಟಾಗಬಹುದು. ನಿರ್ಲಕ್ಷ್ಯದ‌ ಮನೋಭಾವವು ನಿಮಗೆ ಹಿಡಿಸಿದ್ದಲ್ಲ. ಎಲ್ಲ ಸುದ್ದಿಗಳನ್ನೂ ಕೇಳುವ ಮನಃಸ್ಥಿತಿಯನ್ನು ಬಿಡಿಬೇಕಾದೀತು. ಒಂಟಿಯಾಗಿ ಈ ದಿನವನ್ನು ಕಳೆಯುವಿರಿ.

ಕರ್ಕಾಟಕ: ಇಂದು ನೀವು ನಿಮ್ಮ ದಿನಚರಿಯಲ್ಲಿ ಬದಲಾವಣೆ ತರಲು ಇಚ್ಛಿಸುವಿರಿ. ಇಂದು ನಿಮ್ಮ ಕೌಶಲದ ಬಗ್ಗೆ ಹಂಚಿಕೊಳ್ಳಿ. ನಿಮಗೆ ಮುಂದಿನ ಜೀವನೋಪಾಯಕ್ಕೆ ದಾರಿಯಾದೀತು. ಆರ್ಥಿಕವಾಗಿ ಸಬಲರಾಗುವ ಹಂಬಲವಿದ್ದರೂ ಆಲಸ್ಯದಿಂದ ಹೊರಬರದೇ ಇದು ಸಾಧ್ಯವಿಲ್ಲ. ಸಾಲವನ್ನು ಸ್ವಲ್ಪ ತೀರಿಸುವಿರಿ.‌ ‌ನಿಮ್ಮದಲ್ಲದ ವಸ್ತುವನ್ನು ನೀವು ಸ್ವೀಕರಿಸಿ ಅಪಮಾನವನ್ನು ಅನುಭವಿಸುವಿರಿ. ಸ್ತ್ರೀಯರ ಕುರಿತ ನಿಮ್ಮ ಕಾಳಜಿ ಅತಿಯಾದೀತು. ಅಲಂಕಾರಕ್ಕೆ ಹೆಚ್ಚಿನ‌ ಮಹತ್ತ್ವವನ್ನು ಕೊಡುವಿರಿ. ಯಾರನ್ನೂ ನಂಬಲು ನೀವು ತಯಾರಿಲ್ಲ.

ಸಿಂಹ: ಇಂದು ನೀವು ಇನ್ನೊಬ್ಬರ ಶ್ರೇಯಸ್ಸಿಗೆ ಕೆಲಸವನ್ನು ಮಾಡಲು ಇಚ್ಛಿಸುವಿರಿ. ಸಾಮಾಜಿಕ ಕೆಲಸವು ನಿಮಗೆ ಪ್ರಿಯವಾದುದಾಗಿದೆ. ಆಭರಣದ ಮೇಲೆ‌ ಹೂಡಿಕೆ ಮಾಡಲು ಬಯಸುವಿರಿ. ನೂತನ ವಸ್ತುಗಳನ್ನು ಧರಿಸಿ ಸಂತೋಷ ಪಡುವಿರಿ.‌ ದಾಂಪತ್ಯದಲ್ಲಿ ಸುಖವಾಗಿರಬೇಕೆಂಬ ವಿಷಯವನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಹಣಕಾಸಿನ ಕೊರತೆಯಿಂದ ನಿಮಗೆ ನೆಮ್ಮದಿ ಕಡಿಮೆಯಾದೀತು. ಹೆಚ್ಚಿನ ದುಡಿಮೆಗೆ ಪ್ರತ್ನಿಸುವಿರಿ. ಅನ್ಯರನ್ನು ಅನುಸರಿಸಲು ನಿಮಗೆ ಇಷ್ಟವಾಗದು. ನಿಮ್ಮದೇ ಚಿಂತನೆಯನ್ನು ಬೆಳೆಸಿಕೊಳ್ಳಲು ಬಯಸುವಿರಿ. ಸಮಯದ ಬೆಲೆಯನ್ನು ಅನ್ಯರಿಂದ ಪಡೆಯುವಿರಿ. ಉನ್ನತ ಅಧಿಕಾರಕ್ಕೆ ಹೋಗುವ ಸಂಭವಿದ್ದರೂ ಹಿತಶತ್ರುಗಳ ಪಿತೂರಿಯಿಂದ ಅಥವಾ ಹಿಂದೆಂದೋ ಆಡಿದ ಮಾತಿನ್ನೇ ಇಟ್ಟುಕೊಂಡು ನಿಮಗೆ ಹುದ್ದೆಯನ್ನು ಕೊಡದೇಹೋಗಬಹುದು. ನಿಮ್ಮ ಸ್ಥಿರಾಸ್ತಿಯನ್ನು ಅತಿಕ್ರಮಣ ಮಾಡಲು ಹೊಂಚುಹಾಕುತ್ತಿದ್ದಾರೆ. ನೀವು ಎಚ್ಚೆತ್ತುಕೊಳ್ಳಬೇಕಾಗಿದೆ. ರಾಜಕೀಯದ ಹಿನ್ನೆಯನ್ನು ಇಟ್ಟುಕೊಂಡು ನೀವು ಮುಂದುವರಿಯಬೇಕು. ಹೊಂದಾಣಿಕೆಯಿಂದ ಕಲಹವನ್ನು ಸರಿಮಾಡಿಕೊಳ್ಳಿ. ಇಂದು ನಿಮಗೆ ಹೋಗಬೇಕಾದಲ್ಲಿಗೆ ಹೋಗಲು ಆಗಲಿಲ್ಲ ಎಂದು ಬಹಳ ಬೇಸರವಾದೀತು. ಮನೆಯವರನ್ನು ಶಪಿಸಲೂಬಹುದು. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಸಕಾಲವಾಗಿದೆ.

ಕನ್ಯಾ: ಇಂದು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು ಓದಿನಲ್ಲಿ ತೋರಿಸುವರು. ಜನರ ಜೊತೆ ಬೆರೆಯುವ ಮನಸ್ಸಾಗುವುದು. ದೂರದಲ್ಲಿ‌ ಇರುವವರು ಮನೆಗೆ ಹೋಗಲಿದ್ದಾರೆ. ಆಹಾರದ ಅಭಾವವು ನಿಮಗೆ‌ ಆಗಬಹುದು. ಆಸ್ತಿಯ ವಿಚಾರವಾಗಿ ನೆರೆ ಹೊರೆಯಲ್ಲಿ‌‌ ಕಲಹವಾಗಬಹುದು. ವಿದೇಶದ ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆಯಾಗಬಹುದು. ಕಲಾವಿದರು‌‌ ಮನೆಯಲ್ಲಿಯೇ ಇರಬೇಕಾದೀತು.‌ ನಿಮಗೆ ಬಹಳ ಕಿರಿಕಿರಿಯ ದಿನವು ಇಂದಾಗಲಿದೆ. ಸಂಗಾತಿಯೂ ನಿಮ್ಮ ಜೊತೆ ಸರಿಯಾಗಿ ಮಾತನಾಡುವುದಿಲ್ಲ. ಏಕಾಂತವಾಗಿ ಒಂದು‌ಕಡೆ ಕುಳಿತು ಚಿಂತಾಮಗ್ನರಾಗುವಿರಿ.

ತುಲಾ: ಇಂದು ನಿಮ್ಮ ಮನಸ್ಸನ್ನು ಸಂತೋಷವಾಗಿರಿಸುವ ಸಂಗತಿಗಳು ನಡೆಯಬಹುದು. ಹಿರಿಯರ ಜೊತೆ ಸಮಯವನ್ನು ಕಳೆಯಲು ಅವಕಾಶ ಸಿಗಲಿದೆ. ಆರ್ಥಿಕ‌ವ್ಯವಹಾರಗಳನ್ನು ಇಂದು ಸರಿಯಾಗಿ‌ ತಿಳಿದುಕೊಳ್ಳುವಿರಿ. ಅಶ್ಲೀಷಪದಗಳನ್ನು ಬಳಸಿ ಹಿರಿಯರಿಂದ ಬೈಗುಳ ಪಡೆಯುವಿರಿ. ಹೊಸ ಆದಾಯದ ಮೂಲವನ್ನು ಸಿದ್ಧಪಡಿಸಿಕೊಳ್ಳುವಿರಿ. ಸಭೆಗಳಿಗೆ ಭಾಗವಹಿಸಲು ಹೋಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ನಿಮ್ಮ ವ್ಯಕ್ತಿತ್ವವನ್ನು ಸರಿಮಾಡಿಕೊಳ್ಳಲು ಬಯಸುವಿರಿ. ಆಪ್ತರ ಜೊತೆ ಹರಟೆ ಹೊಡೆಯುವಿರಿ.

ವೃಶ್ಚಿಕ: ಇಂದು ನೀವು ಅಧಿಕಾರಿಗಳ ಜೊತೆ ಬಹಳ ಆಪ್ತತೆಯಿಂದ ವ್ಯವಹರಿಸುವಿರಿ. ಇನ್ನೊಬ್ಬರಿಗೆ ಸಾಲವಾಗಿ ನೀಡಿದ ಹಣವನ್ನು ಸ್ವೀಕರಿಸಬಹುದು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಸಂಪತ್ತನ್ನು ಉಳಿಸಿಕೊಳ್ಳಿ. ಸ್ನೇಹಿತರ ಜೊತೆ ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮದು ರಾಜಕೀಯ ಪ್ರೇರಿತ ಮನಸ್ಸಾಗಿದ್ದು ಎಲ್ಲದರಲ್ಲಿಯೂ ಅದನ್ನೇ ಕಾಣುವಿರಿ. ಸಹಾಯ ಮಾಡುವ ಮನಸ್ಸು ಇಂದು ನಿಮ್ಮಲ್ಲಿ ಇಲ್ಲವಾದೀತು. ಅತಿಯಾದ ವಿಶ್ವಾಸವು ನಿಮಗೆ ಹಿನ್ನಡೆಯನ್ನು ತಂದೀತು. ನೀವಂದುಕೊಂಡಂತೆ ಇಂದಿನ‌ ಕೆಲಸವು ಸಾಗದು. ಇಂದು ಸ್ವಲ್ಪ ಆಲಸ್ಯವೂ ಇರಬಹುದು.

ಧನುಸ್ಸು: ಇಂದಿನ‌ ನಿಮ್ಮ ಅಭಿಪ್ರಾಯವನ್ನು ಕುಟುಂಬ ಗೌರವಿಸುವುದು. ಕಳೆದುಹೋದ ವಸ್ತುವಿನ ಬಗ್ಗೆ ನಿಮಗೆ ಅತಿಯಾದ ಮೋಹ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಕಾರಣದಿಂದ ನಿಮಗೆ ಗೌರವ ಸಿಗಬಹುದು. ಮಾತಾನ್ನು ಮಿತವಾಗಿ ಆಡಿ. ನಿಮ್ಮ ತಿಳಿವಳಿಕೆಯ ಮಟ್ಟವನ್ನು ಅದು ತೋರಿಸಬಹುದು. ನಿಮ್ಮ ಸಿಟ್ಟನ್ನು ಮಕ್ಕಳ‌ ಮೇಲೆ ತೋರಿಸುವಿರಿ. ಅಧಿಕ ಸುಟ್ಟಾದಿಂದ ಆಯಾಸವಾಗಬಹುದು. ಸ್ತ್ರೀಯರಿಂದ‌ ಅಪಮಾನ ಆಗಬಹುದು. ಸಾಲಬಾಧೆಯು ನಿಮಗೆ ಎಲ್ಲರಿಂದ ದೂರವಿರುವಂತೆ ಮಾಡೀತು. ಕುಟುಂಬ ಮೇಲೆ ಬೇಸರ ಬರಬಹುದು.

ಮಕರ: ಇಂದು ನೀವು ನಿಮಗಾಗಿ ಸಮಯ ತೆಗೆದುಕೊಳ್ಳುವಿರಿ. ಬಹಳ ದಿನಗಳ ಅನಂತರ ಕುಟುಂಬದ ಸಂಬಂಧಗಳು ಬಲಗೊಳ್ಳುವುದು. ನೀವು ಯಶಸ್ಸನ್ನು ಸಾಧಿಸಲು ಹಂಬಲಿಸುವಿರಿ. ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳಿ ಇತರರಿಂದ ದೂರಾಗಬಹುದು. ಹೂಡಿಕೆ ಲಯ ಹಣವು ನಿಮ್ಮ ಇಂದಿನ ಆಪತ್ಕಾಲಕ್ಕೆ ನೆರವಾಗುವುದು.‌ ನಿಮಗೆ ನಿರ್ಣಯವನ್ನು ಅಂತಿಮ‌ಗೊಳಿಸಲು ಸಮಯವನ್ನು ತೆಗೆದುಕೊಳ್ಳುವಿರಿ. ಅತ್ಯಾಪ್ತತೆಯು ನಿಮಗೆ ಶಂಕೆಯನ್ನು ಉಂಟುಮಾಡಬಹುದು. ನಿಮ್ಮ‌ ವ್ಯವಹಾರದಲ್ಲಿ ಶುದ್ಧತೆ‌ ಇರುವುದು. ಹೊರಗಡೆ ಪ್ರಯಾಣವನ್ನು ಮಾಡುವಿರಿ. ಮನೆಯ ಸ್ಥಿತಿಯನ್ನು ಸುಧಾರಿಸಲು ನೀವು ಪ್ರಯತ್ನಿಸಿ ಸೋಲಬಹುದು.

ಕುಂಭ: ಇಂದು ನಿಮಗೆ ಒಳ್ಳೆಯ ವಾರ್ತೆ ಸಿಗಬಹುದು. ಪ್ರಭಾವಿ ವ್ಯಕ್ತಿಯ ಸಲಹೆಯನ್ನು ನೀವು ಪಡೆಯುವಿರಿ. ಲಾಭ‌ವನ್ನು ಪಡೆಯಲು ಹೊಸ ಮಾರ್ಗಗಳು ಗೊತ್ತಾಗಬಹುದು. ಆಮಿಷಕ್ಕೆ ಒಳಗಾಗಿ ಕೆಟ್ಟದ್ದನ್ನು ಮಾಡಬಹುದು. ನೀವು ಆಸ್ತಿಯ ವಿಷಯದ ಬಗ್ಗೆ ನಿಮ್ಮವರಿಗೆ ಹೆಮ್ಮೆಯಾಗಲಿದೆ. ಬಹಳ ದಿನಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಕೆಲಸಕ್ಕೆ ವೇಗ ಸಿಗಲಿದೆ. ನಿಮ್ಮ ಅಮೂಲ್ಯವಾದ ವಸ್ತುವನ್ನು ರಕ್ಷಣೆ ಮಾಡಿಕೊಳ್ಳಿ. ಕುಟುಂಬದಲ್ಲಿ ಒಡಕು ಬರುವಂತೆ ಕಾಣಬಹುದು. ಮನೆಯ ಹಿರಿಯರಾದ ತಾವು ಅದನ್ನು ಸರಿ‌ಮಾಡಿಕೊಳ್ಳಿ. ಕೋಪದಲ್ಲಿ ಹೇಳಿ‌ದ‌ ಮಾತಿನಿಂದ ನಿಮಗೆ ಮುಜುಗರವಾಗಬಹುದು. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ.

ಮೀನ: ಕುಟುಂಬದಲ್ಲಿ ನಿಮ್ಮ ಮೇಲಿನ ಕಾಳಜಿಯನ್ನು ಕಾಣಬಹುದು. ವ್ಯಾಪಾರಸ್ಥರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಸೋಲುವಿರಿ. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ಸಮಯಕ್ಕೆ ಪೂರೈಸುವಿರಿ. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವ ಸಾಧ್ಯತೆ ಇದೆ.‌ ಸದಾ ಉದ್ವೇಗದಲ್ಲಿಯೇ ಇರುವ ನಿಮಗೆ ಇನ್ನೊಂದಿಷ್ಟು ಕೆಲಸಗಳು ಬಂದಾವು. ಆಸಕ್ತಿ ಇಲ್ಲದಿದ್ದರೂ ನೀವು ಅದನ್ನು ಮಾಡಬೇಕಾದೀತು. ದಾಂಪತ್ಯದಲ್ಲಿ ಎದುರು ಸುಖವಿದ್ದರೂ ಅಂತರಂಗದಲ್ಲಿ ಸಂಶಯಗಳು ಇಬ್ಬರನ್ನೂ ಸಂತೋಷವಾಗಿ ಇಡಲು ಬಿಡದು.

-ಲೋಹಿತಶರ್ಮಾ ಇಡುವಾಣಿ (ವಾಟ್ಸ್​ಆ್ಯಪ್-8762924271)