Nithya Bhavishya: ಮನಸ್ಸಿಗೆ ಹಿತವೆನ್ನಿಸುವ ಕೆಲಸ ಮಾಡಿ, ಇಲ್ಲವಾದರೆ ಕೊರಗಬೇಕಾದೀತು

|

Updated on: Mar 26, 2023 | 5:00 AM

ಇಂದಿನ (2023 ಮಾರ್ಚ್ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nithya Bhavishya: ಮನಸ್ಸಿಗೆ ಹಿತವೆನ್ನಿಸುವ ಕೆಲಸ ಮಾಡಿ, ಇಲ್ಲವಾದರೆ ಕೊರಗಬೇಕಾದೀತು
ಪ್ರಾತಿನಿಧಿಕ ಚಿತ್ರ
Image Credit source: abplive.com
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ :ಭಾನು, ತಿಥಿ : ಪಂಚಮೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಪ್ರೀತಿ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 05 :11 ರಿಂದ 06:47ರವರೆಗೆ, ಯಮಘಂಡ ಕಾಲ 12:38 ರಿಂದ 02:09ರ ವರೆಗೆ, ಗುಳಿಕ ಕಾಲ 03:40 ರಿಂದ 05: 11ರ ವರೆಗೆ.

ಮೇಷ: ಇಂದು ಸುತ್ತಾಟಕ್ಕೆಂದು ಹೋಗಲಿದ್ದೀರಿ. ಕಡಿಮೆ ವೆಚ್ಚದಲ್ಲಿ ಹೆಚ್ಚು ಸಂಪಾದಿಸುವ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ಪ್ರಯತ್ನಿಸಿ. ಹಿರಿಯರ ಹಾರೈಕೆ ನಿಮಗೆ ಸಿಗಲಿದೆ. ಕಛೇರಿಯ ಕೆಲಸಕ್ಕೂ ಸಮಯ ಸಿಗದೇ ಒತ್ತಡದಲ್ಲಿ ಇರುವಿರಿ. ಕಲಹವಾಗಿ ಸಂಗಾತಿಯಿಂದ ದೂರವಿರಬೇಕಾದೀತು. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಸಾವಾಗಲಿದೆ. ಕೃಷಿಯಲ್ಲಿ ಇಂದು ಎಂದಿಗಿಂತ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಖರ್ಚನ್ನು ಕಡಿಮೆ ಮಾಡಿಕೊಳ್ಳಿ. ಬಾಯಿ ಚಪಲಕ್ಕೆ ಆಹಾರವನ್ನು ತಿಂದು ಆರೋಗ್ಯವು ಹಾಳಾಗಲಿದೆ.

ವೃಷಭ: ನಿಮ್ಮ ಅಧಿಕವಾದ ಮಾತು ಕೇಳುವವರಿಗೆ ಹಿಂಸೆ ಕೊಡಬಹುದು. ಅಪರೂಪದ ವ್ಯಕ್ತಿಗಳ ಭೇಟಿಯಾಗುವುದು. ಆಪ್ತರ ಜೊತೆ ಮಾತುಕತೆಗಳು ಆಗಬಹುದು. ಮನಸ್ಸಿಗೆ ಹಿತವಾದ ಕೆಲಸವನ್ನು ಮಾಡಿ. ಇಲ್ಲವಾದರೆ ಕೊರಗಬೇಕಾದೀತು. ಉತ್ತಮ ಆಹಾರವನ್ನು ಸೇವಸಲಿದ್ದೀರಿ. ಅಹಿತಕರವಾದ ಘಟನೆಯು ನಿಮ್ಮನ್ನು ಕೆಲವು ಕಾಲ ಬೇಸರಗೊಳಿಸಬಹುದು. ನೂತನವಸ್ತ್ರಗಳ ಖರೀದಿಯನ್ನು ಮಾಡುವಿರಿ. ಉತ್ತಮವಾದ ಆಲೋಚನೆಗಳು ನಿಮಗೆ ಬರಲಿದ್ದು ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ.

ಮಿಥುನ: ಇಂದು ಕುಟುಂಬದವರ ಮಾತಿನ ಅಲಕ್ಷ್ಯದಿಂದ ತೊಂದರೆಯಾಯಿತು ಎಂದನಿಸುವುದು. ಹಿರಿಯರಿಗೆ ತೊಂದರೆಯನ್ನು ಕೊಡಲು ಹೋಗಬೇಡಿ. ಯಶಸ್ಸು ನಿಮಗೆ ಬೇಡವೆಂದೆನಿಸಬಹುದು. ಯಾರ ಜೊತೆಗೂ ಇರಲು ನೀವು ಇಷ್ಟಪಡುವುದಿಲ್ಲ. ನಿದ್ರೆಯಲ್ಲಿ‌ ಬಿದ್ದ ದುಶಸ್ವಪ್ನವು ನಿಮ್ಮನ್ನು ಚಿಂತೆಗೆ ತಳ್ಳುವುದು. ಗೃಹನಿರ್ಮಾಣ ಕಾರ್ಯವನ್ನು ಆರಂಭಿಸಬಹುದು. ನಿಮ್ಮ ಕೆಲಸಕ್ಕೆ ಯೋಗ್ಯವಾದ ಪ್ರಶಂಸೆಗಳು ಸಿಗಲಿವೆ. ಅಹಾರದಿಂದ ಆರೋಗ್ಯವು ಕಡುವುದು. ಇನ್ನೊಬ್ಬರ ಬಗ್ಗೆ ಸಲ್ಲದ ಮಾತುಗಳನ್ನು ಆಡುವಿರಿ.

ಕಟಕ: ಇಂದು ಮಾಡಲೇಬೇಕಾದ ಕೆಲಸವನ್ನು ಮಾಡದೇ ಸುಮ್ಮನಿರುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಅಕ್ಕಪಕ್ಕದವರ ಜೊತೆ ಅಸಮಾಧಾನ ವ್ಯಕ್ತವಾಗುವುದು. ಪ್ರಾಣಿಗಳ ಜೊತೆ ಸಮಯವನ್ನು ಕಳೆಯುವ ಮನಸ್ಸು ಮಾಡುವಿರಿ. ಊರಿನ ಉತ್ಸವದಲ್ಲಿ ಭಾಗಿಯಾಗುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವ ಹುನ್ನಾರ ನಡೆಸುವಿರಿ. ಕೃಷಿಕರಿಗೆ ತಮ್ಮ ಬೆಳೆಗಳಿಂದ ಲಾಭವಾಗಬಹುದು. ರಾಜಕೀಯವ್ಯಕ್ತಿಗಳಾಗಿದ್ದರೆ ಇಂದು ಜನಸೇವೆಯನ್ನು ಮಾಡುವಿರಿ. ಮಕ್ಕಳು ನಿಮ್ಮನ್ನು ಇಷ್ಟ ಒಡುವರು.‌ ಅವರ ಜೊತೆ ಕಾಲ ಕಳೆಯಿರಿ.

ಸಿಂಹ: ಆತಂಕಕಾರಿ ವಿಚಾರವೊಂದು ನಿಮಗೆ ತಿಳಿಯಲಿದೆ. ಈಗಿರುವ ಕೆಲಸವನ್ನು ಬಿಟ್ಟು ಸ್ವಂತ ಉದ್ಯೋಗಕ್ಕೆ ತೊಡಗಬಹುದು. ಸಂತೋಷವಾಗಿರಲು ಬೇಕಾದಂತೆ ನಿಮ್ಮ ಶ್ರಮವನ್ನು ಇಟ್ಟುಕೊಳ್ಳಿ.‌ ಬಂಧುಗಳ ಭೇಟಿ ಸ್ವಲ್ಪ ಕಿರಿಕಿರಿ ಎನಿಸಿದರೂ ಅನಿವಾರ್ಯವಾಗಿ ಸುಮ್ಮನಿರುವಿರಿ. ಮನಸ್ಸಿಗೆ ಬುದ್ಧಿಗೆ ಕೆಲಸವನ್ನು ಕೊಡಬೇಡಿ. ಧನಾಗಮನದ ವಾರ್ತೆಯು ಇರಲಿದೆ. ಮರಗೆಲಸದವರಿಗೆ ಉತ್ತಮ ಕೆಲಸಗಳು ಸಿಗಲಿವೆ. ಜನರ ನಡುವೆ ಇರಲು ಬಯಸುವಿರಿ. ಉನ್ನತ ಹುದ್ದೆಯ ಆಕಾಂಕ್ಷಿಯಾಗಿದ್ದರೆ ಪ್ರಯತ್ನಶೀಲರಾಗಿ, ಪಡೆದುಕೊಳ್ಳುವ ಸಾಧ್ಯತೆ ಇದೆ.

ಕನ್ಯಾ: ಇಂದು ಇಷ್ಟು ದಿನ ನಂಬಿ ಬಂದಿದ್ದ ಆಸ್ತಿಯು ಕೈ ತಪ್ಪುವ ಸಾಧ್ಯತೆ ಇದೆ. ಸಹನೆಯನ್ನು ಕಳೆದುಕೊಳ್ಳುವ ಸಂದರ್ಭದಲ್ಲಿ ನಿಮಗೆ ಎಚ್ಚರಿಕೆ ಇರಲಿ. ಸರ್ಕಾರಿ ಕಾರ್ಯಗಳು ಹಿಂದೆ ಬೀಳಲಿವೆ. ಅನಿವಾರ್ಯವಾಗಿ ಮಾಡಿದ ಸಣ್ಣ ಸಾಲವು ಇಂದು ದೊಡ್ಡದಾಗಿದೆ. ಇನ್ನೂ ಸಾಲಕ್ಕೆಂದು ಇನ್ನೊಬ್ಬರ ಬಳಿ ಕೈ ಚಾಚ ಬೇಕಾಗಬಹುದು.‌ ಕಛೇರಿಯಲ್ಲಿ ನೀವಿಂದು ಸ್ವತಂತ್ರರು. ಅಂಕೊಂಡಂತೆ ಆಗಲಿಲ್ಲ ಎಂದು ಬೇಸರಪಡಬೇಡಿ. ಮನೋಬಲವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಿ. ಆಗುವುದನ್ನು ಒಮ್ಮನಸ್ಸಿನಿಂದ ಒಪ್ಪಿಕೊಳ್ಳಿ. ಆರ್ಥಿಕವಿಚಾರದಲ್ಲಿ ದಂಪತಿಗಳ ನಡುವೆ ಮನಸ್ತಾವಿರಲಿದೆ.

ತುಲಾ: ವಿದೇಶಕ್ಕೆ ಸಂಬಂಧಪಟ್ಟ ವ್ಯವಹಾರವು ಸಿಗುವ ಸಾಧ್ಯತೆ ಇದೆ. ಆನಾರೋಗ್ಯವು ಸ್ವಲ್ಪ ಕಿರಿಕಿರಿಯನ್ನು ಮಾಡಲಿದೆ. ವ್ಯಾಪಾರದಲ್ಲಿ ಮಂದಗತಿ ಇರಲಿದೆ. ಯಂತ್ರೋಪಕರಣದ ಮಾರಾಟಗಾರಿಗೆ ಲಾಭವು ಆಗುವುದು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ಕೀರ್ತಿಯನ್ನು ಗಳಿಸುವರು. ನಿಮಗೆ ಅಪಮಾನವಾಗುವ ಕೆಲಸವು ನಡೆಯಬಹುದು. ಸ್ತ್ರೀಸಂಬಂಧವಾದ ಅಪವಾದಗಳು ಬರಬಹುದು. ಬ್ಯಾಂಕ್ ಉದ್ಯೋಗದಲ್ಲಿ ಸ್ಥಾನವು ದಲಾವಣೆಯಾಗಲಿದೆ. ಮಾನಸಿಕ ಕಿರುಕುಳವನ್ನು ಅನ್ಯರಿಂದ ಅನುಭವಿಸುವಿರಿ. ಹೊಸತನ್ನು ಮಾಡಲು ಹೋಗಿ ಮುಗ್ಗರಿಸುವಿರಿ. ಸದ್ಯ ನಿಮ್ಮ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಿ.

ವೃಶ್ಚಿಕ: ನಿಮ್ಮ‌ ಕರ್ತವ್ಯಗಳನ್ನು ಮರೆತಿದ್ದು, ಅದನ್ನು ಬೇರೆಯವರು ನೆನಪಿಸುವರು. ಅದು ನಿಮಗೆ ಕೋಪಕ್ಕೆ ಕಾರಣವಾದೀತು. ಕುಟುಂಬಕ್ಕೆ ಆಗಬೇಕಾದ ಕೆಲಸಗಳಿಂದ ಖರ್ಚುಗಳು ಹೆಚ್ಚಾಗಬಹುದು. ಯಾತ್ರೆಯನ್ನು ಮಾಡಲಿದ್ದೀರಿ. ಖರ್ಚನ್ನು ನಿಯಂತ್ರಿಸುವುದಕ್ಕಾಗಿ ನಿಮ್ಮ ಅವಶ್ಯಕತೆಗಳನ್ನು ಸದ್ಯ ನಿಲ್ಲಿಸುವಿರಿ. ಕ್ರೀಡೆಯಲ್ಲಿ ಮನಸ್ಸು ಇಡುವಿರಿ. ಲೇಖಕರು, ಸಾಹಿತಿ, ಪತ್ರ ಕರ್ತರಿಗೆ ಒಳ್ಳೆಯ ಸಮಾಚಾರ ಸಿಗಲಿದೆ.‌ ಪ್ರಶಸ್ತಿಗಳು ನಿಮ್ಮ ಕಾರ್ಯವನ್ನು ಹುಡುಕಿಕೊಂಡು ಬರಬಹುದು. ಓಡಾಟದ ಸುಸ್ತು ನಿಮಗೆ ಅನಾರೋಗ್ಯವಾಗಲಿದೆ. ವಿಶ್ರಾಂತಿಯನ್ನು ಪಡೆಯುವುದು ಉತ್ತಮ.

ಧನು: ಸಹೋದರರ ನಡುವೆ ಸಣ್ಣ ಭಿನ್ನಾಭಿಪ್ರಾಯ ಬರಲಿದೆ‌. ಮನೆಯ ಹಿರಿಯರಿಂದ ಅದು ಸರಿಯಾಗುವುದು. ಉದ್ಯೋಗದ ಸ್ಥಳದಿಂದ ನಿಮ್ಮನ್ನು ಕೈ ಬಿಡವ ಸಾಧ್ಯತೆ ಇದೆ. ನಿರಾಸೆಯು ಮೂಡಲಿದೆ. ವ್ಯಾಪರವು ಅಧೋಗತಿಗೆ ಹೋಗಲಿದೆ. ಶತ್ರುಗಳ ಪಿತೂರಿಯ ಕುರಿತು ನಿಮಗೆ ಶಂಕೆ ಉಂಟಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಕುರಿತು ಆತಂಕವಿರಬಹುದು. ಬುದ್ಧಿಗೆ ಸದ್ವಿಚಾರಗಳನ್ನು ನೀಡಿ. ಸರ್ಕಾರದ ಹಿರಿಯ ಅಧಿಕಾರಿಗಳ ಭೇಟಿಯಾಗಲಿದೆ‌. ಅನ್ಯರ ಒತ್ತಾಯಕ್ಕೆ ನೀವು ನಿಮ್ಮನ್ನು ಬಿಟ್ಟುಕೊಡಲಿದ್ದೀರಿ. ಗುರುಸಮಾಧಿಗೆ ನಮಸ್ಕರಿಸಿ ಬನ್ನಿ.

ಮಕರ: ಸ್ನೇಹಿತರ ಬಳಗವು ನಿಮಗೆ ಒದಗುವ ಸಂಕಟದಲ್ಲಿ ಇರಲಿದೆ. ಅದನ್ನು ಪರಿಹರಿಸಿಕೊಂಡು ಮುಂದೆ ಸಾಗುವುದು ಒಳ್ಳೆಯದು. ತಂತ್ರಜ್ಞರಿಗೆ ಉತ್ತಮ ಕೆಲಸ ಸಿಗಲಿದೆ ಅಥವಾ ಈಗಾಗಲೇ ಕೆಲಸ ಮಾಡುತ್ತಿದ್ದರೆ ಬಡ್ತಿ ಸಿಗಲಿದೆ. ಹೊಸದಾದ ವಾಹನವನ್ನು ಖರೀದಿ ಮಾಡಲಿದ್ದೀರಿ. ಸಾಲದ ಹೊರೆಯನ್ನು ಕಂಡು ಚಿಂತೆಗೆ ಒಳಗಾಗಬೇಕಾಗಬಹುದು. ಅವಸರವನ್ನು ಬಿಟ್ಟು ನಿಧಾನವಾಗಿ ಆಲೋಚಿಸಿ. ರಕ್ಷಣಪಡೆಗೆ ಸೇರುವವರಿಗೆ ಅವಕಾಶಗಳು ಸಿಗಲಿವೆ. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಆಸಕ್ತಿಯುಳ್ಳವರಾಗುವಿರಿ. ಒಂದೇ ಕೆಲಸ ನಿಮಗೆ ನಿರಾಸಕ್ತಿಯನ್ನು ಮೂಡಿಸೀತು. ಹನುಮಾನ್‌ ಚಾಲೀಸ್ ನಿಮ್ಮ ಜಾಡ್ಯವನ್ನು ದೂರಮಾಡೀತು.

ಕುಂಭ: ನಿಮ್ಮ ಮಾತನ್ನು ನಿಮ್ಮವರು ಹಾಗೂ ಇತರರು‌ ಒಪ್ಪುವರು. ಅಚಾತುರ್ಯದಿಂದ ಅನಾಹುವಾದೀತು. ಆಲಸ್ಯದಿಂದ ಮೇಲೆಳಬೇಕಾದ ಸ್ಥಿತಿ ಇದೆ. ನಿಮ್ಮ ಪ್ರತಿಭೆಯ ಅನಾವರಣಕ್ಕೆ ಸಕಾಲವಾಗಿದೆ. ನಿಮ್ಮವರನ್ನು ಬಂಧಿಸಿಡುವ ಕೆಲಸಕ್ಕೆ ಹೋಗಬೇಡಿ. ಪ್ರೀತಿಯಿಂದ ಕೊಟ್ಟ ಉಡುಗೊರೆಯನ್ನು ಸ್ವೀಕರಿಸುವಿರಿ. ನಿಮ್ಮ ಸಹಕಾರದ ಗುಣವು ಎಲ್ಲರಿಗೂ ಮೆಚ್ಚುಗೆಯಾಗುವುದು. ಕೆಲಸವನ್ನು ಒಂದಾದಮೇಲೊಂದರಂತೆ ಮಾಡಿಕೊಳ್ಳಿ. ನಿಮ್ಮ ಕೆಲಸಕ್ಕೆ ಸರಿಯಾಗಿ ಹಣವು ಹರಿದು ಬರುವುದು. ಎಲ್ಲವೂ ಸರಿಯಾಗಿ ಆಗುವುದು. ಅತಿಯಾದ ನಿರೀಕ್ಷೆ ಬೇಡ. ಶಿವಾಲಯಕ್ಕೆ ಹೋಗು ಬಿಲ್ವಾರ್ಚನೆ ಮಾಡಿ.

ಮೀನ: ಇಂದು ನೀವು ಆದಾಯದ ನಿರೀಕ್ಷೆಯಲ್ಲಿ ಇರಬಹುದು. ಬರಬೇಕಾದ ಹಣವೂ ಬಂದೀತು. ಅತ್ಯಂತ ಶ್ರಮವಹಿಸಿ ಕಾರ್ಯವನ್ನು ಮಾಡಲಿದ್ದೀರಿ. ಸ್ನೇಹಿತರ ಸಹಾಯವೂ ದೊರೆಯಲಿದೆ. ದಾಂಪತ್ಯದಲ್ಲಿ ಪರಸ್ಪರ ಮನಸ್ತಾಪವೆದ್ದು ತಣ್ಣಗಾಗಲಿದೆ. ನಾಚಿಕೆಯನ್ನು ಬಿಟ್ಟು ಕೇಳಿದರೆ ನಿಮಗೆ ಬೇಕಾದ ವಸ್ತುಗಳು ಸಿಗಬಹುದು.‌ ಹೆದರಿಕೆಯ ವಾತಾವರವಿರಲಿದೆ. ಉದ್ವೇಗಕ್ಕೆ ನಾನಾ‌ ಕಾರಣಗಳಿದ್ದರೂ ಸಮಾಧನಾಚಿತ್ತದಿಂದ ಇರಲು ಪ್ರಯತ್ನಿಸಿ. ನಿಮಗೆ ನಿಮ್ಮ ಕೆಲಸದಿಂದ ಆದ ತಪ್ಪುಗಳು ಕಾಡಬಹುದು.‌ ಅಪ್ರಯೋಜನದ ಮಾತುಗಳಿಂದ ನೀವು ಅಪಹಾಸ್ಯಕ್ಕೆ ಒಳಗಾಗುವಿರಿ. ಯಾರ ಮೇಲಿರುವ ಬೇಸರವನ್ನು ಮತ್ಯಾರದೋ ಮೇಲೆ ತೋರಿಸಿ ನಿಮ್ಮವರ ದ್ವೇಷಕ್ಕೆ ಕಾರಣವಾಗಬೇಡಿ.

ಲೋಹಿತಶರ್ಮಾ ಇಡುವಾಣಿ