Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ

ನೀವು ಧನು, ಮಕರ, ಕುಂಭ, ಮೀನಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮಾರ್ಚ್ 25) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
ಇಂದಿನ ರಾಶಿ ಭವಿಷ್ಯImage Credit source: freepik
Follow us
Rakesh Nayak Manchi
|

Updated on: Mar 25, 2023 | 6:30 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 25 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಭರಣೀ, ಯೋಗ : ವಿಷ್ಕಂಭ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಬೆಳಗ್ಗೆ 06 ಸಂಜೆ 42 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:36 ರಿಂದ 11:07ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:09 ರಿಂದ ಮಧ್ಯಾಹ್ನ 03:40ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:34 ರಿಂದ 08:05ರ ವರೆಗೆ.

ಧನು: ಇಂದು ದುಶ್ಚಟಕ್ಕೆ ದಾಸರಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಭಡ್ತಿಯು ಸಿಗಲಿದೆ. ಮಕ್ಕಳಿಂದ ಸಂತೋಷವಾರ್ತೆಯು ಇರುತ್ತದೆ. ಅಪರಿಚಿತ ವ್ಯಕ್ತಿಗಳ ಸಹವಾಸದಿಂದ ನಿಮಗೆ ವಂಚನೆಯಾಗಬಹುದು. ಕೃಷಿಯಲ್ಲಿ ನೀವು ಮಾಡಿದ ಕೆಲಸವು ಪ್ರಶಂಸೆಗೆ ಒಳಗಾಗುವುದು. ಉತ್ತಮ ಇಳುವರಿಯನ್ನು ಪಡೆಯುವಿರಿ. ವಾಹನದಲ್ಲಿ ಸಂಚಾರ ಮಾಡಿ ಖುಷಿ ಪಡುವಿರಿ. ಆಕಸ್ಮಿಕವಾದ ಆರ್ಥಿಕವಾದ ಸವಾಲು ಬಂದು, ಮಿತ್ರರ ಸಹಾಯವನ್ನು ಪಡೆಯುವಿರಿ. ಬಂಧುಗಳ ಮನೆಯಲ್ಲಿ ಇಂದು ನಿಮ್ಮ ವಾಸವಿರಲಿದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿಯನ್ನು ತೋರಿಸದೇ ಇರುವುದರಿಂದ ಬೈಯ್ಯುವಿರಿ. ಆಲಸ್ಯದಿಂದ ಹೊರಬರಬೇಕಾದ ಸ್ಥಿತಿಯು ಇದೆ. ಹೊಸ ಆಲೋಚನೆಗೆ ನೀವು ತೆರೆದುಕೊಳ್ಳುವಿರಿ.

ಮಕರ: ಇಂದು ಅನಗತ್ಯವಾಗಿ ಸುತ್ತಾಟವಾಗುವುದೇ ವಿನಃ ಪ್ರಯೋಜನವಾಗದು. ಇದರಿಂದ ಸಿಟ್ಟೂ ಹತಾಶೆಯೂ ಇರಲಿದೆ. ನಿಧಾನವಾಗಿ ಸಾಗುವ ಸಾಗುತ್ತಿರುವ ಕೆಲಸದಿಂದ ಬೇಸರವಾಗಲಿದೆ. ತಂದೆಯೊಂದಿಗೆ ಕಲಹವಾಗಬಹುದು. ಮನಸ್ಸು ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ದೈವದ ಸಹಾಯವನ್ನು ನೀವು ಪಡೆಯಬೇಕಾಗಿರುವುದು ಅನಿವಾರ್ಯ. ಆಪ್ತರ ಸಲಹೆಗಳು ನಿಮಗೆ ಅನುಕೂಲಕರವಾಗಿರಲಿವೆ. ಪುಣ್ಯಕ್ಷೇತ್ರಗಳ ಭೇಟಿಯಿಂದ ನಿಮಗೆ ಸಂತಸ ಸಿಗಲಿದೆ‌. ಶಿಕ್ಷಕವೃತ್ತಿಯವರಿಗೆ ಮಕ್ಕಳಿಂದ ಗೌರವಾದರಗಳು ಸಿಗಲಿವೆ. ನಿಮ್ಮನ್ನು ಪ್ರೀತಿಮಾಡಿಕೊಳ್ಳಲಿದ್ದಾರೆ. ನಿಮ್ಮವರಿಂದಲೇ ವಂಚಿತರಾಗುವಿರಿ. ವಿಶ್ವಾಸವು ಇಲ್ಲದೇ ಹೋಗಿ ಸಂಬಂಧವೂ ಒಡೆದುಹೋಗಲಿದೆ. ರಾಮ ಸೀತೆಯರನ್ನು ಒಂದು ಮಾಡಿದ ಸುಂದರಕಾಂಡದ ಹನುಮನನ್ನು ಪೂಜಿಸಿ. ಮಾನಸಿಕ ಒಡಕುಗಳು ದೂರವಾಗಲಿದೆ.

ಕುಂಭ: ಸ್ತ್ರೀಯರು ಇಂದು ಅನೇಕ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಶ್ರಮಕ್ಕೆ ದೈವವು ಅನುಕೂಲವನ್ನು ಮಾಡಲಿದೆ‌. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಧನಾಗಮನವನ್ನು ನೀವು ನಿರೀಕ್ಷಿಸಬಹುದು. ಸಣ್ಣ ಉಧಯಮವನ್ನು ಮಾಡುವವರಗೆ ಸ್ವಲ್ಪ ಹೆಚ್ಚು ಆದಾಯವು ದೊರೆಯಲಿದೆ. ಅಂತರ್ಜಾಲದ ಜಾಹಿರಾತುಗಳನ್ನು ನೋಡಿ ಮನಸೋತು ಏನನ್ನೂ ಮಾಡಬೇಡಿ. ಅಪರಿಚಿತ ದೂರವಾಣಿಯು ನಿಮ್ಮನ್ನು ದಿಗಿಲುಗೊಳಿಸಬಹುದು. ಸುಳ್ಳಾಡಿ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಅನಾರೋಗ್ಯದಿಂದ ಕಿರಿಕಿರಿ ಅನುಭವಿಸಿದರೆ ಇಂದು ಸ್ವಲ್ಪ ಕಡಿಮೆ ಆಗಲಿದೆ. ಶನೈಶ್ಚರನು ನಿಮ್ಮ ಮಾನಸಿಕ ಸಂಕಷ್ಟವನ್ನು ಪರಿಹರಿಸುವನು.

ಮೀನ: ಮನಸ್ಸಿನ ಗೊಂದಲವು ಇಂದು ಪರಿಹಾರವಾಗಲಿದೆ. ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ದುಡುಕಿನ ನಿರ್ಧಾರಗಳನ್ನು ತಗೆದುಕೊಂಡು ಸಂಕಟಪಡಬೇಕಾದೀತು. ನಿಮ್ಮವರೆದು ಕಠೋರ ಮಾತುಗಳನ್ನು ಆಡುವರಿ. ಸುತ್ತಾಡುವ ಮನಸ್ಸಿರಲಿದೆ. ಗಂಡನಿಗೆ ವಿರುದ್ಧವಾದ ಕೆಲಸವನ್ನು ಮಾಡಿ ಮಾತಿಗೆ ಗುರಿಯಾಗುವಿರಿ. ನಿಮ್ಮನ್ನು ನಿಂದಿಸಲು ಕೆಲವು ಹೊಂಚು ಹಾಕಿದ್ದು ತಿಳಿದು ಅದನ್ನು ಸರಿ ಮಾಡಿಕೊಳ್ಳುವಿರಿ. ಬಂಧುಗಳು ನಿಮಗೊದಗಿದ ಸಂಕಟಕ್ಕೆ ಜೊತೆಯಾಗುವರು. ರಾಜಕೀಯಕ್ಷೇತ್ರವು ನಿಮಗೆ ಕೈಹಿಡಿಯಬಹುದು. ಆದಷ್ಟು ಆಲೋಚಿಸಿ ಮುಂದಡಿ ಇಡಿ. ತಾಳ್ಮೆ ಇರಲಿ. ಗುರುವಿನ ದರ್ಶನದಿಂದ ಕೆಲವು ಸಮಸ್ಯೆಗಳು ಪರಿಹಾರವಾದೀತು.

-ಲೋಹಿತಶರ್ಮಾ ಇಡುವಾಣಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?