Nithya Bhavishya: ಈ ರಾಶಿಯವರಿಗೆ ಸಾಲಬಾಧೆ ಅತಿಯಾಗಿ ಕಾಡಲಿದೆ
ಇಂದಿನ (2023 ಮಾರ್ಚ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ :ಸೋಮ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಆಯುಷ್ಮಾನ್, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 08 :04 ರಿಂದ 09:35ರವರೆಗೆ, ಯಮಘಂಡ ಕಾಲ 11:07ರಿಂದ 12:38ರ ವರೆಗೆ, ಗುಳಿಕ ಕಾಲ 02:09 ರಿಂದ 03:40ರ ವರೆಗೆ.
ಮೇಷ: ನಿಮಗೆ ಇಂದು ಉತ್ಸಾಹವು ಕಡಿಮೆ ಇದ್ದು, ಸ್ನೇಹಿತರು ನಿಮಗೆ ಉತ್ಸಾಹವನ್ನು ತುಂಬಲಿದ್ದಾರೆ. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ಸೋಲನ್ನು ಅನುಭವಿಸಬೇಕಾಗಬಹುದು. ನಿಮ್ಮ ಬುದ್ಧಿಯಿಂದ ನಿಮಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಳ್ಳುವಿರಿ. ಆರ್ಥಿಕವಾಗಿ ಸುಧಾರಣೆಯಾಗಲಿದೆ. ಆಕಸ್ಮಿಕವಾಗಿ ಬಂದ ವಾರ್ತೆಯು ನಿಮಗೆ ಖುಷಿಯನ್ನೂ ಬೇಸರವನ್ನೂ ತರಬಹುದು. ಆಪ್ತರ ಜೊತೆ ದೂರಪ್ರಯಾಣ ಮಾಡಲಿದ್ದೀರಿ. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಬೇಕಿದೆ.
ವೃಷಭ: ಮನೆಯಿಂದ ದೂರವಿರುವ ನಿಮಗೆ ಮನೆಯ ಹಂಬಲವಾಗಬಹುದು. ಎಂದೋ ಕೂಡಿಟ್ಟ ಹಣವು ಇಂದು ಉಪಯೋಗಕ್ಕೆ ಬರಲಿದೆ. ವಾಹನದಲ್ಲಿ ಸಂಚಾರವನ್ನು ಮಾಡುವುದರಿಂದ ನಿಮಗೆ ಕೆಲವು ಅನಾನುಕೂಲತೆಗಳು ಆಗಬಹುದು. ನಿಮ್ಮ ಅಜ್ಞಾನದಿಂದ ಆದ ಕೆಲಸಕ್ಕೆ ನೀವೇ ಹೊಣೆಗಾರರಾಗುವಿರಿ. ಮನಸ್ಸಿನಲ್ಲಿಯೇ ಸಂಕಟಪಟ್ಟುಕೊಳ್ಳುವುದನ್ನು ಬಿಟ್ಟು, ಆಪ್ತರ ಜೊತೆ ಹಂಚಿಕೊಳ್ಳಿ. ಮನಸ್ಸು ಹಗುರಾದೀತು. ಕಛೇರಿಯಲ್ಲಿ ನಿಮಗೆ ಹೊಸ ನಾಯಕನು ಬರಲಿದ್ದಾನೆ. ಅವರನ ಜೊತೆ ನಿಮ್ಮ ವರ್ತನೆಯು ಆಪ್ತವಾಗಿ ಇರಲಿದೆ.
ಮಿಥುನ: ಇಲ್ಲ ಸಲ್ಲದ ಯೋಚನೆಗಳಿಂದ ಮನಸ್ಸು ವಿಕಾರವಾಗಲಿದೆ. ಹಿರಿಯರ ಸಲಹೆಯನ್ನು ಪಡೆಯಿರಿ. ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಒತ್ತಡದಲ್ಲಿ ಸಿಲುಕಿಕೊಳ್ಳಬೇಡಿ. ಕೆಲಸದಲ್ಲಿ ಎಂತಹ ಒತ್ತಡವಿದ್ದರೂ ನಿಮ್ಮ ಹತೋಟಿಯಲ್ಲಿ ನೀವಿರಿ. ಕೆಲಸಗಳು ಒಂದೊಂದಾಗಿಯೇ ಮುಗಿಯುವುವು. ನಿಮ್ಮ ಮಾತನ್ನು ಮನೆಯವರು ಒಪ್ಪುವರು. ಸಂತಸ ವಾತಾವರಣವು ಮನೆಯಲ್ಲಿ ಇರುವುದು. ವೃಥಾ ಯಾರ ಮೇಲೂ ಅನುಮಾನಪಡುವುದು ಬೇಡ. ಸುಂದರಜೀವನ ನಮ್ಮ ಪೂರ್ವಜರ ಪುಣ್ಯದ ಫಲವೆಂದು ಇಂದು ಆನ್ನಿಸಬಹುದು.
ಕಟಕ: ವಿದ್ಯಾರ್ಥಿಗಳಿಗೆ ತಂದೆಯಿಂದ ಧನವು ಲಭ್ಯವಾಗಲಿದೆ. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ಅನಾರೋಗ್ಯವಿದ್ದರೂ ಅದನ್ನು ಲೆಕ್ಕಿಸದೇ ನಿಮ್ಮ ಕೆಲಸದದಲ್ಲಿ ತೊಡಗುವಿರಿ. ಪೂರ್ವಾಪರಜ್ಞಾನವಿಲ್ದೇ ಪರರ ನಿಂದನೆಯ ಕಾರ್ಯದಲ್ಲಿ ತಲ್ಲೀನರಾಗಿರುವಿರಿ. ನಿಮ್ಮ ಅಂತರಂಗವು ಸರಿಯಾಗಿ ಇನ್ನೊಬ್ಬರಿಗೆ ತಿಳಿಯುವುದು. ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋಗಬಹುದು. ಒಂಟಿಯಾಗಿರಬೇಕು ಎಂದು ಅನ್ನಿಸುವ ಸಾಧ್ಯತೆ ಇದೆ. ಮನೋಹರವಾದ ಸ್ಥಳಕ್ಕೆ ಹೋಗಿ ಮನಸ್ಸನ್ನು ಸರಿಮಾಡಿಕೊಂಡು ಬನ್ನಿ.
ಸಿಂಹ: ಬಲವಂತದ ಪ್ರೇಮ ಎಲ್ಲಿಯವರೆಗೆ ಇದ್ದೀತು? ನಿಮಗಿಷ್ಟವಾದವರ ಜೊತೆ ನಿಮ್ಮ ಸಮಸ್ಯೆ ಹಾಗೂ ಸಂತೋಷವನ್ನು ಹಂಚಿಕೊಳ್ಳಿ. ಇಂದು ಬಾಯಿ ಚಪಲಕ್ಕೆ ಅಹಿತಕರಚಮವಾದ ಆಹಾರವನ್ನು ಸೇವಿಸುವಿರಿ. ಇಲ್ಲವಾದರೆ ನಿಮಗೇ ಕಂಟಕವಾದೀತು. ನಿರಂತರವಾದ ಶ್ರಮದಿಂದ ಬಳಲಲಿದ್ದೀರಿ. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಬಯಕೆಯನ್ನು ಇಟ್ಟಿಕೊಂಡಿದ್ದೀರಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳಿ. ನಿಮಗೆ ಹಳೆಯ ಘಟನೆಯೊಂದು ಪುನರಾವರ್ತಿತವಾಗಿ ಬಹಳ ಕಾಡಬಹುದು. ಆರೋಗ್ಯದ ಬಗ್ಗೆ ಗಮನಿರಲಿ. ಬೆಳಗ್ಗೆ ಸೂರ್ಯನಿಗೆ ನಮಸ್ಕರಿಸಿ.
ಕನ್ಯಾ: ಉದ್ಯೋಗದ ಸ್ಥಳದಲ್ಲಿ ಮಾತನಾಡುವಾಗ ಯೋಚಿಸಿ. ನಿಮ್ಮ ಮಾತುಗಳು ವೃತ್ತಿಗೆ ಕಂಟಕವನ್ನು ತರಬಹುದು. ಮಹತ್ತ್ವಪೂರ್ಣಗ್ರಂಥವನ್ನು ರಚಿಸಲು ಇಂದು ಮುಂದಾಗಬಹುದು. ನಿಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ರಾಜಕೀಯ ವ್ಯಕ್ತಿಗಳಿಂದ ಪ್ರೇರಿತರಾಗಿ ಕಾರ್ಯವನ್ನು ಮಾಡುವಿರಿ. ಉದ್ಯೋಗವನ್ನು ಬದಲಿಸುವ ನಿರೀಕ್ಷೆಯಲ್ಲಿರುವಿರಿ. ಸರಳ ಸಮಾರಂಭದಲ್ಲಿ ಭಾಗಿಯಾಗಬಹುದು. ಆಹಾರದ ವ್ಯತ್ಯಾಸದಿಂದ ರೋಗಗಳು ಬರಬಹುದು. ಸಮಯವನ್ನು ದುರುಪಯೋಗ ಮಾಡಿಕೊಳ್ಳಿದ್ದೀರಿ.
ತುಲಾ: ಹಲವಾರು ದಿನಗಳಿಂದ ವಾಹನ ಖರೀದಯ ಆಸೆಯನ್ನು ಇಟ್ಟುಕೊಂಡವರಾಗಿದ್ದೀರಿ. ನಿಮ್ಮ ಆಸೆಯು ಪೂರ್ಣಗೊಳ್ಳವು ಸಾಧ್ಯತೆ ಇದೆ. ವಿನಾಕಾರಣ ವಾಗ್ವಾದಗಳು ನಡೆಯಬಹುದು. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಭೂಮಿಯ ವ್ಯವಹಾರದಲ್ಲಿ ನೀವು ಹಣವನ್ನು ಸಂಪಾದಿಸಲಿದ್ದೀರಿ. ಭೂಮಿಗೆ ಸಂಬಂಧಿಸಿದಂತೆ ಸಣ್ಣ ಕಲಹಗಳು ಆಗಬಹುದು. ವ್ಯಾಪಾರವನ್ನು ಬಹಳ ಜಾಣ್ಮೆಯಿಂದ ಮಾಡುವಿರಿ. ಕೈಯ್ಯಲ್ಲಿರುವ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಳ್ಳುವಿರಿ.
ವೃಶ್ಚಿಕ: ನೀವಿಂದು ಹೊಸ ಉದ್ಯೋಗವನ್ನು ಅರಸುತ್ತ ಇದ್ದರೆ ನಿಮ್ಮ ಪಾಲಿಗೆ ಉತ್ತಮ ಉದ್ಯೋಗವು ಸಿಗಲಿದೆ. ಅಥವಾ ಸಿಕ್ಕ ಉದ್ಯೋಗವು ಮುಂದೆ ಅನೇಕ ಲಾಭವನ್ನು ಮಾಡಿ ಕೊಡಲಿದೆ. ವಾಹನಚಾಲನೆ ಮಾಡುವಾಗ ಜಾಗರೂಕರಾಗಿರಿ. ಇನ್ನೊಬ್ಬರಿಂದ ಅಪಘಾತವಾಗಬಹುದು. ಭಯದ ವಾತಾವರಣದಲ್ಲಿ ಇಂದು ಇರಲಿದ್ದೀರಿ. ವಿನಾಕಾರಣ ಸಂತೋಷವಾಗಿ ಇರುವಿರಿ. ಕೆಲಸವು ನಿಧಾನವಾದುದರಿಂದ ನಿಮಗೆ ನಿರಾಸೆಯಾಗಬಹುದು. ವಿನಾಕಾರಣ ಮನೆಯವರನ್ನು ದೂರುತ್ತ ಕುಳಿತುಕೊಳ್ಳಬೇಡಿ. ನಿಮ್ಮ ಕರ್ತವ್ಯವೇನು ಎಂಬುದು ನೀವೇ ನೆನಪಿಗೆ ತಂದುಕೊಂಡು ಮಾಡಿ. ಕುಕ್ಕೆ ಸುಬ್ರಹ್ಮಣ್ಯನನ್ನು ಪಾರ್ಥಿಸಿ.
ಧನು: ಸಾಲಬಾಧೆಯು ನಿಮ್ಮನ್ನು ಅತಿಯಾಗಿ ಕಾಡಲಿದೆ. ಅಷ್ಟೇ ಅಲ್ಲದೇ ಸಾಲ ಕೊಟ್ಟವರೂ ನಿಮ್ಮನ್ನು ದಿನವೂ ಕೇಳುವರು. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಪತ್ನಿಯಿಂದ ಅವಮಾನಕ್ಕೆ ಒಳಗಾಗಬೇಕಾಗಿಬರಬಹುದು. ಭವಿಷ್ಯದ ಕುರಿತು ಆಲೋಚನೆಯಲ್ಲಿ ಮಗ್ನರಾಗಿರುತ್ತೀರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ನಿಮ್ಮಲ್ಲಿ ಒಂದಿಷ್ಟು ಗೊಂದಲಗಳು ಇರಬಹುದು. ವಿವಾಹವಾಗಲು ಬಹಳ ಆತುರಪಡುವಿರಿ. ಗೋಗ್ರಾಸವನ್ನು ಕೊಟ್ಟು ನಿಮ್ಮ ಕಾರ್ಯವನ್ನು ಸುಗಮಗೊಳಿಸಿಕೊಳ್ಳಿ.
ಮಕರ: ಇಂದು ನಿನಗೆ ಹಣಕಾಸಿಗೆ ಸಂಬಂಧಿಸಿದ ತೊಂದರೆಗಳು ಬರಲಿದ್ದು ಅದನ್ನು ಮಿತ್ರರ ಸಹಾಯದಿಂದ ಎದುರಿಸುವಿರಿ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಇಂದು ವಾಹನದ ಸಮಯವು ವ್ಯತ್ಯಾಸವಾದ್ದರಿಂದ ನಡೆಯಬೇಕಾಗ ಸ್ಥಿತಿ ಬರಬಹುದು. ತಂದೆಯ ಜೊತೆ ಉಂಟಾದ ಮನಸ್ತಾಪದಿಂದ ಕಂಗೆಡಲಿದ್ದೀರಿ. ಮಾತುಗಾರರಾಗಿದ್ದರೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮೋಸದಿಂದ ನಿಮ್ಮ ಹಣವು ಕಳೆದುಹೋಗುವುದು. ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಗೌರವಗಳು ಸಿಗಲಿವೆ. ನಿಮ್ಮ ಪ್ರೇಮಪ್ರಕರಣವು ಗಂಭೀರಸ್ಥಿತಿಯನ್ನು ತಲುಪಲಿದೆ. ತಾಳ್ಮೆಯಿಂದ ವ್ಯವಹರಿಸಿ, ಸರಿ ಮಾಡಿಕೊಳ್ಳಿ. ಶನೈಶ್ಚರ ದೇವಾಲಯಕ್ಕೆ ಹೋಗಿ ಎಳ್ಳೆಣ್ಣೆಯ ದೀಪವನ್ನು ಬೆಳಗಿ ಬನ್ನಿ.
ಕುಂಭ: ನೀವು ಸ್ವಂತ ಉದ್ಯೋಗವನ್ನು ಹೊಂದಿದ್ದರೆ ಇಂದು ನೀವು ಲಾಭವನ್ನು ಗಳಿಸಬಹುದಾಗಿದೆ. ಹತ್ತಾರು ವಿಚಾರಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಇಂದು ನೀವು ಬಯಸಿದ್ದನ್ನು ಪಡೆದುಕೊಳ್ಳುವ ತವಕದಲ್ಲಿ ಇರುವಿರಿ. ಅತಿಯಾದ ಆತುರದಲ್ಲಿ ಅನಾಹುತವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಹೊರಗಡೆಗೆ ಊಟಕ್ಕೆ ಹೋಗಲಿದ್ದೀರಿ. ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಕುಟುಂಬದವರ ಜೊತೆ ಸಮಯವನ್ನು ಕಳೆಯುವಿರಿ. ಉಮಾಸಹಿತನಾದ ಶಿವನ ದೇವಾಲಯಕ್ಕೆ ಹೋಗಿ ಅಭಿಷೇಕ ಮಾಡಿಸಿ.
ಮೀನ: ಪಾಲುದಾರಿಕೆಯ ವಿಚಾರದಲ್ಲಿ ಹೆಜ್ಜೆಯನ್ನು ಜಾಗರೂಕತೆಯಿಂದ ಇಡಿ. ನೀವು ಅಂದುಕೊಂಡ ರೀತಿಯಲ್ಲಿ ನಡೆಯದೇ ವಿರುದ್ಧವಾಗಿ ನಡೆಯುವುದನ್ನು ಕಂಡು ನಿರಾಸೆಗೊಳ್ಳುವಿರಿ. ಆರೋಗ್ಯವು ಕೈ ಕೊಡಬಹುದು. ತುರ್ತು ಆಹಬೇಕಾದ ಕೆಲಸಗಳಿಗೆ ತೊಂದರೆಯಾಗಬಹುದು. ಧನಪ್ರಾಪ್ತಿಯು ಆಗುವಂತೆ ಇದ್ದರೂ ಆಗದೇ ಕೈತಪ್ಪಿ ಹೋಗಬಹುದು. ವಿವಾಹಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ. ವಿಶ್ವಾಸಘಾತದಿಂದ ನೋವಾಗಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು. ಮಕ್ಕಳಿಂದ ಪ್ರಶಂಸೆಯು ಸಿಗಲಿದೆ. ಅತ್ಯಾಪ್ತರ ಜೊತೆ ಕಾಲವನ್ನು ಕಳೆಯುವಿರಿ.
ಲೋಹಿತಶರ್ಮಾ ಇಡುವಾಣಿ