ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮೇ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಭರಣೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಹಸ್ತಾ, ಯೋಗ: ವ್ಯಾಘಾತ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ 03:39 ರಿಂದ 05:13ರ ವರೆಗೆ, ಯಮಘಂಡ ಕಾಲ 09: 20 ರಿಂದ 10:55 ವರೆಗೆ, ಗುಳಿಕ ಕಾಲ 12:29 ರಿಂದ 02:04 ರ ವರೆಗೆ.
ಮೇಷ: ಆರೋಗ್ಯವನ್ನು ಕಾಪಾಡಿಕೊಳ್ಳಲೇ ಬೇಕು ಎಂಬ ದೃಢನಿರ್ಧಾರದಿಂದ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸುವಿರಿ. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು. ತೀರ್ಥಕ್ಷೇತ್ರವನ್ನು ದರ್ಶನ ಮಾಡುವ ಮನಸ್ಸಾಗುವುದು. ಸ್ತ್ರೀಯರು ನಿಮ್ಮನ್ನು ಪ್ರಶಂಸಿಸಿಯಾರು. ಗುಡ್ಡ ಬೆಟ್ಟಗಳ ಏರುವ ಸಾಹಸಕ್ಕೆ ಹೋಗುವಿರಿ. ನಿಮ್ಮನ್ನು ಅಪರಿಚಿತರೊಬ್ಬರು ಮಾತನಾಡಿಸಿಯಾರು. ಕೈಲಾದ ಸಹಾಯವನ್ನು ಮಾಡಿ. ಸಾಧ್ಯವಾದರೆ ನಿತ್ಯವೂ ಅನ್ನದಾನ ನಡೆಯುವ ಸ್ಥಳಕ್ಕೆ ಹೋಗಿ ಸುವಸ್ತುವನ್ನು ಕೊಡಿ. ಸುಳ್ಳಾಡುವವರ ಬಗ್ಗೆ ಅತಿಯಾದ ಕೋಪವಿರಲಿದೆ.
ವೃಷಭ: ಹಳೆಯ ವಿಚಾರಗಳನ್ನು ಪತಿಯಿಂದ ಕೇಳುವ ಸಂದರ್ಭ ಬರಬಹುದು. ಸಾಮಾಜಿಕವಾದ ಕೆಲಸವನ್ನು ಮಾಡುವವರಿಗೆ ತಾಳ್ಮೆ ಮುಖ್ಯವಾಗಿ ಬೇಕಾಗಿದೆ. ಸ್ವಭಾವವನ್ನು ತಿದ್ದಿಕೊಳ್ಳಲು ಇಷ್ಟಪಟ್ಟರೂ ನಿಮ್ಮ ಜೊತೆಗಿರುವವರು ಅದನ್ನು ಬಿಡಲಾರರು. ನಿಮ್ಮನ್ನು ಛೇಡಿಸುತ್ತ ಹಾಸ್ಯ ಮಾಡುವರು. ಸಾಲವನ್ನು ಮಾಡಬೇಕಾಗಿ ಬಂದರೆ ಬಹಳ ಎಚ್ಚರಿಕೆಯಿಂದ ಜನರನ್ನು ನೋಡಿ ಮಾಡಿ. ವಾಹನದಲ್ಲಿ ಓಡಾಟ ಮಾಡುವುದರಿಂದ ಸಂತೋಷವಾದೀತು. ಯಾರದೋ ದಾಕ್ಷಿಣ್ಯಕ್ಕೆ ಒಳಗಾಗಿ ನಿಮ್ಮ ಕೆಲಸವನ್ನು ಅರ್ಧಕ್ಕೆ ಬಿಡಬೇಡಿ. ಯಾವುದಾದರೂ ಘಟನೆಯು ನಿಮ್ಮನ್ನು ಇಂದು ಹೆಚ್ಚು ಕಾಡಬಹುದು.
ಮಿಥುನ: ಯಾರನ್ನೂ ಸಾಧರಣ ಮನುಷ್ಯ ತಿಳಿದುಕೊಳ್ಳಬೇಡಿ. ಅವರ ಯೋಗ್ಯತೆಯನ್ನು ಅವರ ಬಟ್ಟೆಯಿಂದ, ಮಾತಿನಿಂದ ಅಳೆಯಲು ನೀವಿಂದು ಅಶಕ್ಯರು. ಒಂದೊಂದೇ ಖರ್ಚನ್ನು ನೀವು ನಿಭಾಯಿಸುವಾಗ ಅದೊಂದು ದೊಡ್ಡ ಮೊತ್ತವಾಗಿ ಕಾಣಬಹುದು. ನಿಮ್ಮಷ್ಟಕ್ಕೇ ನೀವು ಹೊಸತನವನ್ನು ಸೃಷ್ಟಿಸಿಕೊಂಡು ಅಪಮಾನಕ್ಕೆ ಒಳಗಾಗುವಿರಿ. ಗೋಸೇವೆಯನ್ನು ಮಾಡಲು ಮನಸ್ಸಾದೀತು. ಮೇಲೆಧಿಕಾರಿಗಳ ದಯಾಪಾಶವು ನಿಮ್ಮನ್ನು ವೃತ್ತಿಯಲ್ಲಿ ಉಳಿಸಬಹುದು. ನೀವಿಂದು ಪೂರ್ವಾವಲೋಕನವನ್ನು ಮಾಡಿಕೊಳ್ಳುವಿರಿ. ಸಂಕಷ್ಟ ಬಂದಾದ ಎಲ್ಲದಕ್ಕೂ ಏನೋ ಒಂದು ಕಾರಣವಿರಬಹುದು ಎಂದು ಸಮಾಧಾನವನ್ನು ತಂದುಕೊಳ್ಳುವಿರಿ.
ಕಟಕ: ಕುಟುಂಬದಲ್ಲಿ ತಾನೇ ಶ್ರೇಷ್ಠ ಎಂಬ ಭಾವ ಬೇಡ. ಸಮಯವು ಒಂದೇ ರೀತಿಯಲ್ಲಿ ಇರದು. ಆಕಸ್ಮಾತ್ ಆಗಿ ಸಿಕ್ಕ ಜವಾಬ್ದಾರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಸ್ವೇಚ್ಛೆಯಿಂದ ವರ್ತಿಸಬೇಡಿ. ಇರುವ ಸಮಸ್ಯೆಯನ್ನು ಎದುರಿಸಲು ಹೋಗಿ ಮತ್ತೊಂದು ಸಮಸ್ಯೆಯನ್ನು ಹುಟ್ಟುಹಾಕಿಕೊಳ್ಳಬೇಡಿ. ಕುಟುಂಬದ ಸದಸದ್ಯರು ನಿಮ್ಮ ಏಳ್ಗೆಯನ್ನು ಇಷ್ಟಪಡುವವರು. ಅವರ ಮೇಲೆ ಬುದ್ಧಿವಂತಿಕೆ ಸವಾರಿ ಮಾಡಬೇಡಿ. ಅವರ ಬೇಸರವೇ ನಿಮಗೆ ದುಃಖವನ್ನು ತಂದುಕೊಟ್ಟೀತು. ಯಾರನ್ನೂ ನಂಬದವರು ಇಂದು ನಂಬಿ ಮೋಸ ಹೋಗಬಹುದು.
ಸಿಂಹ: ಅಧಿಕಾರವು ಸಿಕ್ಕ ಮಾತ್ರಕ್ಕೆ ಹೇಗಾದರೂ ಚಲಾಯಿಸಬೇಕೆಂದಿಲ್ಲ. ವ್ಯಕ್ತಿ, ಸಂದರ್ಭ, ಸಮಯವನ್ನು ನೋಡಿ ತೀರ್ಮಾನಿಸಿ. ಹಣಕಾಸಿನ ವಿಚಾರದಲ್ಲಿ ಇರುವ ಗೊಂದಲವನ್ನು ಆರ್ಥಿಕ ತಜ್ಞರ ಬಳಿ ಬಗೆಹರಿಸಿಕೊಳ್ಳಬಹದು. ಯಾರ ಬಗ್ಗೆಯೂ ತೀರ್ಮಾನ ಕೊಡುವ ಬದಲು ಪೂರ್ವಾಪರ ವಿಚಾರಗಳನ್ನು ಗಮನಸಿಕೊಳ್ಳಿ. ನಿಮ್ಮ ನೇರದ್ದು ಮಾತ್ರ ಸತ್ಯವಾಗಿ ಇರದು. ಬಂಗಾರದ ಕತ್ತಿಯೇ ಆದರೂ ಅದರಿಂದ ಮೂಗು ಕತ್ತರಿಸಿಕೊಳ್ಳುವುದು ಎಷ್ಟು ಸರಿ. ಜನರನ್ನು ಅವರ ಯೋಗ್ಯತೆಯ ಆಧಾರದ ಮೇಲೆ ಕೆಲಸಕ್ಕೆ ಜೋಡಿಸಿ. ತಾನು ಕಂಡಿದ್ದು ಮಾತ್ರ ಸರಿ ಎಂಬ ವಾದವು ನಿಮ್ಮವರಿಗೆ ಬೇಸರ ತರಿಸೀತು.
ಕನ್ಯಾ: ಕಛೇರಿಯಲ್ಲಿ ಇಂದು ಅಸಮಾಧನಕಾರ ವಾತಾವರಣ ಇರಲಿದೆ. ಕಛೇರಿಯ ಆರಂಭದಲ್ಲಿ ಮೇಲಧಿಕಾರಿಗಳಿಂದ ಬೈಗುಳ ತಿನ್ನಬೇಕಾಗಿಬರಬಹುದು. ನಿಮ್ಮ ವಿರುದ್ಧ ಯಾರೋ ಏನ್ನೋ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾಡಲಿದೆ. ಕೆಲಸವು ಎಷ್ಟೇ ಚೆನ್ನಾಗಿದ್ದರೂ ಪ್ರಶಂಸೆ ಸಿಗುತ್ತಿಲ್ಲ ಎಂಬ ನೋವು ಹೆಚ್ಚಾಗಬಹುದು. ಕೆಲಸದಲ್ಲಿ ವೈರಾಗ್ಯವೂ ಬರುವ ಸಾಧ್ಯತೆ ಇದೆ. ನಕಾರಾತ್ಮಕತೆಯ ಬಗ್ಗೆ ಚಿಂತಿಸಿ, ಆದರೆ ಅದರದ್ದೇ ಆಲೋಚನೆಯಲ್ಲಿ ನೀವು ಮುಳುಗಿಹೋಗಬೇಡಿ. ಅನಿವಾರ್ಯವಾಗಿ ಕೊಟ್ಟ ಕೆಲಸವನ್ನು ಮಾಡಬೇಕಾಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಮಾನಸಿಕತೆ ನಿಮ್ಮನ್ನು ಖುಷಿಯಿಂದ ಇಡಲಿದೆ.
ತುಲಾ: ವ್ಯಾಪಾರದಲ್ಲಿ ಇಷ್ಟವಿಲ್ಲದಿದ್ದರೂ ಲಾಭವನ್ನು ನಿರೀಕ್ಷಿಸುವುದು ಬೇಡ. ಹೂಡಿಕೆ ಮಾಡುವ ಮನಸ್ಸಿದ್ದರೆ ಸ್ವಲ್ಪ ಮಾಡಿ. ಆದರೆ ನೀವು ನಿರೀಕ್ಷಿಸಿದಷ್ಟು ಲಾಭವನ್ನು ಪಡೆಯುವುದು ಕಷ್ಟವಾಗಬಹುದು. ನಾಲ್ಕಾರು ಜನರ ಸಂಪತ್ತಿನಿಂದ ಬದುಕಬೇಕಾಗಬಹದು. ಕುಟುಂಬದಲ್ಲಿ ಹಿರಿಯರ ಮಾತನ್ನು ಅಲ್ಲಗಳೆಯಬಹುದು. ನೀವು ಸ್ವತಂತ್ರವಾಗಿ ಬದುಕುವ ಇಚ್ಛೆ ಹೊಂದುವಿರಿ. ಅನುಕೂಲತೆಯನ್ನು ನೋಡಿ ಮನೆಗೆ ಸಹಾಯ ಮಾಡುವಿರಿ. ಉಪಕಾರವನ್ನು ನೀವು ಸ್ಮರಿಸುವಿರಿ. ಅನವಶ್ಯವೆನಿಸಿದರೆ ಅಂತಹ ಖರ್ಚನ್ನು ಮಾಡಲೇ ಬೇಇ.
ವೃಶ್ಚಿಕ: ಹೊಸ ಕೆಲಸವನ್ನು ಮಾಡಲು ನಿಮಗೆ ಧೈರ್ಯ ಸಾಲದು. ನಿಮಗೆ ದೈರ್ಯವನ್ನು ತುಂಬುವವರೂ ಇಲ್ಲವಾಗಬಹುದು. ವಿಶ್ರಾಂತಿ ಬೇಕೆನಿಸಿದರೆ ಪಡೆದು ಮುನ್ನಡೆಯುವುದು ಉತ್ತಮ. ವ್ಯಾಪಾರವನ್ನು ಮಾಡುತ್ತಿದ್ದರೆ ಸಾಲವನ್ನು ಕೊಡಲು ಹೋಗಬೇಡಿ. ಸಾಲ ಕೊಡುವುದೇ ಹೆಚತಚಾದೀತು. ಪುರುಷರಿಂದ ಏನಾದರೂ ತೊಂದರೆಗಳು ಬರಬಹುದು. ಹಣ ಸಂಪಾದನೆಯನ್ನೇ ಮುಖ್ಯವಾಗಿಟ್ಟುಕೊಂಡು ಮನೆಯನ್ನು, ಮಕ್ಕಳನ್ನು ಮರೆಯಬಹುದು. ಅಕಾರಣವಾಗಿ ದುಃಖದ ಸನ್ನಿವೇಷಗಳು ಬರಬಹುದು. ಮನಸ್ಸಿಗೆ ಹಿಡಿಸುವ ಕೆಲಸವನ್ನು ಮಾಡಿ.
ಧನಸ್ಸು: ಸ್ನೇಹಿತರಿಗೋಸ್ಕರ ಖರ್ಚುಮಾಡಬೇಕಾಗಿ ಬರಬಹುದು. ಅಪೂರ್ಣಗೊಂಡ ಕೆಲಸಗಳನ್ನು ಮಾಡಿ ಮುಗಿಸಬೇಕೆಂದು ಚಿಂತಿಸುವಿರಿ. ಹಿಂದೆ ಪಟ್ಟ ಕಷ್ಟದಿಂದ ನಿಮಗೆ ಇಂದು ಸುಖ, ನೆಮ್ಮದಿಗಳು ಸಿಗಲಿವೆ. ಮಕ್ಕಳಿಂದ ಶುಭವಾರ್ತೆಯು ಬರಬಹುದು. ನಿಮ್ಮ ಆಲೋಚನೆಗಳನ್ನು ಬೇರೆಯವರ ಮೇಲೆ ಹೇರಬೇಡಿ. ಕಾರ್ಯಕ್ರಮದ ಕಾರಣ ದೂರ ಓಡಾಟ ಬರಬಹುದು. ಕೋಪವನ್ನು ಆದಷ್ಟು ಬುದ್ಧಿಪೂರ್ವಕವಾಗಿ ಕಡಿಮೆ ಮಾಡಿಕೊಳ್ಳಿ. ಅಸೂಯೆಯೂ ಸ್ವಭಾವದ ಕಾರಣ ಹೆಚ್ಚಾಗಬಹುದು. ಶಿಕ್ಷಿತರಾದಕಾರಣ ಇದನ್ನು ಹಿಡಿತದಲ್ಲಿ ಇಟ್ಟಿಕೊಳ್ಳಬೇಕಾಗುವುದು.
ಮಕರ: ಚರ್ವಿತಚರ್ವಣ ಎಂದು ಎನ್ನಿಸಿದರೂ ಹಿರಿಯರ ಮಾತುಗಳನ್ನು ಅವರ ಮೇಲಿನಗೌರವದಿಂದ ಕೇಳಬೇಕಾಗಬಹುದು. ಹಳೆಯ ಖಾಯಿಲೆಯು ಮತ್ತೆ ಬರಬಹುದು. ಅವಕಾಶಗಳನ್ನು ಬಿಟ್ಟಕೊಟ್ಟ ಇದ್ದಲ್ಲಿಯೇ ಇರಬೇಡಿ. ಸಮಯವನ್ನು ಅವಕಾಶವನ್ನೂ ಸದುಪಯೋಗ ಮಾಡಿಕೊಳ್ಳಿ. ನಿಮ್ಮನ್ನು ಬೆಂಬಲಿಸುವವರಿಗೆ ನಿಮ್ಮ ಬೆಂಬಲವನ್ನು ನೀಡುವಿರಿ. ಉಪಕಾರದ ಸ್ಮರಣೆಯನ್ನು ಇಟ್ಟುಕೊಳ್ಳುವಿರಿ. ಆತಂಕದ ಸಂದರ್ಭಗಳು ಬರಬಹುದು. ತಾಳ್ಮೆಯಿಂದ ಸರಿ ಮಾಡಿಕೊಳ್ಳಿ.
ಕುಂಭ: ಕಾನೂನಿಗೆ ವಿರುದ್ಧವಾದ ಕೆಲಸದಿಂದ ಹಣವನ್ನು ಪಡೆಯಲು ಹೋಗಬಹುದು. ಅದು ನಿಮ್ಮ ವೃತ್ತಿಜೀವನದ ಮೇಲೂ ಪರಿಣಾಮವನ್ನು ಉಂಟುಮಾಡಬಹುದು. ಕಳೆದುಕೊಂಡ ವಸ್ತುವನ್ನು ಮರಳಿಪಡೆಯಲು ಶ್ರಮವಹಿಸುವಿರಿ. ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೋಗುವ ಆಲೋಚನೆಯನ್ನು ವಿದ್ಯಾರ್ಥಿಗಳು ಬಿಡಬೇಕಾಗಿಬರಬಹುದು. ಬೇರೆಯವರಲ್ಲಿ ನಿಮ್ಮ ಬಗ್ಗೆ ಇರುವ ಭವನೆಗಳು ಗೊತ್ತಾಗಬಹುದು. ಸಮುದ್ರ, ಕೆರೆ, ನದಿಯ ಭಾಗಗಳಲ್ಲಿ ತೆರಳುವಾಗ ಎಚ್ಚರಿಕೆ ಇರಲಿ.
ಮೀನ: ಕಛೇರಿಯಲ್ಲಿ ಈ ಮೊದಲೇ ಇದ್ದ ವೈಮನಸ್ಯವು ಅಧಿಕವಾಗಬಹುದು. ಎಲ್ಲರಿಗೂ ತಿಳಿಯಲೂಬಹುದು. ಸಾಲವನ್ನು ಸರ್ಕಾರ ತೀರಿಸುತ್ತದೆ ಎಂಬ ಭಾವದಿಂದ ಎಷ್ಟಾದರೂ ಸಾಲವನ್ನು ಮಾಡಬೇಡಿ. ನಿಮ್ಮ ಕುತ್ತಿಗೆಗೆ ಸುತ್ತಿಕೊಂಡೀತು. ಕಬ್ಬಿಣ ಮುಂತಾದ ಲೋಹದ ಕೆಲಸಕ್ಕೆ ಹಿನ್ನಡೆಯಾಗಬಹುದು. ಬರಬೇಕಾದ ಹಣವು ಬರದೇ ಆರ್ಥಿಕವಾದ ಮುಗ್ಗಟ್ಟು ಬರಬಹುದು. ಉದ್ಯೋಗದ ಸ್ಥಳದಲ್ಲಿ ಆಗುವ ಕಲಹದಲ್ಲಿ ಯಾರ ಪರವಾಗಿ ಇರಬೇಕು ಎನ್ನುವ ಗೊಂದಲ ಕಾಣಿಸಿ ತಟಸ್ಥರಾಗಬಹುದು. ಶತ್ರುವನ್ನು ಮಿತ್ರನನ್ನು ಮಾಡಿಕೊಳ್ಳುವ ತಂತ್ರವನ್ನು ಹೂಡುವಿರಿ.
ಲೋಹಿತಶರ್ಮಾ 8762924271 (what’s app only)