Daily Horoscope 30 June: ಈ ರಾಶಿಯವರಿಗೆ ಆಸ್ತಿ, ಉದ್ಯೋಗದಲ್ಲಿ ತೊಡಕುಂಟಾಗಲಿದೆ
ಇಂದಿನ (2023 ಜೂನ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಸಾಧ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:59 ರಿಂದ 12:36ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:50 ರಿಂದ 05:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:42 ರಿಂದ 09:22ರ ವರೆಗೆ.
ಮೇಷ: ಸಮಯಕ್ಕೆ ಸಿಕ್ಕ ಸ್ಫೂರ್ತಿಯು ನಿಮ್ಮ ಇಂದಿನ ಕೆಲಸವನ್ನು ಚೆನ್ನಾಗಿಸುವುದು. ಯಾರದೋ ಮಾತಿನ ಆಧಾರದ ಮೇಲೆ ನಿಮಗೆ ನಂಬಿಕೆ ಬಾರದು. ಮಾಡಲು ಹೊರಟ ಕೆಲಸವು ಅರ್ಧಕ್ಕೆ ನಿಲ್ಲಬಹುದು. ನೀವು ಇಂದು ನಿಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳಲು ಬಯಸುವಿರಿ. ಮುಖ್ಯವಾದ ಕೆಲಸದ ನಡುವೆ ನಿಮ್ಮ ವೈಯಕ್ತಿಕ ಕೆಲಸವು ಮರೆಯಾಗಬಹುದು. ಮಾತನ್ನು ಹದವರಿತು ಮಾತನಾಡಿ. ಹೆಚ್ಚು ಮಾತನಾಡಿ ಇನ್ನೊಬ್ಬರಿಗೆ ನೋವನ್ನು ಕೊಡುವುದು ಬೇಡ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಬಯಸುವಿರಿ. ಮನೋಗತವನ್ನು ಹೇಳಿಕೊಳ್ಳಿ.
ವೃಷಭ: ಕಾರಣಾಂತರಗಳಿಂದ ನಿಮ್ಮ ಉದ್ಯೋಗದಲ್ಲಿ ತೊಂದರೆಯಾಗಲಿದೆ. ನಿಮ್ಮ ಮೇಲೆ ಕೆಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ. ಮನೆಯ ಕಾರ್ಯದಲ್ಲಿ ನೀವು ಭಾಗಿಯಾಗುವಿರಿ. ನಿಮ್ಮ ಮಾತನ್ನು ಕೇಳದೇ ಇರುವುದು ನಿಮಗೆ ಬೇಸರವಾಗುವುದು. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಕಲಹವಾಗಬಹುದು. ಆಲಸ್ಯದಿಂದ ಚಟುವಟಿಕೆಯತ್ತ ಮುಖ ಮಾಡುವಿರಿ. ಆಹಾರದ ಅಭಾವವು ನಿಮಗೆ ಆಗಲಿದೆ. ಮನಸ್ಸಿನ ಏಕಾಗ್ರತೆ ಕೆಡಬಹುದು. ಸರಳವಾದುದನ್ನು ಕ್ಲಿಷ್ಟ ಮಾಡಿಕೊಳ್ಳುವಿರಿ.
ಮಿಥುನ: ಒತ್ತಡವನ್ನು ಪರಿಹರಿಸಿಕೊಳ್ಳಲು ದೂರದ ಊರಿಗೆ ಹೋಗುವಿರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಸಂಗಾತಿಯ ಜೊತೆ ಪ್ರಯಾಣವನ್ನು ಇಚ್ಛಿಸುವಿರಿ. ಸರ್ಕಾರಿ ಕೆಲಸಕ್ಕಾಗಿ ನೀವು ಅರ್ಜಿಯನ್ನು ಸಲ್ಲಿಸುವಿರಿ. ಪ್ರಭಾವಿ ವ್ಯಕ್ತಿಗಳ ಸಹಾಯದಿಂದ ಕೆಲಸವು ಸಿಗಬಹುದು. ಭೂಮಿಯ ವ್ಯವಹಾರದಿಂದ ಸ್ವಲ್ಪ ಲಾಭವನ್ನು ಗಳಿಸುವಿರಿ. ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುವ ಸಾಧ್ಯತೆ ಇದೆ. ಹಳೆಯ ದ್ವೇಷವನ್ನು ಮುಂದುವರಿಸುವುದು ಬೇಡ. ಸಾಮರಸ್ಯದಿಂದ ಬದುಕುವುದನ್ನು ಇಷ್ಟಪರುವಿರಿ. ತಂದೆಯ ಪ್ರೀತಿ ಸಿಗಲಿದೆ.
ಕಟಕ: ಇಂದು ನಿಮಗೆ ಶ್ರೇಷ್ಠವ್ಯಕ್ತಿಗಳ ಸಹವಾಸ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಇಂದು ಬಂಧುಗಳು ನಿಮ್ಮ ಮನೆಯಲ್ಲಿ ಇರುವರು. ದುರಭ್ಯಾಸದಿಂದ ದೂರವಿರುವುದು ಉತ್ತಮ. ನಿಮ್ಮ ಚಟುವಟಿಕೆಗಳನ್ನು ಬೇರೆಯವರು ಗಮನಿಸುವರು. ಉದ್ಯೋಗವನ್ನು ಬದಲಾಯಿಸಲು ಆಲೋಚಿಸುವಿರಿ. ಬಿಡುವಿನ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ. ಚಂಚಲವಾದ ಮನಸ್ಸನ್ನು ಹಂತಹಂತವಾಗಿ ಪಳಗಿಸಿ. ನಿಮ್ಮ ವಿದ್ಯೆಯನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ಬಂಧುಗಳಿಂದ ಯಥೋಚಿತ ಸತ್ಕಾರವು ದೊರೆಯುವುದು. ಕುಲದೇವತಾರಾಧನಯಿಂದ ಅನುಕೂಲವು ಆಗಬಹುದು.
ಸಿಂಹ: ಎಲ್ಲ ವಿಚಾರವನ್ನೂ ಆಮೂಲಾಗ್ರವಾಗಿ ತಿಳಿಯಬೇಕು ಎಂಬ ಹಂಬಲವಿರುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಗಿಸಿ ಕಾರ್ಯದಲ್ಲಿ ತೊಡಗುವರು. ಹಿರಿಯರ ಆಚರಣೆಗಳನ್ನು ಅಲ್ಲಗಳೆಯುತ್ತ ಆಚರಿಸುವಿರಿ. ಎಲ್ಲ ವಿಚಾರಗಳನ್ನು ಹಠದಿಂದ ಸಾಧಿಸುತ್ತೇನೆ ಎಂಬ ಆಲೋಚನೆಯು ಒಳ್ಳೆಯದಲ್ಲ ಮತ್ತು ಅದು ಸಾಧ್ಯವೂ ಇಲ್ಲ. ಇಂದು ನಿಮ್ಮ ಕನಸು ನನಸಾಗಿಲ್ಲ ಎಂಬ ದುಃಖವು ಇರಲಿದೆ. ವಿಜ್ಞಾನಕ್ಷೇತ್ರದಲ್ಲಿ ಶೋಧಿಸುವವರಿಗೆ ಹೆಚ್ಚಿನ ಅನುಕೂಲತೆಗಳು ಇರಲಿವೆ. ಯಾರ ಮಾತನ್ನೂ ಕೇಳದೇ ಸ್ವೇಚ್ಛೆಯಾಗಿ ಇರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ಚಿತ್ತವನ್ನು ಸಮಾಧನಾದಲ್ಲಿ ಇಟ್ಟುಕೊಳ್ಳುವುದು ಉತ್ತಮ.
ಕನ್ಯಾ: ಬೇಗ ಮುಗಿಸಬೇಕು ಎನ್ನುವ ಆತುರದಲ್ಲಿ ಕೆಲಸವನ್ನು ಹಾಳುಮಾಡಿಕೊಳ್ಳುವಿರಿ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕುಗ್ಗಿಸಬಹುದು. ಆದಷ್ಟು ಸಕಾರಾತ್ಮಕವಾಗಿ ಯೋಚಿಸಲು ಪ್ರಯತ್ನಿಸಿ. ಮನಸ್ಸನ್ನು ಖಾಲಿ ಇಡದೇ ಸದ್ವಿಚಾರಗಳಲ್ಲಿ ತೊಡಗಿಸಿ. ಕೂಡಿಟ್ಟ ಸ್ವಲ್ಪ ಹಣವು ನಿಮಗೆ ಸಿಗಬಹುದು. ಸಣ್ಣ ಆರೋಗ್ಯವನ್ನೂ ನೀವು ದೊಡ್ಡದಾಗಿ ಮಾಡಿಕೊಳ್ಳುವಿರಿ. ಕಾರ್ಯದ ಒತ್ತಡವನ್ನು ಕಂಡು ನಿಮ್ಮ ಸಹಾಯಕ್ಕೆ ಯಾರಾದರೂ ಬರುವರು. ಸಿದ್ಧ ಉಡುಪುಗಳ ಮಾರಾಟದಿಂದ ಲಾಭವಾಗಲಿದೆ. ಅನ್ಯೋನ್ಯತೆ ಭಂಗವಾಗಬಹುದು. ಸಮಾಜದ ಕೆಲಸಗಳನ್ನು ಸಣ್ಣ ಪ್ರಮಾಣದಲ್ಲಿ ಮಾಡುವಿರಿ.
ತುಲಾ: ಏನೇ ಮಾಡಿದರೂ ಪ್ರಶಂಸಿಸಬೇಕು ಎಂಬ ಕಲ್ಪನೆಯನ್ನು ಬದಲಿಸಿಕೊಳ್ಳಿ. ನಿಮ್ಮ ಶುದ್ಧ ನಡತೆಯು ಎಲ್ಲವನ್ನೂ ಮಾಡಿಸೀತು. ಗೊಂದಲವನ್ನು ಪರಿಹರಿಸಿಕೊಳ್ಳಲು ಹೋಗಿ ಗೌಪ್ಯತೆಯನ್ನು ಬಿಚ್ಚಿಡುವಿರಿ. ಸ್ವಲ್ಪ ಆದಾಯವೂ ನಿಮಗೆ ಸುಖವನ್ನು ಕೊಡುವುದು. ವಿವಾಹದ ವಿಚಾರವನ್ನು ತಂದೆಯೇ ನಿಮ್ಮ ಬಳಿಮಾತನಾಡಬಹುದು. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತಯಾರಿಸಿಕೊಳ್ಳ ಕಷ್ಟವಾದೀತು. ಅಧಿಕಾರಿಗಳ ಜೊತೆ ನಿಮ್ಮ ವರ್ತನೆಯ ನಿಮ್ಮ ಬೆಳವಣಿಗೆಗೆ ಪೂರಕವಾಗಿರಲಿದೆ. ಇತರರ ಕಾರ್ಯಗಳನ್ನು ಪ್ರೀತಿಯಿಂದ ಇಂದು ಮಾಡಿಕೊಡುವಿರಿ. ಬದಲಾದ ವಾತಾವರಣದಿಂದ ದೇಹಕ್ಕೆ ತೊಂದರೆಯಾಗಬಹುದು.
ವೃಶ್ಚಿಕ: ಆಲಸ್ಯದಿಂದ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಇದು ವೃತ್ತಿಜೀವನ ಮೊದಲ ಕಪ್ಪುಚುಕ್ಕೆಯಾಗಲಿದೆ. ಒತ್ತಾಯ ಪೂರ್ವಕವಾಗಿ ಯಾರನ್ನೂ ಇಟ್ಟಕೊಳ್ಳುವ ಕೆಲಸಕ್ಕೆ ಹೋಗಬೇಡಿ. ನಿಮ್ಮವರ ವರ್ತನೆಯಿಂದ ಅವರ ಮೇಲೆ ನಿಮಗೆ ಬೇಸರ ಉಂಟಾಗಬಹುದು. ವಿವಾಹವಾಗಬೇಕೆಂಬ ಆತುರ ಬೇಡ. ಉತ್ತಮ ಕುಲದವರು ಬಾಳಸಂಗಾತಿಯು ಆಗಬಹದು. ತಾಳ್ಮೆಯಿಂದ ಕಾಯುವುದು ಅವಶ್ಯಕ. ಆತುರದ ಕೈಗೆ ಬುದ್ಧಿಯನ್ನು ಕೊಡುವುದು ಬೇಡ. ಪರಪುರುಷರ ಜೊತೆ ಮಾತನಾಡುವುದನ್ನು ಸ್ವಲ್ಪ ಕಡಿಮೆ ಮಾಡಿ. ಅವಶ್ಯಕತೆಗೆ ಮಾತ್ರ ಮಾತುಕತೆಗಳು ಇರಲಿ. ಇನ್ನೊಬ್ಬರ ವಿಚಾರದಲ್ಲಿ ಆಸಕ್ತಿಯು ಹೆಚ್ಚಿರುವುದು.
ಧನು: ಪಾಲುದಾರಿಕೆಯು ಕಲಹದಲ್ಲಿ ಕೊನೆಯಾಗುವುದು. ವೃತ್ತಿಪರರು ಕಛೇರಿಯಲ್ಲಿ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುವರು. ಹೊಸ ಉದ್ಯೋಗಕ್ಕೆ ಸೇರುವವರು ಸಂಪೂರ್ಣ ಮಾಹಿತಿಯ ಜೊತೆ ಸೇರುವಿರಿ. ಮಕ್ಕಳ ವಿಚಾರದಲ್ಲಿ ನಿಮಗೆ ಹೆಮ್ಮೆ ಎನಿಸಿ ಏನನ್ನಾದರೂ ಕೊಡುವಿರಿ. ನಿಮಗೆ ಸಿಗುವ ಸಂಗಾತಿಯು ಬಹಳ ಬುದ್ಧಿವಂತನಾಗಿರುವನು. ಧಾರ್ಮಿಕಕ್ಷೇತ್ರಗಳಿಗೆ ಹೋಗಿ ನಿಮ್ಮ ಹರಕೆಯನ್ನು ಒಪ್ಪಿಸಿ ಬರುವಿರಿ. ಸದ್ದಿಲ್ಲದೇ ನಿಮ್ಮ ಪ್ರಚಾರಗಳನ್ನು ಶತ್ರುಗಳು ಮಾಡುವರು. ತೆರಿಗೆಯ ವಿಚಾರವನ್ನು ನೀವು ಸರಿಯಾಗಿ ಪಡೆದು ದಂಡದಿಂದ ತಪ್ಪಿಸಿಕೊಳ್ಳುವುದು ಉತ್ತಮ. ಗುರುಚರಿತ್ರೆಯನ್ನು ಪಠಿಸಿ.
ಮಕರ: ನಿಮಗೆ ಹೇಳದೇ ಕುಟುಂಬವು ಮಾಡುವ ಕೆಒಸಕ್ಕೆ ನಿಮಗೆ ಅಸಮಾಧಾನ ಆಗಲಿದೆ. ಸ್ನೇಹಿತರಿಗೆ ಧನಸಹಾಯವನ್ನು ಮಾಡುವಿರಿ. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಕ್ಕಿ ಅವರ ಜೊತೆ ಮಾತಮಾಡುವಿರಿ. ಪೂರ್ವಪುಣ್ಯದಿಂದ ದೊಡ್ಡ ಅಪಾಯವೊಂದು ತಪ್ಪಿಹೋಗುವ ಸಂಭವವಿದೆ. ಮನೆಯಲ್ಲಿ ಕಿರಿಕಿರಿಯ ಕಾರಣ ಹೊರನಡೆಯುವಿರಿ. ಎಂದೋ ಆದ ತಪ್ಪಿಗೆ ಇಂದು ಪಶ್ಚಾತ್ತಾಪ ಪಡಬೇಕಾದೀತು. ಕೃಷಿಯು ನಿಮ್ಮ ಆಸಕ್ತಿಯ ಕ್ಷೇತ್ರವಾಗುವುದು. ಸಂಗಾತಿಯ ಜೊತೆ ಹರಟೆ ಹೊಡೆಯುತ್ತ ಕಾಲಕಳೆಯುವಿರಿ. ತಂದೆಯಿಂದ ಅಸಮಾಧಾದನ ಮಾತುಗಳನ್ನು ಕೇಳುವಿರಿ.
ಕುಂಭ: ನಿಮ್ಮ ಕೆಲಸಗಳಿಗೆ ಅಡ್ಡಿಯಾಗಬಹುದು. ಆಪ್ತರು ನಿಮ್ಮನ್ನು ಅನ್ಯ ಕೆಲಸಗಳಿಗೆ ಕರೆದೊಯ್ಯುವರು. ನಿಮ್ಮ ನಿಷ್ಪಕ್ಷಪಾತ ನಿಲುವು ಕೆಲವರಿಗೆ ಇಷ್ಟವಾಗದೇ ಹೋಗಬಹುದು. ನಿರ್ಮಾಣ ಹಂತದ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ನಿಮ್ಮ ಪೂರ್ವನಿರ್ಧಾರಿತ ಪ್ರಯಾಣವನ್ನು ಮುಂದೂಡುವಿರಿ. ಖುಷಿಪಡುವ ಸಂಗತಿಗಳನ್ನು ಬಿಟ್ಟು ನಕಾರಾತ್ಮಕವಾಗಿ ಆಲೋಚಿಸುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಶ್ರಮಿಸುವಿರಿ. ಹಣಕಾಸಿನ ಚಿಂತೆ ಕಾಡಬಹುದು. ನಿಮ್ಮ ಬಂಧುಗಳ ನಡುವಿನ ಒಡನಾಟವು ಖುಷಿಕೊಡಬಹುದು. ನಿಮಗೆ ಭಯ ಉಂಟಾದಲ್ಲಿ ಶಿವಪಂಚಾಕ್ಷರಿಯನ್ನು ಪಠಿಸಿ.
ಮೀನ: ಸಾಮರಸ್ಯದ ಕೊರತೆಯಿಂದ ಮನಸ್ಸು ಉದ್ವೇಗಕ್ಕೆ ಒಳಗಾಗಬಹುದು. ನಿಮಗೆ ಇನ್ನಷ್ಟು ವಿದ್ಯಾಭ್ಯಾಸದ ಅವಶ್ಯಕತೆ ಬೇಕು ಎನಿಸಲಿದೆ. ಉಚಿತವಾದುದನ್ನು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ಕಡೆಗಣಿಸಿದ ಕಾರಣಕ್ಕೆ ಸಿಟ್ಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ವಲ್ಪ ಆಲಸ್ಯವು ಇರಲಿದ್ದು ಕೆಲಸಗಳು ನಾಳೆಗೆ ಉಳಿದುಕೊಳ್ಳುವುದು. ಸಂಗಾತಿಯು ಸಂಕಟಪಡುತ್ತಿದ್ದು ನಿಮ್ಮಿಂದ ಸಾಂತ್ವನ ಸಿಗಬೇಕಿದೆ. ಸಿಗಬೇಕಾದ ಲಾಭವು ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಸಂಬಂಧಿಸದ ವಿಷಯವನ್ನು ಚರ್ಚಿಸಿ ಕಾಲಹರಣ ಮಾಡುವಿರಿ. ಶಿವನ ಮೂಲಮಂತ್ರವನ್ನು ಪಠಿಸಿ.
ಲೋಹಿತಶರ್ಮಾ 8762924271 (what’s app only)