Horoscope 31 August: ದಿನಭವಿಷ್ಯ, ನಿಮ್ಮ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ, ನಿಮ್ಮ ಭಾವನೆಗಳಿಗೆ ಬೆಲೆ ಕೊಡದೇ ಇರುವುದು ನಿನಗೆ ಬೇಸರವಾಗಬಹುದು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರಮ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಅತಿಗಂಡ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:06 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:27 ರಿಂದ ಮಧ್ಯಾಹ್ನ 11:00ರ ವರೆಗೆ.
ಮೇಷ ರಾಶಿ: ಒಂದೇ ವಿಚಾರದ ಬಗ್ಗೆ ಹೆಚ್ಚು ಹೊತ್ತು ಚಿಂತಿಸಿ ಯಾವ ಪ್ರಯೋಜನವೂ ಆಗದು. ಹೊಸತನ್ನು ರೂಢಿಸಿಕೊಳ್ಳಲು ಬಯಸುವಿರಿ. ಅಧಿಕ ಲಾಭದಿಂದ ಅತಿಯಾದ ಸಂತೋಷವಾಗುವುದು. ಹೇಳಿಕೊಳ್ಳಲು ನಿಮ್ಮ ಜೊತೆ ಯಾರೂ ಇಲ್ಲವಾಗುವರು. ಎಷ್ಟೇ ಕೆಲಸವಿದ್ದರೂ ಅದನ್ನು ಸಮಾಧಾನ ಚಿತ್ತದಿಂದ ಪಡೆಯುವಿರಿ. ಸಿಕ್ಕ ಅವಕಾಶಗಳನ್ನು ನೀವು ಯೋಗ್ಯರೀತಿಯಿಂದ ಬಳಸಿಕೊಳ್ಳುವಿರಿ. ಅಮೂಲ್ಯವಾದ ವಸ್ತುವೊಂದು ಕಳೆದುಕೊಳ್ಳುವಿರಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯು ಕಾಣಿಸಿಕೊಳ್ಳುವುದು. ಮನೆಮದ್ದಿನಿಂದಲೇ ಅದು ಕಡಿಮೆ ಆಗಬಹುದು. ಪ್ರಯತ್ನಿಸಿ.
ವೃಷಭ ರಾಶಿ: ಸಮಯಪ್ರಜ್ಞೆಯಿಂದ ನೀವು ಸೂಕ್ತವಾದ ಮಾತುಗಳನ್ನು ಆಡುವಿರಿ. ನಿಮ್ಮೊಳಗಿನ ಭೀತಿಯನ್ನು ನೀವು ಯಾರೊಂದಿಗಾದರೂ ಹೇಳಿಕೊಳ್ಳಿ. ಯಾವದೋ ಪ್ರೇರಣೆಯಿಂದ ನಿಮ್ಮ ಜೀವನವನ್ನು ಬದಲಾಗಲಿದೆ. ಪ್ರೀತಿಯು ಸಿಗದೇ ನೀವು ಒದ್ದಾಡುವಿರಿ. ಕೊಟ್ಟ ಹಣವನ್ನು ಪುನಃ ಹಿಂದಿರುಗಿಸಿ ಮಾತನ್ನು ಉಳಿಸಿಕೊಳ್ಳಿ. ಉದ್ಯೋಗಕ್ಕೆ ಸಂಬಂಧಿಸಿದ ಚರ್ಚೆಗಳ ಮೂಲಕ ನಿಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ವೃತ್ತಿಯು ನಿಮಗೆ ನೆಮ್ಮದಿಯನ್ನು ಕೊಟ್ಟಿದೆ. ಅದೇ ನಿಮ್ಮ ಬಲವೂ ಆಗಿರಲಿದೆ. ನಿಮ್ಮ ಊಹೆಯು ಇಂದು ಸತ್ಯವಾಗುವುದು.
ಮಿಥುನ ರಾಶಿ: ಅತಿಯಾದ ಅಸೆಯಿಂದ ನಿಮ್ಮಲ್ಲಿರುವ ವಸ್ತುವನ್ನು ನೀವು ಕಳೆದುಕೊಳ್ಳುವಿರಿ. ಅಪರಿಚಿತರ ಸಲಹೆಗಳು ಸೂಕ್ತ ಎಂದೆನಿಸಬಹುದು.ಎಲ್ಲರನ್ನೂ ನೀವು ನೋಡುವ ದೃಷ್ಟಿಯು ಬದಲಾಗುವುದು. ನೀವಿಟ್ಟ ನಂಬಿಕೆಯನ್ನು ನಿಮ್ಮವರು ಉಳಿಸಿಕೊಳ್ಳುವರು. ಇಂದು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವ ಅವಕಾಶ ಸಿಗಲಿದೆ. ಸಂಗಾತಿಯ ಜೊತೆ ಕುಳಿತು ಭವಿಷ್ಯವನ್ನು ಚಿಂತಿಸುವಿರಿ. ದೈವಭಕ್ತಿಯಿಂದ ನಿಮಗೆ ಸಮಾಧಾನವು ಸಿಗಲಿದೆ. ಕಷ್ಟಗಳು ಮೋಡಗಳಂತೆ ಒಂದೇ ಕಡೆ ನಿಲ್ಲದೇ ಚಲಿಸುವುವು. ಅಧಿಕ ದಾಹವು ಇರಲಿದೆ.
ಕಟಕ ರಾಶಿ: ಇಂದು ನೀವು ಮನೆಯನ್ನು ಶುದ್ಧ ಮಾಡುವಲ್ಲಿ ಆಸಕ್ತರಾಗಿರುವಿರಿ. ಸಣ್ಣ ಉದ್ಯೋಗಕ್ಕೂ ಇಂದು ಅಲ್ಪ ಲಾಭವಾಗುವುದು. ಉದ್ಯೋಗದ ನಿಮಿತ್ತ ಸುತ್ತಟವು ಅನಾರೋಗ್ಯಕ್ಕೆ ಕಾರಣವಾಗಬಹುದು. ಸಜ್ಜನರ ಸಹವಾಸವು ನಿಮಗೆ ಸಿಗಲಿದೆ. ಅಧಿಕ ಒತ್ತಡವು ನಿಮ್ಮ ಕಾರ್ಯಕ್ಕೆ ಭಂಗವನ್ನು ಉಂಟುಮಾಡಬಹುದು. ಕಬ್ಬಿಣದ ವ್ಯಾಪರವು ನಿಮಗೆ ಲಾಭವನ್ನು ತಂದುಕೊಡುವುದು. ವೃತ್ತಿಯಲ್ಲಿ ನಿಮ್ಮ ಬಗ್ಗೆ ಸಲ್ಲದ ಮಾತುಗಳು ಕೇಳಿಸಬಹುದು. ಆಪ್ತರನ್ನು ಕ್ಷುಲ್ಲಕ ಕಾರಣಕ್ಕೆ ದೂರಮಾಡಿಕೊಂಡು ಸಂಕಟಪಡುವಿರಿ. ನೀವು ಅಂದುಕೊಂಡ ಗುರಿಯನ್ನು ಸಾಧಿಸಲು ಅಲ್ಪದೂರದಲ್ಲಿ ಇರುವಿರಿ. ಪ್ರಾಣಾಂತಿಕವಾದ ನೋವು ಕಾಣಿಸಿಕೊಂಡೀತು.
ಸಿಂಹ ರಾಶಿ: ರಾಜಕೀಯ ವ್ಯಕ್ತಿಗಳ ಸಹವಾಸವಾಗಲಿದೆ. ತುಂಬಾ ಹಳೆಯದಾದ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ನಿಮ್ಮ ಹೆಗಲಿಗೆ ಬರಬಹುದು. ಹೆಚ್ಚು ಆದಾಯವನ್ನು ಇಂದಿನ ಉದ್ಯಮದಿಂದ ನೀವು ನಿರೀಕ್ಷಿಸುವಿರಿ. ನಿಮ್ಮ ಕರ್ತವ್ಯವನ್ನು ನೀವು ಮಾಡಿ. ಅದೃಷ್ಟವನ್ನು ನಂಬಿಕೊಂಡು ಸಮಯವನ್ನು ವ್ಯರ್ಥಮಾಡುವ ಸಾಧ್ಯತೆ ಇದೆ. ಮಾತಿಗೆ ತಪ್ಪಿದ ಕಾರಣ ನಿಮ್ಮನ್ನು ಅವಮಾನಿಸಬಹುದು. ಆರ್ಥಿಕಬಲವು ನಿಮಗೆ ತುಂಬಾ ಅಗತ್ಯವಾಗಿ ಬೇಕಿದೆ. ಬೇರೆ ಕೆಲಸಗಳಿಂದ ಹೆಚ್ಚು ಆದಾಯ ಬರುವಂತೆ ನೀವು ನೋಡಿಕೊಳ್ಳುವಿರಿ. ನಿಮ್ಮ ಮಾತುಗಳು ಕೆಲವರಿಗೆ ಪ್ರಯೋಜನಕ್ಕೆ ಬರಲಿದೆ.
ಕನ್ಯಾ ರಾಶಿ: ಉದ್ಯೋಗವನ್ನು ಅರಸಿ ದೂರದ ಊರಿಗೆ ಹೋಗುವಿರಿ. ಕೆಲಸದ ಹುಡುಕಾಟದಲ್ಲಿ ನಿಮ್ಮ ಸಮಯವು ವ್ಯರ್ಥವಾಗುವುದು. ಪದೆ ಪದೆ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಬಿನ್ನವಾಗಿರುವುದು. ಭೂತಕಾಲದ ವಿಷಯವನ್ನು ಪುನಃ ನೆನಪಿಸಿಕೊಂಡು ಮನಸ್ಸು ಹಾಳುಮಾಡಿಕೊಳ್ಳುವಿರಿ. ಇಂದಿನ ನಿಮ್ಮ ಪ್ರಯಾಣವು ಅಡೆತಡೆಗಳಿಂದ ಇರಲಿದೆ. ಅನೇಕ ವಿಚಾರದಲ್ಲಿ ಆಸಕ್ತಿಯಿದ್ದು ಯಾವುದುನ್ನೂ ಪೂರ್ಣ ಮಾಡುವುದಿಲ್ಲ. ದೂರದಲ್ಲಿ ಇರುವ ಮಿತ್ರರು ನಿಮಗೆ ಸಹಾಯವನ್ನು ಮಾಡುವರು. ಇಂದು ದೈಹಿಕ ಪರಿಶ್ರಮವು ಹೆಚ್ಚು ಇರಲಿದೆ. ಕಛೇರಿಯ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಯಾರ ಸಹಾಯವನ್ನೂ ಪಡೆಯದೆ ಸ್ವಾಭಿಮಾನದಿಂದ ವರ್ತಿಸುವಿರಿ.
ತುಲಾ ರಾಶಿ: ಅನಿರೀಕ್ಷಿತವಾಗಿ ದೊರೆತ ಉನ್ನತ ಅಧಿಕಾರದಿಂದ ನಿಮಗೆ ಸಂತೋಷವಾಗಲಿದೆ. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ನೀವೇ ಸರಿಮಾಡಿಕೊಳ್ಳುವುದು ಉತ್ತಮ. ಬಹಿರಂಗಪಡಿಸಿ ನಿಮ್ಮ ಮಾನವನ್ನು ನೀವು ಕಳೆದುಕೊಳ್ಳಬೇಕಾಗುವುದು. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ. ಕೃತಿಯೇ ನಿಮ್ಮ ಮಾತಾಗಲಿ. ಇಂದಿನ ನಿಮ್ಮ ಸಮಯವು ಗೃಹ ಬಳಕೆಯ ವಸ್ತುಗಳ ಖರೀದಿಗೆ ಮೀಸಲಿಡುವಿರಿ. ನಿಮ್ಮ ಮೇಲಿನ ಆರೋಪವು ಸುಳ್ಳು ಎಂದು ತೀರ್ಮಾನವು ಪ್ರಕಟವಾಗುವವುದು. ಸಮಯಸ್ಫೂರ್ತಿಯಿಂದ ಗಂಭೀರವಾದ ಸಮಸ್ಯೆಯನ್ನೂ ಸಲೀಸಾಗಿ ಬಗೆಹರಿಸಿಕೊಳ್ಳುವಿರಿ. ಅನುಮಾನದಿಂದ ಸ್ನೇಹವು ಹಾಳುಗುವುದು. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವ ಶಂಕೆ ಇದೆ.
ವೃಶ್ಚಿಕ ರಾಶಿ: ಆರ್ಥಿಕ ನಷ್ಟಕ್ಕೆ ನಿಮಗೆ ಚಿಂತೆಯಾಗಬಹುದು. ಎಲ್ಲರ ಜೊತೆಗೂಡಿ ಕೆಲಸ ಮಾಡಲು ನಿಮಗೆ ಆಗದೇ ಇರುವುದು. ನಿಮ್ಮ ಪ್ರಶಂಸೆಯಿಂದ ಉಳಿದವರಿಗೆ ಕಷ್ಟವಾದೀತು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಆಗಲಿದೆ. ಧಾರ್ಮಿಕ ಕಾರ್ಯಗಳನ್ನು ಇಂದು ಅನಿವಾರ್ಯವಾಗಿ ಮಾಡಬೇಕಾಗಬಹುದು. ನಿಮ್ಮ ಯೋಜನೆಯನ್ನು ಗೌಪ್ಯವಾಗಿ ಇರಿಸಿಕೊಳ್ಳಿ. ಸಂಕೋಚದಿಂದ ನಿಮಗೆ ಸಮಸ್ಯೆಗೆ ಪರಿಹಾರವನ್ನು ತಿಳಿದುಕೊಳ್ಳುವುದು ಕಷ್ಟವಾದೀತು. ಬಂಧುಗಳ ಜೊತೆಗೆ ಸಂವಹನವು ಇಷ್ಟವಾಗದು. ವಾಹನದ ಓಡಾಟವು ನಿಮಗೆ ಕಿರಿಕಿರಿ ಕೊಡಬಹುದು. ನಿಮ್ಮ ಪ್ರಯಾಣವನ್ನು ಮಾಡಿ ಮುಂದೂಡುವುದು ಉತ್ತಮ. ಯಾರೋ ಮಾಡಿದ ನಿಯಮಕ್ಕೆ ನಿಮಗೆ ತೊಂದರೆಯಾಗಬಹುದು.
ಧನು ರಾಶಿ: ಪ್ರಯತ್ನಿಸಿದ ಕಾರ್ಯದಲ್ಲಿ ನಿಮಗೆ ಸಂಪೂರ್ಣ ಯಶಸ್ಸು ಲಭ್ಯವಾಗದೇ ಹೋಗಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಮಾಡುವಿರಿ. ಸ್ವಾಭಿಮಾನಕ್ಕೆ ಅಡ್ಡಿಯಾದೀತು. ನೀವು ಆಪ್ತರಿಗೆ ಎಲ್ಲವನ್ನೂ ಹೇಳಬೇಕು ಎಂದುಕೊಂಡರೂ ನಿಮಗೆ ಹೇಳಲಾಗದೆ ದುಃಖವು ಬರುವುದು. ಅಪರಿಚಿತ ವ್ಯಕ್ತಿಯ ಜೊತೆ ಸ್ನೇಹವನ್ನು ಮಾಡುವಾಗ ಎಚ್ಚರವಿರಲಿ. ಸ್ನೇಹವೇ ಪ್ರೇಮವಾಗುವ ಸಾಧ್ಯತೆ ಇದೆ. ನಿಮ್ಮ ಪ್ರತಿಯೊಂದು ನಡೆಯನ್ನೂ ಗಮನಿಸುವರು. ನಿಮ್ಮ ಮೇಲಿಟ್ಟ ವಿಶ್ವಾಸಕ್ಕೆ ಭಂಗಬಾರದಂತೆ ನಿಮ್ಮ ವರ್ತನೆಯು ಇರಲಿದೆ. ವಿದ್ಯಾರ್ಥಿಗಳು ಸಮಯ ಪಾಲನೆಯನ್ನು ಮಾಡುವುದು ಅತ್ಯವಶ್ಯಕ. ಓದಿನಲ್ಲಿ ಹಿಂದುಳಿಯುವ ಸಾಧ್ಯತೆ ಇರಲಿದೆ.
ಮಕರ ರಾಶಿ: ಸುಖದ ಜೀವನ ಮತ್ತು ಹಣ ಸಂಪಾದನೆ ಈ ಎರಡು ಮಾರ್ಗಗಳು ನಿಮ್ಮ ಮುಂದು ಇರುವುದು. ಆಯ್ಕೆಯೂ ನಿಮಗೇ ಬಿಟ್ಟಿದ್ದಾಗಿದೆ. ಮನೆಯ ಹಿರಿಯರ ಜೊತೆ ವಾಗ್ವಾದವನ್ನು ನಡೆಸುವಿರಿ. ನಿಮ್ಮ ಸತ್ಯದಿಂದ ಸಹೋದ್ಯೋಗಿಯ ಕೆಲಸವು ಇಲ್ಲವಾಗುವುದು. ಸ್ವಭಾವವನ್ನು ಬದಲಿಸಿಕೊಂಡು ಎಲ್ಲರ ಕೆಂಗಣ್ಣಿಗೆ ಗುರಿಯಾಗುವಿರಿ. ದಿನಚರ್ಯೆಯನ್ನು ಬದಲಿಸಿಕೊಂಡು ನೀವು ಆರೋಗ್ಯವನ್ನು ಕಾಪಾಡಿಕೊಳ್ಳುವಿರಿ. ಸಾಮಾಜಿಕ ಗೌರವಕ್ಕೆ ನೀವು ಪಾತ್ರರಾಗುವಿರಿ. ವಿಪರೀತ ಸಿಟ್ಟಿನಿಂದ ಇಂದು ಇರುವಿರಿ.
ಕುಂಭ ರಾಶಿ: ರಾಜಕೀಯ ವ್ಯಕ್ತಿಗಳು ನಿಮ್ಮನ್ನು ದಾಳವಾಗಿ ಬಳಸಿಕೊಳ್ಳಬಹುದು. ಎಲ್ಲ ಕಾರ್ಯಗಳನ್ನು ಒಪ್ಪಿಕೊಳ್ಳುವುದು ಬೇಡ. ಇನ್ನೊಬ್ಬರ ಒತ್ತಾಯಕ್ಕೆ ನೀವು ಮಣಿಯುವಿರಿ. ಹಣದ ಹೂಡಿಕೆಯನ್ನು ಅತಿಯಾಗಿ ಮಾಡಿಕೊಂಡು ಖರ್ಚಿಗೇ ಹಣವಿಲ್ಲದಂತೆ ಆಗಬಹುದು. ವಾಹನ ಖರೀದಿಗೆ ಸಾಲವನ್ನೂ ಮಾಡಬೇಕಾಗುವುದು. ಚರಾಸ್ತಿಯನ್ನು ಕೊಟ್ಟು ಲಾಭ ಮಾಡಿಕೊಳ್ಳುವಿರಿ. ನಿಮ್ಮ ಮಾತಿಗೆ ಬೆಲೆ ಕಡಿಮೆ ಆಗುವುದು. ನಿಮ್ಮ ಕೆಲಸಗಳ ಅವಲೋಕನವನ್ನು ಇಂದು ಮಾಡಿಕೊಳ್ಳುವಿರಿ. ನಿಮ್ಮ ನೇರ ಮಾತು ಇನ್ನೊಬ್ಬರನ್ನು ಘಾಸಿಗೊಳಿಸುವುದು. ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡಿಕೊಳ್ಳಿ. ಜನರ ಜೊತೆ ಬೆರೆಯುವುದು ನಿಮಗೆ ಇಷ್ಟವಾಗದು.
ಮೀನ ರಾಶಿ: ನಿಮ್ಮ ಆಸೆಗಳನ್ನು ಇಂದು ಪೂರೈಸಿಕೊಳ್ಳುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡದೇ ಇರುವುದು ನಿನಗೆ ಬೇಸರವಾಗವುದು. ಬಂಧುಗಳ ಆಗಮನದಿಂದ ನಿಮಗೆ ವ್ಯಾಪಾರದಲ್ಲಿ ನಷ್ಟವಾಗಬಹುದು. ಎಲ್ಲ ಸಮಯದಲ್ಲಿಯೂ ನಿಮ್ಮ ಪರಿಸ್ಥಿತಿಯು ಒಂದೇ ತೆರೆನಾಗಿ ಇರದು. ಮಾತಿನ ಮೇಲೆ ಹಿಡಿತವಿರಲಿದೆ. ಸಂಗಾತಿಯ ಮಾತುಗಳು ನಿಮ್ಮ ಮನಸ್ಸಿಗೆ ಘಾಸಿ ಮಾಡಬಹುದು. ಗಾಢವಾದ ಚಿಂತೆಯಿಂದ ಹೊರಬರಲು ಕಷ್ಟವಾದೀತು. ಇಂದು ನಿಮ್ಮ ವಿರುದ್ಧ ಮಾತನಾಡುವವರಿಗೆ ಉತ್ತರವನ್ನು ಕೊಡುತ್ತ ಸಮಯವನ್ನು ವ್ಯರ್ಥ ಮಾಡುವಿರಿ. ಉದ್ಯೋಗದಲ್ಲಿ ವಿಶ್ವಸಗಳಿಸಿ. ಪಾರದರ್ಶಕ ವ್ಯವಹಾರದಿಂದ ನಿಮಗೆ ಲಾಭವಿರುವುದು. ವಿದ್ಯಾರ್ಥಿಗಳು ವಿಷಯದ ಆಯ್ಕೆಯ ವಿಚಾರದಲ್ಲಿ ಆಪ್ತರನ್ನು ಕೇಳಿ. ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಲಿದ್ದೀರಿ.
-ಲೋಹಿತಶರ್ಮಾ 8762924271 (what’s app only))